AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವ್ಯಾನ್‌ಡೈಕ್ ಪ್ರಕರಣದಲ್ಲಿ ಎಲ್ಲ ಆರೋಪಿಗಳ ವಿರುದ್ಧ ಯುಎಪಿಎ ತನಿಖೆ ಮುಂದುವರೆದಿದೆ; ಎನ್‌ಐಎ ಸ್ಪಷ್ಟನೆ

ಅಮೆರಿಕನ್ ಪ್ರಜೆ ಮ್ಯಾಥ್ಯೂ ಆರನ್ ವ್ಯಾನ್ ಡೈಕ್ ಮತ್ತು 6 ಉಕ್ರೇನಿಯನ್ ಪ್ರಜೆಗಳನ್ನು ಒಳಗೊಂಡ ಪ್ರಕರಣದಲ್ಲಿ, ಭಯೋತ್ಪಾದನೆಗೆ ಸಂಬಂಧಿಸಿದ ತನಿಖೆಯನ್ನು ಇನ್ನೂ ಮುಕ್ತಾಯಗೊಳಿಸಲಾಗಿಲ್ಲ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್​ಐಎ) ಸ್ಪಷ್ಟಪಡಿಸಿದೆ. ಯುಎಪಿಎ ಅಡಿಯಲ್ಲಿ ಎಲ್ಲಾ 7 ಆರೋಪಿಗಳ ವಿರುದ್ಧ ತನಿಖೆ ಮುಂದುವರೆದಿದೆ. ಈ ಎಲ್ಲಾ 7 ಜನರನ್ನು ಮಾರ್ಚ್ ತಿಂಗಳಲ್ಲಿ ಯುಎಪಿಎಯ ಸೆಕ್ಷನ್ 18 ಮತ್ತು ಇತರ ವಿಭಾಗಗಳ ಅಡಿಯಲ್ಲಿ ಬಂಧಿಸಲಾಯಿತು. ಅವರ ವಿರುದ್ಧ ಮ್ಯಾನ್ಮಾರ್‌ಗೆ ಅಕ್ರಮವಾಗಿ ಪ್ರವೇಶಿಸಿದ ಮತ್ತು ಜನಾಂಗೀಯ ಸಶಸ್ತ್ರ ಗುಂಪುಗಳಿಗೆ ಡ್ರೋನ್ ಯುದ್ಧ ತರಬೇತಿಯನ್ನು ನೀಡಿದ ಆರೋಪ ಹೊರಿಸಲಾಗಿದೆ.

ವ್ಯಾನ್‌ಡೈಕ್ ಪ್ರಕರಣದಲ್ಲಿ ಎಲ್ಲ ಆರೋಪಿಗಳ ವಿರುದ್ಧ ಯುಎಪಿಎ ತನಿಖೆ ಮುಂದುವರೆದಿದೆ; ಎನ್‌ಐಎ ಸ್ಪಷ್ಟನೆ
ವ್ಯಾನ್‌ಡೈಕ್Image Credit source: TV9
ಸುಷ್ಮಾ ಚಕ್ರೆ
|

