ತೆಲುಗು, ಕನ್ನಡ, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಯಲ್ಲಿ ಈ ಹಾಡು ಮೂಡಿಬಂದಿದೆ. ಎಲ್ಲ ಭಾಷೆಯಲ್ಲೂ ಬೇರೆ ಬೇರೆ ಗಾಯಕರು ಹಾಡಿದ್ದಾರೆ. ಕನ್ನಡ ವರ್ಷನ್ಗೆ ಯಾಸಿನ್ ನಿಜಾರ್ ಧ್ವನಿ ನೀಡಿದ್ದಾರೆ. ಅವರು ಮೂಲತಃ ಕನ್ನಡದವರಲ್ಲ. ಈವರೆಗೂ ಕನ್ನಡದ ಕೆಲವೇ ಕೆಲವು ಹಾಡುಗಳನ್ನು ಅವರು ಹಾಡಿದ್ದಾರಷ್ಟೇ. ಹಾಗಾಗಿ ‘ದೋಸ್ತಿ’ ಗೀತೆಯಲ್ಲಿ ಹೆಚ್ಚು ಕನ್ನಡದ ಫ್ಲೇವರ್ ಕೇಳಿಸುತ್ತಿಲ್ಲ ಎಂದು ಕೆಲವು ಸಿನಿಪ್ರಿಯರು ಕಮೆಂಟ್ ಮಾಡಿದ್ದಾರೆ.
ಕನ್ನಡದಲ್ಲಿ ಹಲವಾರು ಗೀತೆಗಳನ್ನು ಹಾಡಿರುವ ವಿಜಯ್ ಪ್ರಕಾಶ್ ಅವರು ‘ದೋಸ್ತಿ’ ಹಾಡನ್ನು ಹೇಳಿದ್ದರೆ ಅದ್ಭುತವಾಗಿ ಮೂಡಿಬರುತ್ತಿತ್ತು ಎಂದು ಅನೇಕರು ಅಭಿಪ್ರಾಯ ಹಂಚಿಕೊಂಡಿದ್ದಾರೆ. ಇದನ್ನು ಚಿತ್ರತಂಡ ಹೇಗೆ ಸ್ವೀಕರಿಸಲಿದೆಯೋ ಗೊತ್ತಿಲ್ಲ. ಈಗ ರಿಲೀಸ್ ಆಗಿರುವುದು ಒಂದು ಹಾಡು ಮಾತ್ರ. ಇನ್ನುಳಿದ ಹಾಡುಗಳನ್ನಾದರೂ ಅಪ್ಪಟ ಕನ್ನಡದ ಗಾಯಕರಿಂದ ಹಾಡಿಸಿದರೆ ಕರುನಾಡಿನಲ್ಲಿ ಇನ್ನಷ್ಟು ಜನರಿಗೆ ಈ ಸಿನಿಮಾದ ಆಲ್ಬಂ ಇಷ್ಟ ಆಗಲಿದೆ.
ಫ್ರೆಂಡ್ಶಿಪ್ ಡೇ ಪ್ರಯುಕ್ತ ‘ದೋಸ್ತಿ’ ಹಾಡು ಹೊರಬಂದಿದ್ದು, ಗೆಳೆತನವನ್ನು ವರ್ಣಿಸುವಂತಹ ಸಾಹಿತ್ಯವನ್ನು ಆಜಾದ್ ವರದರಾಜ್ ಬರೆದಿದ್ದಾರೆ. ಈ ಹಾಡಿನಲ್ಲಿ ಎಲ್ಲ ಗಾಯಕರೂ ಕಾಣಿಸಿಕೊಂಡಿದ್ದಾರೆ. ಹಾಡಿನ ಕೊನೆಯಲ್ಲಿ ಜ್ಯೂ. ಎನ್ಟಿಆರ್ ಹಾಗೂ ರಾಮ್ ಚರಣ್ ಕೂಡ ಎಂಟ್ರಿ ನೀಡಿದ್ದಾರೆ. ಸಿನಿಮಾದೊಳಗೆ ‘ದೋಸ್ತಿ’ ಗೀತೆ ಹೇಗೆ ಚಿತ್ರಿತವಾಗಿದೆ ಎಂಬುದನ್ನು ತಿಳಿದುಕೊಳ್ಳುವ ಕೌತುಕ ಸಿನಿಪ್ರಿಯರ ಮನದಲ್ಲಿ ಮೂಡಿದೆ.
ಅ.13ರಂದು ‘ಆರ್ಆರ್ಆರ್’ ಸಿನಿಮಾ ವಿಶ್ವಾದ್ಯಂತ ಬಿಡುಗಡೆ ಆಗಲಿದೆ. ಬಾಲಿವುಡ್ ನಟಿ ಆಲಿಯಾ ಭಟ್ ಈ ಚಿತ್ರಕ್ಕೆ ನಾಯಕಿ. ಅಜಯ್ ದೇವಗನ್ ಕೂಡ ಒಂದು ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ.
ಇದನ್ನೂ ಓದಿ:
Roar of RRR: ಅಬ್ಬಬ್ಬಾ… ಆರ್ಆರ್ಆರ್ ಮೇಕಿಂಗ್ ಹೀಗಿದೆ, ಇನ್ನು ಸಿನಿಮಾ ಹೇಗಿರಬಹುದು?
RRR Movie: ದಾಖಲೆಯ ಮೊತ್ತಕ್ಕೆ RRR ಚಿತ್ರದ ಆಡಿಯೋ ಹಕ್ಕು ಮಾರಾಟ