ಕನ್ನಡ ಕಿರುತೆರೆ ಲೋಕ ಈಗ ದೊಡ್ಡ ಮಟ್ಟಕ್ಕೆ ಬೆಳೆದಿದೆ. ಧಾರಾವಾಹಿ (Kannada Serial) ಕಥೆಯಲ್ಲೂ ವಿನೂತನ ಪ್ರಯೋಗ ಮಾಡಲಾಗುತ್ತಿದೆ. ಈಗಾಗಲೇ ಅಂತಹ ಅನೇಕ ಸೀರಿಯಲ್ಗಳನ್ನು ಬಿತ್ತರಿಸಿ ಜನಮನ ಗೆದ್ದಿರುವ ಜೀ ಕನ್ನಡ (Zee Kannada) ವಾಹಿನಿಯು ಈಗೊಂದು ಹೊಸ ಧಾರಾವಾಹಿ ಪ್ರಸಾರಕ್ಕೆ ಅಣಿ ಆಗುತ್ತಿದೆ. ‘ಹಿಟ್ಲರ್ ಕಲ್ಯಾಣ’ (Hitler Kalyana) ಶೀರ್ಷಿಕೆಯ ಈ ಧಾರಾವಾಹಿಯ ಕಥೆ ಇಂಟರೆಸ್ಟಿಂಗ್ ಆಗಿದ್ದು, ಆ.9ರಂದು ಪ್ರಸಾರ ಆರಂಭಿಸಲಿದೆ. ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿ ದಿನ ಸಂಜೆ 7 ಗಂಟೆಗೆ ಜೀ ಕನ್ನಡ ವಾಹಿನಿಯಲ್ಲಿ ಹಿಟ್ಲರ್ ಕಲ್ಯಾಣ್ ಪ್ರಸಾರವಾಗಲಿದೆ.
‘ಇವನು ಪರ್ಫೆಕ್ಟು, ಅವಳು ಎಡವಟ್ಟು’ ಎಂಬ ಟ್ಯಾಗ್ಲೈನ್ ಈ ಧಾರಾವಾಹಿಗೆ ಇದೆ. ಇದು ‘ಹಿಟ್ಲರ್ ಕಲ್ಯಾಣ’ ಧಾರಾವಾಹಿ ಕಥೆಯ ಸಾರಾಂಶ ಕೂಡ ಹೌದು. ಅತ್ತೆಯು ಮನೆಗೆ ಸೊಸೆಯಂದಿರನ್ನು ಹುಡುವುದು ವಾಡಿಕೆ. ಆದರೆ ಸೊಸೆಯಂದಿರೇ ಅತ್ತೆಯನ್ನು ಹುಡುಕುವ ವಿಶಿಷ್ಟ ಕಥೆಯನ್ನು ಈ ಸೀರಿಯಲ್ ಹೊಂದಿದೆ.
ಮಾವ ಎ.ಜೆ. ಅಲಿಯಾಸ್ ಅಭಿರಾಮ್ ಜೈ ಶಂಕರ್ ಕಿಂಚಿತ್ತೂ ಅಶಿಸ್ತನ್ನು ಸಹಿಸದ ಅತ್ಯಂತ ಕಠಿಣ ಶಿಸ್ತುಬದ್ಧ ವ್ಯಕ್ತಿ. ಆದ್ದರಿಂದಲೇ ಅವನಿಗೆ ಹಿಟ್ಲರ್ ಎಂದು ಕರೆಯಲಾಗುತ್ತದೆ. ಇಂಥಾ ಮಾವನಿಗೆ ತಕ್ಕ ಜೋಡಿಯನ್ನು ಹುಡುಕಬೇಕು ಎನ್ನುವುದು ಸೊಸೆಯಂದಿರ ಆಶಯ. ಎ.ಜೆ. ಎಷ್ಟು ಪರ್ಫೆಕ್ಟ್ ಆಗಿದ್ದಾನೋ ಅಷ್ಟೇ ಎಡವಟ್ಟಿನ ಹುಡುಗಿ ಲೀಲಾ. ಅವಳು ಯಾವ ಕೆಲಸ ಮಾಡಿದರೂ ಅದಕ್ಕೆ ಹತ್ತಾರು ಸಮಸ್ಯೆಗಳನ್ನು ಸೃಷ್ಟಿಸುತ್ತಿರುತ್ತಾಳೆ. ಅಂಥ ಪರ್ಫೆಕ್ಟ್ ವ್ಯಕ್ತಿಗೆ ಈ ಎಡವಟ್ಟಿನ ಹುಡುಗಿ ಜೋಡಿಯಾಗುತ್ತಾಳಾ ಎನ್ನುವುದು ‘ಹಿಟ್ಲರ್ ಕಲ್ಯಾಣ’ ಕಥೆಯ ಕುತೂಹಲ.
