RRR Movie: ದಾಖಲೆಯ ಮೊತ್ತಕ್ಕೆ RRR ಚಿತ್ರದ ಆಡಿಯೋ ಹಕ್ಕು ಮಾರಾಟ

TV9 Digital Desk

| Edited By: Zahir Yusuf

Updated on:Jul 26, 2021 | 11:00 PM

rrr movie audio rights: ದೇಶಭಕ್ತಿಯ ಕಥಾಹಂದರವನ್ನು ಹೊಂದಿರುವ ಈ ಚಿತ್ರದಲ್ಲಿ ಜೂ.ಎನ್​ಟಿಆರ್ ಕೋಮರಂ ಭೀಮ್ ಪಾತ್ರದಲ್ಲಿ ಕಾಣಿಸಿಕೊಂಡರೆ, ರಾಮ್​ ಚರಣ್ ತೇಜ ಅಲ್ಲುರಿ ಸೀತಾರಾಮ ರಾಜು ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಹಾಗೆಯೇ ಈ ಬಿಗ್ ಬಜೆಟ್ ಚಿತ್ರಕ್ಕೆ ಡಿ.ವಿ ದಾನಯ್ಯ ಸುಮಾರು 400 ಕೋಟಿ ಬಂಡವಾಳ ಹೂಡಿದ್ದಾರೆ.

RRR Movie: ದಾಖಲೆಯ ಮೊತ್ತಕ್ಕೆ RRR ಚಿತ್ರದ ಆಡಿಯೋ ಹಕ್ಕು ಮಾರಾಟ
RRR movie

Follow us on

ಸೂಪರ್ ಡೂಪರ್ ಹಿಟ್ ಬಾಹುಬಲಿ ಚಿತ್ರ ನಿರ್ದೇಶಕ ರಾಜಮೌಳಿ ಅವರ ಮುಂದಿನ ದೃಶ್ಯಕಾವ್ಯ RRR ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದೆ. 2 ವರ್ಷಗಳ ಹಿಂದೆ ಸೆಟ್ಟೇರಿದ್ದ ಈ ಚಿತ್ರದ ಅಪ್​ಡೇಟ್​ಗಳು ಒಂದೊಂದಾಗಿ ಹೊರ ಬೀಳುತ್ತಿದ್ದು, ಈ ಬಾರಿ ಗಾಜ ಬಜಾನದೊಂದಿಗೆ ಚಿತ್ರತಂಡ ಸದ್ದು ಮಾಡಿದೆ. ಹೌದು, ಟಾಲಿವುಡ್​ನ ಇಬ್ಬರು ಯಂಗ್ ಅ್ಯಂಡ್ ಎನರ್ಜಿಟಿಕ್ ನಟರನ್ನು ಜೊತೆಗೂಡಿಸಿ ರಾಜಮೌಳಿ ಆರ್​ಆರ್​ಆರ್ ಎಂಬ ಸಿನಿಮಾವನ್ನು ಕೈಗೆತ್ತಿಕೊಂಡಾಗಿನಿಂದಲೂ ಒಂದಲ್ಲ ಒಂದು ರೀತಿಯಲ್ಲಿ ಚಿತ್ರತಂಡ ಸೌಂಡ್ ಮಾಡುತ್ತಾ ಬಂದಿತ್ತು. ಇದೀಗ ಬಹುತೇಕ ಚಿತ್ರೀಕರಣ ಮುಗಿಸಿ ಸಣ್ಣ ಪುಟ್ಟ ಕೆಲಸಗಳನ್ನು ಬಾಕಿ ಇರಿಸಿಕೊಂಡಿರುವ ಚಿತ್ರತಂಡ ಚಿತ್ರದ ಪ್ರಿ ಬಿಸಿನೆಸ್​ಗೆ ಕೈ ಹಾಕಿದೆ. ಅದರ ಮೊದಲ ಹೆಜ್ಜೆಯೇ ಚಿತ್ರದ ಆಡಿಯೋ ಹಕ್ಕು​ ಮಾರಾಟ.

