AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೆಹಲಿ ಜೈಲಿನಲ್ಲಿ ಅಮೆರಿಕನ್ ಸ್ಟೈಲ್ ಡಯಟ್ ಕೇಳಿ ಕೋರ್ಟ್ ಮೆಟ್ಟಿಲೇರಿದ ವಿದೇಶಿ ಕೈದಿ!

ಭಾರತದ ಜೈಲಿನಲ್ಲಿ ನೀಡುವ ಮಸಾಲೆಯುಕ್ತ ಹಾಗೂ ಎಣ್ಣೆ ಪದಾರ್ಥಗಳ ಊಟ ತಿನ್ನಲಾಗದೆ 14 ಕೆಜಿ ತೂಕ ಕಳೆದುಕೊಂಡಿರುವ ಅಮೆರಿಕ ಪ್ರಜೆ ಮ್ಯಾಥ್ಯೂ ಆರನ್, ತನಗೆ ಜೈಲಿನಲ್ಲಿ ಅಮೆರಿಕನ್ ಶೈಲಿಯ ಡಯಟ್ ಹಾಗೂ ಸ್ವತಃ ಅಡುಗೆ ಮಾಡಲು ಇಂಡಕ್ಷನ್ ಸ್ಟವ್ ನೀಡುವಂತೆ ದೆಹಲಿ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಭಯೋತ್ಪಾದನಾ ಸಂಚಿನ ಆರೋಪದ ಮೇಲೆ ಈತನನ್ನು ಎನ್‌ಐಎ ಬಂಧಿಸಿತ್ತು.

ದೆಹಲಿ ಜೈಲಿನಲ್ಲಿ ಅಮೆರಿಕನ್ ಸ್ಟೈಲ್ ಡಯಟ್ ಕೇಳಿ ಕೋರ್ಟ್ ಮೆಟ್ಟಿಲೇರಿದ ವಿದೇಶಿ ಕೈದಿ!
Inmate
ಭಾವನಾ ಹೆಗಡೆ
|

Updated on: Jul 11, 2026 | 8:58 AM

Share

ಮುಖ್ಯಾಂಶಗಳು

  • ಭಾರತದ ಜೈಲು ಊಟ ತಿನ್ನಲಾಗದೆ ಅಮೆರಿಕದ ಕೈದಿ 14 ಕೆಜಿ ತೂಕ ಕಳೆದುಕೊಂಡಿದ್ದಾನೆ.
  • ಸ್ವತಃ ಅಡುಗೆ ಮಾಡಲು ಇಂಡಕ್ಷನ್ ಸ್ಟವ್ ಮತ್ತು ವೆಸ್ಟರ್ನ್ ಆಹಾರಕ್ಕೆ ಅನುಮತಿ ಕೋರಿದ್ದಾನೆ.
  • ಗಡಿ ದಾಟಿ ಉಗ್ರರಿಗೆ ಶಸ್ತ್ರಾಸ್ತ್ರ ಪೂರೈಸಿದ ಆರೋಪದಡಿ ಈತನನ್ನು ಎನ್‌ಐಎ ಬಂಧಿಸಿತ್ತು.