Updated on: Sep 09, 2026 | 4:20 PM

Share

ನವದೆಹಲಿ, ಸೆಪ್ಟೆಂಬರ್ 9: ಮ್ಯಾನ್ಮಾರ್ ಸಂಚು ಪ್ರಕರಣಕ್ಕೆ ಸಂಬಂಧಿಸಿದಂತೆ ಅಮೆರಿಕನ್ ಪ್ರಜೆ ಮ್ಯಾಥ್ಯೂ ಆರನ್ ವ್ಯಾನ್‌ಡೈಕ್ ಮತ್ತು ಇತರೆ 6 ಮಂದಿ ಉಕ್ರೇನ್ ಪ್ರಜೆಗಳ ವಿರುದ್ಧ ಯುಎಪಿಎ ಕಾಯ್ದೆಯಡಿ ದೋಷಾರೋಪಣೆ ಹೊರಿಸಿಲ್ಲ ಎಂಬ ವರದಿಗಳ ಬೆನ್ನಲ್ಲೇ, ನಾವು ಭಯೋತ್ಪಾದನಾ ಕೋನದ ತನಿಖೆಯನ್ನು ಕೈಬಿಟ್ಟಿಲ್ಲ ಎಂದು ಎನ್​ಐಎ ಅಧಿಕೃತ ಸ್ಪಷ್ಟನೆ ನೀಡಿವೆ. ಸದ್ಯದ ತನಿಖೆಯಲ್ಲಿ ವಿದೇಶಿಯರ ನಿಯಮ ಉಲ್ಲಂಘನೆ ಸಾಬೀತಾಗಿರುವುದರಿಂದ ‘ವಲಸೆ ಮತ್ತು ವಿದೇಶಿಯರ ಕಾಯ್ದೆ’ ಅಡಿಯಲ್ಲಿ ಚಾರ್ಜ್‌ಶೀಟ್ ಸಲ್ಲಿಸಲಾಗಿದ್ದು, ಯುಎಪಿಎ ಕಾಯ್ದೆಯಡಿಯ ತನಿಖೆ ಪೂರ್ಣ ಪ್ರಮಾಣದಲ್ಲಿ ಮುಂದುವರಿದಿದೆ ಎಂದು ಸ್ಪಷ್ಟಪಡಿಸಲಾಗಿದೆ.

ಯುಎಪಿಎ ಕಾಯ್ದೆಯ ಪ್ರಕಾರ, ಆರೋಪಿಗಳನ್ನು ಕಸ್ಟಡಿಯಲ್ಲಿಟ್ಟುಕೊಂಡು ಚಾರ್ಜ್‌ಶೀಟ್ ಸಲ್ಲಿಸಲು ತನಿಖಾ ಸಂಸ್ಥೆಗೆ ಗರಿಷ್ಠ 180 ದಿನಗಳ ಕಾಲಾವಕಾಶವಿರುತ್ತದೆ. ಈ ಪ್ರಕರಣದಲ್ಲಿ ಸೆಪ್ಟೆಂಬರ್ 8ರಂದು 180 ದಿನಗಳ ಈ ಶಾಸನಬದ್ಧ ಗಡುವು ಕೊನೆಗೊಳ್ಳುತ್ತಿತ್ತು. ಒಂದು ವೇಳೆ ಈ ಅವಧಿಯೊಳಗೆ ಚಾರ್ಜ್‌ಶೀಟ್ ಸಲ್ಲಿಸದಿದ್ದರೆ, ಆರೋಪಿಗಳಿಗೆ ಕಾನೂನುಬದ್ಧ ಜಾಮೀನು ಸಿಗುವ ಸಾಧ್ಯತೆಯಿತ್ತು. ಅದನ್ನು ತಡೆಯಲು ಸದ್ಯ ಪೂರ್ಣಗೊಂಡಿರುವ ಐಎಫ್‌ಎ ಕಾಯ್ದೆಯಡಿ ದೋಷಾರೋಪಣ ಪಟ್ಟಿ ಸಲ್ಲಿಸಲಾಗಿದೆ.

ಇದನ್ನೂ ಓದಿ: ಮ್ಯಾನ್ಮಾರ್ ಪ್ರಕರಣ; ಅಮೆರಿಕ ಪ್ರಜೆ ಮತ್ತು ಉಕ್ರೇನಿಯನ್ನರ ಮೇಲಿನ ಭಯೋತ್ಪಾದನಾ ಆರೋಪ ಹಿಂಪಡೆದ ಭಾರತ

ಪೂರಕ ದೋಷಾರೋಪಣ ಪಟ್ಟಿ:

ಬಂಧಿತರಿಂದ ವಶಪಡಿಸಿಕೊಂಡಿರುವ ಬೃಹತ್ ಪ್ರಮಾಣದ ಡ್ರೋನ್‌ಗಳು, ಡಿಜಿಟಲ್ ಸಾಧನಗಳು ಹಾಗೂ ಮ್ಯಾನ್ಮಾರ್‌ನ ಜನಾಂಗೀಯ ಸಶಸ್ತ್ರ ಪಡೆಗಳ ಜೊತೆಗಿನ ನಂಟಿನ ತನಿಖೆ ಇನ್ನೂ ಪ್ರಗತಿಯಲ್ಲಿದೆ. ಈ ವಿಶ್ಲೇಷಣೆ ಪೂರ್ಣಗೊಂಡ ತಕ್ಷಣ ಯುಎಪಿಎ ಕಾಯ್ದೆಯಡಿ ಪೂರಕ ಚಾರ್ಜ್‌ಶೀಟ್ ಸಲ್ಲಿಸಲಾಗುವುದು.

ಮ್ಯಾನ್ಮಾರ್‌ಗೆ ರವಾನಿಸಲಾದ ಬೃಹತ್ ಪ್ರಮಾಣದ ಡ್ರೋನ್‌ಗಳು ಹಾಗೂ ವಶಪಡಿಸಿಕೊಂಡ ಡಿಜಿಟಲ್ ಸಾಧನಗಳ ತನಿಖೆ ಇನ್ನೂ ನಡೆಯುತ್ತಿದೆ. ಭಾರತದ ಸಾರ್ವಭೌಮತ್ವ ಮತ್ತು ಭದ್ರತೆಗೆ ಧಕ್ಕೆ ತಂದಿರುವ ನಂಟು ಸಂಪೂರ್ಣ ಸಾಬೀತಾದ ತಕ್ಷಣ ಬಿಎನ್‌ಎಸ್ಎಸ್ ಸೆಕ್ಷನ್ 193(9)ರ ಅಡಿಯಲ್ಲಿ ಪೂರಕ ಚಾರ್ಜ್‌ಶೀಟ್ ಸಲ್ಲಿಸಲಾಗುವುದು ಎಂದು ಎನ್​ಐಎ ಕೋರ್ಟ್‌ಗೆ ತಿಳಿಸಿದೆ.

ಬಾಡಿಗೆ ಸೈನಿಕರ ಅಕ್ರಮ ಚಟುವಟಿಕೆ:

ಅಮೆರಿಕದ ‘ಸನ್ಸ್ ಆಫ್ ಲಿಬರ್ಟಿ ಇಂಟರ್​ನ್ಯಾಷನಲ್’ ಮುಖ್ಯಸ್ಥ ವ್ಯಾನ್‌ಡೈಕ್ ಹಾಗೂ ಆತನ ಉಕ್ರೇನಿಯನ್ ಸಹಚರರು ಭಾರತದ ರಕ್ಷಿತ ಪ್ರದೇಶವಾದ ಮಿಜೋರಾಂ ಮೂಲಕ ಮ್ಯಾನ್ಮಾರ್ ಪ್ರವೇಶಿಸಿ, ಅಲ್ಲಿನ ಸಶಸ್ತ್ರ ಗುಂಪುಗಳಿಗೆ ತರಬೇತಿ ನೀಡುತ್ತಿದ್ದರು. ಭಾರತದ ಭದ್ರತೆ ಮತ್ತು ಸಾರ್ವಭೌಮತ್ವಕ್ಕೆ ಧಕ್ಕೆ ತರುವಂತಹ ಯಾವುದೇ ಚಟುವಟಿಕೆಯನ್ನು ಸರ್ಕಾರ ಹಗುರವಾಗಿ ಪರಿಗಣಿಸಿಲ್ಲ ಎಂದು ಮೂಲಗಳು ಉಲ್ಲೇಖಿಸಿವೆ. ಪ್ರಸ್ತುತ ದೆಹಲಿ ನ್ಯಾಯಾಲಯವು ಪ್ರಕರಣದ ಮುಂದಿನ ವಿಚಾರಣೆಯನ್ನು ಅಕ್ಟೋಬರ್ 1ಕ್ಕೆ ನಿಗದಿಪಡಿಸಿದ್ದು, ಆರೋಪಿಗಳು ನ್ಯಾಯಾಂಗ ಬಂಧನದಲ್ಲೇ ಮುಂದುವರಿಯಲಿದ್ದಾರೆ.