ಈ ಹಿಂದೆ ದಾಖಲೆಯ ಮೊತ್ತಕ್ಕೆ KGF-2 ಆಡಿಯೋ ಹಕ್ಕು ಖರೀದಿಸಿದ ಟಿ ಸಿರೀಸ್ ಹಾಗೂ ಲಹರಿ ಸಂಸ್ಥೆ ಜೊತೆಗೂಡಿ ರಣ ರೌದ್ರ ರುಧಿರ (RRR) ಚಿತ್ರದ ಆಡಿಯೋ ರೈಟ್ಸ್​ ಅನ್ನು ತನ್ನದಾಗಿಸಿಕೊಂಡಿದೆ. ಪಂಚ ಭಾಷೆಗಳಲ್ಲಿ ತೆರೆ ಕಾಣಲಿರುವ ಈ ಚಿತ್ರದ ಹಾಡಿನ ಹಕ್ಕಿಗಾಗಿ ಟಿ ಸಿರೀಸ್-ಲಹರಿ ಸಂಸ್ಥೆಯು 25 ಕೋಟಿ ನೀಡಿದೆ ಎಂದು ಹೇಳಲಾಗಿದೆ. ಅಂದರೆ ಎಂಎಂ ಕೀರವಾಣಿ ಬ್ಯಾಂಡ್ ಬಜಾಯಿಸಿರುವ ಈ ಚಿತ್ರದ ಕನ್ನಡ, ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂ ಹಾಡುಗಳಿಗಾಗಿ ಈ ಎರಡೂ ಸಂಸ್ಥೆಗಳು ಕಾಲು ಕೋಟಿ ಹಣ ವ್ಯಯಿಸಿದೆ. ಈ ಹಿಂದೆ ಕೆಜಿಎಫ್-2 ಚಿತ್ರದ ದಕ್ಷಿಣ ಭಾಷೆಗಳ ಆಡಿಯೋ ರೈಟ್ಸ್​ಗಾಗಿ ಲಹರಿ ಸಂಸ್ಥೆ 7.2 ಕೋಟಿ ನೀಡಿ ದಾಖಲೆ ಬರೆದಿತ್ತು. ಇದೀಗ ರಣ ರೌದ್ರ ರುಧಿರ ಮೂಲಕ ತಮ್ಮದೇ ದಾಖಲೆಯನ್ನು ಲಹರಿ ಆಡಿಯೋ ಸಂಸ್ಥೆ ಮುರಿದಿದೆ.

ಇನ್ನು RRR ಸಿನಿಮಾ ಈಗಾಗಲೇ 400 ಕೋಟಿಗೂ ಅಧಿಕ ಮೊತ್ತದ ಪ್ರಿ-ರಿಲೀಸ್ ವ್ಯವಹಾರ ನಡೆಸಿದೆ ಎಂದು ಹೇಳಲಾಗುತ್ತಿದೆ. ಇದು ಭಾರತೀಯ ಚಿತ್ರರಂಗದ ಹೊಸ ದಾಖಲೆಯಾಗಿದೆ. ಈ ಹಿಂದೆ ಬಾಹುಬಲಿ 2 ಚಿತ್ರವು ಬಿಡುಗಡೆಗೂ ಮುನ್ನ ಸುಮಾರು 300 ಕೋಟಿ ವ್ಯವಹಾರ ಕುದುರಿಸಿತ್ತು. ಇದೀಗ ರಾಜಮೌಳಿ ಅವರ ಚಿತ್ರವೇ ಈ ಹಿಂದಿನ ದಾಖಲೆಯನ್ನು ಬದಿಗೊತ್ತಿದೆ ಎಂಬ ಮಾತುಗಳು ಟಾಲಿವುಡ್​ನಲ್ಲಿದೆ. ಹಾಗೆಯೇ ಈ ಸಿನಿಮಾ ಭಾರತೀಯ ಚಿತ್ರರಂಗದ ಅತೀ ದೊಡ್ಡ ಪ್ಯಾನ್ ಸಿನಿಮಾ ಎಂಬ ದಾಖಲೆಯನ್ನು ಬರೆಯಲಿದೆ. ಏಕೆಂದರೆ ಆರ್​ಆರ್​ಆರ್​ ಚಿತ್ರವನ್ನು ಇಂಗ್ಲಿಷ್ ಸೇರಿದಂತೆ 10 ಭಾಷೆಯಲ್ಲಿ ಏಕಕಾಲಕ್ಕೆ ರಿಲೀಸ್ ಮಾಡಲು ಭರ್ಜರಿ ಪ್ಲ್ಯಾನ್ ಮಾಡಿಲಾಗಿದ್ದು, ಅದರಂತೆ ಈ ಬಾರಿ ವಿಶ್ವ ಸಿನಿ ಬಾಕ್ಸಾಫೀಸ್ ಮೇಲೆ ಕಣ್ಣಿಟ್ಟಿದ್ದಾರೆ ನಿರ್ದೇಶಕ ರಾಜಮೌಳಿ.

