ಕೊವಿಡ್ನಿಂದ ಭಯಭೀತರಾದ ರೋಗಿಗಳಿಗೆ ಉತ್ಸಾಹ ತುಂಬಲು ವೈದ್ಯರಿಂದ ಮನೋರಂಜನೆ; ವಿಡಿಯೋ ವೈರಲ್
ಕೊವಿಡ್ನಿಂದ ಬಳಲುತ್ತಿರುವವರು ಇಡೀ ದಿನ ಹಾಸಿಗೆಯ ಮೇಲೆ ಮಲಗಿರಬೇಕು. ಆಮ್ಲಜನಕ, ವೆಂಟಿಲೇಟರ್, ಪ್ಲಾಸ್ಮಾಗಳನ್ನು ನೋಡುತ್ತಲೇ ಇರುವ ಜನರ ಮುಖದಲ್ಲಿ ಖುಷಿ ತರಲು ವೈದ್ಯರೆಲ್ಲಾ ಸೇರಿ ನವೀನ ಅಲೋಚನೆಯೊಂದಿಗೆ ಮುಂದೆಬಂದಿದ್ದಾರೆ.
ಭಾರತವು ಪ್ರಸ್ತುತದಲ್ಲಿ ಕೊರೊನಾ ಎರಡನೇ ಅಲೆಯಿಂದ ತತ್ತರಿಸುತ್ತಿದೆ. ಜೊತೆಗೆ, ದಿನ ಸಾಗುತ್ತಿದ್ದಂತೆಯೇ ಕೊವಿಡ್ ಪ್ರಕರಣಗಳಲ್ಲಿ ಭಾರೀ ಏರಿಕೆಗೆ ಸಾಕ್ಷಿಯಾಗುತ್ತಿದೆ. ನಿನ್ನೆ (ಏಪ್ರಿಲ್ 22) ಗುರುವಾರ ದೇಶವು 3.14 ಲಕ್ಷ ಹೊಸ ಕೊವಿಡ್ ಪ್ರಕರಣದ ಮೂಲಕ ಒಂದೇ ದಿನದಲ್ಲಿ ವಿಶ್ವದ ಅತಿ ಹೆಚ್ಚು ಸೋಂಕು ಪ್ರಕರಣ ದಾಖಲಿಸಿದೆ. ಇಂತಹ ಕಠೋರ ಪರಿಸ್ಥಿತಿಯು ಭಾರತವನ್ನು ಚಿಂತೆಗೀಡು ಮಾಡಿದೆ. ಅದರಲ್ಲೂ ಹೆಚ್ಚುತ್ತಿರುವ ಪ್ರಕರಣ ಸಂಖ್ಯೆಯಿಂದ ಜನರ ಜೀವ ಉಳಿಸಲು ಆಮ್ಲಜನಕ ಮತ್ತು ಔಷಧಿಯ ಕೊರತೆ ಕಂಡು ಬರುತ್ತಿರುವುದು ವಿಷಾದನೀಯ.
ಕೊವಿಡ್ನಿಂದ ಬಳಲುತ್ತಿರುವವರು ಇಡೀ ದಿನ ಹಾಸಿಗೆಯ ಮೇಲೆ ಮಲಗಿರುವಷ್ಟು ಸುಸ್ತಾಗಿರುತ್ತಾರೆ. ಆಮ್ಲಜನಕ, ವೆಂಟಿಲೇಟರ್, ಪ್ಲಾಸ್ಮಾಗಳನ್ನು ನೋಡುತ್ತಲೇ ಇರುವ ಜನರ ಮುಖದಲ್ಲಿ ಖುಷಿ ತರಲು ವೈದ್ಯರೆಲ್ಲಾ ಸೇರಿ ನವೀನ ಅಲೋಚನೆಯೊಂದಿಗೆ ಮುಂದೆಬಂದಿದ್ದಾರೆ. ರೋಗಿಗಳು ಚಿಂತೆ ಮಾಡದೇ ಉತ್ಸಾಹದಿಂದ ಇರಲು ವೈದ್ಯರೆಲ್ಲಾ ಸೇರಿ ಹಾಡು ಹೇಳುವುದು, ನೃತ್ಯ ಮಾಡುವುದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಇದೀಗ ವಿಡಿಯೋ ಫುಲ್ ವೈರಲ್ ಆಗಿದೆ. ಕೆಲವು ಆರೋಗ್ಯ ಕಾರ್ಯಕರ್ತರು ಆಸ್ಪತ್ರೆಗಳಲ್ಲಿ ಭಯಗೊಂಡಿರುವ ರೋಗಿಗಳನ್ನು ನೋಡಿ ಅವರನ್ನು ಖುಷಿಯಿಂದ ಇರುವಂತೆ ನೋಡಿಕೊಳ್ಳಲು ನೃತ್ಯ ಪ್ರದರ್ಶನ ನೀಡಿದ್ದಾರೆ.
