ದಿನ ಭವಿಷ್ಯ : ಇಂದು ಈ ರಾಶಿಯವರು ಅಪರಿಚಿತರ ಜಾಲಕ್ಕೆ ಸಿಕ್ಕಿ ಮೋಸ ಹೋಗುವರು
ಶಾಲಿವಾಹನ ಶಕವರ್ಷ 1949ರ ದಕ್ಷಿಣಾಯನ, ವರ್ಷ ಋತುವಿನ ಭಾದ್ರಪದ ಮಾಸದ ಕೃಷ್ಣ ಪಕ್ಷದ ಚತುರ್ಥೀ ತಿಥಿಯ ಬುಧವಾರದಂದು ಅಧ್ಯಯನದಲ್ಲಿ ಆಸಕ್ತಿ, ನಿರ್ಲಿಪ್ತತೆ, ಶಿಕ್ಷಣದ ಆಲೋಚನೆ, ಸಾತ್ತ್ವಿಕ ಆಹಾರ ಸೇವನೆ, ದುರಸ್ತಿಯಿಂದ ಬೇಸರ, ಅಡ್ಡ ಪರಿಣಾಮ, ಅಜ್ಞಾನ ಪ್ರಕಟ, ಕೃಷಿಯಿಂದ ಆದಾಯ ಎಲ್ಲವೂ ಈ ದಿನದ ವಿಶೇಷ.

ಮೇಷ ರಾಶಿ:
ನಿಮಗೆ ದೇವತಾರಾಧನೆಯಲ್ಲಿ ಶ್ರದ್ಧೆ ಬರಲಿದೆ. ಸಿಟ್ಟಾಗಬೇಕಾದ ಸ್ಥಿತಿಯಲ್ಲಿಯೂ ನೀವು ಪ್ರಶಾಂತರಾಗಿರುವುದು ಆಶ್ಚರ್ಯಕರ ಸಂಗತಿಯಾಗಿದೆ. ಮನೆಯ ಕೆಲಸದಲ್ಲಿ ನೀವು ಮಗ್ನರಾಗುವಿರಿ. ನಿಮ್ಮ ಕರ್ತವ್ಯ ಪರತೆಗೆ ಅಧಿಕಾರಿಗಳಿಂದ ಪ್ರಶಂಸೆ. ಹಳೆಯ ಖಾಯಿಲೆಯಿಂದ ಬಳಲಬಹುದು. ಬೇಡವಾದ ವಸ್ತುಗಳನ್ನು ಮಾರಿ ಹಣವನ್ನು ಪಡೆಯುವಿರಿ. ಹಣದ ಲೆಕ್ಕಾಚಾರದಲ್ಲಿ ನಿಮಗೆ ಮೋಸವಾದುದ್ದು ತಿಳಿದುಬರುವುದು.
ವೃಷಭ ರಾಶಿ:
ಸಂಗಾತಿಯ ಪುನರಾವರ್ತಿತ ಘಟನೆಯಿಂದ ನಿಮಗೆ ಬಹಳ ಬೇಸರವಾಗುವುದು. ಸಂಗಾತಿಯ ಮಾತು ನಿಮಗೆ ಸಿಟ್ಟನ್ನ ತರಿಸೀತು. ನಿಮ್ಮನ್ನು ಕನಿಷ್ಠವಾಗಿಯೂ ಉದ್ಯಮದಲ್ಲಿ ಕಾಣಬಹುದು. ಯಾವುದೇ ಫಲಾಪೇಕ್ಷೆ ಇಲ್ಲದೇ ಸ್ನೇಹಿತರನ್ನು ಮಾಡಿಕೊಳ್ಳುವಿರಿ. ನಿವೃತ್ತಿಯಾದವರಿಗೆ ಬರಬೇಕಾದ ಹಣವನ್ನು ಪಡೆಯಲು ತೊಂದರೆಯಾದೀತು. ನಿಮ್ಮ ನಿಯಮಗಳನ್ನು ನೀವೇ ಮುರಿದುಕೊಳ್ಳುವಿರಿ. ಮಕ್ಕಳ ಮೇಲೆ ಅಶಿಸ್ತಿನ ಕಾರಣಕ್ಕೆ ಸಿಟ್ಟಾಗುವಿರಿ.
