AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Meghana Raj:  ‘ನೀನು ಯಾವಾಗಲೂ ನನ್ನ ಬೆಸ್ಟ್​ ಫ್ರೆಂಡ್’​; ಫ್ರೆಂಡ್​ಶಿಪ್​ ಡೇ ದಿನ ಚಿರು ನೆನೆದ ಮೇಘನಾ ರಾಜ್

‘ಚಿರು ನನಗೆ ಪತಿ ಎನ್ನುವುದಕ್ಕಿಂತ ಅತ್ಯುತ್ತಮ ಗೆಳೆಯ’ ಎಂದು ಮೇಘನಾ ರಾಜ್ ಅನೇಕ ಬಾರಿ ಹೇಳಿಕೊಂಡಿದ್ದಾರೆ. ಹೀಗಾಗಿ, ಪತಿ-ಪತ್ನಿ ಸಂಬಂಧದ ಜತೆಗೆ ಇವರ ನಡುವೆ ಒಳ್ಳೆಯ ಗೆಳೆತನವಿತ್ತು.

Meghana Raj:  ‘ನೀನು ಯಾವಾಗಲೂ ನನ್ನ ಬೆಸ್ಟ್​ ಫ್ರೆಂಡ್’​; ಫ್ರೆಂಡ್​ಶಿಪ್​ ಡೇ ದಿನ ಚಿರು ನೆನೆದ ಮೇಘನಾ ರಾಜ್
Meghana Raj:  ‘ನೀನು ಯಾವಾಗಲೂ ನನ್ನ ಬೆಸ್ಟ್​ ಫ್ರೆಂಡ್’​; ಫ್ರೆಂಡ್​ಶಿಪ್​ ಡೇ ದಿನ ಚಿರು ನೆನೆದ ಮೇಘನಾ ರಾಜ್
TV9 Web
| Edited By: |

Updated on: Aug 01, 2021 | 12:27 PM

Share

ಚಿರಂಜೀವಿ ಸರ್ಜಾ ಮೃತಪಟ್ಟು ಒಂದು ವರ್ಷದ ಮೇಲಾಗಿದೆ. ಆದರೆ, ಚಿರು ನೆನಪು ಅಭಿಮಾನಿಗಳಲ್ಲಿ, ಅವರ ಪತ್ನಿ ಮೇಘನಾ ರಾಜ್​ ಹಾಗೂ ಅವರ ಕುಟುಂಬದವರ ಜತೆ ಹಾಗೆಯೇ ಇದೆ. ಚಿರು ಇಹಲೋಕ ತ್ಯಜಿಸಿದ್ದರೂ ಮೇಘನಾ ರಾಜ್​ ಅವರು ಒಂದಲ್ಲಾ ಒಂದು ರೀತಿಯಲ್ಲಿ ಪತಿಯನ್ನು ನೆನಪಿಸಿಕೊಳ್ಳುತ್ತಿದ್ದಾರೆ. ಇಂದು ಫ್ರೆಂಡ್​ಶಿಪ್​ ಡೇ. ಈ ವಿಶೇಷ ದಿನದಂದು ಮೇಘನಾ ಪತಿ ಚಿರಂಜೀವಿಯನ್ನು ನೆನಪಿಸಿಕೊಂಡಿದ್ದಾರೆ.

ಮೇಘನಾ ರಾಜ್​ ಹಾಗೂ ಚಿರಂಜೀವಿ ಸರ್ಜಾ ಆರಂಭದಲ್ಲಿ ಗೆಳೆಯರಾಗಿದ್ದರು. ನಂತರ ಇವರ ಮಧ್ಯೆ ಪ್ರೀತಿ ಮೊಳೆತಿತ್ತು. ಮದುವೆ ಆಗುವ ಮೂಲಕ ತಮ್ಮ ಪ್ರೀತಿಗೆ ಹೊಸ ಅರ್ಥ ಕೊಟ್ಟರು. ‘ಚಿರು ನನಗೆ ಪತಿ ಎನ್ನುವುದಕ್ಕಿಂತ ಅತ್ಯುತ್ತಮ ಗೆಳೆಯ’ ಎಂದು ಮೇಘನಾ ರಾಜ್​ ಅನೇಕ ಬಾರಿ ಹೇಳಿಕೊಂಡಿದ್ದಾರೆ. ಹೀಗಾಗಿ, ಪತಿ-ಪತ್ನಿ ಸಂಬಂಧದ ಜತೆಗೆ ಇವರ ನಡುವೆ ಒಳ್ಳೆಯ ಗೆಳೆತನವಿತ್ತು. ಚಿರು ಅವರಲ್ಲಿ ಓರ್ವ ಗೆಳೆಯನನ್ನು ಮೇಘನಾ ಕಂಡಿದ್ದರು. ಈ ಕಾರಣಕ್ಕೆ ಮೇಘನಾ ರಾಜ್​ ಇಂದು ಪತಿಗೆ ಫ್ರೆಂಡ್​ಶಿಪ್​ ಡೇ ಶುಭಾಶಯ ಕೋರಿದ್ದಾರೆ.

