ಸೈಕಲ್​ ಹತ್ತಿ ಬ್ರೆಡ್​-ಮೊಟ್ಟೆ​ಗಳನ್ನು ಮಾರಾಟ ಮಾಡಲು ಹೊರಟಿದ್ದಾರೆ ಸೋನು ಸೂದ್​! ವಿಡಿಯೋ ನೋಡಿ

Sonu Sood: ಸೋನು ಸೂದ್​ ಸೈಕಲ್​ ಏರಿ ಬ್ರೆಡ್​-ಬನ್​, ಮೊಟ್ಟೆಗಳನ್ನು ಮಾರಾಟ ಮಾಡಲು ಹೊರಟು ನಿಂತಿರುವ ವಿಡಿಯೋವೊಂದು ಜನರಲ್ಲಿ ಕುತೂಹಲ ಕೆರಳಿಸಿದೆ. ಜತೆಗೆ ಸಣ್ಣ ಉದ್ಯಮಗಳನ್ನು ಪ್ರೋತ್ಸಾಗಿಸುತ್ತಿರುವ ಸೋನು ಸೂದ್​ ಅವರನ್ನು ನೆಟ್ಟಿಗರು ಹೊಗಳುತ್ತಿದ್ದಾರೆ.

ಸೈಕಲ್​ ಹತ್ತಿ ಬ್ರೆಡ್​-ಮೊಟ್ಟೆ​ಗಳನ್ನು ಮಾರಾಟ ಮಾಡಲು ಹೊರಟಿದ್ದಾರೆ ಸೋನು ಸೂದ್​! ವಿಡಿಯೋ ನೋಡಿ
ನಟ ಸೋನು ಸೂದ್
Follow us
TV9 Web
| Updated By: shruti hegde

Updated on: Jun 24, 2021 | 2:57 PM

ಕಳೆದ ವರ್ಷದಿಂದ ಕೊರೊನಾ ಮಹಾಮಾರಿಯ ಆರ್ಭಟ ಜೋರಾಗಿಯೇ ಇದೆ. ಗೂಡಂಗಡಿಗಳನ್ನು ಇಟ್ಟು ಜೀವನ ನಡೆಸುತ್ತಿದ್ದ ಅದೆಷ್ಟೋ ಜನರ ಪರಿಸ್ಥಿತಿ ಗಂಭೀರವಾಗಿದೆ. ಆ ದಿನದ ದುಡಿಮೆ ಆ ದಿನಕ್ಕೆ ಸರಿ ಎನ್ನುತ್ತಿರುವವರು ಸಾಂಕ್ರಾಮಿಕ ಸಮಯದಲ್ಲಂತೂ ಅವರ ದುಡಿಮೆ ನೆಲಕಚ್ಚಿ ಬಿಟ್ಟಿದೆ. ಇಂತಹ ಸಮಯದಲ್ಲಿ ಬಾಲಿವುಡ್​ ನಟ ಸೋನು ಸೂದ್​ ಜನರ ಕಷ್ಟಕ್ಕೆ ಸ್ಪಂದಿಸಿದ್ದರು. ತಮ್ಮ ಕೈಲಾದಷ್ಟು ಸಹಾಯ ಮಾಡಲು ಮುಂದಾಗಿದ್ದರು. ಕೊವಿಡ್​ ಸೋಂಕಿನಿಂದ ಬಳಲುತ್ತಿರುವವರಿಗೆ ಆಕ್ಸಿಜನ್​ ಸಿಲಿಂಡರ್​ ವ್ಯವಸ್ಥೆ ಮಾಡುವುದರಿಂದ ಆಸ್ಪತ್ರೆಯಲ್ಲಿ ಬೆಡ್​ ವ್ಯವಸ್ಥೆ ಮಾಡುವವರೆಗೆ ತಮ್ಮನ್ನು ತಾವು ಜನ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿಯೂ ಸಹ ಹೆಚ್ಚು ಪ್ರಶಂಸೆಗಿಟ್ಟಿಸಿಕೊಂಡಿದ್ದರು. ಜತೆಜತೆಗೆ ನಟ ಸೋನು ಸೂದ್​ ಮತ್ತೊಂದು ಪೋಸ್ಟ್​ ಹಂಚಿಕೊಂಡಿದ್ದು ನೆಟ್ಟಿಗರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಸೋನು ಸೂದ್​ ಸೈಕಲ್​ ಏರಿ ಬ್ರೆಡ್​-ಬನ್​, ಮೊಟ್ಟೆಗಳನ್ನು ಮಾರಾಟ ಮಾಡಲು ಹೊರಟು ನಿಂತಿರುವ ವಿಡಿಯೋವೊಂದು ಜನರಲ್ಲಿ ಕುತೂಹಲ ಕೆರಳಿಸಿದೆ. ಜತೆಗೆ ಸಣ್ಣ ಉದ್ಯಮಗಳನ್ನು ಪ್ರೋತ್ಸಾಗಿಸುತ್ತಿರುವ ಸೋನು ಸೂದ್​ ಅವರನ್ನು ನೆಟ್ಟಿಗರು ಹೊಗಳುತ್ತಿದ್ದಾರೆ.

