ಡಿಕೆಶಿಯನ್ನು ತಾನು ಸಿಎಂ ಎಂದು ಒಪ್ಪಲ್ಲ ಎಂದ ಕುಮಾರಸ್ವಾಮಿ: ಕಾರಣವನ್ನೂ ಕೊಟ್ಟ ಕೇಂದ್ರ ಸಚಿವ
ಡಿ.ಕೆ.ಶಿವಕುಮಾರ್ ಅವರನ್ನು ತಾವು ಮುಖ್ಯಮಂತ್ರಿ ಎಂದು ಒಪ್ಪುವುದಿಲ್ಲ ಎಂದ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ಅವರ ಕನಕಪುರದ ಹಿನ್ನೆಲೆಯ ಪುಸ್ತಕ ಪ್ರದರ್ಶಿಸಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಡಿಕೆಶಿ ಅವರ ಕನಕಪುರದ ಇತಿಹಾಸ ಮತ್ತು ಹಿನ್ನಲೆಯ ಬಗ್ಗೆ ಪುಸ್ತಕವಿದ್ದು, ಇದನ್ನು ನಾನು ಬರೆದಿದ್ದಲ್ಲ. ಈ ಪುಸ್ತಕಕ್ಕಿಂತಲೂ ಹೆಚ್ಚಿನ ವರದಿಗಳು ತಮ್ಮ ಬಳಿ ಇವೆ ಎಂದೂ ಅವರು ಹೇಳಿದ್ದಾರೆ.
ಬೆಂಗಳೂರು, ಅಕ್ಟೋಬರ್ 23: ಡಿಕೆ ಶಿವಕುಮಾರ್ ಅವರನ್ನು ತಾನು ಮುಖ್ಯಮಂತ್ರಿಯೆಂದು ಒಪ್ಪಲ್ಲ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಡಿಕೆಶಿ ಅವರ ಕನಕಪುರದ ಇತಿಹಾಸ ಮತ್ತು ಹಿನ್ನಲೆಯ ಬಗ್ಗೆ ಪುಸ್ತಕವಿದ್ದು, ಇದನ್ನು ನಾನು ಬರೆದಿದ್ದಲ್ಲ. ಇದನ್ನು ಓದಿಬಿಟ್ಟರೆ ಅವರನ್ನು ರಾಜ್ಯದ ಸಿಎಂ ಎಂದು ಯಾರೂ ಒಪ್ಪಲು ಆಗಲ್ಲ. ಈ ಪುಸ್ತಕವನ್ನು ಯಾರೋ ಸುಮ್ಮನೆ ಬರೆದಿಲ್ಲ ಎಂದು ಹೇಳುತ್ತಲೇ ಅವರು ಪುಸ್ತಕವೊಂದನ್ನು ಪ್ರದರ್ಶಿಸಿದ್ದಾರೆ. ಈ ಪುಸ್ತಕಕ್ಕಿಂತಲೂ ಹೆಚ್ಚಿನ ವರದಿಗಳು ತಮ್ಮ ಬಳಿ ಇವೆ ಎಂದೂ ಕುಮಾರಸ್ವಾಮಿ ಹೇಳಿದ್ದಾರೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
Follow Us

