ಮ್ಯಾನ್ಮಾರ್ ತರಬೇತಿ ಶಿಬಿರ ಪ್ರಕರಣ; ಫೆ. 24ರವರೆಗೆ ಅಮೆರಿಕದಲ್ಲಿರಲು ಮ್ಯಾಥ್ಯೂ ವ್ಯಾನ್‌ಡೈಕ್‌ಗೆ ಕೋರ್ಟ್ ಅನುಮತಿ
ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ತನಿಖೆ ನಡೆಸುತ್ತಿರುವ ಮ್ಯಾನ್ಮಾರ್ ತರಬೇತಿ ಶಿಬಿರ ಪ್ರಕರಣಕ್ಕೆ ಸಂಬಂಧಿಸಿದಂತೆ, ಅಮೆರಿಕದ ಪ್ರಜೆ ಮ್ಯಾಥ್ಯೂ ಆರನ್ ವ್ಯಾನ್‌ಡೈಕ್ ಇಂದುದೆಹಲಿಯ ರೋಸ್ ಅವೆನ್ಯೂ ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ. ಕುಟುಂಬವನ್ನು ಭೇಟಿಯಾಗಲು ನ್ಯಾಯಾಲಯದ ಅನುಮತಿಯೊಂದಿಗೆ ಅಮೆರಿಕಕ್ಕೆ ತೆರಳಿದ್ದ ಅವರು ಅಲ್ಲಿಂದ ವಾಪಸಾಗಿದ್ದಾರೆ. ಇದೇ ಪ್ರಕರಣದಲ್ಲಿ ಸಹ-ಆರೋಪಿಗಳಾಗಿರುವ 6 ಉಕ್ರೇನ್ ಪ್ರಜೆಗಳಿಗೂ ಸಹ ಮುಂದಿನ ವಿಚಾರಣೆಯ ದಿನವಾದ ಫೆಬ್ರವರಿ 24, 2027ರವರೆಗೆ ಭಾರತದಿಂದ ಹೊರಗಿರಲು ನ್ಯಾಯಾಲಯವು ಅನುಮತಿ ನೀಡಿದೆ. ಅಲ್ಲದೆ, ವ್ಯಾನ್‌ಡೈಕ್ ಅವರಿಗೂ ಅಮೆರಿಕಕ್ಕೆ ಪ್ರಯಾಣಿಸಲು ಒಪ್ಪಿಗೆ ನೀಡಲಾಗಿದೆ.

ನವದೆಹಲಿ, ಅಕ್ಟೋಬರ್ 23: ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ತನಿಖೆ ನಡೆಸುತ್ತಿರುವ ಮ್ಯಾನ್ಮಾರ್ ತರಬೇತಿ ಶಿಬಿರ ಪ್ರಕರಣದಲ್ಲಿ ಅಮೆರಿಕದ ಪ್ರಜೆ ಮ್ಯಾಥ್ಯೂ ವ್ಯಾನ್‌ಡೈಕ್ ಅವರಿಗೆ ನ್ಯಾಯಾಲಯದಿಂದ ದೊಡ್ಡ ರಿಲೀಫ್ ಸಿಕ್ಕಿದೆ. ನ್ಯಾಯಾಲಯದ ಪೂರ್ವಾನುಮತಿಯೊಂದಿಗೆ ತನ್ನ ಕುಟುಂಬವನ್ನು ಭೇಟಿಯಾಗಲು ಅಮೆರಿಕಕ್ಕೆ ತೆರಳಿದ್ದ ಅವರು, ಇಂದು ದೆಹಲಿಯ ರೂಸ್ ಅವೆನ್ಯೂ ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ. ಈ ಪ್ರಕರಣದ ವಿಚಾರಣೆಯನ್ನು ಪರಿಗಣಿಸಿರುವ ನ್ಯಾಯಾಲಯವು, ಮ್ಯಾಥ್ಯೂ ವ್ಯಾನ್‌ಡೈಕ್ ಅವರಿಗೆ ಅಮೆರಿಕದಲ್ಲೇ ಇರಲು ಅನುಮತಿ ನೀಡಿದೆ. ಅಲ್ಲದೆ, ಇದೇ ಪ್ರಕರಣದಲ್ಲಿ ಸಹ-ಆರೋಪಿಗಳಾಗಿರುವ 6 ಉಕ್ರೇನ್ ಪ್ರಜೆಗಳಿಗೂ ಕೂಡ ಮುಂದಿನ ವಿಚಾರಣೆಯ ದಿನವಾದ ಫೆಬ್ರವರಿ 24, 2027ರವರೆಗೆ ಭಾರತದಿಂದ ಹೊರಗಿರಲು ನ್ಯಾಯಾಲಯವು ಅನುಮತಿ ವಿಸ್ತರಿಸಿದೆ.
