AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಅವರಿಗೂ ಒಂದು ಕುಟುಂಬ ಇದೆ ನೆನಪಿರಲಿ’; ರಘು-ವೈಷ್ಣವಿ ಗೆಳೆತನಕ್ಕೆ ಬೇರೆ ರೀತಿಯ ಬಣ್ಣ ಹಚ್ಚಿದ ಚಂದ್ರಚೂಡ್​ಗೆ ಕ್ಲಾಸ್​  

ಬಿಗ್​ ಬಾಸ್​ ಮೊದಲ ಇನ್ನಿಂಗ್ಸ್ ಕೊನೆಯಲ್ಲಿ ವೈಷ್ಣವಿ-ರಘು ಅಡುಗೆ ಮನೆಯಲ್ಲಿ ಒಟ್ಟಿಗೆ ಇರುವ ವಿಚಾರವನ್ನು ನೋಡಿ ಕೆಲವರು ಆಡಿಕೊಂಡಿದ್ದರು. ಶುಭಾ ಪೂಂಜಾ ಈ ವಿಚಾರದಲ್ಲಿ ಸಾಕಷ್ಟು ಟೀಕೆ ಮಾಡಿದ್ದರು.

‘ಅವರಿಗೂ ಒಂದು ಕುಟುಂಬ ಇದೆ ನೆನಪಿರಲಿ’; ರಘು-ವೈಷ್ಣವಿ ಗೆಳೆತನಕ್ಕೆ ಬೇರೆ ರೀತಿಯ ಬಣ್ಣ ಹಚ್ಚಿದ ಚಂದ್ರಚೂಡ್​ಗೆ ಕ್ಲಾಸ್​   
ಚಕ್ರವರ್ತಿ ಚಂದ್ರಚೂಡ್​, ವೈಷ್ಣವಿ
TV9 Web
| Updated By: ರಾಜೇಶ್ ದುಗ್ಗುಮನೆ|

Updated on:Jun 24, 2021 | 3:30 PM

Share

ಬಿಗ್​ ಬಾಸ್​ ಮನೆಯಲ್ಲಿ ಕೆಲವೊಮ್ಮೆ ಸಂಬಂಧಗಳು ಹುಟ್ಟಿಕೊಂಡರೆ, ಇನ್ನೂ ಕೆಲವೊಮ್ಮೆ ಸಂಬಂಧಗಳು ಮುರಿದು ಬೀಳುತ್ತವೆ. ಈ ಬಾರಿ ಕನ್ನಡ ಬಿಗ್​ ಬಾಸ್​ ಸೀಸನ್​8ರಲ್ಲಿ ಕೆಲವರ ನಡುವೆ ಪ್ರೀತಿ ಹುಟ್ಟಿಕೊಂಡರೆ ಇನ್ನೂ ಕೆಲವರ ನಡುವೆ ಸಂಬಂಧ ಮುರಿದು ಬೀಳುವ ಸೂಚನೆ ಸಿಕ್ಕಿದೆ. ಇದಕ್ಕೆ ಕಾರಣ 43 ದಿನಗಳ ಗ್ಯಾಪ್. ಬಿಗ್​ ಬಾಸ್​ ಮನೆಯಲ್ಲಿ ಯಾರು ಯಾವ ರೀತಿಯಲ್ಲಿ ನಡೆದುಕೊಂಡಿದ್ದರು ಎನ್ನುವ ಬಗ್ಗೆ ದೊಡ್ಡ ಚರ್ಚೆಯೇ ನಡೆದಿದೆ.

ದೊಡ್ಮನೆಯಲ್ಲಿ ಮಂಜು ಪಾವಗಡ- ದಿವ್ಯಾ ಸುರೇಶ್​, ಅರವಿಂದ್ ಕೆ.ಪಿ.-ದಿವ್ಯಾ ಉರುಡುಗ ಆಪ್ತರಾಗಿದ್ದಾರೆ. ಇವರ ಜತೆಗೆ ವೈಷ್ಣವಿ ಹಾಗೂ ರಘು ಗೌಡ ನಡುವೆ ಉತ್ತಮ ಗೆಳೆತನ ಇರೋದು ಸಾಕಷ್ಟು ಬಾರಿ ಸಾಬೀತಾಗಿದೆ. ಆದರೆ, ಮನೆಯಲ್ಲಿರುವ ಕೆಲ ಸ್ಪರ್ಧಿಗಳು ಇದನ್ನು ಬೇರೆಯದೇ ರೀತಿಯಲ್ಲಿ ನೋಡಿದ್ದರು. ಈ ಬಗ್ಗೆ ವೈಷ್ಣವಿ ಬೇಸರ ಹೊರ ಹಾಕಿದ್ದಾರೆ.

