AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Karan Johar: ‘ಕೆಜಿಎಫ್​ 2’ ಟ್ರೇಲರ್​ ರಿಲೀಸ್​ಗೆ ಬರ್ತಿದ್ದಾರೆ ಸ್ಟಾರ್​ ನಿರೂಪಕ ಕರಣ್​ ಜೋಹರ್​; ಏನು ಇವರ ವಿಶೇಷ?

Karan Johar | KGF Chapter 2 Trailer: ನಿರೂಪಣೆಯಲ್ಲಿ ಕರಣ್​ ಜೋಹರ್​ ಅವರ ಅನುಭವ ದೊಡ್ಡದು. ಈಗ ಅವರು ‘ಕೆಜಿಎಫ್​: ಚಾಪ್ಟರ್​ 2’ ಟ್ರೇಲರ್​ ಬಿಡುಗಡೆ ಸಮಾರಂಭದ ನಿರೂಪಣೆ ಮಾಡಲು ಒಪ್ಪಿಕೊಂಡಿದ್ದಾರೆ.

Karan Johar: ‘ಕೆಜಿಎಫ್​ 2’ ಟ್ರೇಲರ್​ ರಿಲೀಸ್​ಗೆ ಬರ್ತಿದ್ದಾರೆ ಸ್ಟಾರ್​ ನಿರೂಪಕ ಕರಣ್​ ಜೋಹರ್​; ಏನು ಇವರ ವಿಶೇಷ?
ಕರಣ್​ ಜೋಹರ್​, ಯಶ್​
TV9 Web
| Edited By: |

Updated on:Mar 25, 2022 | 12:30 PM

Share

ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಸ್ಥಾನ ಪಡೆದಿರುವ ‘ಕೆಜಿಎಫ್​: ಚಾಪ್ಟರ್​ 2’ (KGF Chapter 2) ಚಿತ್ರದ ಬಿಡುಗಡೆಗೆ ದಿನಗಣನೆ ಆರಂಭ ಆಗಿದೆ. ಚಿತ್ರದ ಪ್ರಚಾರಕ್ಕಾಗಿ ಹತ್ತು-ಹಲವು ಪ್ಲ್ಯಾನ್​ಗಳನ್ನು ಮಾಡಿಕೊಳ್ಳಲಾಗಿದೆ. ಆ ಪೈಕಿ ಟ್ರೇಲರ್​ (KGF Chapter 2 Trailer) ರಿಲೀಸ್​ ಕಾರ್ಯಕ್ರಮದ ಬಗ್ಗೆ ದೊಡ್ಡ ಮಟ್ಟದ ಕಾತರ ಮೂಡಿದೆ. ಯಾಕೆಂದರೆ ಇದು ಪ್ಯಾನ್​ ಇಂಡಿಯಾ ಸಿನಿಮಾ. ಎಲ್ಲ ರಾಜ್ಯಗಳಲ್ಲೂ ‘ಕೆಜಿಎಫ್​ ಚಾಪ್ಟರ್​ 2’ ಚಿತ್ರ ಧೂಳೆಬ್ಬಿಸುವುದು ಖಚಿತ. ಅಭಿಮಾನಿಗಳ ನಿರೀಕ್ಷೆಗೆ ತಕ್ಕಂತೆಯೇ ‘ಕೆಜಿಎಫ್​ 2’ ಟ್ರೇಲರ್​ ಬಿಡುಗಡೆ ಮಾಡಲು ‘ಹೊಂಬಾಳೆ ಫಿಲ್ಮ್ಸ್’ ನಿರ್ಧರಿಸಿದೆ. ಟ್ರೇಲರ್​ ಬಿಡುಗಡೆ ಕಾರ್ಯಕ್ರಮದ ನಿರೂಪಣೆಗೆ ಕರಣ್​ ಜೋಹರ್​ (Karan Johar) ಅವರನ್ನು ಆಹ್ವಾನಿಸಲಾಗುತ್ತಿದೆ. ಈ ಸುದ್ದಿಯನ್ನು ಅಧಿಕೃತವಾಗಿ ಘೋಷಿಸಲಾಗಿದೆ. ಹಲವು ವರ್ಷಗಳಿಂದ ಅನೇಕ ಪ್ರತಿಷ್ಠಿತ ಕಾರ್ಯಕ್ರಮವನ್ನು ನಿರೂಪಣೆ ಮಾಡಿದ ಅನುಭವ ಕರಣ್​ ​ಜೋಹರ್​ ಅವರಿಗೆ ಇದೆ. ಈಗ ಅವರು ಕನ್ನಡ ಸಿನಿಮಾದ ಸಲುವಾಗಿ ಬೆಂಗಳೂರಿಗೆ ಬಂದು ನಿರೂಪಣೆ ಮಾಡಲಿದ್ದಾರೆ. ಯಶ್​ ಅಭಿಮಾನಿಗಳು ‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾದ ಟ್ರೇಲರ್​ ಬಿಡುಗಡೆ ಕಾರ್ಯಕ್ರಮವನ್ನು ಕಣ್ತುಂಬಿಕೊಳ್ಳಲು ಕಾದಿದ್ದಾರೆ. ಈ ಇವೆಂಟ್​ನಲ್ಲಿ ನಟ ಶಿವರಾಜ್​ಕುಮಾರ್ ಅವರು ಮುಖ್ಯ ಅತಿಥಿ ಆಗಿರಲಿದ್ದಾರೆ ಎಂಬುದು ಕೂಡ ವಿಶೇಷ.

