AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉದ್ಯಮಿ ಆನಂದ್ ಮಹಿಂದ್ರ ಪೋಸ್ಟ್​ ಮಾಡಿದ ಬೈಕರ್​ಗಳನ್ನು ಕರಡಿ ಬೆನ್ನಟ್ಟಿರುವ ವಿಡಿಯೋ ವೈರಲ್ ಆಗಿದೆ

ಬೈಕ್ ಓಡಿಸುತ್ತಿರುವವನೊಬ್ಬ ಈ ವಿಡಿಯೋವನ್ನು ಶೂಟ್​ ಮಾಡಿರುವಂತಿದೆ. ಅಸಲಿಗೆ ಇದು ಒಂದು ಚಹಾ ತೋಟದ ಮೂಲಕ ಹಾದುಹೋಗುವಾಗ ಶೂಟ್​ ಮಾಡಿದ್ದಾರೆ. ಅದು ಆರಂಭವಾಗೋದೇ ರಮಣೀಯ ತೋಟದ ದೃಶ್ಯದಿಂದ.

ಉದ್ಯಮಿ ಆನಂದ್ ಮಹಿಂದ್ರ ಪೋಸ್ಟ್​ ಮಾಡಿದ ಬೈಕರ್​ಗಳನ್ನು ಕರಡಿ ಬೆನ್ನಟ್ಟಿರುವ ವಿಡಿಯೋ ವೈರಲ್ ಆಗಿದೆ
ಉದ್ಯಮಿ ಆನಂದ ಮಹೀಂದ್ರಾ (ಸಂಗ್ರಹ ಚಿತ್ರ)
Follow us
ಅರುಣ್​ ಕುಮಾರ್​ ಬೆಳ್ಳಿ
|

Updated on: Jun 25, 2021 | 1:06 AM

ಖ್ಯಾತ ಉದ್ಯಮಿ ಅನಂದ್ ಮಹಿಂದ್ರ ಸಾಮಾಜಿಕ ಜಾಲತಾಣಗಳಲ್ಲಿ ನಿರಂತರವಾಗಿ ಸಕ್ರಿಯರಾಗಿರುತ್ತಾರೆ. ಗುರುವಾರದಂದು ಅವರು ಭೀತಿ ಮೂಡಿಸುವ ವಿಡಿಯೋವೊಂದನ್ನು ತಮ್ಮ ಟ್ವಿಟ್ಟರ್​ ಖಾತೆಯಲ್ಲಿ ಶೇರ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಕರಡಿಗಳ ಗುಂಪೊಂದು ಕೆಲ ಬೈಕ್ ಸವಾರರ ಬೆನ್ನಟ್ಟಿವೆ. ಅವರ ಕ್ಯಾಪ್ಷನ್ ನೋಡಿದರೆ ಸದರಿ ವಿಡಿಯೋ ತಮಿಳುನಾಡಿನ ನೀಲಗಿರಿ ಬೆಟ್ಟ್​ಗಳಲ್ಲಿ ಶೂಟ್ ಮಾಡಲಾಗಿದೆ. ಆನಂದ್ ಅವರ ವಿಡಿಯೋವನ್ನು ಈಗಾಗಲೇ 52,000 ಕ್ಕಿಂತ ಹೆಚ್ಚು ಜನ ನೋಡಿದ್ದಾರೆ. ಅದರೊಂದಿಗೆ ಜಾವಾ ಮೊಟಾರ್​ಸೈಕಲ್​ಗಳನ್ನೂ ಅವರು ಟ್ಯಾಗ್ ಮಾಡಿ ಒಂದು ಧೈರ್ಯಶಾಲಿ ಸಲಹೆಯನ್ನು ಅವರು ನೀಡಿದ್ದಾರೆ.

