550 ಕೋಟಿ ರೂಪಾಯಿ ಒಡತಿ ಆಲಿಯಾ ಭಟ್; ಗಳಿಕೆ ಹೇಗೆ?
ಕರಣ್ ಜೋಹರ್ ಪರಿಚಯಿಸಿದ ಆಲಿಯಾ ಭಟ್, 'ಸ್ಟೂಡೆಂಟ್ ಆಫ್ ದಿ ಇಯರ್' ಮೂಲಕ ಬಾಲಿವುಡ್ ಪ್ರವೇಶಿಸಿ ಇಂದು ಯಶಸ್ಸಿನ ಉತ್ತುಂಗದಲ್ಲಿದ್ದಾರೆ. 550 ಕೋಟಿ ರೂ. ಆಸ್ತಿ ಹೊಂದಿರುವ ಆಲಿಯಾ, ಚಲನಚಿತ್ರಗಳು, ವೆಬ್ ಸರಣಿಗಳು, ಜಾಹೀರಾತುಗಳು ಮತ್ತು 'ಎಡ್-ಎ-ಮಮ್ಮಾ' ಬಟ್ಟೆ ಬ್ರ್ಯಾಂಡ್ ಮೂಲಕ ಗಳಿಕೆ ಮಾಡುತ್ತಿದ್ದಾರೆ. ಭಾರತ ಮತ್ತು ವಿದೇಶಗಳಲ್ಲಿ ಐಷಾರಾಮಿ ಮನೆಗಳು ಹಾಗೂ ದುಬಾರಿ ಕಾರುಗಳನ್ನು ಹೊಂದಿದ್ದಾರೆ.

ಬಾಲಿವುಡ್‌ನ ಪ್ರಸಿದ್ಧ ನಿರ್ದೇಶಕ ಕರಣ್ ಜೋಹರ್ ಪರಿಚಯಿಸಿದ ಆಲಿಯಾ ಭಟ್ ಇಂದು ಯಶಸ್ಸಿನ ಉತ್ತುಂಗದಲ್ಲಿದ್ದಾರೆ. ಕರಣ್ ಜೋಹರ್ ನಿರ್ದೇಶನದ ‘ಸ್ಟೂಡೆಂಟ್ ಆಫ್ ದಿ ಇಯರ್’ ಚಿತ್ರದ ಮೂಲಕ ಆಲಿಯಾ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು, ನಂತರ ಆಲಿಯಾ ಹಿಂತಿರುಗಿ ನೋಡಿಲ್ಲ. ಇಂದು ಆಲಿಯಾ ಬಾಲಿವುಡ್‌ನ ಪ್ರಸಿದ್ಧ ಮತ್ತು ಜನಪ್ರಿಯ ನಟಿಯರಲ್ಲಿ ಒಬ್ಬರು. ‘ಸ್ಟೂಡೆಂಟ್ ಆಫ್ ದಿ ಇಯರ್’ ಚಿತ್ರದ ನಂತರ, ನಟಿ ‘2 ಸ್ಟೇಟ್ಸ್’, ‘ಹೈವೇ’, ‘ಡಿಯರ್ ಜಿಂದಗಿ’, ‘ರಾಝಿ’, ‘ಗಲ್ಲಿ ಬಾಯ್’ ಮತ್ತು ‘ಗಂಗೂಬಾಯಿ ಕಥಿಯಾವಾಡಿ’ ಮುಂತಾದ ಚಿತ್ರಗಳಲ್ಲಿ ನಟಿಸಿ ಫೇಮಸ್ ಆದರು. ಅವರ ಆಸ್ತಿ ಬಗ್ಗೆ ಇಲ್ಲಿದೆ ವಿವರ.
ಆಲಿಯಾ ಬಹಳ ಕಡಿಮೆ ಸಮಯದಲ್ಲಿ ಉದ್ಯಮದಲ್ಲಿ ಹೆಸರು ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಆಲಿಯಾ ಅವರ ಅಭಿಮಾನಿಗಳ ಸಂಖ್ಯೆಯೂ ಕಡಿಮೆಯಿಲ್ಲ. ಆಲಿಯಾ ಅವರ ಸಂಪತ್ತಿನ ಬಗ್ಗೆ ಹೇಳುವುದಾದರೆ, ನಟಿ 550 ಕೋಟಿ ರೂ ಆಸ್ತಿ ಒಡತಿ. ಆಲಿಯಾ ಚಲನಚಿತ್ರಗಳಿಂದ ಮಾತ್ರವಲ್ಲದೆ ಇತರ ಮಾರ್ಗಗಳಿಂದಲೂ ಕೋಟಿ ಗಳಿಸುತ್ತಾರೆ.
