AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್​ ಬಾಸ್​ ಮನೆಯಲ್ಲಿ ಎರಡು ಲಕ್ಷ ರೂಪಾಯಿ ಜಾಕ್​ಪಾಟ್; ಗೆಲ್ಲೋರು ಯಾರು?

ಎರಡು ಲಕ್ಷ ರೂಪಾಯಿ ಬಹುಮಾನ ಸಿಗಲಿದೆ ಎನ್ನುವ ವಿಚಾರ ತಿಳಿದ ಸ್ಪರ್ಧಿಗಳು ಸಾಕಷ್ಟು ಖುಷಿಪಟ್ಟಿದ್ದಾರೆ. ಅಷ್ಟೇ ಅಲ್ಲ, ಎಲ್ಲಾ ಟಾಸ್ಕ್​ಗಳು ಸಾಕಷ್ಟು ಟಫ್​ ಇರಲಿದೆ ಎನ್ನುವ ಅಭಿಪ್ರಾಯವನ್ನು ಸ್ಪರ್ಧಿಗಳು ಹೊರ ಹಾಕಿದ್ದಾರೆ.

ಬಿಗ್​ ಬಾಸ್​ ಮನೆಯಲ್ಲಿ ಎರಡು ಲಕ್ಷ ರೂಪಾಯಿ ಜಾಕ್​ಪಾಟ್; ಗೆಲ್ಲೋರು ಯಾರು?
ಬಿಗ್​ ಬಾಸ್​ ಮನೆಯಲ್ಲಿ ಎರಡು ಲಕ್ಷ ರೂಪಾಯಿ ಜಾಕ್​ಪಾಟ್; ಗೆಲ್ಲೋರು ಯಾರು?
TV9 Web
| Edited By: |

Updated on: Aug 02, 2021 | 10:13 PM

Share

ಬಿಗ್​ ಬಾಸ್​ ಮನೆಯಲ್ಲಿ ಪಾಯಿಂಟ್ಸ್​ ಪಡೆಯೋಕೆ, ಲಕ್ಷುರಿ ಐಟಮ್​ ಪಡೆಯೋಕೆ ಟಾಸ್ಕ್​ಗಳನ್ನು ನೀಡಲಾಗುತ್ತದೆ. ಆದರೆ, ಕನ್ನಡ ಬಿಗ್​ ಬಾಸ್​ ಸೀಸನ್​ 8ರ ಎರಡನೇ ಇನ್ನಿಂಗ್ಸ್​ನಲ್ಲಿ ಕೊನೆಯ ವಾರ ​ ಸ್ಪರ್ಧಿಗಳಿಗೆ ವಿಶೇಷ ಟಾಸ್ಕ್​ ನೀಡಲಾಗುತ್ತಿದೆ. ಈ ಟಾಸ್ಕ್​ ಗೆದ್ದ ಸ್ಪರ್ಧಿಗೆ ಎರಡು ಲಕ್ಷ ರೂಪಾಯಿ ಬಹುಮಾನ ಸಿಗಲಿದೆ. ಈ ಜಾಕ್​ಪಾಟ್ ಪಡೆದುಕೊಳ್ಳೋಕೆ ಸ್ಪರ್ಧಿಗಳು ರೆಡಿ ಆಗುತ್ತಿದ್ದಾರೆ.

ಪ್ರತಿ ವಾರ ಸ್ಪರ್ಧಿಗಳಿಗೆ ಟಾಸ್ಕ್​ ನೀಡಲಾಗುತ್ತದೆ. ವಾರ ಪೂರ್ತಿ ಟಾಸ್ಕ್​ ಇರುತ್ತದೆ. ಈ ಟಾಸ್ಕ್​ನಲ್ಲಿ ಗೆಲ್ಲೋರು ಕ್ಯಾಪ್ಟನ್ಸಿ ಟಾಸ್ಕ್​ಗೆ ಆಯ್ಕೆ ಆಗುತ್ತಾರೆ. ಕೊನೆಯಲ್ಲಿ ಟಾಸ್ಕ್​​ನಲ್ಲಿ ಗೆಲ್ಲೋರು ಕ್ಯಾಪ್ಟನ್​ ಆಗುತ್ತಾರೆ. ಆದರೆ, ಕೊನೆಯ ವಾರವಾದ್ದರಿಂದ ಈ ಬಾರಿ ಕ್ಯಾಪ್ಟನ್ಸಿ ಟಾಸ್ಕ್ ಇಲ್ಲ. ಆದರೆ, ಬಿಗ್​ ಬಾಸ್​ ಸರ್​ಪ್ರೈಸ್​ ನೀಡಿದ್ದಾರೆ.