ಬೈಕ್ ಓಡಿಸುತ್ತಿರುವವನೊಬ್ಬ ಈ ವಿಡಿಯೋವನ್ನು ಶೂಟ್​ ಮಾಡಿರುವಂತಿದೆ. ಅಸಲಿಗೆ ಇದು ಒಂದು ಚಹಾ ತೋಟದ ಮೂಲಕ ಹಾದುಹೋಗುವಾಗ ಶೂಟ್​ ಮಾಡಿದ್ದಾರೆ. ಅದು ಆರಂಭವಾಗೋದೇ ರಮಣೀಯ ತೋಟದ ದೃಶ್ಯದಿಂದ. ರಸ್ತೆಯ ಎರಡೂ ಬದಿಗಳಲ್ಲಿ ಹಚ್ಚ ಹಸಿರು ಮರಗಿಡಗಳು, ಪೊದೆಗಳು ಮನಸ್ಸಿಗೆ ಮುದ ನೀಡುತ್ತವೆ. ಹಾಗೆ ಮುಂದೆ ಸಾಗುತ್ತಿರುವಾಗಲೇ, ಒಂದು ತಿರುವಿನಲ್ಲಿ ರಸ್ತೆ ಮೇಲೆ ನಿಂತಿರುವ ಮೂರು ಕರಡಿಗಳನ್ನು ಅವನು ಗಮನಿಸುತ್ತಾನೆ. ಆ ಕ್ಷಣಕ್ಕೆ ಅವನಾಗಲೀ ಅವನ ಜೊತೆಗಾರರರಾಗಲೀ ಹೆದರದೆ ಅವುಗಳನ್ನು ಶೂಟ್​ ಮಾಡುವುದು ಮುಂದುವರೆಸಿದ್ದಾರೆ. ಆದರೆ ಮೂರರಲ್ಲಿ ಒಂದು ಕರಡಿಯು ಇವರತ್ತ ನುಗ್ಗಿದಾಗ ಪ್ರಾಣಭಯದಿಂದ ಯು-ಟರ್ನ್ ತೆಗೆದುಕೊಂಡಿದ್ದಾರೆ. ಅಲ್ಲಿಗೆ ವಿಡಿಯೋ ನಿಂತುಹೋಗುತ್ತದೆ.

‘ನೀಲಗಿರಿ ಬೆಟ್ಟಗಳ ಒಂದು ಭಾಗದಲ್ಲಿ ಈ ವಿಡಿಯೋ ಶೂಟ್​ ಆಗಿದೆ. ನಿಮ್ಮೊಳಗಿನ ವೀರರಸ ಜಾಗೃತಗೊಳ್ಳಬೇಕಾದರೆ, ಈ ಕ್ಲಿಪ್​ ಅನ್ನು ಕೊನೆಯವರೆಗೆ ನೋಡಿರಿ……@jawamotorcycles ಟೀಮ್​ಗೆ: ನಮ್ಮ ಬೈಕ್​ಗಳ ಮೇಲೆ ಕರಡಿಗಳ ದಾಳಿಯ ಬಗ್ಗೆ ಎಚ್ಚರಿಕೆ ಹಾಕಿಕೊಳ್ಳುವ ಅಗತ್ಯವಿದೆ. …’ ಎಂದು ಆನಂದ ಮಹಿಂದ್ರ ತಮ್ಮ ಟ್ವೀಟ್​ನಲ್ಲಿ ಬರೆದುಕೊಂಡಿದ್ದಾರೆ.