ಚಿರಂಜೀವಿ ಸರ್ಜಾ ಜತೆ ಇರುವ ಫೋಟೋವನ್ನು ಮೇಘನಾ ಪೋಸ್ಟ್​ ಮಾಡಿದ್ದಾರೆ. ‘ನೀನು ಯಾವಾಗಲೂ ನನ್ನ ಉತ್ತಮ ಗೆಳೆಯ. ಹ್ಯಾಪಿ ಫ್ರೆಂಡ್​ಶಿಪ್​ ಡೇ ಎಂದು’ ಮೇಘನಾ ಕ್ಯಾಪ್ಶನ್​ ನೀಡಿದ್ದಾರೆ. ಈ ಫೋಟೋ ನೋಡಿದ ಅನೇಕ ಅಭಿಮಾನಿಗಳು ಭಾವುಕರಾಗಿ ಕಮೆಂಟ್​ ಮಾಡಿದ್ದಾರೆ. ಇನ್ನೂ ಕೆಲವರು ‘ಚಿರು ಯಾವಾಗಲೂ ನಿಮ್ಮ ಜತೆ ಇರುತ್ತಾರೆ’ ಎಂದು ಬರೆದುಕೊಂಡಿದ್ದಾರೆ.

View this post on Instagram

A post shared by Meghana Raj Sarja (@megsraj)

ಹಲವು ತಿಂಗಳ ಹಿಂದೆ ಮೇಘನಾ ರಾಜ್​ಗೆ ಗಂಡು ಮಗು ಜನಿಸಿತ್ತು. ಮಗುವನ್ನು ಜ್ಯೂ. ಚಿರು ಎಂದೇ ಕರೆಯಲಾಗುತ್ತಿದೆ. ಮೇಘನಾ ರಾಜ್​ ಇತ್ತೀಚೆಗೆ ಅಭಿಮಾನಿಗಳಿಗೆ ಸಿಹಿ ಸುದ್ದಿ ಒಂದನ್ನು ನೀಡಿದ್ದರು. ವರ್ಷಗಳ ನಂತರ ಕ್ಯಾಮೆರಾ ಎದುರಿಸುತ್ತಿದ್ದೇನೆ ಎಂದು ಬರೆದುಕೊಂಡಿದ್ದರು. ಇದನ್ನು ನೋಡಿದ ಅಭಿಮಾನಿಗಳು ಸಾಕಷ್ಟು ಖುಷಿಪಟ್ಟಿದ್ದರು. ಅಂದಹಾಗೆ, ಇದು ಜಾಹೀರಾತೋ ಅಥವಾ ಸಿನಿಮಾನಾ ಎನ್ನುವ ಕುತೂಹಲಕ್ಕೆ ತೆರೆ ಬಿದ್ದಿಲ್ಲ.

ಇದನ್ನೂ ಓದಿ: Meghana Raj: ಮೇಘನಾ ರಾಜ್​ ಬದುಕಲ್ಲಿ ಹೊಸ ಬೆಳಕು; ಜ್ಯೂ. ಚಿರು ಜನಿಸಿ 9 ತಿಂಗಳಾದ ಬಳಿಕ ಗುಡ್​ ನ್ಯೂಸ್​