ದೇಶಭಕ್ತಿಯ ಕಥಾಹಂದರವನ್ನು ಹೊಂದಿರುವ ಈ ಚಿತ್ರದಲ್ಲಿ ಜೂ.ಎನ್​ಟಿಆರ್ ಕೋಮರಂ ಭೀಮ್ ಪಾತ್ರದಲ್ಲಿ ಕಾಣಿಸಿಕೊಂಡರೆ, ರಾಮ್​ ಚರಣ್ ತೇಜ ಅಲ್ಲುರಿ ಸೀತಾರಾಮ ರಾಜು ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಹಾಗೆಯೇ ಈ ಬಿಗ್ ಬಜೆಟ್ ಚಿತ್ರಕ್ಕೆ ಡಿ.ವಿ ದಾನಯ್ಯ ಸುಮಾರು 400 ಕೋಟಿ ಬಂಡವಾಳ ಹೂಡಿದ್ದಾರೆ. ಚಿತ್ರದಲ್ಲಿ ರಾಮ್ ಚರಣ್, ಜೂ.ಎನ್​ಟಿಆರ್ ಹೊರತಾಗಿ ಬಾಲಿವುಡ್ ತಾರೆಯಾರಾದ ಅಜಯ್ ದೇವಗನ್, ಆಲಿಯಾ ಭಟ್, ಸೌತ್ ಸುಂದರಿ ಶ್ರಿಯಾ ಶರಣ್, ಹಾಲಿವುಡ್ ಕಲಾವಿದರಾದ ಐರಿಶ್ ಬ್ಯೂಟಿ ಅಲಿಸನ್ ಡೂಡಿ , ರೇ ಸ್ಟೀವನ್ಸನ್​ ಸೇರಿದಂತೆ ಹಲವರು ಬಣ್ಣ ಹಚ್ಚಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಅಕ್ಟೋಬರ್ 13 ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ರಣ ರೌದ್ರ ರುಧಿರನ (RRR Movie) ಆರ್ಭಟ ಶುರುವಾಗಲಿದೆ.

ಇದನ್ನೂ ಓದಿ: Viral Story: ಟ್ರಾಫಿಕ್​ ಪೊಲೀಸ್​ ಮನೆಯಲ್ಲಿ ಚಿನ್ನದ ಟಾಯ್ಲೆಟ್

ಇದನ್ನೂ ಓದಿ: ಈವರೆಗೆ ಟೀಮ್ ಇಂಡಿಯಾ ಪರ ಎಷ್ಟು ಮಂದಿ ಆಡಿದ್ದಾರೆ ಗೊತ್ತಾ?

(Lahari acquires RRR Movie audio for one of the biggest ever price)

ತಾಜಾ ಸುದ್ದಿ

Related Stories

Most Read Stories

Click on your DTH Provider to Add TV9 Kannada