ಈ ವಿಡಿಯೋದಲ್ಲಿ ದೇಶದ ವಿವಿಧ ಮೂಲೆಗಳಿಂದ ಸುಮಾರು 60 ವೈದ್ಯರು ನೃತ್ಯ ಮಾಡಿದ್ದಾರೆ. ಜೀವನದಲ್ಲಿ ಖುಷಿಯಾಗಿರಿ ಎನ್ನುತ್ತಾ, ಹ್ಯಾಪಿ ಹಾಡಿಗೆ ನೃತ್ಯ ಮಾಡಿದ್ದಾರೆ. ನಿಮ್ಮ ಜೀವಗಳನ್ನು ಉಳಿಸಲು ನಾವು ದಣಿವಿಲ್ಲದೇ ಕೆಲಸ ಮಾಡುತ್ತಿದ್ದೇವೆ. ನಿಮ್ಮ ಮನಸ್ಸು ನೆಮ್ಮದಿಯನ್ನು ಕಾಪಾಡಲು ಮತ್ತು ನಿಮ್ಮನ್ನು ಸಂತೋಷವಾಗಿಡಲು ಪ್ರಯತ್ನಿಸಿದ್ದೇವೆ. ಏಕೆಂದರೆ ಪ್ರಕಾಶಮಾನವಾದ ಬೆಳಕಿನ ಭರವಸೆಯು ನಮ್ಮನ್ನು ಮತ್ತಷ್ಟು ಉತ್ಸಾಹಕ್ಕೆ ಪ್ರೋತ್ಸಾಹಿಸುತ್ತದೆ ಎಂದು ಶೀರ್ಷಿಕೆಯಲ್ಲಿ ಬರೆದಿದ್ದಾರೆ.
View this post on Instagram
ಕಳೆದ ವರ್ಷ ಅಕ್ಟೋಬರ್ನಲ್ಲಿ ಡಾ.ಸೈಯ್ಯದ್ ಫೈಜಾನ್ ಅಹ್ಮದ್ ಅವರು ಟ್ವೀಟ್ನಲ್ಲಿ ಹಂಚಿಕೊಂಡಿದ್ದ ವಿಡಿಯೋವೊಂದರಲ್ಲಿ ಅಸ್ಸಾಂನ ವೈದ್ಯಕೀಯ ಕಾಲೇಜಿನಲ್ಲಿ ಕೆಲಸ ಮಾಡುತ್ತಿರುವ ಇಎನ್ಟಿ ಸರ್ಜನ್ ಡಾ.ಅರೂಪ್ ಸೇನಾಪತಿ ಪಿಪಿಇ ಕಿಟ್ ಧರಿಸಿ, ಹೃತಿಕ್ ರೋಶನ್ ಅವರ 2019ರ ಚಲನಚಿತ್ರ ವಾರ್ ಘುಂಗ್ರೂ ಹಾಡಿಗೆ ನೃತ್ಯ ಮಾಡಿದ್ದರು. ಈ ವಿಡಿಯೋ ಇಂದಿಗೂ ಕೂಡಾ ಅದೆಷ್ಟೋ ರೋಗಿಗಳಿಗೆ ಉತ್ಸಾಹ ಹೆಚ್ಚಿಸಲು ಸಹಾಯ ಮಾಡುತ್ತಿದೆ. ಮತ್ತು ಭಯಭೀತರಾಗಿದ್ದ ಜನರಿಗೆ ಧೈರ್ಯ ತುಂಬುವಂತಿದೆ.