ಈ ಟ್ವೀಟ್​ ನೋಡಿರುವ ಹಲವಾರು ಜನರಿಗೆ ಹೆದರಿಕೆಯಾದರೆ ಇನ್ನೂ ಕೆಲವರಿಗೆ ಬೈಕರ್​ಗಳ ಯೋಗಕ್ಷೇಮದ ಚಿಂತೆಯಾಗಿದೆ, ಯಾಕೆಂದರೆ, ಕರಡಿ ನುಗ್ಗುವಲ್ಲಿಗೆ ವಿಡಿಯೋ ನಿಂತುಹೋಗುತ್ತದೆ. ಶ್ರೀ ಮಹಿಂದ್ರ ಅವರೇ, ಕರಡಿ ಬೈಕರ್​ಗಳ ಕಡೆ ನುಗ್ಗಿದ ನಂತರ ಏನಾಯಿತು ಅನ್ನೋದು ಗೊತ್ತಾಗಲಿಲ್ಲ, ಇದರ ಫೀಡ್​ಬ್ಯಾಕ್​ ಆಗಿ ನೀವು ಇನ್ನೊಂದು ಟ್ಟೀಟ್​​ ಮಾಡುವರೆಂಬ ನಿರೀಕ್ಷೆ ನನ್ನದು. ಆ ಬೈಕರ್​ಗಳ ಜೊತೆ ಕರಡಿಗಳೂ ಸುರಕ್ಷಿತವಾಗಿವೆಯೇ ಅಂತ ತಿಳಿಯುವುದು ಮುಖ್ಯವಾಗಿದೆ, ಯಾಕೆಂದರೆ ಪ್ರತಿ ಜೀವವೂ ಅಮೂಲ್ಯವಾದದ್ದು, ಅಂತ ಒಬ್ಬ ಬಳಕೆದಾರ ಪ್ರತಿಕ್ರಿಯಿಸಿದ್ದಾರೆ.

ಮತ್ತೊಬ್ಬರು, ಶ್ರೀ ಮಹಿಂದ್ರ ಅವರೇ, ಇದು ನಿಜಕ್ಕೂ ಭಯಾನಕವಾಗಿದೆ. ಕರಡಿಯಿಂದ ಬೆನ್ನಟ್ಟಿಸಿಕೊಳ್ಳವುದು ಅಂದ್ರ ಸುಮ್ಮೇನಾ. ನನ್ನ ಹೃದಯ ಬಡಿತವೇ ನಿಂತಂತಾಗಿ ಫೋನ್ ಕೈಯಿಂದ ಜಾರಿ ಕೆಳಗೆ ಬೀಳುವುದರಲ್ಲಿತ್ತು…. ಅಂತ ಹೇಳಿದ್ದಾರೆ.

ಮಾನವ ಹಾಗೂ ವನ್ಯ ಪ್ರಾಣಿಗಳು ಸುರಕ್ಷಿತವಾಗಿರುವರೇ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಅಹ್ಮದ್​ ಸಯೀದ್​ ಅನ್ನುವವರು ಎಲ್ಲರೂ ಸೇಫಾಗಿದ್ದಾರೆಂದು ಹೇಳಿ ಆ ವಿಡಿಯೋದ ಮುಂದುವರಿದ ಭಾಗವನ್ನು ಶೇರ್​ ಮಾಡಿದ್ದಾರೆ. ಮಳೆ ಸುರಿಯಾರಂಭಿಸಿದೆ ಮತ್ತ ಕರಡಿಗಳು ವಾಪಸ್ಸು ಹೋಗುತ್ತಿವೆ…….

ಇದನ್ನೂ ಓದಿ: Viral Video: ಸೀರೆಯುಟ್ಟು ಸ್ಟೈಲಾಗಿ ಸೊಂಟ ಬಳುಕಿಸುತ್ತಿರುವ ಮಹಿಳೆ ನೋಡಿ ನೆಟ್ಟಿಗರು ಫಿದಾ!