ಮಿಥುನ ರಾಶಿ:
ಸಂಗಾತಿಯ ಜೊತೆ ಕಲಹದ ಕಾರಣ ಎಲ್ಲವೂ ಅಸ್ತವ್ಯಸ್ತ ಆಗಬಹುದು. ವಿಶ್ವಾಸಘಾತವು ನಿಮಗೆ ದುಃಖವನ್ನು ತರಿಸಬಹುದು. ಆಹಾರದ ಕೊರತೆಯಿಂದ ನಿಮಗೆ ಸಂಕಟವಾಗಲಿದೆ. ದುಡಿಮೆಯ ಬೆನ್ನೇರಿ ಸಂಬಂಧಗಳನ್ನು ಅಗೌರವದಿಂದ ಕಾಣುವ ಸ್ವಭಾವವನ್ನು ಬೆಳೆಸಿಕೊಂಡಿರುವಿರಿ. ವಿಶೇಷ ಕೆಲಸಕ್ಕೆ ಹೊರಡುವಾಗ ಕುಲದೇವರ ಸ್ಮರಣೆಯನ್ನು ಮರೆಯುವುದು ಬೇಡ. ನೇರ ನುಡಿಯಿಂದ ಎದುರಿನವರಿಗೆ ತೊಂದರೆಯಾದೀತು.
ಕರ್ಕಾಟಕ ರಾಶಿ:
ನೀವು ಹಣವನ್ನು ಖರ್ಚು ಮಾಡದೇ ಜಿಪುಣರಂತೆ ತೋರುವಿರಿ. ಧನದ ಲಾಭವನ್ನು ನಿರೀಕ್ಷಿಸದೇ ಕೆಲಸವನ್ನು ಆರಂಭಿಸಿ. ನೀವು ಮಿಂಚಿನ ವೇಗದಲ್ಲಿ ಮಾಡುವ ಕೆಲಸವು ಎಲ್ಲರಿಗೂ ಇಷ್ಟವಾಗುವುದು. ಮಕ್ಕಳನ್ನು ತಿದ್ದುವ ಕೆಲಸದಲ್ಲಿ ಸಮಯವು ಹೋಗುವುದು. ನಿಮ್ಮ ಸ್ವಭಾವದ ದುರುಪಯೋಗವಾಗಲಿದೆ. ಸತ್ತ್ವಯುತವಾದ ಆಹಾರವನ್ನು ಸೇವಿಸಿ. ಯಾರಿಂದಲೂ ಅತಿಯಾಗಿ ನಿರೀಕ್ಷಿಸದೇ ಕೆಲಸವನ್ನು ಮಾಡಿ. ಬೇಕಾದವರನ್ನು ಮಾತಿನಿಂದ ದೂರ ಮಾಡಿಕೊಳ್ಳುವಿರಿ.
ಸಿಂಹ ರಾಶಿ:
ವಿದ್ಯಾಭ್ಯಾಸದಲ್ಲಿ ಪ್ರಗತಿಯ ಜೊತೆ ಶತ್ರುಗಳೂ ಉಂಟಾಗುವರು. ಅಪರಿಚಿತರ ಜಾಲಕ್ಕೆ ಸಿಕ್ಕಿ ಮೋಸ ಹೋಗಬಹುದು. ಆರ್ಥಿಕ ಬಲವನ್ನು ನೋಡಿ ಇಂದು ಮುಂದುವರಿಯಿರಿ. ಸ್ನೇಹಿತರು ನಿಮ್ಮ ಬಳಿ ಹಣದ ಸಹಾಯವನ್ನು ಕೇಳಬಹುದು. ವೃತ್ತಿಯಲ್ಲಿ ನೀವು ಹೊಸತನ್ನು ತರಲು ಯೋಚಿಸಬಹುದು. ಬಲವಂತವಾಗಿ ಇನ್ನೊಬ್ಬರಿಂದ ಕೆಲಸವನ್ನು ಮಾಡಿಸಿಕೊಳ್ಳುವಿರಿ. ಪ್ರಾಮಾಣಿಕತೆಯು ಇಂದು ನಿಮಗೆ ವರದಾನವಾಗುವುದು.
