ಹೊಸ ಫೋಟೋಶೂಟ್ನಲ್ಲಿ ಮಿಂಚುತ್ತಿರುವ ನಟಿ ಪಾರುಲ್ ಯಾದವ್; ಫ್ಯಾನ್ಸ್ ಫಿದಾ
ರಮೇಶ್ ಅರವಿಂದ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ‘ಬಟರ್ಫ್ಲೈ’ ಚಿತ್ರದಲ್ಲಿ ಪಾರುಲ್ ಯಾದವ್ ಅವರು ಅಭಿನಯಿಸಿದ್ದಾರೆ. ಆದರೆ ಕಾರಣಾಂತರಗಳಿಂದ ಆ ಸಿನಿಮಾದ ರಿಲೀಸ್ ತಡವಾಗುತ್ತಲೇ ಇದೆ.
ನಟಿ ಪಾರುಲ್ ಯಾದವ್ (Parul Yadav) ಅವರಿಗೆ ಬಹುಭಾಷೆಯಲ್ಲಿ ಅಭಿಮಾನಿಗಳಿದ್ದಾರೆ. ಕನ್ನಡದಲ್ಲಿ ಹೆಚ್ಚು ಸಿನಿಮಾಗಳನ್ನು ಮಾಡಿದ ಅವರು ಮೂಲತಃ ಮುಂಬೈನವರು. ಕಿಚ್ಚ ಸುದೀಪ್, ಉಪೇಂದ್ರ ಮುಂತಾದ ಸ್ಟಾರ್ ನಟರ ಜೊತೆ ತೆರೆ ಹಂಚಿಕೊಳ್ಳುವ ಚಾನ್ಸ್ ಅವರಿಗೆ ಸಿಕ್ಕಿತ್ತು. 2000ನೇ ಇಸವಿಯಲ್ಲಿ ಚಿತ್ರರಂಗಕ್ಕೆ ಕಾಲಿಟ್ಟ ಪಾರುಲ್ಗೆ ಒಂದು ದಶಕದ ಅನುಭವ ಇದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಅವರು ಸಿನಿಮಾ ಆಯ್ಕೆ ಮಾಡಿಕೊಳ್ಳಲು ವಿಳಂಬ ಮಾಡುತ್ತಿದ್ದಾರೆ. ಹಾಗಂತ ಅವರು ಅಭಿಮಾನಿಗಳಿಂದ ದೂರ ಇಲ್ಲ. ಸೋಶಿಯಲ್ ಮೀಡಿಯಾ ಮೂಲಕ ಫ್ಯಾನ್ಸ್ ಜೊತೆ ಪಾರುಲ್ ಸದಾ ಸಂಪರ್ಕದಲ್ಲಿ ಇರುತ್ತಾರೆ.
ಇನ್ಸ್ಟಾಗ್ರಾಮ್ನಲ್ಲಿ ಪಾರುಲ್ ಯಾದವ್ಗೆ 6.7 ಲಕ್ಷಕ್ಕೂ ಅಧಿಕ ಫಾಲೋವರ್ಸ್ ಇದ್ದಾರೆ. ಕಲರ್ಫುಲ್ ಆದಂತಹ ಫೋಟೋಶೂಟ್ಗಳ ಮೂಲಕ ಅವರು ಆಗಾಗ ಗಮನ ಸೆಳೆಯುತ್ತಾರೆ. ಇತ್ತೀಚೆಗೆ ಪಾರುಲ್ ಯಾದವ್ ಮಾಡಿಸಿರುವ ಹೊಸ ಫೋಟೋಶೂಟ್ ಕೂಡ ಆಕರ್ಷಕವಾಗಿದೆ. ಗ್ಲಾಮರಸ್ ಲುಕ್ನಲ್ಲಿ ಅವರು ಮಿಂಚಿದ್ದಾರೆ. ತಿಳಿ ನೀಲಿ ಬಣ್ಣದ ಉಡುಗೆ ಧರಿಸಿ, ಪಡ್ಡೆಗಳ ನಿದ್ದೆ ಕೆಡಿಸಿದ್ದಾರೆ.