ಇದನ್ನೂ ಓದಿ: ದೆಹಲಿ ಜೈಲಿನಲ್ಲಿ ಅಮೆರಿಕನ್ ಸ್ಟೈಲ್ ಡಯಟ್ ಕೇಳಿ ಕೋರ್ಟ್ ಮೆಟ್ಟಿಲೇರಿದ ವಿದೇಶಿ ಕೈದಿ!

ಪ್ರಕರಣದ ಹಿನ್ನೆಲೆಯೇನು?:

ಮಾರ್ಚ್ 13ರಂದು ಕೊಲ್ಕತ್ತಾ, ಲಕ್ನೋ ಮತ್ತು ದೆಹಲಿ ವಿಮಾನನಿಲ್ದಾಣಗಳಲ್ಲಿ ಅಮೆರಿಕದ ವ್ಯಾನ್‌ಡೈಕ್ ಹಾಗೂ 6 ಮಂದಿ ಉಕ್ರೇನಿಯನ್ನರನ್ನು (ಪೆಟ್ರೋ ಹುರ್ಬಾ, ತಾರಾಸ್ ಸ್ಲಿವಿಯಾಕ್ ಸೇರಿದಂತೆ) ಬಂಧಿಸಲಾಗಿತ್ತು. ಇವರು ಭಾರತ ಹಾಗೂ ಮ್ಯಾನ್ಮಾರ್‌ನ ಜನಾಂಗೀಯ ಸಶಸ್ತ್ರ ಪಡೆಗಳಿಗೆ ಬಾಡಿಗೆ ಸೈನಿಕರಾಗಿ ತರಬೇತಿ ಹಾಗೂ ಡ್ರೋನ್ ಪೂರೈಕೆ ಮಾಡುತ್ತಿದ್ದರೆಂಬ ಆರೋಪದ ಮೇಲೆ ಆರಂಭದಲ್ಲಿ ಯುಎಪಿಎ ಸೆಕ್ಷನ್ 18ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಪ್ರಸ್ತುತ ಇವರು ನ್ಯಾಯಾಂಗ ಬಂಧನದಲ್ಲಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಸುಷ್ಮಾ ಚಕ್ರೆ
ಸುಷ್ಮಾ ಚಕ್ರೆ

