ಲಿಂಗ ತಾರತಮ್ಯ: ಡ್ರಗ್ಸ್ ಪ್ರಕರಣದಲ್ಲಿ ಅರೆಸ್ಟ್ ಆದ ನಟಿಯರ ಪರ ನಿಂತ ಪಾರೂಲ್

ಲಿಂಗ ತಾರತಮ್ಯ: ಡ್ರಗ್ಸ್ ಪ್ರಕರಣದಲ್ಲಿ ಅರೆಸ್ಟ್ ಆದ ನಟಿಯರ ಪರ ನಿಂತ ಪಾರೂಲ್

ಬೆಂಗಳೂರು: ಕಳೆದ ಕೆಲ ದಿನಗಳಿಂದ ಚಿತ್ರರಂಗದಲ್ಲಿ ಡ್ರಗ್ಸ್ ನಶೆ ಹರಿದಾಡುತ್ತಿದೆ. ಸ್ಟಾರ್ ನಟಿಯರ ಹೆಸರು ಇದರಲ್ಲಿ ಕೇಳಿ ಬರುತ್ತಿದೆ. ಸ್ಯಾಂಡಲ್​ವುಡ್​ಗೆ ಡ್ರಗ್ಸ್ ನಶೆಯ ನಂಟಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿ ನಟಿ ರಾಗಿಣಿ ದ್ವಿವೇದಿ ಮತ್ತು ಸಂಜನಾ ಗಲ್ರಾನಿ ಇಬ್ಬರನ್ನು ಸಿಸಿಬಿ ಅಧಿಕಾರಿಗಳು ಅರೆಸ್ಟ್ ಮಾಡಿದ್ದಾರೆ. ಈ ಬಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ಕೆಲ ನಟಿಮಣಿಯರಿಂದ ಲಿಂಗ ತಾರತಮ್ಯದ ಪ್ರಶ್ನೆ ಎದ್ದಿದೆ.

ಡ್ರಗ್ಸ್ ದಂಧೆ ಸಂಬಂಧಿಸಿ ಇದುವರೆಗೆ ಬರೀ ನಟಿಯರೇ ಅರೆಸ್ಟ್ ಆಗಿದ್ದಾರೆ. ನಟಿಯರಾದ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಗಲ್ರಾನಿ ಬಂಧನ ಆಗಿದೆ. ನಿನ್ನೆಯಷ್ಟೇ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟಿ ರಿಯಾ ಚಕ್ರವರ್ತಿ ಕೂಡ ಬಂಧನಕ್ಕೊಳಗಾಗಿದ್ದಾರೆ. ಆದರೆ ಕೇವಲ ನಟಿಯರೇ ಯಾಕೆ? ಎಂದು ಬಂಧನಕ್ಕೊಳಗಾದ ನಟಿಯರ ಪರ ಪಾರುಲ್ ಯಾದವ್ ಬೆಂಬಲ ನೀಡಿದ್ದಾರೆ.

ಭಾರತದಲ್ಲಿ ಡ್ರಗ್ ಡೀಲರ್​ಗಳು ಕೇವಲ ಈ ಮೂವರು ಮಹಿಳೆಯರಷ್ಟೇನಾ? ಬೇರೆ ಇನ್ಯಾರೂ ಇಲ್ವಾ? ಕಾರ್ಪೊರೇಟ್ ಕಂಪನಿಯಲ್ಲಿರುವವರು, ಉದ್ಯಮಿಗಳು, ಕ್ರೀಡಾಪಟುಗಳು ಅಷ್ಟೇ ಯಾಕೆ ಯಾವ ನಟರೂ ಡ್ರಗ್ಸ್ ಸೇವಿಸಿಲ್ವಾ? ಸರಬರಾಜು ಮಾಡಿಲ್ವಾ?

ಈ ವಿಷಯದಲ್ಲಿ ಲಿಂಗ ತಾರತಮ್ಯ ಆಗಿಲ್ವಲ್ಲಾ ಅಂತ ಖುಷಿ ಪಡಬೇಕಾ ಅಥವಾ ಹುಡುಗಿಯರನ್ನು ಎಷ್ಟು ಸರಳವಾಗಿ ಸಂಕಷ್ಟಕ್ಕೆ ಸಿಲುಕಿಸಬಹುದಲ್ಲಾ ಅಂತ ಅಳಬೇಕಾ? ಎಂದು ಸಾಮಾಜಿಕ ಜಾಲತಾಣದಲ್ಲಿ ನಟಿ ಪಾರುಲ್ ಯಾದವ್ ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ನಟಿ ಶೃತಿ ಹರಿಹರನ್‌ ಕೂಡ ಬೆಂಬಲ ವ್ಯಕ್ತಪಡಿಸಿದ್ದಾರೆ.

Click on your DTH Provider to Add TV9 Kannada