‘ಬಿಗ್​ ಬಾಸ್​ ಮನೆಯಲ್ಲಿ ಸ್ಪರ್ಧಿಗಳು 113 ದಿನಗಳ ಸುದೀರ್ಘ ಪಯಣದಲ್ಲಿ ಎಲ್ಲಾ ಭಾವಗಳನ್ನು ದಾಟಿ ಗುರಿಗೆ ಹತ್ತಿರವಾಗಿದ್ದಾರೆ. ಎರಡು ಲಕ್ಷ ಪಡೆದುಕೊಳ್ಳಲು ಬಿಗ್​ ಬಾಸ್​ ಟಾಸ್ಕ್​ ನೀಡುತ್ತಿದ್ದಾರೆ. ಪ್ರತಿ ಸ್ಪರ್ಧೆಯಲ್ಲಿ ಮೊದಲ ಸ್ಥಾನದಲ್ಲಿರುವ ಸ್ಪರ್ಧಿಗೆ 5 ಅಂಕ, ಎರಡನೇ ಸ್ಥಾನದಲ್ಲಿರುವ ಸ್ಪರ್ಧಿಗೆ ಅಂಕ 3 ಹಾಗೂ ಮೂರನೇ ಸ್ಥಾನಕ್ಕೆ 1 ಅಂಕ ಸಿಗುತ್ತದೆ. ವಾರದ ಕೊನೆಯಲ್ಲಿ ಯಾರ ಬಳಿ ಅಂಕ ಹೆಚ್ಚಿರುತ್ತದೆಯೋ ಅವರಿಗೆ ಎರಡು ಲಕ್ಷ ರೂಪಾಯಿ ಸಿಗಲಿದೆ’ ಎಂದು ಬಿಗ್​ ಬಾಸ್​ನಿಂದ ಸುತ್ತೋಲೆ ಬಂತು.

ಎರಡು ಲಕ್ಷ ರೂಪಾಯಿ ಬಹುಮಾನ ಸಿಗಲಿದೆ ಎನ್ನುವ ವಿಚಾರ ತಿಳಿದ ಸ್ಪರ್ಧಿಗಳು ಸಾಕಷ್ಟು ಖುಷಿಪಟ್ಟಿದ್ದಾರೆ. ಅಷ್ಟೇ ಅಲ್ಲ, ಎಲ್ಲಾ ಟಾಸ್ಕ್​ಗಳು ಸಾಕಷ್ಟು ಟಫ್​ ಇರಲಿದೆ ಎನ್ನುವ ಅಭಿಪ್ರಾಯವನ್ನು ಸ್ಪರ್ಧಿಗಳು ಹೊರ ಹಾಕಿದ್ದಾರೆ.

ಕಳೆದ ವಾರ ಸ್ಪರ್ಧಿಗಳಿಗೆ ಯಾವುದೇ ಟಾಸ್ಕ್​ ಇರಲಿಲ್ಲ. ಈ ಕಾರಣಕ್ಕೆ ಎಲ್ಲಾ ಸ್ಪರ್ಧಿಗಳು ಡಲ್​ ಆಗಿದ್ದರು. ಮನೆಯಲ್ಲಿ ಕೆಲವರು ನಿದ್ದೆಗೆ ಶರಣಾಗುವ ಸ್ಥಿತಿಗೂ ಹೋಗಿದ್ದರು.  ಈ ವಾರ ಟಾಸ್ಕ್​ ಇದೆ ಎನ್ನುವ ವಿಚಾರ ಕೇಳಿ ಸ್ಪರ್ಧಿಗಳು ಸಾಕಷ್ಟು ಖುಷಿಪಟ್ಟಿದ್ದಾರೆ. ಅಲ್ಲದೆ, ಈ ವಾರ ಯಾರು ಹೇಗೆ ಪರ್ಫಾರ್ಮೆನ್ಸ್​ ಕೊಡುತ್ತಾರೆ ಎನ್ನುವುದು ತುಂಬಾನೇ ಮುಖ್ಯವಾಗಲಿದೆ.

