ಬಿಗ್​ ಬಾಸ್​ ಮನೆಯ ಸ್ಪರ್ಧಿಗಳಿಗೆ ಅಡುಗೆ ಬಡಿಸಲಿದ್ದಾರೆ ಕಿಚ್ಚ ಸುದೀಪ್​?

ಬಿಗ್​ ಬಾಸ್​ ಮನೆಯ ಸ್ಪರ್ಧಿಗಳಿಗೆ ಅಡುಗೆ ಬಡಿಸಲಿದ್ದಾರೆ ಕಿಚ್ಚ ಸುದೀಪ್​?
ಬಿಗ್​ ಬಾಸ್​ ಮನೆಯ ಸ್ಪರ್ಧಿಗಳಿಗೆ ಅಡುಗೆ ಬಡಿಸಲಿದ್ದಾರೆ ಕಿಚ್ಚ ಸುದೀಪ್​?

ಕನ್ನಡ ಬಿಗ್​ ಬಾಸ್​ ಸೀಸನ್​ 8 ಕೊನೆಯ ಹಂತ ತಲುಪಿದೆ. ಮನೆಯಲ್ಲಿ 6 ಸ್ಪರ್ಧಿಗಳಿದ್ದು ಓರ್ವ ಸ್ಪರ್ಧಿ ವಾರದ ಮಧ್ಯದಲ್ಲಿ ಮನೆಯಿಂದ ಹೊರ ಹೋಗುತ್ತಿದ್ದಾರೆ.

TV9kannada Web Team

| Edited By: Madan Kumar

Aug 03, 2021 | 7:36 AM

ಕಿಚ್ಚ ಸುದೀಪ್​ ಅವರು ಬಿಗ್​ ಬಾಸ್​ ಮನೆಯನ್ನು ಮತ್ತೊಂದು ಕುಟುಂಬದಂತೆ ಕಾಣುತ್ತಾರೆ. ಪ್ರತಿ ಬಾರಿ ಬಿಗ್​ ಬಾಸ್​ ಸೇರುವ ಸ್ಪರ್ಧಿಗಳನ್ನು ವಿಶೇಷ ಪ್ರೀತಿ ಹಾಗೂ ಕಾಳಜಿಯಿಂದ ಕಾಣುತ್ತಾರೆ ಎಂಬುದು ಸಾಕಷ್ಟು ಬಾರಿ ಸಾಬೀತಾಗಿದೆ. ಈ ಬಾರಿ ಬಿಗ್​ ಬಾಸ್​ ಮನೆಗೆ ಕಿಚ್ಚ ಸುದೀಪ್​ ಸಿದ್ಧಪಡಿಸಿದ ವಿಶೇಷ ಅಡುಗೆ ಬರುವ ಸಾಧ್ಯತೆ ಗೋಚರವಾಗಿದೆ.

ಕನ್ನಡ ಬಿಗ್​ ಬಾಸ್​ ಸೀಸನ್​ 8 ಕೊನೆಯ ಹಂತ ತಲುಪಿದೆ. ಮನೆಯಲ್ಲಿ 6 ಸ್ಪರ್ಧಿಗಳಿದ್ದು ಓರ್ವ ಸ್ಪರ್ಧಿ ವಾರದ ಮಧ್ಯದಲ್ಲಿ ಮನೆಯಿಂದ ಹೊರ ಹೋಗುತ್ತಿದ್ದಾರೆ. ಆ ಸ್ಪರ್ಧಿ ಯಾರು ಅನ್ನೋದು ಇನ್ನೂ ತಿಳಿದು ಬಂದಿಲ್ಲ. ಈ ಮಧ್ಯೆ ಮನೆಯ ಸದಸ್ಯರಿಗೆ ವಿಶೇಷ ಆಯ್ಕೆ ನೀಡಲಾಗಿತ್ತು.

