ನಾರ್ಮಲ್ ಸ್ಥಿತಿಗೆ ಅಡ್ಜಸ್ಟ್: ಊಟ ಮಾಡಿ ನಿದ್ರೆಗೆ ಜಾರಿದ ಸಂಜನಾ, ರಾಗಿಣಿ

  • Publish Date - 8:22 am, Thu, 10 September 20
ನಾರ್ಮಲ್ ಸ್ಥಿತಿಗೆ ಅಡ್ಜಸ್ಟ್: ಊಟ ಮಾಡಿ ನಿದ್ರೆಗೆ ಜಾರಿದ ಸಂಜನಾ, ರಾಗಿಣಿ
ರಾಗಿಣಿ ದ್ವಿವೇದಿ (ಎಡ); ಸಂಜನಾ ಗಲ್ರಾನಿ (ಬಲ)

ಬೆಂಗಳೂರು: ಸ್ಯಾಂಡಲ್‌ವುಡ್‌ಗೆ ಡ್ರಗ್ಸ್ ಜಾಲದ ನಂಟು ಪ್ರಕರಣ ಸಂಬಂಧ ಅರೆಸ್ಟ್ ಆದ ನಟಿ ಸಂಜನಾ, ರಾಗಿಣಿ ದ್ವಿವೇದಿ ಇಬ್ಬರೂ ಮಹಿಳಾ ಸಾಂತ್ವನ ಕೇಂದ್ರದಲ್ಲಿದ್ದಾರೆ. ಇಬ್ಬರಿಗೂ ನಿನ್ನೆ ರಾತ್ರಿ ಪ್ರತ್ಯೇಕ ಕೊಠಡಿಗಳನ್ನು ನೀಡಲಾಗಿದೆ. ಇಬ್ಬರು ನಟಿಯರ ಜತೆಯೂ ಮಹಿಳಾ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.

ಮಹಿಳಾ ಸಾಂತ್ವನ ಕೇಂದ್ರದಲ್ಲಿ ಸಂಜನಾ ಎರಡು ರಾತ್ರಿ ಕಳೆದಿದ್ದಾರೆ. ಮೊದಲ ದಿನ ತೀವ್ರ ದುಖಿ:ತಳಾಗಿದ್ದ ಸಂಜನಾ ಇಂದು ನಾರ್ಮಲ್ ಸ್ಥಿತಿಗೆ ಬಂದಿದ್ದಾರೆ. ರಾತ್ರಿ ಊಟ ಮಾಡಿ ನಿದ್ರೆಗೆ ಜಾರಿದ್ದಾರೆ. ಭದ್ರತೆಗೆ ನಿಯೋಜನೆಗೊಂಡ ಸಿಬ್ಬಂದಿಯ ಬಳಿ ನಿನ್ನೆ ರಾತ್ರಿಯೂ ಕಣ್ಣೀರು ಹಾಕಿದ್ರು. ಸಮಾಧಾನ ಪಡಿಸಿ ಊಟ ನೀಡಿ ನಿದ್ದೆ ಮಾಡುವಂತೆ ಮಹಿಳಾ ಸಿಬ್ಬಂದಿ ಹೇಳಿದ್ರು. ನಟಿ ರಾಗಿಣಿ ಮತ್ತು ನಟಿ ಸಂಜನಾ ಬಳಿ ನಾಲ್ವರು ಮಹಿಳಾ ಪೊಲೀಸ್ ಸಿಬ್ಬಂದಿ ಭದ್ರತೆಗಾಗಿ ನಿಯೋಜನೆಗೊಂಡಿದ್ದಾರೆ. ಕೊಠಡಿಯ ವ್ಯವಸ್ಥೆಗೆ ಹೊಂದಿಕೊಂಡು ನಟಿ ರಾಗಿಣಿ. ನಾರ್ಮಲ್ ಆಗಿದ್ದಾರೆ. ಬೆನ್ನು ನೋವು, ಅಲರ್ಜಿ ಸಮಸ್ಯೆಯೂ ಕಡಿಮೆಯಾಗಿದೆ.

ಇದನ್ನೂ ಓದಿ: ರಾತ್ರಿ ಒಂದೇ ರೂಮಿನಲ್ಲಿದ್ದ ಸಂಜನಾ-ರಾಗಿಣಿ ನಡುವೆ ಕಿರಿಕ್!

Click on your DTH Provider to Add TV9 Kannada