ಕನ್ಯಾ ರಾಶಿ:
ಕಲಾತ್ಮಕ ವಿಚಾರದಲ್ಲಿ ಇಂದು ಹೆಚ್ಚು ಆಸಕ್ತಿಯನ್ನು ಇಟ್ಟುಕೊಳ್ಳುವಿರಿ. ನಿಮ್ಮ ನಿರ್ಧಾರವನ್ನು ಇನ್ನೊಬ್ಬರ ಮೇಲೆ ಹೇರುವುದು ಬೇಡ. ಎಲ್ಲರ ಮೇಲೂ ಹಿಡಿತ ಸಾಧಿಸುವುದು ಅಶಕ್ಯ. ರಾಜಕೀಯ ವಲಯದಲ್ಲಿ ನಿಮ್ಮ ಮಾತು ನಡೆಯಲಿದ್ದು ಅದನ್ನು ಸದುಪಯೋಗವಾಗಿವಂತೆ ಮಾಡಿಕೊಳ್ಳಿ. ಮನಸ್ಸಿಗೆ ಕೆಲವು ಸಮಯ ವಿಶ್ರಾಂತಿ ಬೇಕಾಗುವುದು. ಸಂಬಂಧವು ನಿಮಗೆ ಹೊಸ ಉತ್ಸಾಹವನ್ನು ಕೊಡಬಹುದು. ಮಾತಿನಲ್ಲಿ ಹಿಡಿತವಿದ್ದರೆ ನಿಮಗೆ ಇಂದು ಕ್ಷೇಮ.
ತುಲಾ ರಾಶಿ:
ಮೇಲಧಿಕಾರಿಗಳ ಕಿರುಕುಳವನ್ನು ಸಹಿಸುವುದು ಕಷ್ಟವಾಗುವುದು. ಹಳೆಯ ವಿಚಾರಕ್ಕೆ ಸಂಗಾತಿಯ ಜೊತೆ ಕಲಹವಾಗಲಿದೆ. ಆದಷ್ಟು ಒಬ್ಬರು ಸುಮ್ಮನಿದ್ದರೆ ಕಲಹವು ಶಾಂತವಾಗಲಿದೆ. ಶ್ರೇಷ್ಠ ವಸ್ತುಗಳ ಲಾಭವಿದ್ದರೂ ಅದನ್ನು ಉಳಿಸಿಕೊಳ್ಳುವುದು ಕಷ್ಟವಾದೀತು. ಸಂಗಾತಿಯ ಬೆಂಬಲವನ್ನು ನಿರಾಕರಿಸುವಿರಿ. ತಪ್ಪಿಗೆ ಕ್ಷಮೆ ಕೇಳಿ ದೊಡ್ಡವರಾಗಲಿದ್ದೀರಿ. ಅವರ ಎಲ್ಲ ಸಹಕಾರಗಳನ್ನು ತೆಗೆದುಕೊಳ್ಳಿ. ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಬಹುದು.
