‘ನೂರಕ್ಕೆ ನೂರರಷ್ಟು ರಾಗಿಣಿಗೆ ಬೇಲ್ ಆಗುತ್ತೆ’
ಬೆಂಗಳೂರು: ಡ್ರಗ್ಸ್ ಜಾಲದಲ್ಲಿ ನಂಟಿದೆ ಎಂಬ ಪ್ರಕರಣದಲ್ಲಿ ಅರೆಸ್ಟ್ ಆದ ನಟಿ ರಾಗಿಣಿಗೆ ನೂರಕ್ಕೆ ನೂರರಷ್ಟು ಬೇಲ್ ಸಿಗುತ್ತೆ ಎಂದು ರಾಗಿಣಿ ಭೇಟಿ ಮಾಡಿ ಬಂದ ರಾಗಿಣಿ ಲೀಗಲ್ ಅಡ್ವೈಸರ್ ರವಿಶಂಕರ್ ಫುಲ್ ಜೋಷ್ನಲ್ಲಿ ಟಿವಿ9ಗೆ ಹೇಳಿದ್ರು. ರಾಗಿಣಿ ಭೇಟಿಯಾದ ನಂತರ ರಾಗಿಣಿ ಲೀಗಲ್ ಅಡ್ವೈಸರ್ ರವಿಶಂಕರ್ ಹೇಳಿದ್ದು ಹೀಗೆ.. ಈಗ ರಾಗಿಣಿನ ಭೇಟಿ ಮಾಡಿದೆ. ಗ್ಯಾಸ್ಟ್ರಿಕ್ ಪ್ರಾಬ್ಲಂ ಇದೆ ಅಂದ್ರು. ಮೆಸೆಜ್ ಡಿಲೀಟ್ ಮಾಡಿರೋ ಆರೋಪವಿದೆ. ಆದರೆ ಪ್ರತಿ ದಿನ ಹೆಚ್ಚಿಗೆ ಇರೋ ಮಸೇಜ್ ಡಿಲೀಟ್ […]
ಬೆಂಗಳೂರು: ಡ್ರಗ್ಸ್ ಜಾಲದಲ್ಲಿ ನಂಟಿದೆ ಎಂಬ ಪ್ರಕರಣದಲ್ಲಿ ಅರೆಸ್ಟ್ ಆದ ನಟಿ ರಾಗಿಣಿಗೆ ನೂರಕ್ಕೆ ನೂರರಷ್ಟು ಬೇಲ್ ಸಿಗುತ್ತೆ ಎಂದು ರಾಗಿಣಿ ಭೇಟಿ ಮಾಡಿ ಬಂದ ರಾಗಿಣಿ ಲೀಗಲ್ ಅಡ್ವೈಸರ್ ರವಿಶಂಕರ್ ಫುಲ್ ಜೋಷ್ನಲ್ಲಿ ಟಿವಿ9ಗೆ ಹೇಳಿದ್ರು.
ರಾಗಿಣಿ ಭೇಟಿಯಾದ ನಂತರ ರಾಗಿಣಿ ಲೀಗಲ್ ಅಡ್ವೈಸರ್ ರವಿಶಂಕರ್ ಹೇಳಿದ್ದು ಹೀಗೆ.. ಈಗ ರಾಗಿಣಿನ ಭೇಟಿ ಮಾಡಿದೆ. ಗ್ಯಾಸ್ಟ್ರಿಕ್ ಪ್ರಾಬ್ಲಂ ಇದೆ ಅಂದ್ರು. ಮೆಸೆಜ್ ಡಿಲೀಟ್ ಮಾಡಿರೋ ಆರೋಪವಿದೆ. ಆದರೆ ಪ್ರತಿ ದಿನ ಹೆಚ್ಚಿಗೆ ಇರೋ ಮಸೇಜ್ ಡಿಲೀಟ್ ಮಾಡ್ತಾ ಇರ್ತಾರೆ. ರಾಗಿಣಿ ಸಂಜನಾ ಒಂದೇ ಕೊಠಡಿಯಲ್ಲಿದ್ದಾರೆ. ಮನೆ ಊಟಕ್ಕೆ, ಮಾತನಾಡಲು ಅವಕಾಶ ಮಾಡಿಕೊಡಬೇಕು ಅನ್ನೋ ಬಗ್ಗೆ ಮಾತನಾಡಿದ್ದೇವೆ.
ರಾಗಿಣಿ ಕೇವಲ ಆರೋಪಿ ಅಷ್ಟೆ.. ಅಪರಾಧಿ ಅಲ್ಲ. ರಾಗಿಣಿ ಡ್ರಗ್ಸ್ ಕೇಸ್ನಲ್ಲಿ ಭಾಗಿಯಾಗಿದ್ದಾರೆ ಅನ್ನೋದು ಸುಳ್ಳು. ನೂರಕ್ಕೆ ನೂರರಷ್ಟು ರಾಗಿಣಿಗೆ ಬೇಲ್ ಸಿಗುತ್ತೆ. ರಾಗಿಣಿಗೆ ಬೇಲ್ ಖಂಡಿತ ಸಿಕ್ಕೇ ಸಿಗುತ್ತೆ ಎಂದು ಖಡಕ್ ಆಗಿ ಉತ್ಸಾಹದಿಂದ ವಕೀಲ ರವಿಶಂಕರ್ ಪ್ರತಿಕ್ರಿಯೆ ನೀಡಿದ್ದಾರೆ. ರಾಗಿಣಿ ಮೇಲಿರೋದು ಕೇವಲ ಆರೋಪ; ಅದು ದೃಢವಾಗಿಲ್ಲ ಎಂದಿದ್ದಾರೆ.
Published On - 3:34 pm, Wed, 9 September 20