ಉಗ್ರರ ದಾಳಿ ನಡುವೆಯೂ ಕಾಶ್ಮೀರದಲ್ಲಿ ನಿಲ್ಲದ ಪ್ರವಾಸಿಗರ ಭೇಟಿ
ಉಗ್ರರ ದಾಳಿ ನಡುವೆಯೂ ಕಾಶ್ಮೀರದಲ್ಲಿ ನಿಲ್ಲದ ಪ್ರವಾಸಿಗರ ಭೇಟಿ
ನಟ ಶ್ರೀಮುರಳಿ ಕಂಠದಲ್ಲಿ ‘ನೀಡು ಶಿವ ನೀಡದಿರು ಶಿವ..’ ಹಾಡು ಕೇಳಿ..
ನಟ ಶ್ರೀಮುರಳಿ ಕಂಠದಲ್ಲಿ ‘ನೀಡು ಶಿವ ನೀಡದಿರು ಶಿವ..’ ಹಾಡು ಕೇಳಿ..
ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಸಮನ್ವಯತೆಯಿಂದ ಕೆಲಸ ಮಾಡಬೇಕು: ಸಿಎಂ
ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಸಮನ್ವಯತೆಯಿಂದ ಕೆಲಸ ಮಾಡಬೇಕು: ಸಿಎಂ
ನನ್ನ ಆಯುಷ್ಯವನ್ನೂ ದೇವರು ನಮ್ಮ ಸೈನಿಕರಿಗೆ ನೀಡಲಿ: ಪಲ್ಲವಿ ರಾವ್
ನನ್ನ ಆಯುಷ್ಯವನ್ನೂ ದೇವರು ನಮ್ಮ ಸೈನಿಕರಿಗೆ ನೀಡಲಿ: ಪಲ್ಲವಿ ರಾವ್
ಬಾಗಲಕೋಟೆ: NWKRTC ಬಸ್​ ಚಾಲಕ, ಕಂಡಕ್ಟರ್​ ಮೇಲೆ ಕಟ್ಟಿಗೆಯಿಂದ ಹಲ್ಲೆ​
ಬಾಗಲಕೋಟೆ: NWKRTC ಬಸ್​ ಚಾಲಕ, ಕಂಡಕ್ಟರ್​ ಮೇಲೆ ಕಟ್ಟಿಗೆಯಿಂದ ಹಲ್ಲೆ​
ಕೆನಡ ಚುನಾವಣೆಯಲ್ಲಿ ಸೋತಿದ್ದಕ್ಕೆ ಭಾವುಕರಾದ ಖಲಿಸ್ತಾನ್ ಪರ ಜಗ್ಮೀತ್ ಸಿಂಗ್
ಕೆನಡ ಚುನಾವಣೆಯಲ್ಲಿ ಸೋತಿದ್ದಕ್ಕೆ ಭಾವುಕರಾದ ಖಲಿಸ್ತಾನ್ ಪರ ಜಗ್ಮೀತ್ ಸಿಂಗ್
ಸುದೀಪ್ ಮತ್ತು ಶಿವಣ್ಣನ ಜೊತೆಗಿನ ಗೆಳೆತನದ ಬಗ್ಗೆ ನಾನಿ ಮಾತು
ಸುದೀಪ್ ಮತ್ತು ಶಿವಣ್ಣನ ಜೊತೆಗಿನ ಗೆಳೆತನದ ಬಗ್ಗೆ ನಾನಿ ಮಾತು
ನಿನ್ನೆ ಶಿವಕುಮಾರ್ ಹೇಳಿದ್ದನ್ನೇ ಇಂದು ಪ್ರದೀಪ್ ಈಶ್ವರ್ ಪುನರುಚ್ಛರಿಸಿದರು
ನಿನ್ನೆ ಶಿವಕುಮಾರ್ ಹೇಳಿದ್ದನ್ನೇ ಇಂದು ಪ್ರದೀಪ್ ಈಶ್ವರ್ ಪುನರುಚ್ಛರಿಸಿದರು
ಮೋದಿ ನಿವಾಸದಲ್ಲಿ ಮಹತ್ವದ ಸಭೆ; ಸೇನಾ ಮುಖ್ಯಸ್ಥರು, ರಾಜನಾಥ್ ಸಿಂಗ್ ಭಾಗಿ
ಮೋದಿ ನಿವಾಸದಲ್ಲಿ ಮಹತ್ವದ ಸಭೆ; ಸೇನಾ ಮುಖ್ಯಸ್ಥರು, ರಾಜನಾಥ್ ಸಿಂಗ್ ಭಾಗಿ
ದೇವೇಗೌಡರಂತೆ ಮಂಜುನಾಥ್ ಸಹ ಪಹಲ್ಗಾಮ್ ಬಗ್ಗೆ ಅನಾವಶ್ಯಕ ಮಾತಾಡಲಿಲ್ಲ
ದೇವೇಗೌಡರಂತೆ ಮಂಜುನಾಥ್ ಸಹ ಪಹಲ್ಗಾಮ್ ಬಗ್ಗೆ ಅನಾವಶ್ಯಕ ಮಾತಾಡಲಿಲ್ಲ