ಆಲಿಯಾ ಒಂದು ಚಿತ್ರಕ್ಕೆ 10 ರಿಂದ 20 ಕೋಟಿ ರೂಪಾಯಿಗಳಷ್ಟು ಸಂಭಾವನೆ ಪಡೆಯುತ್ತಾರೆ… ಆರ್‌ಆರ್‌ಆರ್ ಚಿತ್ರದಲ್ಲಿ ಕೇವಲ 20 ನಿಮಿಷಗಳ ದೃಶ್ಯಕ್ಕೆ ಆಲಿಯಾ 9 ಕೋಟಿ ರೂಪಾಯಿಗಳನ್ನು ಸಂಭಾವನೆ ಪಡೆದಿದ್ದರು… ಇದಲ್ಲದೆ, ಆಲಿಯಾ ವೆಬ್ ಸರಣಿಗಳಲ್ಲಿ ನಟಿಸಿ ಭಾರಿ ಮೊತ್ತದ ಆದಾಯವನ್ನು ಗಳಿಸುತ್ತಾರೆ. ವಿವಿಧ ಜಾಹೀರಾತುಗಳ ಮೂಲಕವೂ ಆಲಿಯಾ ದೊಡ್ಡ ಮೊತ್ತವನ್ನು ಗಳಿಸುತ್ತಾರೆ.
ಆಲಿಯಾ ತನ್ನದೇ ಆದ ಬಟ್ಟೆ ಬ್ರಾಂಡ್ ಅನ್ನು ಸಹ ಹೊಂದಿದ್ದಾರೆ. ‘ಎಡ್-ಎ-ಮಮ್ಮಾ’ ಎಂಬುದು ಆಲಿಯಾಳ ಬ್ರ್ಯಾಂಡ್‌ನ ಹೆಸರು. ಆಲಿಯಾಳ ಬಟ್ಟೆ ಬ್ರಾಂಡ್ 2 ರಿಂದ 14 ವರ್ಷ ವಯಸ್ಸಿನ ಮಕ್ಕಳಿಗೆ ಮಾತ್ರ. ಸಾಕಾಷ್ಟು ಆದಾಯವನ್ನು ಇದು ಗಳಿಸುತ್ತದೆ. ಆಲಿಯಾ ಯಾವಾಗಲೂ ತನ್ನ ಬ್ರ್ಯಾಂಡ್ ಬಗ್ಗೆ ಪೋಸ್ಟ್‌ಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಾರೆ.
ಇದನ್ನೂ ಓದಿ: ಆಲಿಯಾ ಭಟ್ ಮೇಲೆ ನಂಬಿಕೆ 215 ಕೋಟಿ ಆಫರ್ ತಿರಸ್ಕರಿಸಿದ ವೈಆರ್ಎಫ್
ಆಲಿಯಾ ಅವರ ಆಸ್ತಿಗಳ ಬಗ್ಗೆ ಹೇಳುವುದಾದರೆ, ಭಾರತದಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲಿಯೂ ಸಹ, ಆಲಿಯಾ ಅವರಿಗೆ ಕೋಟ್ಯಂತರ ಮೌಲ್ಯದ ಆಸ್ತಿಗಳಿವೆ. ಆಲಿಯಾ ಲಂಡನ್‌ನ ಕೋವೆಂಟ್ ಗಾರ್ಡನ್ ಪ್ರದೇಶದಲ್ಲಿ ಒಂದು ಮನೆಯನ್ನು ಹೊಂದಿದ್ದಾರೆ ಮತ್ತು ಆ ಮನೆಯ ಬೆಲೆ 25 ಕೋಟಿ ರೂ. ಇದಲ್ಲದೆ, ನಟಿ ಮುಂಬೈನ ಬಾಂದ್ರಾದಲ್ಲಿ ಒಂದು ಬಂಗಲೆಯನ್ನು ಹೊಂದಿದ್ದಾರೆ. ಬಂಗಲೆಯ ಬೆಲೆ 32 ಕೋಟಿ ರೂ. ನಟಿ ಬಳಿ ಅನೇಕ ಐಷಾರಾಮಿ ಕಾರುಗಳಿವೆ. ಅವುಗಳಲ್ಲಿ ಆಡಿ Q7, BMW 7 ಸರಣಿ, ರೇಂಜ್ ರೋವರ್ ವೋಗ್, ಮರ್ಸಿಡಿಸ್-ಬೆನ್ಜ್ GLS, ಆಡಿ A6 ಸೇರಿವೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