#HitlerKalyana #19thJuly ಇವಳು ಎಡವಟ್ಟು, ಅವನು ಪರ್ಫೆಕ್ಟು, ಇವರಿಬ್ಬರ ಕಾಂಬಿನೇಷನ್ ಎಂಟರ್ಟೈನ್ಮೆಂಟು! ಹಿಟ್ಲರ್ ಕಲ್ಯಾಣ | ಜುಲೈ 19ರಿಂದ.#ZeeKannada #BayasidaBaagiluTegeyona ಸಂಪೂರ್ಣ ಸಂಚಿಕೆ ವೀಕ್ಷಿಸಲು Download ಮಾಡಿ Zee5:https://t.co/fVAqW0qrx6 pic.twitter.com/jx16PBGYV8
— Zee Kannada (@ZeeKannada) July 4, 2021
ಎ.ಜೆ.ಯ ಗಂಭೀರ ಸ್ವಭಾವಕ್ಕೆ ತದ್ವಿರುದ್ಧವಾದ ವ್ಯಕ್ತಿತ್ವ ಲೀಲಾಳದ್ದು. ಬಹಳ ಸರಳ, ಚಟುವಟಿಕೆಯ ಉತ್ಸಾಹಿ ಹುಡುಗಿ. ಆಕೆ ತನ್ನ ಕಿರಿಯ ವಯಸ್ಸಿನಲ್ಲಿಯೇ ತಾಯಿಯನ್ನು ಕಳೆದುಕೊಂಡು ತಂದೆಯ ಪ್ರೀತಿಯಲ್ಲಿ ಬೆಳೆದಿರುತ್ತಾಳೆ. ಆದರೆ ಆಕೆಯ ಮಲತಾಯಿಗೆ ಲೀಲಾ ಮೇಲೆ ಪ್ರೀತಿ ಇದ್ದರೂ ಎನೋ ಹೇಳಿಕೊಳ್ಳಲಾಗದ ಆತಂಕವಿದೆ. ಎ.ಜೆ.ಯನ್ನು ಮದುವೆಯಾಗಿ ಸೊಸೆಯಂದಿರು ಮತ್ತು ಮನೆಯನ್ನು ನಿಭಾಯಿಸುತ್ತಾಳಾ ಲೀಲಾ? ಈ ಕೌತುಕದೊಂದಿಗೆ ಧಾರಾವಾಹಿ ಆರಂಭ ಆಗಲಿದೆ.
ಇದನ್ನೂ ಓದಿ:
ಬಾಲಿವುಡ್ನಲ್ಲಿ ಸ್ಟಾರ್ ಆದಮೇಲೂ ಸುಶಾಂತ್ ಧಾರಾವಾಹಿಯಲ್ಲಿ ನಟಿಸಬೇಕಾಯಿತು; ಕಾರಣ ಏನು?
ತಾಯಿಯಾದ ಬಳಿಕ ಸೀರಿಯಲ್ ನಟಿ ಟಾಪ್ ಲೆಸ್ ಪೋಸ್; ಬೇಸರಗೊಂಡ ಫ್ಯಾನ್ಸ್ ಹೇಳಿದ್ದೇನು?