Vaishnavi Gowda: ದೊಡ್ಮನೆಯೊಳಗೆ ವೈಷ್ಣವಿ ಜೊತೆ ಚೆನ್ನಾಗಿದ್ದ ರಘು ಗೌಡ ಫಿನಾಲೆ ವೇಳೆಗೆ ಪ್ರಚಾರ ಮಾಡಿದ್ದು ಯಾರ ಪರವಾಗಿ?

Bigg Boss Finale: ಮಂಜು ಪಾವಗಡ, ದಿವ್ಯಾ ಸುರೇಶ್​, ಅರವಿಂದ್​ ಕೆಪಿ, ದಿವ್ಯಾ ಉರುಡುಗ, ವೈಷ್ಣವಿ ಗೌಡ, ಪ್ರಶಾಂತ್​ ಸಂಬರಗಿ ಪರವಾಗಿ ಸೋಶಿಯಲ್ ಮೀಡಿಯಾದಲ್ಲಿ ಪ್ರಚಾರ ಮಾಡಲಾಗುತ್ತಿದೆ. ಈ ಸಂದರ್ಭದಲ್ಲಿ ರಘು ಗೌಡ ಯಾರ ಪರವಾಗಿ ಪ್ರಚಾರ ಮಾಡುತ್ತಾರೆ ಎಂಬ ಕೌತುಕ ಸಹಜ.

Vaishnavi Gowda: ದೊಡ್ಮನೆಯೊಳಗೆ ವೈಷ್ಣವಿ ಜೊತೆ ಚೆನ್ನಾಗಿದ್ದ ರಘು ಗೌಡ ಫಿನಾಲೆ ವೇಳೆಗೆ ಪ್ರಚಾರ ಮಾಡಿದ್ದು ಯಾರ ಪರವಾಗಿ?
ವೈಷ್ಣವಿ, ರಘು ಗೌಡ
Follow us
TV9 Web
| Updated By: ಮದನ್​ ಕುಮಾರ್​

Updated on:Aug 03, 2021 | 12:39 PM

ಬಿಗ್​ ಬಾಸ್​ ಕನ್ನಡ (Bigg Boss) ಸೀಸನ್​ 8ರಲ್ಲಿ ಅನೇಕ ಘಟನೆಗಳು ನಡೆದಿವೆ. ಅಪರಿಚಿತರಾಗಿ ಮನೆಯೊಳಗೆ ಹೋದವರು ನಂತರ ಗೆಳೆಯರಾದರು. ಮೊದಲು ಗೆಳೆಯರಾಗಿದ್ದವರು ಮನೆಯೊಳಗೆ ಬಂದು ಮನಸ್ತಾಪ ಮಾಡಿಕೊಂಡರು. ಹೀಗೆ ಎಲ್ಲ ಏಳು-ಬೀಳುಗಳಿಗೂ ದೊಡ್ಮನೆ ಸಾಕ್ಷಿ ಆಗಿದೆ. ಬಿಗ್ ಬಾಸ್​ಗೆ ಬರುವುದಕ್ಕೂ ಮುನ್ನ ವೈಷ್ಣವಿ ಗೌಡ (Vaishnavi Gowda) ಮತ್ತು ರಘು ಗೌಡ (Raghu Gowda) ನಡುವೆ ಯಾವುದೇ ಪರಿಚಯ ಇರಲಿಲ್ಲ. ಆದರೆ ದಿನಕಳೆದಂತೆ ಇಬ್ಬರ ನಡುವೆ ಹೊಂದಾಣಿಕೆ ಮೂಡಲು ಆರಂಭಿಸಿತು. ನಂತರ ಇಬ್ಬರೂ ಬೆಸ್ಟ್​ ಫ್ರೆಂಡ್ಸ್​ ಆದರು.

ಬಿಗ್​ ಬಾಸ್​ ಎರಡನೇ ಇನ್ನಿಂಗ್ಸ್​ನಲ್ಲಿ ರಘು ಗೌಡ ಎಲಿಮಿನೇಟ್​ ಆದರು. ಆದರೆ ವೈಷ್ಣವಿ ಗೌಡ ಇನ್ನೂ ಮನೆಯೊಳಗೆ ಇದ್ದುಕೊಂಡು ಫಿನಾಲೆಯ ಕನಸು ಕಾಣುತ್ತಿದ್ದಾರೆ. ಇದು ಅಂತಿಮ ವಾರ ಆಗಿರುವುದರಿಂದ ಉಳಿದಿರುವ ಆರು ಸ್ಪರ್ಧಿಗಳ ನಡುವೆ ಪೈಪೋಟಿ ಜೋರಾಗಿದೆ. ಈ ಕೊನೇ ಹಂತದಲ್ಲಿ ಯಾರಿಗೆ ಎಷ್ಟು ವೋಟ್​ ಸಿಗುತ್ತದೆ ಎಂಬುದು ತುಂಬ ಮುಖ್ಯವಾಗುತ್ತದೆ. ಅದಕ್ಕಾಗಿ ಸೋಶಿಯಲ್​ ಮೀಡಿಯಾದಲ್ಲಿ ಭರ್ಜರಿ ಪ್ರಚಾರ ನಡೆಯುತ್ತಿದೆ.