‘ಕನ್ನಡ ಬಿಗ್​ ಬಾಸ್​ ಸೀಸನ್​ 8’ ಕೊವಿಡ್​ನಿಂದ ಅರ್ಧಕ್ಕೆ ನಿಂತಿತ್ತು. ಹೀಗಾಗಿ, ಸ್ಪರ್ಧಿಗಳನ್ನು ಮನೆಗೆ ಕಳುಹಿಸೋದು ಅನಿವಾರ್ಯ ಆಗಿತ್ತು. ಈಗ ಎಲ್ಲಾ ಸ್ಪರ್ಧಿಗಳು 43 ದಿನ ಹೊರ ಪ್ರಪಂಚ ನೋಡಿ ಮತ್ತೆ ಮನೆ ಸೇರಿದ್ದಾರೆ. ಕೆಲವರು ಹಳೆಯ ಎಪಿಸೋಡ್​ಗಳನ್ನು ಕಣ್ತುಂಬಿಕೊಂಡಿದ್ದಾರೆ. ಈ ಎಪಿಸೋಡ್​ಗಳನ್ನು ನೋಡುವಾಗ ವೈಷ್ಣವಿ ಅವರ ಗಮನಕ್ಕೆ ಬಂದ ವಿಚಾರ, ಚಕ್ರವರ್ತಿ ಚಂದ್ರಚೂಡ್​ ಅವರ ಮಾತು.

‘ಬಿಗ್​ ಬಾಸ್​ ಮನೆಯಲ್ಲಿ 3 ಜೋಡಿಗಳಿದ್ದಾರೆ. ನಾನೇ ತಾಳಿ ತಂದುಕೊಡ್ತಿದ್ದೆ ಎಂದು ನೀವು ಹೇಳಿದ್ದೀರಿ’ ಎಂಬುದಾಗಿ ಚಕ್ರವರ್ತಿ ಚಂದ್ರಚೂಡ್ ಬಳಿ ವೈಷ್ಣವಿ ವಾದಿಸಿದರು. ಆದರೆ, ಇದನ್ನು ಚಕ್ರವರ್ತಿ ಒಪ್ಪಿಕೊಳ್ಳಲಿಲ್ಲ. ‘ನಾನು ದಿವ್ಯಾ ಮಾತನಾಡುತ್ತಿದ್ದೇವೆ ಎಂದರೆ ನಮಗೆ ಸಂಬಂಧ ಇದೆ ಎಂದರ್ಥವಲ್ಲ. ನೀವು ಮನೆಯಲ್ಲಿ ಕೆಲವರ ಜತೆ ಆಪ್ತರಾಗಿದ್ದೀರಿ. ಅಂದ ಮಾತ್ರಕ್ಕೆ ನೀವಿಬ್ಬರು ಜೋಡಿ  ಎಂದು ನಾವು ಕರೆಯಬಹುದಾ’ ಎಂದು ಚಕ್ರವರ್ತಿಗೆ ನೇರವಾಗಿ ಪ್ರಶ್ನೆ ಎಸೆದರು ವೈಷ್ಣವಿ.

‘ನಾನು ಆ ರೀತಿ ವರ್ತಿಸುತ್ತಿಲ್ಲ’ ಎಂದು ನಗುವ ಮೂಲಕ ಚಕ್ರವರ್ತಿ ವಾದದಿಂದ ನುಣುಚಿಕೊಳ್ಳೋಕೆ ಪ್ರಯತ್ನಿಸಿದರು. ಆಗ ವೈಷ್ಣವಿ, ‘ನಾನು ಹಾಗೆ ವರ್ತಿಸುತ್ತಿದ್ದೀನಾ? ಈ ರೀತಿ ಮಾತನಾಡುವ ಮೊದಲು ಅವರಿಗೂ ಒಂದು ಕುಟುಂಬವಿದೆ ಎಂಬುದು ನೆನಪಿರಲಿ’ ಎಂದು ಎಚ್ಚರಿಕೆ ನೀಡಿದರು.

ಬಿಗ್​ ಬಾಸ್​ ಮೊದಲ ಇನ್ನಿಂಗ್ಸ್ ಕೊನೆಯಲ್ಲಿ ವೈಷ್ಣವಿ-ರಘು ಅಡುಗೆ ಮನೆಯಲ್ಲಿ ಒಟ್ಟಿಗೆ ಇರುವ ವಿಚಾರವನ್ನು ನೋಡಿ ಕೆಲವರು ಆಡಿಕೊಂಡಿದ್ದರು. ಶುಭಾ ಪೂಂಜಾ ಈ ವಿಚಾರದಲ್ಲಿ ಸಾಕಷ್ಟು ಟೀಕೆ ಮಾಡಿದ್ದರು. ಆಗಲೂ ವೈಷ್ಣವಿ ಅತ್ತಿದ್ದರು.

ಇದನ್ನೂ ಓದಿ: Vaishnavi Gowda: ವೈಷ್ಣವಿಗೆ ಬಂದ ಮದುವೆ ಪ್ರಪೋಸಲ್ಸ್​ ಸಂಖ್ಯೆ​ ಕೇಳಿ ಅಚ್ಚರಿಪಟ್ಟ ಕಿಚ್ಚ ಸುದೀಪ್​

Published On - 3:29 pm, Thu, 24 June 21