ನಿನ್ನೆ ಬುಧವಾರ ಬಾಲಿವುಡ್​ ಖ್ಯಾತಿಯ ಸೋನು ಸೂದ್​ ತಮ್ಮ ಇನ್​ಸ್ಟಾಗ್ರಾಂ ಅಧಿಕೃತ ಖಾತೆಯಲ್ಲಿ ಪೋಸ್ಟ್​ ಹಂಚಿಕೊಂಡಿದ್ದಾರೆ. ತಮ್ಮ ಹೊಸದಾದ ಸೂಪರ್​ಮಾರ್ಕೆಟ್​ಅನ್ನು ಪರಿಚಯಿಸಿದ್ದು, ಅದರಲ್ಲಿ ದಿನಸಿ ವಸ್ತುಗಳಾದ ಬ್ರೆಡ್​, ಮೊಟ್ಟೆಗಳಿವೆ ಎಂದು ಹೇಳಿದ್ದಾರೆ.

View this post on Instagram

A post shared by Sonu Sood (@sonu_sood)

ಅವರು ಹಂಚಿಕೊಂಡಿರುವ ಪೋಸ್ಟ್​ ಕೆಲವರಿಗೆ ನಗುವಿನ ಅಲೆಯಲ್ಲಿ ತೇಲುವಂತೆ ಮಾಡಿದೆ. ಉಚಿತವಾಗಿ ಮನೆಗೇ ಸಪ್ಲೈ ಮಾಡಲಾಗುವುದು.. 10 ಮೊಟ್ಟೆಯೊಂದಿಗೆ 1 ಬ್ರೆಡ್​ ಉಚಿತ.. ಎನ್ನುತ್ತಾ ನಗುವ ಇಮೋಜಿಗಳೊಂದಿಗೆ ವಿಡಿಯೋ ಹಂಚಿಕೊಳ್ಳಲಾಗಿದೆ.

ಜನರನ್ನು ಸಂಕಷ್ಟಕ್ಕೆ ಸಿಲುಕಿಸಿದ ಕೊರೊನಾ ಸಾಂಕ್ರಾಮಿಕದ ನಡುವೆ ನಿರಂತರವಾಗಿ ಜನ ಸೇವೆಯಲ್ಲಿ ತೊಡಗಿದ್ದ ನಟ ಸೋನು ಸೂದ್​ ಅವರಿಗೆ ಪ್ರಶಂಸೆಗಳು ವ್ಯಕ್ತವಾಗಿವೆ. ವಲಸೆ ಕಾರ್ಮಿಕರು ತಮ್ಮ ಊರಿಗೆ ಹಿಂತಿರುಗುವಂತೆ ಸಾರಿಗೆ ವ್ಯವಸ್ಥೆ ಮಾಡಿದರು, ಕೊವಿಡ್​ ಸಮಯದಲ್ಲಿ ಜನರಿಗೆ ಆರ್ಥಿಕವಾಗಿ ಸಹಾಯ ಮಾಡಿದರು ಜತೆಗೆ ಆಸ್ಪತ್ರೆಗಳಲ್ಲಿ ಬೆಡ್​ ವ್ಯವಸ್ಥೆ ಮಾಡಿಸಿಕೊಟ್ಟಿದ್ದರು. ಈ ಎಲ್ಲಾ ಸಹಾಯವನ್ನು ನೆನೆಸಿಕೊಳ್ಳುತ್ತಾ ಅಭಿಮಾನಿಗಳು ಸೋನೂ ಸೂದ್​ ಅವರನ್ನು ಹೊಗಳುತ್ತಿದ್ದಾರೆ.

ಇದನ್ನೂ ಓದಿ:

ಫಾದರ್ಸ್​ ಡೇ ದಿನವೇ ಮಗನಿಗೆ 3 ಕೋಟಿ ರೂಪಾಯಿ ಕಾರು ಉಡುಗೊರೆ ನೀಡಿದ ಸೋನು ಸೂದ್​?

ಸೋನು ಸೂದ್ ಮಗನಿಗೆ ದುಬಾರಿ ಕಾರ್!