ಸೆಪ್ಟೆಂಬರ್‌ನಲ್ಲಿ ಅಮೆರಿಕ ಪ್ರಯಾಣಕ್ಕೆ ಅನುಮತಿ:
ಕುಟುಂಬವನ್ನು ಭೇಟಿ ಮಾಡಲು ಸೆಪ್ಟೆಂಬರ್ 2026ರಲ್ಲಿ ರೂಸ್ ಅವೆನ್ಯೂ ನ್ಯಾಯಾಲಯವು ವ್ಯಾನ್‌ಡೈಕ್‌ಗೆ 1 ತಿಂಗಳ ಕಾಲ ಅಮೆರಿಕಕ್ಕೆ ತೆರಳಲು ಅನುಮತಿ ನೀಡಿತ್ತು. ನಿಗದಿತ ಅವಧಿಯ ನಂತರ ಭಾರತಕ್ಕೆ ಮರಳಿ ನ್ಯಾಯಾಲಯದ ಮುಂದೆ ಹಾಜರಾಗುವಂತೆ ಅವರಿಗೆ ನಿರ್ದೇಶಿಸಲಾಗಿತ್ತು. ಅದೇ ರೀತಿ 6 ಉಕ್ರೇನ್ ಪ್ರಜೆಗಳಿಗೂ ತಮ್ಮ ದೇಶಕ್ಕೆ ತೆರಳಲು ಅವಕಾಶ ನೀಡಲಾಗಿತ್ತು. ಅದರಂತೆ ಅವರು ಅಮೆರಿಕಕ್ಕೆ ತೆರಳಿದ್ದರು.
ಇದನ್ನೂ ಓದಿ: ಮ್ಯಾನ್ಮಾರ್ ಪ್ರಕರಣ; ಅಮೆರಿಕ ಪ್ರಜೆ ಮತ್ತು ಉಕ್ರೇನಿಯನ್ನರ ಮೇಲಿನ ಭಯೋತ್ಪಾದನಾ ಆರೋಪ ಹಿಂಪಡೆದ ಭಾರತ
ಪ್ರಕರಣದ ಹಿನ್ನೆಲೆಯೇನು?:
ಮ್ಯಾನ್ಮಾರ್ನಲ್ಲಿ ಮಿಲಿಟರಿ ಜುಂಟಾ ವಿರುದ್ಧ ಹೋರಾಡುತ್ತಿರುವ ಸಶಸ್ತ್ರ ಜನಾಂಗೀಯ ಗುಂಪುಗಳಿಗೆ (ಚಿನ್ ನ್ಯಾಷನಲ್ ಫ್ರಂಟ್ ಮತ್ತು ಕಚಿನ್ ಇಂಡಿಪೆಂಡೆನ್ಸ್ ಆರ್ಮಿ) ಡ್ರೋನ್ ತಂತ್ರಜ್ಞಾನ, ಡ್ರೋನ್ ಯುದ್ಧ ಮತ್ತು ಜಾಮಿಂಗ್ ತಂತ್ರಜ್ಞಾನದ ಕುರಿತು ತರಬೇತಿ ನೀಡುತ್ತಿದ್ದಾರೆ ಎಂಬ ಆರೋಪದ ಮೇರೆಗೆ, ಅಗತ್ಯ ದಾಖಲೆಗಳಿಲ್ಲದೆ ಮಿಜೋರಾಂ ಮೂಲಕ ಮ್ಯಾನ್‌ಮಾರ್‌ಗೆ ಪ್ರವೇಶಿಸಿದ್ದರು ಎನ್ನಲಾದ ಮ್ಯಾಥ್ಯೂ ಹಾಗೂ ಉಕ್ರೇನ್ ಪ್ರಜೆಗಳನ್ನು ಮಾರ್ಚ್ 13, 2026ರಂದು ಎನ್‌ಐಎ ಬಂಧಿಸಿತ್ತು.