ನವದೆಹಲಿ, ಜುಲೈ 11: ಭಾರತದ ಜೈಲಿನಲ್ಲಿ ನೀಡಲಾಗುವ ಮಸಾಲೆಯುಕ್ತ, ಎಣ್ಣೆ ಮತ್ತು ಕರಿದ ಪದಾರ್ಥಗಳ ಆಹಾರವನ್ನು ತಿನ್ನಲು ಸಾಧ್ಯವಾಗುತ್ತಿಲ್ಲ ಎಂದು ಆರೋಪಿಸಿ, ತನಗೆ “ಅಮೆರಿಕನ್ ಶೈಲಿಯ ಆಹಾರ” ನೀಡಬೇಕು ಹಾಗೂ ಸ್ವತಃ ಅಡುಗೆ ಮಾಡಿಕೊಳ್ಳಲು ಅನುಮತಿ ನೀಡಬೇಕೆಂದು ಕೋರಿ ಅಮೆರಿಕದ ಪ್ರಜೆಯೊಬ್ಬರು ದೆಹಲಿ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.  ಮ್ಯಾಥ್ಯೂ ಆರನ್ ವ್ಯಾನ್‌ಡೈಕ್ ಎಂಬ ಹೆಸರಿನ ಈ ಕೈದಿ, ಜೈಲಿನ ಆಹಾರ ಪದ್ಧತಿಗೆ ಹೊಂದಿಕೊಳ್ಳಲಾಗದೆ ಮೇ 6 ರಿಂದ ಉಪವಾಸ ಮಾಡುತ್ತಿದ್ದಾರೆ ಎಂದು ಅವರ ವಕೀಲರು ತಿಳಿಸಿದ್ದಾರೆ. ಎನ್‌ಐಎ (NIA) ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಪ್ರಶಾಂತ್ ಶರ್ಮಾ ಅವರು ಈ ಅರ್ಜಿಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಲು ಜೈಲು ಅಧೀಕ್ಷಕರಿಗೆ ಒಂದು ವಾರದ ಕಾಲಾವಕಾಶ ನೀಡಿದ್ದು, ಜುಲೈ 21 ಕ್ಕೆ ಮುಂದಿನ ವಿಚಾರಣೆ ನಿಗದಿಪಡಿಸಿದ್ದಾರೆ.

ಸೋಯಾ ಹಾಲಿನಲ್ಲೇ 50 ದಿನ ಕಳೆದ ಕೈದಿ!

ಆರೋಪಿಯ ಪರ ವಕೀಲರಾದ ರೋಹಿತ್ ಗೌರ್ ಮತ್ತು ರೋಹಿತ್ ದಂಡ್ರಿಯಾಲ್ ಅವರು ಮಾನವೀಯತೆಯ ಆಧಾರದ ಮೇಲೆ ಈ ಅರ್ಜಿಯನ್ನು ಸಲ್ಲಿಸಿದ್ದಾರೆ. ಕಳೆದ 50 ದಿನಗಳಿಂದ ಮ್ಯಾಥ್ಯೂ ಕೇವಲ ಸೋಯಾ ಹಾಲಿನಂತಹ ದ್ರವ ಆಹಾರವನ್ನು ಸೇವಿಸಿ ಬದುಕುತ್ತಿದ್ದು, ಪರಿಣಾಮವಾಗಿ ಸುಮಾರು 14 ಕೆಜಿ ತೂಕ ಕಳೆದುಕೊಂಡಿದ್ದಾರೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. ಜೈಲಿನಲ್ಲಿ ಇಂಡಕ್ಷನ್ ಕುಕ್ಕರ್ ಮತ್ತು ಕೆಲವು ಮೂಲಭೂತ ಪಾತ್ರೆಗಳನ್ನು ಬಳಸಿ ತಾನೇ ಅಡುಗೆ ಮಾಡಿಕೊಳ್ಳಲು ಹಾಗೂ ಬೇಳೆಕಾಳುಗಳು, ಚಿಕನ್, ರೆಡ್ ಮೀಟ್, ಪಾಸ್ತಾ, ಆಲಿವ್ ಆಯಿಲ್ ಮತ್ತು ಬಾಟಲಿ ನೀರನ್ನು ಇಟ್ಟುಕೊಳ್ಳಲು ಅನುಮತಿ ಕೋರಿದ್ದಾರೆ. ಈ ಎಲ್ಲಾ ಆಹಾರದ ವೆಚ್ಚವನ್ನು ಅವರ ಕುಟುಂಬವೇ ಭರಿಸಲು ಸಿದ್ಧವಿದೆ ಎಂದು ವಕೀಲರು ತಿಳಿಸಿದ್ದಾರೆ.