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More
ಬಿಗ್ ಬಾಸ್ ಕನ್ನಡ: ಯಶಸ್ ಜೊತೆ ಮದುವೆ ಮಾತುಕಥೆ ಮಾಡಿದ ಸೌಂದರ್ಯಾ ಶೆಟ್ಟಿ
ಬಿಗ್ ಬಾಸ್ ಕನ್ನಡ: ಯಶಸ್ ಜೊತೆ ಮದುವೆ ಮಾತುಕಥೆ ಮಾಡಿದ ಸೌಂದರ್ಯಾ ಶೆಟ್ಟಿ
‘ಸತ್ಯ ಇನ್ ಲವ್’, ‘ಜೋಗಯ್ಯ’ ವಿಗ್ ನನಗೆ ಇಷ್ಟ ಆಗಿರಲಿಲ್ಲ: ಶಿವರಾಜ್​ಕುಮಾರ್
‘ಸತ್ಯ ಇನ್ ಲವ್’, ‘ಜೋಗಯ್ಯ’ ವಿಗ್ ನನಗೆ ಇಷ್ಟ ಆಗಿರಲಿಲ್ಲ: ಶಿವರಾಜ್​ಕುಮಾರ್
ಬೆಂಗಳೂರಿನಲ್ಲಿ ಗುಂಡಿ ಮುಕ್ತ ರಸ್ತೆಗೆ ಕೃಷ್ಣಭೈರೇಗೌಡ ಪಣ
ಬೆಂಗಳೂರಿನಲ್ಲಿ ಗುಂಡಿ ಮುಕ್ತ ರಸ್ತೆಗೆ ಕೃಷ್ಣಭೈರೇಗೌಡ ಪಣ
ದೊಮ್ಮಸಂದ್ರ ಫ್ಲೈಓವರ್ ಕಾಮಗಾರಿ ವಿಳಂಬಕ್ಕೆ ಕೃಷ್ಣಬೈರೇಗೌಡ ಅಸಮಾಧಾನ
ದೊಮ್ಮಸಂದ್ರ ಫ್ಲೈಓವರ್ ಕಾಮಗಾರಿ ವಿಳಂಬಕ್ಕೆ ಕೃಷ್ಣಬೈರೇಗೌಡ ಅಸಮಾಧಾನ
ಮಂಗಳೂರು MRPL ಸ್ಪೋಟ: 2 ಕಿ.ಮೀ ದೂರದಲ್ಲಿರುವ ಚರ್ಚ್​​​ಗೆ ಹಾನಿ
ಮಂಗಳೂರು MRPL ಸ್ಪೋಟ: 2 ಕಿ.ಮೀ ದೂರದಲ್ಲಿರುವ ಚರ್ಚ್​​​ಗೆ ಹಾನಿ
ಬೆಳಗಾವಿ ಪಾಲಿಕೆ ಸಭೆಯಲ್ಲಿ BJP-ಕಾಂಗ್ರೆಸಿಗರ ನಡುವೆ 'ವಂದೇ ಮಾತರಂ' ಗದ್ದಲ
ಬೆಳಗಾವಿ ಪಾಲಿಕೆ ಸಭೆಯಲ್ಲಿ BJP-ಕಾಂಗ್ರೆಸಿಗರ ನಡುವೆ 'ವಂದೇ ಮಾತರಂ' ಗದ್ದಲ
4 ಮಂದಿ ರಕ್ಷಣೆ, ಆಸ್ಪತ್ರೆಗೆ ದಾಖಲು; 150 ಆಂಬುಲೆನ್ಸ್ ಸಿದ್ಧ
4 ಮಂದಿ ರಕ್ಷಣೆ, ಆಸ್ಪತ್ರೆಗೆ ದಾಖಲು; 150 ಆಂಬುಲೆನ್ಸ್ ಸಿದ್ಧ
ಬೀದರ್ ಕೋಟೆಗೆ 'ಕರ್ನಾಟಕ ಪ್ರವಾಸೋದ್ಯಮ ಪ್ರಶಸ್ತಿ'
ಬೀದರ್ ಕೋಟೆಗೆ 'ಕರ್ನಾಟಕ ಪ್ರವಾಸೋದ್ಯಮ ಪ್ರಶಸ್ತಿ'
ಕೇಂದ್ರದ 10 ಅಧಿಕಾರಿಗಳ‌ ತಂಡದಿಂದ ಕರ್ನಾಟಕದಲ್ಲಿ ಬರ ಅಧ್ಯಯನ: ಎಲ್ಲೆಲ್ಲಿ
ಕೇಂದ್ರದ 10 ಅಧಿಕಾರಿಗಳ‌ ತಂಡದಿಂದ ಕರ್ನಾಟಕದಲ್ಲಿ ಬರ ಅಧ್ಯಯನ: ಎಲ್ಲೆಲ್ಲಿ
ಬೆಂಗಳೂರು: 4 ಗ್ಯಾಸ್ ಸಿಲಿಂಡರ್ ಸ್ಫೋಟ, ತಪ್ಪಿದ ಭಾರೀ ಅನಾಹುತ
ಬೆಂಗಳೂರು: 4 ಗ್ಯಾಸ್ ಸಿಲಿಂಡರ್ ಸ್ಫೋಟ, ತಪ್ಪಿದ ಭಾರೀ ಅನಾಹುತ