#WATCH | Myanmar Training camp case: Bailed-out US National Matthew Aaron Vandyke arrives at Delhi’s Rouse Avenue Court to appear before the NIA court, after returning from the USA.
He was granted permission to travel to the USA to meet his family. In September 2026, the court had granted him permission to travel to the USA for a month. He was directed to return to India and to appear before the court.
— ANI (@ANI) October 23, 2026
ಇದನ್ನೂ ಓದಿ: ದೆಹಲಿ ಜೈಲಿನಲ್ಲಿ ಅಮೆರಿಕನ್ ಸ್ಟೈಲ್ ಡಯಟ್ ಕೇಳಿ ಕೋರ್ಟ್ ಮೆಟ್ಟಿಲೇರಿದ ವಿದೇಶಿ ಕೈದಿ!
ಎನ್‌ಐಎ ಸಲ್ಲಿಸಿದ ಆರೋಪಪಟ್ಟಿಯಲ್ಲಿ ಇಮಿಗ್ರೇಷನ್ ಮತ್ತು ವಿದೇಶಿಗರ ಕಾಯ್ದೆಯ ಅಡಿಯಲ್ಲಿ ಮಾತ್ರ ಪ್ರಕರಣ ದಾಖಲಿಸಲಾಗಿದ್ದು, ಉಗ್ರ ನಿಗ್ರಹ ಕಾಯ್ದೆಯಾದ ‘ಯುಎಪಿಎ’ ಸೆಕ್ಷನ್‌ಗಳನ್ನು ಆರಂಭಿಕ ಆರೋಪಪಟ್ಟಿಯಲ್ಲಿ ಸೇರಿಸಿರಲಿಲ್ಲ. ನಿಗದಿತ ಅವಧಿಯೊಳಗೆ ಯುಎಪಿಎ ಅಡಿಯಲ್ಲಿ ಚಾರ್ಜ್‌ಶೀಟ್ ದಾಖಲಾಗದ ಕಾರಣ ನ್ಯಾಯಾಲಯವು ಇವರಿಗೆ ಜಾಮೀನು ಮಂಜೂರು ಮಾಡಿತ್ತು.
ಎನ್‌ಐಎ ಪರ ವಕೀಲರು ಉಎಪಿಎ ಅಡಿಯಲ್ಲಿ ತನಿಖೆ ಇನ್ನೂ ಮುಂದುವರಿದಿದೆ ಎಂದು ತಿಳಿಸಿದ್ದು, ಮುಂದಿನ ದಿನಗಳಲ್ಲಿ ಅಗತ್ಯಬಿದ್ದರೆ ಪೂರಕ ಆರೋಪಪಟ್ಟಿ ಸಲ್ಲಿಸುವುದಾಗಿ ತಿಳಿಸಿದ್ದಾರೆ. ಸದ್ಯ ಆರೋಪಿಗಳಿಗೆ ನ್ಯಾಯಾಲಯವು ವಿದೇಶದಲ್ಲಿರಲು ಫೆಬ್ರವರಿಯವರೆಗೆ ವಿನಾಯಿತಿ ನೀಡಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