ಇದನ್ನೂ ಓದಿ: ಬಿಗ್​ ಬಾಸ್​ ಮನೆಯಲ್ಲಿ ಅತಿ ಹೆಚ್ಚು ವೋಟ್​ ಪಡೆದವರಲ್ಲಿ ವೈಷ್ಣವಿ ಟಾಪ್​; ಮೂರನೇ ಸ್ಥಾನಕ್ಕೆ ಕುಸಿದ ಅರವಿಂದ್

Follow Us
ಗುಡ್ಡ ಕುಸಿತ: ದುರಂತದ ಭಯಾನಕ ಕ್ಷಣವನ್ನು ಬಿಚ್ಚಿಟ್ಟಿ ಪ್ರತ್ಯಕ್ಷದರ್ಶಿ
ಗುಡ್ಡ ಕುಸಿತ: ದುರಂತದ ಭಯಾನಕ ಕ್ಷಣವನ್ನು ಬಿಚ್ಚಿಟ್ಟಿ ಪ್ರತ್ಯಕ್ಷದರ್ಶಿ
ಡ್ಯಾಂ ಸುರಕ್ಷತೆಯ ಹಿತದೃಷ್ಟಿಯಿಂದ ನೀರು ಬಿಟ್ಟಿದ್ದೇವೆ: ಡಿಕೆಶಿ ಸ್ಪಷ್ಟನೆ
ಡ್ಯಾಂ ಸುರಕ್ಷತೆಯ ಹಿತದೃಷ್ಟಿಯಿಂದ ನೀರು ಬಿಟ್ಟಿದ್ದೇವೆ: ಡಿಕೆಶಿ ಸ್ಪಷ್ಟನೆ
ಕರ್ನಾಟಕ ಬಂದ್​ನಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದ ವಾಟಾಳ್
ಕರ್ನಾಟಕ ಬಂದ್​ನಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದ ವಾಟಾಳ್
ಧಾರಾಕಾರ ಮಳೆಗೆ ನಲುಗಿದ ಮಲೆನಾಡು: ರೈಲ್ವೆ ಹಳಿ ಮೇಲೆ ಕುಸಿದ ಗುಡ್ಡ
ಧಾರಾಕಾರ ಮಳೆಗೆ ನಲುಗಿದ ಮಲೆನಾಡು: ರೈಲ್ವೆ ಹಳಿ ಮೇಲೆ ಕುಸಿದ ಗುಡ್ಡ
ಉದ್ಯೋಗದ ಕನಸು: ಅಮ್ಮನ ಜತೆ ಪರೀಕ್ಷೆಗೆ ಬಂದ ಕಂದನಿಗೆ ಲಾಲಿ ಹಾಡಿದ ಪೊಲೀಸ್ರು
ಉದ್ಯೋಗದ ಕನಸು: ಅಮ್ಮನ ಜತೆ ಪರೀಕ್ಷೆಗೆ ಬಂದ ಕಂದನಿಗೆ ಲಾಲಿ ಹಾಡಿದ ಪೊಲೀಸ್ರು
ಕಾವೇರಿ ವಿವಾದ: ಊರ್ವಶಿ ಚಿತ್ರಮಂದಿರದಲ್ಲಿ ‘ಜನ ನಾಯಗನ್’ ಬದಲಿಗೆ ‘ಕರಾವಳಿ’
ಕಾವೇರಿ ವಿವಾದ: ಊರ್ವಶಿ ಚಿತ್ರಮಂದಿರದಲ್ಲಿ ‘ಜನ ನಾಯಗನ್’ ಬದಲಿಗೆ ‘ಕರಾವಳಿ’
ನಶಾ ಮುಕ್ತ ಭಾರತ ಅಭಿಯಾನ, ಪ್ರಧಾನಿ ಮೋದಿ ಏನಂದ್ರು ನೋಡಿ
ನಶಾ ಮುಕ್ತ ಭಾರತ ಅಭಿಯಾನ, ಪ್ರಧಾನಿ ಮೋದಿ ಏನಂದ್ರು ನೋಡಿ
ಕಬಿನಿ ಜಲಾಶಯ ಸಂಪೂರ್ಣ ಭರ್ತಿ
ಕಬಿನಿ ಜಲಾಶಯ ಸಂಪೂರ್ಣ ಭರ್ತಿ
ನಶಾಮುಕ್ತ ಭಾರತ ಕಾರ್ಯಕ್ರಮ: ವಿದ್ಯಾರ್ಥಿಗಳಿಗೆ ಮೋದಿ ಕಿವಿಮಾತು
ನಶಾಮುಕ್ತ ಭಾರತ ಕಾರ್ಯಕ್ರಮ: ವಿದ್ಯಾರ್ಥಿಗಳಿಗೆ ಮೋದಿ ಕಿವಿಮಾತು
ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ ಪರೀಕ್ಷೆ; ಬೆಂಗಳೂರಿನಲ್ಲಿ ಹೈ ಅಲರ್ಟ್
ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ ಪರೀಕ್ಷೆ; ಬೆಂಗಳೂರಿನಲ್ಲಿ ಹೈ ಅಲರ್ಟ್