RRR ಮೊಬೈಲ್ಗಳಿಂದ CCB ಅಧಿಕಾರಿಗಳಿಗೆ ಸಿಕ್ಕಿದ್ದಾದರು ಏನು?
ಬೆಂಗಳೂರು: ಸ್ಯಾಂಡಲ್‌ವುಡ್‌ಗೆ ಡ್ರಗ್ಸ್ ಜಾಲದ ನಂಟು ಪ್ರಕರಣಕ್ಕೆ ಸಂಬಂಧಪಟ್ಟಂತೆ CCBಯಿಂದ ಬಂಧನಕ್ಕೊಳಗಾಗಿರುವ ರವಿಶಂಕರ್, ರಾಗಿಣಿ, ಹಾಗೂ ರಾಹುಲ್ ಅವರ ಮೊಬೈಲ್ಗಳಿಂದ ಸ್ಪೋಟಕ ಮಾಹಿತಿಗಳು CCB ಅಧಿಕಾರಿಗಳಿಗೆ ಲಭ್ಯವಾಗಿವೆ. CCB ಅಧಿಕಾರಿಗಳಿಗೆ ಯಾವುದೇ ಮಾಹಿತಿ ಸಿಗಬಾರದೆಂದು ತಮ್ಮ ಮೊಬೈಲ್ಗಳಲಿದ್ದ ಮಾಹಿತಿಯನ್ನು ಡಿಲಿಟ್ ಮಾಡಿದ್ದರು. ಈ ಹಿನ್ನೆಲೆಯಿಂದಾಗಿ CCB ಅಧಿಕಾರಿಗಳು ಈ ಮೂವರ ಮೊಬೈಲ್ ಡಾಟಾ ರಿಟ್ರೀವ್ ಮಾಡಿಸಲು ಲ್ಯಾಬ್ಗೆ ಕಳಿಸಿದ್ದರು.ಈಗ ಮೊಬೈಲ್ಗಳಿಂದ ರಿಟ್ರೀವ್ ಆಗಿರುವ ಡಾಟಾದಿಂದ CCB ಅಧಿಕಾರಿಗಳಿಗೆ ಸಾಕಷ್ಟು ಸಾಕ್ಷಿಗಳು ದೊರೆತಿವೆ. ಈ ಮೂವರು ಯಾವ ಯಾವ […]
ಬೆಂಗಳೂರು: ಸ್ಯಾಂಡಲ್‌ವುಡ್‌ಗೆ ಡ್ರಗ್ಸ್ ಜಾಲದ ನಂಟು ಪ್ರಕರಣಕ್ಕೆ ಸಂಬಂಧಪಟ್ಟಂತೆ CCBಯಿಂದ ಬಂಧನಕ್ಕೊಳಗಾಗಿರುವ ರವಿಶಂಕರ್, ರಾಗಿಣಿ, ಹಾಗೂ ರಾಹುಲ್ ಅವರ ಮೊಬೈಲ್ಗಳಿಂದ ಸ್ಪೋಟಕ ಮಾಹಿತಿಗಳು CCB ಅಧಿಕಾರಿಗಳಿಗೆ ಲಭ್ಯವಾಗಿವೆ.
CCB ಅಧಿಕಾರಿಗಳಿಗೆ ಯಾವುದೇ ಮಾಹಿತಿ ಸಿಗಬಾರದೆಂದು ತಮ್ಮ ಮೊಬೈಲ್ಗಳಲಿದ್ದ ಮಾಹಿತಿಯನ್ನು ಡಿಲಿಟ್ ಮಾಡಿದ್ದರು. ಈ ಹಿನ್ನೆಲೆಯಿಂದಾಗಿ CCB ಅಧಿಕಾರಿಗಳು ಈ ಮೂವರ ಮೊಬೈಲ್ ಡಾಟಾ ರಿಟ್ರೀವ್ ಮಾಡಿಸಲು ಲ್ಯಾಬ್ಗೆ ಕಳಿಸಿದ್ದರು.ಈಗ ಮೊಬೈಲ್ಗಳಿಂದ ರಿಟ್ರೀವ್ ಆಗಿರುವ ಡಾಟಾದಿಂದ CCB ಅಧಿಕಾರಿಗಳಿಗೆ ಸಾಕಷ್ಟು ಸಾಕ್ಷಿಗಳು ದೊರೆತಿವೆ.