ಪೌಷ್ಟಿಕಾಂಶದ ಕೊರತೆಯಿಂದಾಗಿ ಮ್ಯಾಥ್ಯೂ ಅವರ ದೃಷ್ಟಿ ದೋಷ ಕೂಡ ಉಲ್ಬಣಗೊಂಡಿದ್ದು, ಜುಲೈ 3 ರಂದು ಕೋರ್ಟ್‌ಗೆ ಹಾಜರಾದಾಗ ಅವರು ಸರಿಯಾಗಿ ನಿಲ್ಲಲು ಸಾಧ್ಯವಾಗದಷ್ಟು ಅಶಕ್ತರಾಗಿದ್ದ ಎನ್ನಲಾಗಿದೆ. ಆಹಾರದ ಜೊತೆಗೆ ಸೊಳ್ಳೆ ಪರದೆ ಮತ್ತು ಲಿಕ್ವಿಡ್ ರಿಪೆಲೆಂಟ್ ಒದಗಿಸುವಂತೆಯೂ ಅವರು ಕೋರಿದ್ದಾರೆ.

ಯಾರೂ ಈ ಮ್ಯಾಥ್ಯೂ?

ಮ್ಯಾನ್ಮಾರ್ ಗಡಿಯ ಮೂಲಕ ಮಿಜೋರಾಂ ಮೂಲಕ ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿದ ಆರೋಪದ ಮೇಲೆ ಮಾರ್ಚ್ 13 ರಂದು ಎನ್‌ಐಎ ಅಧಿಕಾರಿಗಳು ಮ್ಯಾಥ್ಯೂ ಮತ್ತು ಆರು ಉಕ್ರೇನ್ ಪ್ರಜೆಗಳನ್ನು ಬಂಧಿಸಿದ್ದರು. ಭಾರತ ಮತ್ತು ಮ್ಯಾನ್ಮಾರ್‌ನ ಉಗ್ರಗಾಮಿ ಗುಂಪುಗಳಿಗೆ ತರಬೇತಿ ನೀಡುವುದು ಮತ್ತು ಶಸ್ತ್ರಾಸ್ತ್ರಗಳನ್ನು ಪೂರೈಸುವ ಗಡಿಯಾಚೆಗಿನ ಭಯೋತ್ಪಾದನಾ ಪಿತೂರಿಯ ಭಾಗವಾಗಿ ಈ ತಂಡ ಕಾರ್ಯನಿರ್ವಹಿಸುತ್ತಿತ್ತು ಎಂದು ಎನ್‌ಐಎ ಗಂಭೀರ ಆರೋಪ ಹೊರಿಸಿದೆ.

ರಾಷ್ಟ್ರದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಭಾವನಾ ಹೆಗಡೆ
ಭಾವನಾ ಹೆಗಡೆ

ಭಾವನಾ ಹೆಗಡೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನವರು. ಬಿಎಸ್ಸಿ ಪದವಿ ಮುಗಿಸಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಡಿಪ್ಲೊಮಾ ಮಾಡಿದ್ದಾರೆ ಪತ್ರಿಕೋದ್ಯಮ ಇವರು ಇಷ್ಟ ಪಟ್ಟು ಆಯ್ದುಕೊಂಡ ಕ್ಷೇತ್ರ. ಟಿವಿ9 ಡಿಜಿಟಲ್​ನಲ್ಲಿ ವೃತ್ತಿ ಜೀವನ ಆರಂಭಿಸಿದ್ದಾರೆ. ರಾಜ್ಯ, ರಾಷ್ಟ್ರಕ್ಕೆ ಸಂಬಂಧಿಸಿದ ಕ್ಷಣಕ್ಷಣದ ಮಾಹಿತಿಗಳನ್ನು ಓದುಗರಿಗೆ ಒದಗಿಸುವ ಆಶಯ ಹೊಂದಿದ್ದಾರೆ.