ಮಂಜು ಪಾವಗಡ, ದಿವ್ಯಾ ಸುರೇಶ್​, ಅರವಿಂದ್​ ಕೆಪಿ, ದಿವ್ಯಾ ಉರುಡುಗ, ವೈಷ್ಣವಿ ಗೌಡ, ಪ್ರಶಾಂತ್​ ಸಂಬರಗಿ ಪರವಾಗಿ ಸೋಶಿಯಲ್ ಮೀಡಿಯಾದಲ್ಲಿ ಪ್ರಚಾರ ಮಾಡಲಾಗುತ್ತಿದೆ. ಈ ಸಂದರ್ಭದಲ್ಲಿ ರಘು ಗೌಡ ಯಾರ ಪರವಾಗಿ ಪ್ರಚಾರ ಮಾಡುತ್ತಾರೆ ಎಂಬ ಕೌತುಕ ಸಹಜ. ಅದಕ್ಕೀಗ ಉತ್ತರವೂ ಸಿಕ್ಕಿದೆ. ಬಿಗ್​ ಬಾಸ್​ ಮನೆಯಿಂದ ಹೊರಬಂದ ಬಳಿಕ ರಘು ಗೌಡ ಪಾರ್ಟಿ ಬದಲಾಯಿಸಿಲ್ಲ. ಮನೆಯೊಳಗೆ ಇದ್ದಾಗ ವೈಷ್ಣವಿಗೆ ಅವರು ಸಪೋರ್ಟ್​ ಮಾಡುತ್ತಿದ್ದರು. ಮನೆಯಿಂದ ಹೊರಬಂದಾಗಲೂ ಅವರು ಅದನ್ನು ಮುಂದುವರಿಸಿದ್ದಾರೆ.

‘ಬಿಗ್​ ಬಾಸ್​ ಫಿನಾಲೆ ವಾರ ಬಂದಿದೆ. ಅಲ್ಲಿರುವ ಎಲ್ಲರೂ ಒಬ್ಬರಿಗಿಂತ ಒಬ್ಬರು ಕ್ರೇಜಿಯಾಗಿ ಆಡ್ತಾ ಇದಾರೆ. ಅಲ್ಲಿರುವ ಎಲ್ಲರೂ ಘಟಾನುಘಟಿಗಳೇ ಅಂತ ಹೇಳಬೇಕು. ಆದರೆ ವೋಟ್ ಮಾಡುವಾಗ ನಮ್ಮ-ನಿಮ್ಮ ನೆಚ್ಚಿನ ವೈಷ್ಣವಿಗೆ ವೋಟ್​ ಮಾಡಿ. ಇಷ್ಟು ದಿನ ಅವರ ಮೇಲೆ ಪ್ರೀತಿ-ಅಭಿಮಾನ ತೋರಿಸಿದ್ದೀರಿ. ಅವರು ಬಿಗ್​ ಬಾಸ್​ ಗೆದ್ದರೆ ನಂಗೆ ಪಾರ್ಟಿ ಕೊಡಿಸುತ್ತೀನಿ ಅಂತ ಹೇಳಿದಾರೆ. ಅದಕ್ಕಾದರೂ ಅವರನ್ನು ಗೆಲ್ಲಿಸಲೇಬೇಕು’ ಎಂದು ರಘು ಗೌಡ ವಿಡಿಯೋ ಮೂಲಕ ಹೇಳಿದ್ದಾರೆ.

ಇದನ್ನೂ ಓದಿ:

ಬಿಗ್​ ಬಾಸ್​ನಿಂದ ರಘು ಎಲಿಮಿನೇಟ್​ ಆಗೋಕೆ ಕಾರಣವಾಯ್ತು ಈ ಒಂದು ವಿಚಾರ 

‘ಅವರಿಗೂ ಒಂದು ಕುಟುಂಬ ಇದೆ ನೆನಪಿರಲಿ’; ರಘು-ವೈಷ್ಣವಿ ಗೆಳೆತನಕ್ಕೆ ಬೇರೆ ರೀತಿಯ ಬಣ್ಣ ಹಚ್ಚಿದ ಚಂದ್ರಚೂಡ್​ಗೆ ಕ್ಲಾಸ್​  

Published On - 12:25 pm, Tue, 3 August 21

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