ವಂಚನೆ ಆರೋಪ; ಸ್ಯಾಂಡಲ್ವುಡ್ ನಿರ್ಮಾಪಕನಿಗೆ 5 ಕೋಟಿ ದಂಡ, ಒಂದು ವರ್ಷ ಜೈಲು ಶಿಕ್ಷೆ ವಿಧಿಸಿದ ಕೋರ್ಟ್
2.90 ಕೋಟಿ ರೂಪಾಯಿ ಹಣವನ್ನು ಸುಧಾಕರ್ ಹಾಸನದ ಉದ್ಯಮಿಯಿಂದ ಸಾಲವಾಗಿ ತೆಗೆದುಕೊಂಡಿದ್ದರು. ಬಡಾವಣೆ ನಿರ್ಮಾಣ ಮಾಡುವುದಾಗಿ ಇಷ್ಟು ದೊಡ್ಡ ಮೊತ್ತದ ಹಣವನ್ನು ಸುಧಾಕರ್ ಪಡೆದುಕೊಂಡಿದ್ದರು.
ಸ್ಯಾಂಡಲ್ವುಡ್ನಲ್ಲಿ ‘ ‘ಕಥಾ ವಿಚಿತ್ರ’, ‘ಹುಲಿ ದುರ್ಗ’ ಮೊದಲಾದ ಚಿತ್ರಗಳನ್ನು ನಿರ್ಮಿಸಿರುವ ನಿರ್ಮಾಪಕ ಕೆ. ಸುಧಾಕರ್ ವಿರುದ್ಧ ವಂಚನೆ ಆರೋಪ ಕೇಳಿ ಬಂದಿತ್ತು. ಇದು ಕೋರ್ಟ್ನಲ್ಲಿ ಸಾಬೀತಾಗಿತ್ತು. ಇದನ್ನು ಹಾಸನ ಜಿಲ್ಲಾ ನ್ಯಾಯಾಲಯದಲ್ಲಿ ಸುಧಾಕರ್ ಪ್ರಶ್ನಿಸಿದ್ದರು. ಆದರೆ, ಈಗ ಈ ಅರ್ಜಿಯನ್ನು ನ್ಯಾಯಾಲಯ ವಜಾ ಮಾಡಿದೆ. ಈ ಹಿನ್ನೆಲೆಯಲ್ಲಿ ಸುಧಾಕರ್ ಐದು ಕೋಟಿ ಪರಿಹಾರ ನೀಡುವುದರ ಜತೆಗೆ ಒಂದು ವರ್ಷ ಜೈಲು ಶಿಕ್ಷೆ ಅನುಭವಿಸಬೇಕಿದೆ.
2.90 ಕೋಟಿ ರೂಪಾಯಿ ಹಣವನ್ನು ಸುಧಾಕರ್ ಹಾಸನದ ಉದ್ಯಮಿಯಿಂದ ಸಾಲವಾಗಿ ತೆಗೆದುಕೊಂಡಿದ್ದರು. ಬಡಾವಣೆ ನಿರ್ಮಾಣ ಮಾಡುವುದಾಗಿ ಇಷ್ಟು ದೊಡ್ಡ ಮೊತ್ತದ ಹಣವನ್ನು ಸುಧಾಕರ್ ಪಡೆದುಕೊಂಡಿದ್ದರು. ಆದರೆ, ಅವರು ಈ ಹಣವನ್ನು ಹೂಡಿಕೆ ಮಾಡಿದ್ದು ಸಿನಿಮಾ ಮೇಲೆ. ಆದರೆ, ಯಾವ ಸಿನಿಮಾವೂ ಕೈ ಹಿಡಿಯಲಿಲ್ಲ.
ಕೆಲ ತಿಂಗಳ ನಂತರ ಸುಧಾಕರ್ ಬಳಿ ಹಣ ಹಿಂದಿರುಗಿಸುವಂತೆ ಉದ್ಯಮಿ ಕೇಳಿದ್ದರು. ಆದರೆ, ಹಣ ನೀಡದೇ ಸುಧಾಕರ್ ಸತಾಯಿಸಿದ್ದರು. ಕೊನೆಗೆ ಈ ಪ್ರಕರಣದಲ್ಲಿ ರಾಜಿ ಮಾತುಕತೆ ನಡೆದಿತ್ತು. ಈ ವೇಳೆ ಉದ್ಯಮಿಗೆ ಸುಧಾಕರ್ ಚೆಕ್ ನೀಡಿದ್ದರು. ಈ ಚೆಕ್ ಬ್ಯಾಂಕ್ಗೆ ಹಾಕಿದಾಗ ಬೌನ್ಸ್ ಆಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿ ಸಂತ್ರಸ್ತ ಉದ್ಯಮಿ, ಪರಿಹಾರಕ್ಕಾಗಿ ಹಾಸನದ ನಾಲ್ಕನೇ ಜೆಎಂಎಫ್ಸಿ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದರು. 2020ರ ಜನವರಿ 27ರಂದು ಈ ಪ್ರಕರಣವನ್ನು ವಿಚಾರಣೆ ನಡೆಸಿದ ಕೋರ್ಟ್ ಸುಧಾಕರ್ಗೆ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿ, ಐದು ಕೋಟಿ ಪರಿಹಾರ ನೀಡಲು ಆದೇಶ ಹೊರಡಿಸಿತ್ತು. ಈ ಆದೇಶ ಪ್ರಶ್ನಿಸಿ ಸುಧಾಕರ್ ಜಿಲ್ಲಾ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ಅವರ ಮೇಲ್ಮನವಿ ವಜಾಗೊಳಿಸಿದ ನ್ಯಾಯಾಲಯ ಶಿಕ್ಷೆ ಖಾಯಂ ಮಾಡಿದೆ. ಈಗ ಸುಧಾಕರ್ ಶಿಕ್ಷೆ ಅನುಭವಿಸುವುದರ ಜತೆಗೆ ಐದು ಕೋಟಿ ಪರಿಹಾರವನ್ನು ಉದ್ಯಮಿಗೆ ನೀಡಬೇಕಿದೆ.
ಇದನ್ನೂ ಓದಿ: ಭಾನುವಾರ ಬಿಗ್ ಬಾಸ್ ಮನೆಯಿಂದ ಹೊರ ಹೋಗುವ ಸ್ಪರ್ಧಿ ಇವರೇನಾ?
ಬಿಗ್ ಬಾಸ್ ಎಲಿಮಿನೇಷನ್ನಲ್ಲಿ ಟ್ವಿಸ್ಟ್; ಶನಿವಾರವೇ ಹೊರ ಬಿದ್ದ ಶುಭಾ ಪೂಂಜಾ