Read More
ಕೆಪಿಎಸ್​ಸಿ ಹಗರಣ:ಶಿವಶಂಕರಪ್ಪ ಸಾಹುಕಾರ್, ಗೀತಾ ಇಡಿ ಕಸ್ಟಡಿಗೆ
ಕೆಪಿಎಸ್​ಸಿ ಹಗರಣ:ಶಿವಶಂಕರಪ್ಪ ಸಾಹುಕಾರ್, ಗೀತಾ ಇಡಿ ಕಸ್ಟಡಿಗೆ
ಹೆಸರಿಗಷ್ಟೇ ಸರ್ಕಾರಿ ಆಸ್ಪತ್ರೆ, ಒಳಗಡೆ ಬರೀ ಅವ್ಯವಸ್ಥೆ
ಹೆಸರಿಗಷ್ಟೇ ಸರ್ಕಾರಿ ಆಸ್ಪತ್ರೆ, ಒಳಗಡೆ ಬರೀ ಅವ್ಯವಸ್ಥೆ
ಸೌಜನ್ಯ ಕೇಸ್ ತನಿಖಾಧಿಕಾರಿ ಖಡಕ್ ಆಫೀಸರ್ ಲೋಕೇಶ್ ಜಗಲ್ಸಾರ್ ಹಿನ್ನೆಲೆ
ಸೌಜನ್ಯ ಕೇಸ್ ತನಿಖಾಧಿಕಾರಿ ಖಡಕ್ ಆಫೀಸರ್ ಲೋಕೇಶ್ ಜಗಲ್ಸಾರ್ ಹಿನ್ನೆಲೆ
ಮುಸ್ಲಿಂ ಮತದಾರರ ಹೆಸರು ಡಿಲೀಟ್ ಆರೋಪ
ಮುಸ್ಲಿಂ ಮತದಾರರ ಹೆಸರು ಡಿಲೀಟ್ ಆರೋಪ
ಡೀಸೆಲ್​ ಟ್ಯಾಂಕರ್​​ನಲ್ಲಿ ತಾಂತ್ರಿಕ ದೋಷ, ಬಸ್​ ಸಂಚಾರ ಸ್ಥಗಿತ
ಡೀಸೆಲ್​ ಟ್ಯಾಂಕರ್​​ನಲ್ಲಿ ತಾಂತ್ರಿಕ ದೋಷ, ಬಸ್​ ಸಂಚಾರ ಸ್ಥಗಿತ
ಮಂತ್ರಿಗಳ ಮೇಲೆ ರಹಸ್ಯ ಕ್ಯಾಮೆರಾ ಕಣ್ಣು: ಸಚಿವರನ್ನ ಎಚ್ಚರಿಸಿದ ಡಿಕೆಶಿ
ಮಂತ್ರಿಗಳ ಮೇಲೆ ರಹಸ್ಯ ಕ್ಯಾಮೆರಾ ಕಣ್ಣು: ಸಚಿವರನ್ನ ಎಚ್ಚರಿಸಿದ ಡಿಕೆಶಿ
'ಸಿಎಂ ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್ ಮಾಡಿದ್ದರು'
'ಸಿಎಂ ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್ ಮಾಡಿದ್ದರು'
ಕಬ್ಬು ಬೆಳೆಗಾರರ ಮೀಟಿಂಗ್‌ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೀಗಂದ್ರು
ಕಬ್ಬು ಬೆಳೆಗಾರರ ಮೀಟಿಂಗ್‌ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೀಗಂದ್ರು
ಸಾರಿಗೆ ನೌಕರರಿಂದ ಮತ್ತೆ ಪ್ರತಿಭಟನೆ: ವೇತನ ಪರಿಷ್ಕರಣೆಗೆ ಆಗ್ರಹ
ಸಾರಿಗೆ ನೌಕರರಿಂದ ಮತ್ತೆ ಪ್ರತಿಭಟನೆ: ವೇತನ ಪರಿಷ್ಕರಣೆಗೆ ಆಗ್ರಹ
ಮೈಸೂರು: ಚಾಮುಂಡೇಶ್ವರಿ ದರ್ಶನ ಪಡೆದ ತೆಲುಗು ನಟ ಮಂಚು ಮನೋಜ್
ಮೈಸೂರು: ಚಾಮುಂಡೇಶ್ವರಿ ದರ್ಶನ ಪಡೆದ ತೆಲುಗು ನಟ ಮಂಚು ಮನೋಜ್