ಮಂಗಳೂರು ವಿವಿಯ ಎಲ್ಲಾ ಪದವಿ ಪರೀಕ್ಷೆ ಮುಂದೂಡಿಕೆ

ಮಂಗಳೂರು ವಿವಿಯ ಎಲ್ಲಾ ಪದವಿ ಪರೀಕ್ಷೆ ಮುಂದೂಡಿಕೆ
ಸಾಂಕೇತಿಕ ಚಿತ್ರ

ಮಂಗಳೂರು: ಕೇರಳದಲ್ಲಿ ಕೊರೊನ ಏರಿಕೆ ಕಾರಣ ಮಂಗಳೂರು ವಿಶ್ವವಿದ್ಯಾಲಯದ ಎಲ್ಲಾ ಪದವಿ ಪರೀಕ್ಷೆ ಮುಂದೂಡಿಕೆ ಮಾಡಲಾಗಿದೆ

TV9kannada Web Team

| Edited By: guruganesh bhat

Aug 03, 2021 | 9:12 PM

ಮಂಗಳೂರು: ಕೇರಳದಲ್ಲಿ ಕೊವಿಡ್ ಸೋಂಕು ಏರಿಕೆ ಕಾರಣ ಮಂಗಳೂರು ವಿಶ್ವವಿದ್ಯಾಲಯದ (Mangaluru University)ಎಲ್ಲಾ ಪದವಿ ಪರೀಕ್ಷೆ ಮುಂದೂಡಿಕೆ ಮಾಡಲಾಗಿದೆ. ಜಿಲ್ಲಾಧಿಕಾರಿ ಡಾ.ಕೆ.ವಿ‌.ರಾಜೇಂದ್ರ ಸೂಚನೆ ಮೇರೆಗೆ ಎಲ್ಲಾ ಪದವಿ ಪರೀಕ್ಷೆಗಳನ್ನು ಮುಂದೂಡಿಕೆ ಮಾಡಲಾಗಿದೆ. ಕೇರಳದ ಕಾಸರಗೋಡು ಭಾಗದಿಂದ ಸಾವಿರಾರು ವಿದ್ಯಾರ್ಥಿಗಳು ಮಂಗಳೂರಿನಲ್ಲಿ ಪರೀಕ್ಷೆಗೆ ಹಾಜರಾಗುತ್ತಿದ್ದ ಕಾರಣ ರದ್ದುಗೊಳಿಸಲಾಗಿದೆ ಎಂದು ತಿಳಿದುಬಂದಿದೆ. ಮುಂದಿನ ಅದೇಶದವರೆಗೆ ಪರೀಕ್ಷೆ ರದ್ದುಗೊಳಿಸಿ ತರಗತಿಗಳನ್ನೂ ಮುಂದೂಡಲು ಆದೇಶ ಹೊರಡಿಸಲಾಗಿದೆ. ನಿನ್ನೆಯಿಂದ (ಆಗಸ್ಟ್ 2) ಮಂಗಳೂರು ವಿವಿಯ ಪದವಿ ಪರೀಕ್ಷೆಗಳು ಆರಂಭವಾಗಿದ್ದವು.

ಈ ಮುನ್ನ ಪರೀಕ್ಷೆ ಬರೆಯಲು ಬರುವ ವಿದ್ಯಾರ್ಥಿಗಳಿಗೆ ನೆಗೆಟಿವ್ ರಿಪೋರ್ಟ್ ಕಡ್ಡಾಯಗೊಳಿಸಲಾಗಿತ್ತು. ಕೇರಳ ಗಡಿಯಲ್ಲಿರುವ ಕನ್ನಡಿಗ ವಿದ್ಯಾರ್ಥಿಗಳಲ್ಲಿ ಆತಂಕ ಎದುರಾಗಿದೆ. ರಾಜ್ಯಕ್ಕೆ ಬರಲು ಕೊವಿಡ್ ನೆಗೆಟಿವ್ ರಿಪೋರ್ಟ್ ಕಡ್ಡಾಯವಾಗಿದ್ದು, ಒಂದು ದಿನದಲ್ಲಿ ಹೇಗೆ ಈ ರಿಪೋರ್ಟ್ ತರುವುದು ಎಂದು ವಿದ್ಯಾರ್ಥಿಗಳು ಆತಂಕಕ್ಕೆ ಗುರಿಯಾಗಿದ್ದರು.

ಮೊದಲ ಡೋಸ್ ಪಡೆದ ಆಧಾರ ಮೇಲೆ ಪರೀಕ್ಷೆ ಬರೆಯಲು ವಿದ್ಯಾರ್ಥಿಗಳು ನಿರ್ಧರಿಸಿದ್ದರು. ಆದರೆ  ಕೇರಳ ಗಡಿಯಲ್ಲಿ ಕಟ್ಟುನಿಟ್ಟಿನ ಕ್ರಮಕೈಗೊಂಡಿದ್ದು, ಎರಡನೇ ಡೋಸ್ ಆದರೂ ನೆಗೆಟಿವ್ ರಿಪೋರ್ಟ್ ಕಡ್ಡಾಯ ಎಂದು ತಿಳಿಸಲಾಗಿತ್ತು. ವಿವಿಗಳು ಕೂಡ ಈ ನಿಯಮಕ್ಕೆ ಬದ್ಧವಾಗಿದ್ದು, ನೆಗೆಟಿವ್ ರಿಪೋರ್ಟ್ ಇಲ್ಲದ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ಇಲ್ಲ ಎಂದು ಹೇಳಲಾಗಿತ್ತು. ಹೀಗಾಗಿ ವ್ಯಾಕ್ಸಿನ್ ಆಧಾರದ ಮೇಲೆ ಪರೀಕ್ಷೆಗೆ ಬರಲು ಅವಕಾಶ ಮಾಡಿಕೊಡಿ. ಇಲ್ಲವಾದಲ್ಲಿ ಪರೀಕ್ಷೆ ಬರೆಯಲು ಸಾಧ್ಯವಾಗಲ್ಲ ಎಂದು ಕೇರಳ ಗಡಿ ಭಾಗದ ವಿದ್ಯಾರ್ಥಿಗಳು ಅಳಲು ತೋಡಿಕೊಂಡಿದ್ದರು.

Mangaluru University

ಮುಂಡೂಡಿಕೆ ಪ್ರಕಟಣೆ

ಇದನ್ನೂ ಓದಿ: 

ಎರಡನೇ ಡೋಸ್ ಲಸಿಕೆ ಪಡೆದರೂ ನೆಗೆಟಿವ್ ರಿಪೋರ್ಟ್ ಕಡ್ಡಾಯ; ಮಂಗಳೂರು ವಿವಿ ಪದವಿ ಪರೀಕ್ಷೆಗೆ ವಿದ್ಯಾರ್ಥಿಗಳ ಪರದಾಟ

ನೀಲಕುರಿಂಜಿ ಹೂವು ಕೇರಳದಲ್ಲಿ 12 ವರ್ಷಗಳಿಗೊಮ್ಮೆ ಮಾತ್ರ ಅರಳುವ ಸುಗಂಧಭರಿತ ನೀಲಿವರ್ಣದ ಪುಷ್ಪ

(Mangaluru University all Degree exams Postponed due to Covid 19 rise in Kerala)

Follow us on

Related Stories

Most Read Stories

Click on your DTH Provider to Add TV9 Kannada