AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೈಸೂರು ಮೃಗಾಲಯದ ಈ ಚಿರತೆ ವೀಕ್ಷಕಲ್ಲಿ ಟೋಕಿಯೋ ಒಲಂಪಿಕ್ಸ್ ಚಿತ್ರಣ ಮೂಡಿಸುತ್ತಿದೆ!

ಮೈಸೂರು ಮೃಗಾಲಯದ ಈ ಚಿರತೆ ವೀಕ್ಷಕಲ್ಲಿ ಟೋಕಿಯೋ ಒಲಂಪಿಕ್ಸ್ ಚಿತ್ರಣ ಮೂಡಿಸುತ್ತಿದೆ!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ|

Updated on: Aug 02, 2021 | 11:12 PM

Share

ಓಟದಲ್ಲಿ ಚಿರತೆಯನ್ನು ಯಾರಾದರೂ ಸೋಲಿಸಲಾದೀತೆ? ಅತಿ ವೇಗವಾಗಿ ಓಡುವ ಪ್ರಾಣಿ ಅದು ಅಂತ ಹೇಳೋದು ಜಾಗತಿಕ ಸತ್ಯ. ವನ್ಯಜೀವಿಗಳ ಒಲಂಪಿಕ್ಸ್ ನಡೆಸಿದ್ದಾಯಾದರೆ, 100, 200, 400, 800 ಮೊದಲಾದ ಎಲ್ಲ ಓಟಗಳಲ್ಲಿ ದಾಖಲೆ ಸಮಯದೊಂದಿಗೆ ಚಿನ್ನದ ಪದಕಗಳನ್ನು ಅದು ಗೆದ್ದು ಬಿಡುತ್ತದೆ

ಮೈಸುರು:  ನನ್ನನ್ನು ಯಾಕೆ ಟೋಕಿಯೋ ಒಲಂಪಿಕ್ಸ್ಗೆ ಕರದೊಯ್ಯಲಿಲ್ಲ, ಒಟದಲ್ಲಿ, ಜಿಗಿತದಲ್ಲಿ ಖಂಡಿತವಾಗಿಯೂ ಪದಕ ಗೆದ್ದುಕೊಡುತ್ತಿದ್ದೆ. ಮಿಂಚಿನಂತೆ ಓಡುವ ಉಸೇನ್ ಬೋಲ್ಟ್, ಮಾರ್ಸೆಲ್ ಜೇಕಬ್ಸ್ ಅಂಥವರಿಗೆಲ್ಲ ಚಿರತೆಯಂತೆ ಓಡ್ತಾನೆ ಅಂತೀರಾ, ಅವರೇನಾದರೂ ನನ್ನ ಜೊತೆ ಓಡಿದ್ದಾರಾ? ಒಮ್ಮೆ ಅವರೊಂದಿಗೆ ನನ್ನನ್ನು ಓಡಿಸಿ ನಂತರ ಹೋಲಿಕೆ ಮಾಡಿ ಅನ್ನುವಂತಿದೆ ಈ ಚಿರತೆರಾಯನ ವರಸೆ!

ಹೌದು ಓಟದಲ್ಲಿ ಚಿರತೆಯನ್ನು ಯಾರಾದರೂ ಸೋಲಿಸಲಾದೀತೆ? ಅತಿ ವೇಗವಾಗಿ ಓಡುವ ಪ್ರಾಣಿ ಅದು ಅಂತ ಹೇಳೋದು ಜಾಗತಿಕ ಸತ್ಯ. ವನ್ಯಜೀವಿಗಳ ಒಲಂಪಿಕ್ಸ್ ನಡೆಸಿದ್ದಾಯಾದರೆ, 100, 200, 400, 800 ಮೊದಲಾದ ಎಲ್ಲ ಓಟಗಳಲ್ಲಿ ದಾಖಲೆ ಸಮಯದೊಂದಿಗೆ ಚಿನ್ನದ ಪದಕಗಳನ್ನು ಅದು ಗೆದ್ದು ಬಿಡುತ್ತದೆ. ಹಾಗೆಯೇ, ದೂರ ಮತ್ತಯ ಎತ್ತರದ ಜಿಗಿತಗಳಲ್ಲೂ ಮೊದಲ ಬಹುಮಾನ ನಿಸ್ಸಂದೇಹವಾಗಿ ಚಿರತೆಯೇ ಪಡೆಯುತ್ತದೆ.

ಮೈಸೂರಿನ ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿರುವ ಈ ಚಿರತೆಯನ್ನು ನೋಡಿ. ಟೊಕಿಯೋನಲ್ಲಿ ನಡೆಯುತ್ತಿರುವ ಒಲಂಪಿಕ್ಸ್ ಬಗ್ಗೆ ಇದಕ್ಕೆ ಸುಳಿವು ಸಿಕ್ಕಂತಿದೆ. ತನ್ನನ್ನು ನೋಡಲು ಬಂದವರು ಫೋಟೋಗಳನ್ನು ಕ್ಲಿಕ್ಕಿಸಿಕೊಳ್ಳುವಾಗ ಅದು ಓಡೋದು, ಜಂಪ್ ಮಾಡೋದು, ಪದಕಗಳನ್ನು ಗೆದ್ದವರು ಪೋಡಿಯಂ ನಿಂತು ಪೋಸು ಕೊಡುವ ಹಾಗೆ ಅದು ಮರದ ತುಟ್ಟ ತುದಿವರೆಗೆ ಹತ್ತಿ ಸುತ್ತ ಒಂದು ದೃಷ್ಟಿಯನ್ನು ಹಾಯುಸಿತ್ತಾ ಪೋಸು ಕೊಡುವುದನ್ನು ನೋಡಿದರೆ, ಈ ಸುಂದರ ಪ್ರಾಣಿ, ಐ ಯಾಮ್ ಮಿಸ್ಸಿಂಗ್ ಒಲಂಪಿಕ್ಸ್ ಅನ್ನುವಂತಿದೆ. ನಾವೂ ನಿನ್ನನ್ನು ಕ್ರೀಡಾಕೂಟದಲ್ಲಿ ಮಿಸ್ ಮಾಡಿಕೊಳ್ತಾ ಇದ್ದೀವಿ ಮಾರಾಯಾ……

ಇದನ್ನೂ ಓದಿ: ದೊಡ್ಮನೆಯಲ್ಲಿ ಅರವಿಂದ್ ಮಧ್ಯ ಬೆರಳು ತೋರಿಸಿದ ವಿಡಿಯೋ ವೈರಲ್​; ಬಿಗ್​ ಬಾಸ್ ತಂಡದಿಂದ ಸ್ಪಷ್ಟನೆ