ವೃಶ್ಚಿಕ ರಾಶಿ:
ಇಂದಿನ ಆದಾಯ ಕಡಿಮೆ ಇದ್ದರೂ ನೆಮ್ಮದಿ ಇರಲಿದೆ. ಪ್ರಾಮಾಣಿಕತೆ ನಿಮಗೆ ವರವಾಗಬಹುದು. ನಿಮ್ಮ ಸರಳತೆಯು ನಿಮಗೆ ಧನಾತ್ಮಕ ಅಂಕಗಳನ್ನು ನೀಡುವುದು. ಸ್ತ್ರೀಯರಿಂದ ನೀವು ಸಂತೋಷವನ್ನು ಅನುಭವಿಸುವಿರಿ. ನಿಮ್ಮ ಮನಸ್ಸಿಗೆ ಹೊಂದುವವರ ಒಡನಾಟ ಸಿಗುವುದು. ಅಗ್ನಿಯ ಬಗ್ಗೆ ಎಚ್ಚರಿಕೆ ಇರಲಿ. ಯಾವುದೇ ಕೆಲಸಕ್ಕೆ ಬೇರೆಯವರ ಮೇಲೆ ಅವಲಂಬಿತರಾಗಬೇಡಿ. ಇಂದು ಉದ್ಯಮವು ದಿಕ್ಕು ತಪ್ಪದಂತೆ ನೋಡಿಕೊಳ್ಳಿ.
ಧನು ರಾಶಿ:
ಯಾರ ಮೇಲೂ ದ್ವೇಷ ಬರುವಂತಹ ಕೆಲಸವನ್ನು ಮಾಡುವುದು ಬೇಡ. ಇಂದು ನೀವು ವ್ಯವಹಾರದಲ್ಲಿ ಜಾಗರೂಕರಾಗಿ ಇರಬೇಕಸದೀತು. ಹಣವನ್ನು ತಪ್ಪಾದ ಕಡೆಯಲ್ಲಿ ಹೂಡುವಿರಿ. ಸುಮ್ಮನೇ ಎಲ್ಲದಕ್ಕೂ ಒಪ್ಪಿಗೆಯನ್ನು ಕೊಡುವುದು ಬೇಡ. ಅಧ್ಯಯನದಿಂದ ಪ್ರತಿಷ್ಠೆ ಹೆಚ್ಚಾಗುವುದು. ಸಾಹಸಮಯವಾದ ಪ್ರವೃತ್ತಿಯನ್ನು ಇಟ್ಟುಕೊಳ್ಳುವುದು ಬೇಡ. ಮಕ್ಕಳ ನಡುವೆ ವಾದವು ಬೆಳೆಯಬಹುದು. ನೀವು ಹಳೆಯ ಸ್ನೇಹಿತರನ್ನು ಭೇಟಿ ಮಾಡಲು ಹೋಗಬಹುದು.
ಮಕರ ರಾಶಿ:
ನೀವು ಇಂದು ದೇವರ ಮೇಲೆ ಸಂಪೂರ್ಣ ಭಾರ ಹಾಕಿ ನಿಮ್ಮ ಕಾರ್ಯವನ್ನು ಆರಂಭಿಸುವಿರಿ. ಪ್ರೇಮವನ್ನು ನೀವು ಒಪ್ಪಿಕೊಳ್ಳದೇ ನಿಮ್ಮದೇ ವಾದವನ್ನು ಮಾಡುವಿರಿ. ಸಂಗಾತಿಯ ಮಾತುಗಳು ನಿಮಗೆ ಕಿರಿಕಿರಿಯನ್ನು ತಂದೀತು. ಸುಲಭದ ಕೆಲಸಗಳನ್ನು ಸಂಕೀರ್ಣ ಮಾಡಿಕೊಳ್ಳುವಿರಿ. ಸಾಮಾಜಿಕ ಕೆಲಸಗಳು ನಿಮಗೆ ಅಭ್ಯಾಸದಂತೆ ಅಗುವುದು. ಬಂಧುಗಳ ಆಗಮನವು ಖುಷಿಕೊಡುವುದು. ಸಂಗಾತಿಯಾಗಲಿರುವವರು ಇಂದು ಭೇಟಿಯಾಗುವಿರಿ.