ಈ ಮೂವರು ಯಾವ ಯಾವ ಸಮಯದಲ್ಲಿ ಎಲ್ಲಿ ಹೋಗಿದ್ರು. ಯಾವ ಪಾರ್ಟಿ ಅರೆಂಜ್ ಮಾಡಿದ್ರು. ಹಾಗೂ ಪಾರ್ಟಿಯಲ್ಲಿ ಯಾರು ಯಾರು ಭಾಗಿಯಾಗಿದ್ದರು ಎಂಬುದರ ಸಂಪೂರ್ಣ ಮಾಹಿತಿ ದೊರೆತಿದೆ.ಡ್ರಗ್ಸ್ ಪೆಡ್ಲರ್ಸ್ ಜೊತೆ ನಿರಂತರ ಸಂಪರ್ಕ ಹೊಂದಿದ್ದ ರವಿಶಂಕರ್ ಮೊಬೈಲ್ ಡಾಟಾದಲ್ಲಿ ಎಲ್ಲವು ಬಹಿರಂಗವಾಗಿದೆ. ಪೆಡ್ಲರ್ಸ್ ಜೊತೆ ಮಾತನಾಡಿರುವುದು,ಚಾಟ್ ಮಾಡಿರುವುದು ಬಯಲಿಗೆ ಬಂದಿದೆ.
ರಾಗಿಣಿ ಮೊಬೈಲ್ನಲ್ಲಿ ಪಾರ್ಟಿ ಫೋಟೋಗಳು ಪತ್ತೆ.. ಇನ್ನೂ ರಾಗಿಣಿ ಮೊಬೈಲ್ನಲ್ಲಿ ಪಾರ್ಟಿ ಫೋಟೋಗಳು ಹಾಗೂ ಎಲ್ಲೆಲ್ಲಿ ಯಾವ ಯಾವ ದಿನದಲ್ಲಿ ಭೇಟಿ ನೀಡಿದ್ರು ಎಂಬುದು ಪತ್ತೆಯಾಗಿದೆ. ಇದುವರೆಗಿನ ರಾಗಿಣಿ ಹೇಳಿಕೆಗಳನ್ನು ಮುಂದಿಟ್ಟು ಈಗ ಇರುವ ಡಾಟಾವನ್ನು ಮುಂದಿಟ್ಟು ಸಿಸಿಬಿ ಪ್ರಶ್ನೆ ಮಾಡಲಿದೆ. ರಾಹುಲ್ ಮೊಬೈಲ್ನಲ್ಲಿ ಸಮಾಜದ ಪ್ರಮುಖ ವ್ಯಕ್ತಿಗಳಿಗೆ ಸಂಭಂದಿಸಿದ ಡಾಟಾ ಪತ್ತೆಯಾಗಿದ್ದು, ಇನ್ನೂ ರಾಹುಲ್ ಹಲವಾರು ಜನರನ್ನು ಶ್ರೀಲಂಕಾಕ್ಕೆ ಕಳಿಸುತಿದ್ದ ಎನ್ನಲಾಗುತ್ತಿದೆ. ಸಮಾಜದ ಗಣ್ಯವ್ಯಕ್ತಿಗಳ ಮಾಹಿತಿ ರಾಹುಲ್ ಮೊಬೈಲ್ನಲ್ಲಿದ್ದು, ಈ ಟೆಕ್ನಿಕಲ್ ಎವಿಡೆನ್ಸ್ಗಳು ಸಂಪೂರ್ಣ ತನಿಖೆಯ ಸ್ಪೀಡ್ ಹೆಚ್ಚಿಸಲಿವೆ.