Meet my #COVID duty colleague Dr Arup Senapati an ENT surgeon at Silchar medical college Assam . Dancing infront of COVID patients to make them feel happy #COVID19 #Assam pic.twitter.com/rhviYPISwO
— Dr Syed Faizan Ahmad (@drsfaizanahmad) October 18, 2020
ಈ ಕೆಳಗಿನ ವಿಡಿಯೋವನ್ನು ಗುಜರಾತ್ನ ವಡೋರಾದ ಪಾರುಲ್ ಸೇವಾಶ್ರಮ ಆಸ್ಪತ್ರೆಯಲ್ಲಿ ಚಿತ್ರೀಕರಿಸಲಾಗಿದ್ದು, ಮುಂಬೈನ ಜನಪ್ರಿಯ ಛಾಯಾಚಿತ್ರಗ್ರಾಹಕ ಭಯಾನಿ ಅವರು ಕಳೆದ ವಾರ ತಮ್ಮ ಅಧಿಕೃತ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಹಲವಾರು ಆರೋಗ್ಯ ಕಾರ್ಯಕರ್ತರು ಕೊವಿಡ್19 ರೋಗದಿಂದ ಬಳಲುತ್ತಿರುವ ರೋಗಿಗಳಿಗೆ ಉತ್ಸಾಹ ತುಂಬಿಸಲು ನೃತ್ಯ ಮಾಡಿದ್ದಾರೆ. ವಾರ್ಡ್ನಲ್ಲಿದ್ದ ರೋಗಿಗಳೆಲ್ಲಾ ಖುಷಿಯಿಂದ ಚಪ್ಪಾಳೆತಟ್ಟುತ್ತಾ ನೃತ್ಯಕ್ಕೆ ಸಾಥ್ ನೀಡಿದ್ದಾರೆ.
ಕೇವಲ ವೈದ್ಯರು, ಆರೋಗ್ಯ ಕಾರ್ಯಕರ್ತರೊಂದೇ ಅಲ್ಲದೇ ವೈದ್ಯಕೀಯ ಕಾಲೇಜು ವಿದ್ಯಾರ್ಥಿಗಳು ನೃತ್ಯ ಮಾಡಿರುವ ವಿಡಿಯೋ ವೈರಲ್ ಆಗಿದೆ. ಈ ಕೆಳಗಿರುವ ವಿಡಿಯೋದಲ್ಲಿ ಕೇರಳದ ತ್ರಿಶೂಲ್ ವೈದ್ಯಕೀಯ ಕಅಲೆಜಿನ ಕಾರಿಡಾರಿನಲ್ಲಿ ನೃತ್ಯ ಮಾಡಿ ವಿಡಿಯೋ ಮಾಡಿದ್ದಾರೆ. ಬೋನಿ ಎಂ ಅವರ 1978ರ ಹಿಟ್ ಸಾಂಗ್ ರಾಸ್ಪುಟಿನ್ ಅವರ ಹಾಡಿನ ಬೀಟ್ಗೆ ಇಬ್ಬರು ವೈದ್ಯಕೀಯ ಕಾಲೇಜು ವಿದ್ಯಾರ್ಥಿಗಳು ನೃತ್ಯ ಮಾಡಿರುವುದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.
View this post on Instagramಏತನ್ಮಧ್ಯೆ, ನೃತ್ಯ ವಿಡಿಯೋಗಳನ್ನು ಹೊರತುಪಡಿಸಿ, ಕೆಲವು ವೈದ್ಯರು ಜಾಗೃತಿ ಮೂಡಿಸುವ ಸಂದೇಶಗಳನ್ನು ಪೋಸ್ಟ್ ಮಾಡಿದ್ದಾರೆ. ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸಿ, ಮುಖಗವಸನ್ನು ಮರೆಯದೇ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಳ್ಳಿ ಎಂಬ ಸಂದೇಶಗಳನ್ನು ವೈದ್ಯರು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.
View this post on Instagram
Published On - 12:21 pm, Fri, 23 April 21