ರಾಗಿಣಿಗಿವೆ ಮೂರು ಮೂರು ಹೆಸರುಗಳು, ಇಲ್ಲಿದೆ ತನಿಖಾ ವರದಿಯ ಸಂಪೂರ್ಣ ಮಾಹಿತಿ..
[lazy-load-videos-and-sticky-control id=”zJdC0k1wwTw”] ಬೆಂಗಳೂರು: ಸ್ಯಾಂಡಲ್ ವುಡ್ಗೆ ಡ್ರಗ್ಸ್ ಜಾಲದ ನಂಟಿದೆ ಎಂಬ ಪ್ರಕರಣ ಸಂಬಂಧ ಅರೆಸ್ಟ್ ಆಗಿರುವ ನಟಿ ರಾಗಿಣಿ ದ್ವಿವೇದಿಗೆ ಮೂರು ಮೂರು ಹೆಸರಿವೆ. ಸಿಸಿಬಿ ಅಧಿಕಾರಿಗಳು ಇದುವರೆಗಿನ ತನಿಖೆಯ ವರದಿಯನ್ನು ಸಿದ್ದಪಡಿಸಿದ್ದಾರೆ. ರಾಗಿಣಿಗಿವೆ ಮೂರು ಮೂರು ಹೆಸರುಗಳು: ರವಿಶಂಕರ್ ಮತ್ತು ರಾಗಿಣಿಯ ಹಲವು ಆಪ್ತರು ನಟಿ ರಾಗಿಣಿಯನ್ನ ಬೇರೆ ಬೇರೆ ಹೆಸರುಗಳಿಂದ ಕರೆಯುತ್ತಿದ್ದರು. ರಾಗಿಣಿ ದ್ವಿವೇದಿ, ಅಲಿಯಾಸ್ ಗಿಣಿ, ಅಲಿಯಾಸ್ ರಾಗ್ಸ್. ಈ ಮೂರು ಹೆಸರಲ್ಲಿ ರಾಗಿಣಿಯನ್ನ ಕರೆಯಲಾಗುತಿತ್ತು. ಹೈ ಹ್ಯಾಂಡ್ ಪಾರ್ಟಿಯಲ್ಲಿ ರಾಗಿಣಿ […]
[lazy-load-videos-and-sticky-control id=”zJdC0k1wwTw”]
ಬೆಂಗಳೂರು: ಸ್ಯಾಂಡಲ್ ವುಡ್ಗೆ ಡ್ರಗ್ಸ್ ಜಾಲದ ನಂಟಿದೆ ಎಂಬ ಪ್ರಕರಣ ಸಂಬಂಧ ಅರೆಸ್ಟ್ ಆಗಿರುವ ನಟಿ ರಾಗಿಣಿ ದ್ವಿವೇದಿಗೆ ಮೂರು ಮೂರು ಹೆಸರಿವೆ. ಸಿಸಿಬಿ ಅಧಿಕಾರಿಗಳು ಇದುವರೆಗಿನ ತನಿಖೆಯ ವರದಿಯನ್ನು ಸಿದ್ದಪಡಿಸಿದ್ದಾರೆ.
ರಾಗಿಣಿಗಿವೆ ಮೂರು ಮೂರು ಹೆಸರುಗಳು: ರವಿಶಂಕರ್ ಮತ್ತು ರಾಗಿಣಿಯ ಹಲವು ಆಪ್ತರು ನಟಿ ರಾಗಿಣಿಯನ್ನ ಬೇರೆ ಬೇರೆ ಹೆಸರುಗಳಿಂದ ಕರೆಯುತ್ತಿದ್ದರು. ರಾಗಿಣಿ ದ್ವಿವೇದಿ, ಅಲಿಯಾಸ್ ಗಿಣಿ, ಅಲಿಯಾಸ್ ರಾಗ್ಸ್. ಈ ಮೂರು ಹೆಸರಲ್ಲಿ ರಾಗಿಣಿಯನ್ನ ಕರೆಯಲಾಗುತಿತ್ತು. ಹೈ ಹ್ಯಾಂಡ್ ಪಾರ್ಟಿಯಲ್ಲಿ ರಾಗಿಣಿ ರಾಗ್ಸ್ ಅಗಿರುತಿದ್ದರು. ಮನೆಯಲ್ಲಿ ಗಿಣಿಯಾಗಿರುತಿದ್ದರು ಹಾಗೂ ಹೊರ ಜಗತ್ತಿಗೆ ರಾಗಿಣಿ ದ್ವಿವೇದಿ ಯಾಗಿರುತಿದ್ರು.