Follow Us
'ಪೆಲೆಟ್ ಗನ್ ದಾಳಿ ನಡೆದೇ ಇಲ್ಲ'; ರಾಹುಲ್ ಗಾಂಧಿಗೆ ಬಿಜೆಪಿ ಸಂಸದ ತಿರುಗೇಟು
'ಪೆಲೆಟ್ ಗನ್ ದಾಳಿ ನಡೆದೇ ಇಲ್ಲ'; ರಾಹುಲ್ ಗಾಂಧಿಗೆ ಬಿಜೆಪಿ ಸಂಸದ ತಿರುಗೇಟು
ಕರ್ನಾಟಕ ಸಂಪುಟ ವಿಸ್ತರಣೆ ಬಗ್ಗೆ ಕೈ ಹೈಕಮಾಂಡ್ ನಾಯಕರು ಹೇಳಿದ್ದಿಷ್ಟು!
ಕರ್ನಾಟಕ ಸಂಪುಟ ವಿಸ್ತರಣೆ ಬಗ್ಗೆ ಕೈ ಹೈಕಮಾಂಡ್ ನಾಯಕರು ಹೇಳಿದ್ದಿಷ್ಟು!
ರಾಹುಲ್ ಸಭೆ ಅಂತ್ಯ, ಬೆಂಗಳುರಿನತ್ತ ಡಿಕೆಶಿ: ಸಂಪುಟ ವಿಸ್ತರಣೆ ಕಥೆ ಏನಾಯ್ತು
ರಾಹುಲ್ ಸಭೆ ಅಂತ್ಯ, ಬೆಂಗಳುರಿನತ್ತ ಡಿಕೆಶಿ: ಸಂಪುಟ ವಿಸ್ತರಣೆ ಕಥೆ ಏನಾಯ್ತು
ತಾಯಿ ನೆನಪಿಗಾಗಿ ಹೊಸ ವಾಚ್ ರೆಡಿ ಮಾಡಿಸಿದ ಪುತ್ರ ಕುಮಾರಸ್ವಾಮಿ
ತಾಯಿ ನೆನಪಿಗಾಗಿ ಹೊಸ ವಾಚ್ ರೆಡಿ ಮಾಡಿಸಿದ ಪುತ್ರ ಕುಮಾರಸ್ವಾಮಿ
ಅತ್ತೆ ಚೆನ್ನಮ್ಮರ ಜೊತೆಗಿನ ನೆನೆಪು ಹಂಚಿಕೊಂಡ ಸೊಸೆ ಭವಾನಿ ರೇವಣ್ಣ
ಅತ್ತೆ ಚೆನ್ನಮ್ಮರ ಜೊತೆಗಿನ ನೆನೆಪು ಹಂಚಿಕೊಂಡ ಸೊಸೆ ಭವಾನಿ ರೇವಣ್ಣ
ರೈತರ ಪರ ಚಿತ್ರರಂಗ ಇದ್ದೇ ಇರುತ್ತೆ: ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲ
ರೈತರ ಪರ ಚಿತ್ರರಂಗ ಇದ್ದೇ ಇರುತ್ತೆ: ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲ
ರಾಜ್ಯದ ಮೇಲ್ಮನವಿ ತಿರಸ್ಕರಿಸಿದ CWMA, ಕರ್ನಾಟಕ ಬಂದ್ ಎಚ್ಚರಿಕೆ
ರಾಜ್ಯದ ಮೇಲ್ಮನವಿ ತಿರಸ್ಕರಿಸಿದ CWMA, ಕರ್ನಾಟಕ ಬಂದ್ ಎಚ್ಚರಿಕೆ
ವಿಜಯ್ ಅವರೇ ಬಲವಂತವಾಗಿ ನೀರು ಪಡೆಯಬೇಡಿ: ಪ್ರಥಮ್
ವಿಜಯ್ ಅವರೇ ಬಲವಂತವಾಗಿ ನೀರು ಪಡೆಯಬೇಡಿ: ಪ್ರಥಮ್
Cauvery Dispute: ಕಾವೇರಿ ನೀರು ವಿವಾದ; ವಾಣಿಜ್ಯ ಮಂಡಳಿಯಲ್ಲಿ ಮಹತ್ವದ ಸಭೆ
Cauvery Dispute: ಕಾವೇರಿ ನೀರು ವಿವಾದ; ವಾಣಿಜ್ಯ ಮಂಡಳಿಯಲ್ಲಿ ಮಹತ್ವದ ಸಭೆ
ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಂಡ ಮಂತ್ರಾಲಯದ ರಾಯರ ಮಠ
ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಂಡ ಮಂತ್ರಾಲಯದ ರಾಯರ ಮಠ