View this post on Instagram
ಪಾರುಲ್ ಯಾದವ್ ಬೆಳ್ಳಿಪರದೆ ಮೇಲೆ ಕಾಣಿಸಿಕೊಳ್ಳದೇ ಬಹಳ ಸಮಯ ಆಗಿದೆ. 2018ರಲ್ಲಿ ತೆರೆಕಂಡ ‘ಸೀಜರ್’ ಚಿತ್ರವೇ ಕೊನೆ. ಆ ಬಳಿಕ ಅವರ ಬೇರಾವುದೇ ಸಿನಿಮಾ ತೆರೆಕಂಡಿಲ್ಲ. ರಮೇಶ್ ಅರವಿಂದ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ‘ಬಟರ್ಫ್ಲೈ’ ಚಿತ್ರದಲ್ಲಿ ಅವರು ಅಭಿನಯಿಸಿದ್ದಾರೆ. ಆದರೆ ಕಾರಣಾಂತರಗಳಿಂದ ಆ ಸಿನಿಮಾದ ರಿಲೀಸ್ ತಡವಾಗುತ್ತಲೇ ಇದೆ. ಇದು ಹಿಂದಿಯ ಸೂಪರ್ ಹಿಟ್ ‘ಕ್ವೀನ್’ ಸಿನಿಮಾದ ಕನ್ನಡ ರಿಮೇಕ್. ಹಿಂದಿಯಲ್ಲಿ ಕಂಗನಾ ರಣಾವತ್ ಮಾಡಿದ ಪಾತ್ರವನ್ನು ಕನ್ನಡದಲ್ಲಿ ಪಾರುಲ್ ಯಾದವ್ ಮಾಡಿದ್ದಾರೆ. ‘ಬಟರ್ಫ್ಲೈ’ ಚಿತ್ರಕ್ಕೆ ಅವರು ಸಹ-ನಿರ್ಮಾಪಕಿ ಕೂಡ ಹೌದು. ಈ ಎಲ್ಲ ಕಾರಣಗಳಿಂದಾಗಿ ಆ ಸಿನಿಮಾ ಮೇಲೆ ಹೆಚ್ಚು ನಿರೀಕ್ಷೆ ಇದೆ.
View this post on Instagram
ಈ ವರ್ಷ ಪಾರುಲ್ ಮತ್ತು ಅವರ ಕುಟುಂಬದ ಸದಸ್ಯರಿಗೆ ಕೊರೊನಾ ಪಾಸಿಟಿವ್ ಆಗಿತ್ತು. ಆ ದಿನಗಳ ಅನುಭವದ ಬಗ್ಗೆ ಇತ್ತೀಚೆಗೆ ಅವರು ಮಾತನಾಡಿದ್ದರು. ‘ಒಂದು ರಾತ್ರಿ ಸುಮಾರು ಎರಡೂವರೆಯ ಸುಮಾರಿಗೆ ಜ್ವರ 103 ಡಿಗ್ರಿಗಿಂತಲೂ ಏರಿ, ಕೈಕಾಲುಗಳು ನಡುಗಲು ಪ್ರಾರಂಭಿಸಿದ್ದವು. ಆಗ ಡಾಕ್ಟರ್ಗೆ ಕರೆ ಮಾಡಿ ನನಗಿನ್ನು ಸಾಧ್ಯವಿಲ್ಲ ಎಂದಿದ್ದೆ. ಆಗ ಧೈರ್ಯ ತುಂಬಿದ್ದ ವೈದ್ಯರು, ಆತ್ಮವಿಶ್ವಾಸದಿಂದಿರಿ; ಅದೊಂದೇ ನಿಮ್ಮನ್ನು ಕಾಪಾಡುವುದು ಎಂದಿದ್ದರು. ತಕ್ಷಣ ನಾನು ಹೋಗಿ ಥಂಡಿ ಬಟ್ಟೆಯನ್ನು ತಲೆಗೆ ಹಾಕಿಕೊಂಡು ವಿಶ್ರಮಿಸಿದೆ. ಆ ರಾತ್ರಿ ಕಳೆದ ಮೇಲೆ ನನಗೊಂದು ಖಾತ್ರಿಯಾಯಿತು. ಇಷ್ಟು ಭೀಕರ ಜ್ವರವೂ ನನ್ನ ಪ್ರಾಣಕ್ಕೆ ಹಾನಿ ಮಾಡದ ಮೇಲೆ ಬದುಕುಳಿಯುತ್ತೇನೆ ಎನಿಸಿತು’ ಎಂದು ಪಾರುಲ್ ಹೇಳಿದ್ದರು.
ಇದನ್ನೂ ಓದಿ:
ಕೊವಿಡ್ನಿಂದ ಭಯಭೀತರಾದ ರೋಗಿಗಳಿಗೆ ಉತ್ಸಾಹ ತುಂಬಲು ವೈದ್ಯರಿಂದ ಮನೋರಂಜನೆ; ವಿಡಿಯೋ ವೈರಲ್
ಫ್ರೆಂಡ್ಶಿಪ್ ಡೇ ಪ್ರಯುಕ್ತ RRR ಚಿತ್ರದ ‘ದೋಸ್ತಿ’ ಹಾಡು ರಿಲೀಸ್; ಕನ್ನಡಿಗರಿಗೆ ಕಾಡಿದೆ ಒಂದು ಕೊರತೆ