ಬಾಣಸವಾಡಿ ಡ್ರಗ್ಸ್ ಕೇಸ್ನಲ್ಲಿ ಕೇಳಿ ಬಂದಿತ್ತು ಇವರ ಹೆಸರು: ಪ್ರತೀಕ್ ಶೆಟ್ಟಿ , ರವಿಶಂಕರ್, ರಾಗಿಣಿ, ಲೂಮ್ ಪೆಪ್ಪರ್ ಅಂಡ್ ನಿಯಾಜ್ ಈ ಐವರ ಲಿಂಕನ್ನು ಸಿಸಿಬಿ ಅಧಿಕಾರಿಗಳು ಭೇದಿಸಿ ಎಲ್ಲರಿಗೂ ಖೆಡ್ಡಾ ತೋಡಿದ್ದಾರೆ. 2018ರ ಬಾಣಸವಾಡಿ ಡ್ರಗ್ಸ್ ಕೇಸ್ನಲ್ಲಿ ಪ್ರತೀಕ್ ಶೆಟ್ಟಿ, ರವಿಶಂಕರ್ ಹೆಸರು ಹೇಳಿದ್ದ. ಆದ್ರೆ ರವಿಶಂಕರ್ ಆಗ ತಗಲಾಕಿಕೊಂಡಿರಲಿಲ್ಲ. ನಂತರ ರವಿಶಂಕರ್ನನ್ನು ಮಾನಿಟರ್ ಮಾಡಿ ಸಿಸಿಬಿ ವಶಕ್ಕೆ ಪಡೆದಿದ್ದರು. ತನಿಖೆಯ ಸಮಯದಲ್ಲಿ ರಾಗಿಣಿ ಡ್ರಗ್ಸ್ ಸೇವನೆ ಬಗ್ಗೆ ಮಾಹಿತಿ ಕೊಟ್ಟಿದ್ದ.
ಎಲ್ಲಿ ಎಲ್ಲಿ ಹೇಗೆಲ್ಲಾ ಪಾರ್ಟಿ ಅಟೆಂಡ್ ಮಾಡಿದ್ವಿ. ಯಾವಗೆಲ್ಲಾ ಯಾವ ಡ್ರಗ್ಸ್ ತೆಗೆದುಕೊಂಡಿದ್ವಿ ಈ ಎಲ್ಲಾ ಮಾಹಿತಿ ನೀಡಿದ್ದ. ನಂತ್ರ ರಾಗಿಣಿ ವಶಕ್ಕೆ ಪಡೆದು ವಿಚಾರಣೆ ಮಾಡಿ ಅರೆಸ್ಟ್ ಮಾಡಿದ್ದರು. ಇಬ್ಬರ ಮಾಹಿತಿ ಮೇರೆಗೆ ಇಂಟರ್ನ್ಯಾಷನಲ್ ಡ್ರಗ್ಸ್ ಪೆಡ್ಲರ್ಸ್ ಲೂಪ್ ಪೆಪ್ಪರ್ ಅಲಿಯಾಸ್ ಸೈಮನ್ ಅರೆಸ್ಟ್ ಮಾಡಲಾಯಿತು. ಇಷ್ಟೆಲ್ಲಾ ಆದ ನಂತ್ರ ಮುಂದುವರೆದ ತನಿಖೆಯಲ್ಲಿ ರಹಸ್ಯ ಬಯಲಾಗಿತ್ತು.