ಕುಂಭ ರಾಶಿ:
ನೆಮ್ಮದಿಗೆ ನಿಮ್ಮದೇ ಸೂತ್ರಗಳನ್ನು ನೀವು ಅನುಸರಿಸುವಿರಿ. ಕೆಲವು ಅಭ್ಯಾಸವನ್ನು ಬಿಟ್ಟುಬಿಡುವಿರಿ. ಸ್ನೇಹಿತರ ಜೊತೆ ಹೆಚ್ಚಿನ ಸಮಯವನ್ನು ಕಳೆಯುವಿರಿ. ಸಂಸಾರವನ್ನು ನಿಭಾಯಿಸುವ ಕಲೆಯನ್ನು ನೀವು ತಿಳಿದುಕೊಳ್ಳಬಹುದು. ಔದ್ಯೋಗಿಕವಾದ ವಿಚಾರವನ್ನು ಮನೆಯಲ್ಲಿ ಸಹೋದರರ ಜೊತೆ ಚರ್ಚಿಸುವಿರಿ. ಅನವಶ್ಯಕ ವಸ್ತುಗಳನ್ನು ಖರೀದಿಸಿ ದಂಡ ಮಾಡುವಿರಿ. ನೀವು ನಿಮ್ಮ ಹಿರಿಯರ ಸಲಹೆಯನ್ನು ಅನುಸರಿಸಿದರೆ ಉತ್ತಮವಾದುದನ್ನು ಪಡೆಯುವಿರಿ.
ಮೀನ ರಾಶಿ:
ಸಾಮಾಜಿಕ ಕಳಕಳಿಯನ್ನು ನೀವು ಹೆಚ್ಚಿಸಿಕೊಳ್ಳುವಿರಿ. ಆದಾಯಕ್ಕಿಂತ ಖರ್ಚು ಹೆಚ್ಚಾಗಿ ಆತಂಕವಾಗಬಹುದು. ಕುಟುಂಬದ ಸದಸ್ಯರ ಪ್ರೀತಿಯು ಸಿಗಲಿದೆ. ಆಕಸ್ಮಿಕ ವಾರ್ತೆಯನ್ನು ನೀವು ಸಮಾಧಾನದಿಂದ ತೆಗೆದುಕೊಳ್ಳಬೇಕಾದೀತು. ನಿಮ್ಮ ಕೆಲಸಕ್ಕೆ ಪ್ರಶಂಸೆಯು ಸಿಗಲಿದೆ. ಸಹೋದರರು ನಿಮ್ಮ ಕಷ್ಟದಲ್ಲಿ ಭಾಗಿಯಾಗುವರು. ಯಾವದನ್ನೂ ಕ್ಷಣದಲ್ಲಿ ಬದಲಿಸಲಾಗದು. ನಿಮ್ಮ ಬಳಿ ಇರುವುದುನ್ನು ಕೊಡಲಾರಿರಿ.
ಇಂದಿನ ಪಂಚಾಂಗ:
ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ದಕ್ಷಿಣಾಯನ, ಋತು : ವರ್ಷ, ಚಾಂದ್ರಮಾಸ : ಭಾದ್ರಪದ, ಸೌರ ಮಾಸ : ಕನ್ಯಾ, ಮಹಾನಕ್ಷತ್ರ : ಹಸ್ತಾ, ವಾರ : ಬುಧ, ಪಕ್ಷ : ಕೃಷ್ಣ, ತಿಥಿ : ಚತುರ್ಥೀ, ನಿತ್ಯನಕ್ಷತ್ರ : ಕೃತ್ತಿಕಾ, ಯೋಗ : ಹರ್ಷಣ, ಕರಣ : ಬಾಲವ, ಸೂರ್ಯೋದಯ – 06 – 09 am, ಸೂರ್ಯಾಸ್ತ – 06 – 09 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 12:10 – 13:39, ಯಮಗಂಡ ಕಾಲ 07:40 – 09:10, ಗುಳಿಕ ಕಾಲ 10:40 – 12:10
– ಲೋಹಿತ್ ಹೆಬ್ಬಾರ್ – 8762924271 (what’s app only)
ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:35 am, Wed, 30 September 26