ಬಿಗ್​ ಬಾಸ್​ ಮನೆಯ ಗಾರ್ಡನ್​ ಏರಿಯಾದಲ್ಲಿ ಕಿವಿ ಒಂದನ್ನು ಇರಿಸಲಾಗಿದೆ. ಈ ಕಿವಿ ಬಳಿ ಹೋಗಿ ಸ್ಪರ್ಧಿಗಳು ತಮ್ಮಿಚ್ಛೆಯನ್ನು ಕೋರಬೇಕು. ಅದು ಈಡೇರಿಸುವಂತಿದ್ದರೆ ಬಿಗ್​ ಬಾಸ್​ ಬೇಡಿಕೆ ಅದನ್ನು ಪೂರ್ಣಗೊಳಿಸುತ್ತಾರೆ. ಮನೆಯ ಎಲ್ಲಾ ಸ್ಪರ್ಧಿಗಳು ತಮ್ಮಿಷ್ಟದ್ದನ್ನು ಕೋರಿದ್ದಾರೆ. ಈ ವೇಳೆ ದಿವ್ಯಾ ಉರುಡುಗ ಬೇಡಿಕೆ ಒಂದನ್ನು ಇಟ್ಟರು.

‘ನಮಗೆ ಕಿಚ್ಚ ಸುದೀಪ್​ ಅಡುಗೆ ಊಟ ಮಾಡಬೇಕು. ಹೀಗಾಗಿ, ಮನೆ ಮಂದಿಗೆ ಕಿಚ್ಚ ಸುದೀಪ್ ಅಡುಗೆ ಮಾಡಿ ಕಳಿಸೋಕೆ ಹೇಳಿ. ಪ್ಲೀಸ್ ದಯವಿಟ್ಟು ಕೊಟ್ಟು ಕಳಿಸಿ ಬಿಗ್​ ಬಾಸ್​’ ಎಂದು ಮನವಿ ಮಾಡಿದ್ದಾರೆ.

ಮೊದಲ ಇನ್ನಿಂಗ್ಸ್​ ವೇಳೆ ಕಿಚ್ಚ ಸುದೀಪ್​ಗೆ ಅನಾರೋಗ್ಯ ಕಾಡಿತ್ತು. ಈ ಕಾರಣಕ್ಕೆ ಅವರು ಕೆಲವು ವಾರ ಶೋ ನಡೆಸಿಕೊಡೋಕೆ ಬಂದಿರಲಿಲ್ಲ. ಈ ವೇಳೆ ಮನೆ ಮಂದಿ ಎಲ್ಲರೂ ಸುದೀಪ್​ಗೆ ಅಡುಗೆ ಮಾಡಿ ಕೊಟ್ಟಿದ್ದರು. ಈಗ ಮನೆ ಮಂದಿ ಸುದೀಪ್​ ಅಡುಗೆ ತಿನ್ನಬೇಕು ಎಂದು ಬಯಸಿದ್ದಾರೆ. ಹೀಗಾಗಿ, ಸುದೀಪ್​ ಅಡುಗೆ ಮಾಡಿ ಕಳುಹಿಸುತ್ತಾರಾ ಅನ್ನೋದು ಸದ್ಯದ ಕುತೂಹಲ. ಅಂದಹಾಗೆ, ಸುದೀಪ್​ ಅತ್ಯುತ್ತಮ ಕುಕ್​. ಅವರು ಸ್ಪರ್ಧಿಗಳಿಗೆ ಯಾವ ಅಡುಗೆ ಮಾಡಿ ಕಳುಹಿಸುತ್ತಾರೆ ಅನ್ನೋದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ:

ಬಿಗ್​ ಬಾಸ್​ ಮನೆಯಲ್ಲಿ ಅತಿ ಹೆಚ್ಚು ವೋಟ್​ ಪಡೆದವರಲ್ಲಿ ವೈಷ್ಣವಿ ಟಾಪ್​; ಮೂರನೇ ಸ್ಥಾನಕ್ಕೆ ಕುಸಿದ ಅರವಿಂದ್

ಬಿಗ್​ ಬಾಸ್​ ಮನೆಯಲ್ಲಿ ಎರಡು ಲಕ್ಷ ರೂಪಾಯಿ ಜಾಕ್​ಪಾಟ್; ಗೆಲ್ಲೋರು ಯಾರು?

Follow us on

Related Stories

Most Read Stories

Click on your DTH Provider to Add TV9 Kannada