ಸಂಜನಾ ಜೊತೆಗೂ ನಂಟು ಇದ್ದ ಮತ್ತೊಬ್ಬನ ಹೆಸರನ್ನು ಮೂವರು ಅರೋಪಿಗಳು ಬಾಯಿ ಬಿಟ್ಟಿದ್ದರು. ನಂತ್ರ ಹೆಚ್.ಎಸ್.ಆರ್ ಲೇಔಟ್ನಲ್ಲಿ ವಾಸವಾಗಿರುವ ಮೂಲತಃ ಕೇರಳಾದ ನಿಯಾಜ್ ಅರೆಸ್ಟ್ ಆಗಿದ್ದ. ನಿಯಾಜ್ ಪಕ್ಕ ಗಾಂಜಾ ಪರ್ಟಿಯಾಗಿದ್ದ. ರಾಗಿಣಿ, ರವಿಶಂಕರ್ ಗೆ ಡ್ರಗ್ಸ್ ನೀಡುತಿದ್ದೆ ಎಂದು ತಪ್ಪೊಪ್ಪಿಕೊಂಡಿದ್ದ. ನಿಯಾಜ್ ರಾಗಿಣಿ ಮಾತ್ರವಲ್ಲದೆ ಸಂಜನಾಗೂ ಲಿಂಕ್ ಇದ್ದ. ಅದು ಮುಂದಿನ ದಿನದ ತನಿಖೆಯಲ್ಲಿ ಬಯಲಾಗಿದೆ.
ಸ್ಯಾಂಡಲ್ ವುಡ್ ಡ್ರಗ್ಸ್ ಕೇಸ್ನಲ್ಲಿ ಇದುವರೆಗೆ ಡ್ರಗ್ಸ್ ಸಿಕ್ಕಿಲ್ಲಾ: ರಾಗಿಣಿಗೆ ರವಿಶಂಕರ್ ನೀಡಿದ್ದ ಮಾಹಿತಿ ಮೇರೆಗೆ ಡ್ರಗ್ಸ್ ಪೆಡ್ಲರ್ ಲೂಮ್ ಪೆಪ್ಪರ್ ವಶಕ್ಕೆ ಪಡೆದಿದ್ದ ಸಿಸಿಬಿ ಲೂಪ್ ಪೆಪ್ಪರ್ ಮನೆ ಮೇಲೆ ದಾಳಿ ಮಾಡಿ ಅರೆಸ್ಟ್ ಮಾಡಿದಾಗ ಸೆಲೆಬ್ರಿಟಿಗಳಿಗೆ ಸೇರಬೇಕಾದ ಡ್ರಗ್ಸ್ ಸೀಜ್ ಮಾಡಿದ್ದರು. ಹತ್ತು ಗ್ರಾಂ ಹೈಹ್ಯಾಂಡ್ ಡ್ರಗ್ಸ್ ಅನ್ನು ಸಿಸಿಬಿ ವಶಕ್ಕೆ ಪಡೆದಿತ್ತು. ಎಂಡಿಎಂಎ ಲೂಪ್ ಪೆಪ್ಪರ್ ಮನೆಯಿಂದ ವಶಕ್ಕೆ ಪಡೆದ್ರು. ಲೂಮ್ ಪೆಪ್ಪರ್, ರಾಗಿಣಿ ಮತ್ತು ರವಿಶಂಕರ್ ಮಾಹಿತಿ ಮೇರೆಗೆ ಸಿಸಿಬಿ ಇನ್ಸ್ಪೆಕ್ಟರ್ ಮಲ್ಲೇಶ್ ಬೋಳೆತ್ತಿನ್ ನಿಯಾಜ್ನನ್ನು ಅರೆಸ್ಟ್ ಮಾಡಿದ್ರು. ಸದ್ಯ ಸಿಸಿಬಿ ಲೂಮ್ ಪೆಪ್ಪರ್ ಮನೆಯಲ್ಲಿ ಮತ್ತು ನಿಯಾಜ್ ಬಳಿ ಸಿಕ್ಕಿರುವ ಮಾದಕ ವಸ್ತುಗಳನ್ನು ಎಫ್.ಎಸ್.ಎಲ್ ಗೆ ರವಾನೆ ಮಾಡಲಿದೆ.
Published On - 8:04 am, Thu, 10 September 20