ಬೆಂಗಳೂರಿನಲ್ಲಿ ಮಾ.27ರಂದು ‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾದ ಟ್ರೇಲರ್​ ಲಾಂಚ್​ ಕಾರ್ಯಕ್ರಮ ನಡೆಯಲಿದೆ. ಇದರಲ್ಲಿ ನಿರ್ದೇಶಕ ಪ್ರಶಾಂತ್​ ನೀಲ್​, ನಿರ್ಮಾಪಕ ವಿಜಯ್​ ಕಿರಗಂದೂರು, ಕಲಾವಿದರಾದ ಯಶ್​, ಸಂಜಯ್​ ದತ್​, ರವೀನಾ ಟಂಡನ್​, ಶ್ರೀನಿಧಿ ಶೆಟ್ಟಿ ಮುಂತಾದವರು ಭಾಗಿ ಆಗಲಿದ್ದಾರೆ. ಬೇರೆ ಬೇರೆ ರಾಜ್ಯಗಳಿಂದ ಪತ್ರಕರ್ತರನ್ನು ಆಹ್ವಾನಿಸಲಾಗಿದೆ. ಅದ್ದೂರಿಯಾಗಿ ನಡೆಯುವ ಈ ಕಾರ್ಯಕ್ರಮವನ್ನು ಕರಣ್​ ಜೋಹರ್​ ನಡೆಸಿಕೊಡಲಿದ್ದಾರೆ.

ನಿರೂಪಣೆಯಲ್ಲಿ ಕರಣ್​ ಜೋಹರ್​ ಅವರು ತಮ್ಮದೇ ಛಾಪು ಮೂಡಿಸಿದ್ದಾರೆ. ‘ಕಾಫಿ ವಿಥ್​ ಕರಣ್​’, ‘ಕಾಲಿಂಗ್​ ಕರಣ್​’, ‘ವಾಟ್​ ದ ಲವ್​’ ಮುಂತಾದ ಕಾರ್ಯಕ್ರಮಗಳನ್ನು ನಿರೂಪಣೆ ಮಾಡಿ ಅವರು ಸೈ ಎನಿಸಿಕೊಂಡಿದ್ದಾರೆ. ಬಾಲಿವುಡ್​ನ ಅನೇಕ ಅವಾರ್ಡ್​ ಫಂಕ್ಷನ್​ಗಳನ್ನು ಅವರು ನಿರೂಪಿಸಿದ್ದಾರೆ. ‘ಹಿಂದಿ ಬಿಗ್​ ಬಾಸ್​ ಒಟಿಟಿ’ ಶೋ ಕೂಡ ಕರಣ್​ ಜೋಹರ್​ ಅವರ ನಿರೂಪಣೆಯಲ್ಲೇ ಮೂಡಿಬಂದಿತ್ತು. ತುಂಬ ಲವಲವಿಕೆಯಿಂದ ಅವರು ಮಾಡುವ ನಿರೂಪಣೆ ಜನರಿಗೆ ಸಖತ್​ ಇಷ್ಟ ಆಗುತ್ತದೆ. ಆದರೆ ಅದೆಲ್ಲವೂ ಹಿಂದಿ ಸಿನಿಮಾಗಳಿಗೆ ಸಂಬಂಧಿಸಿದ ಕಾರ್ಯಕ್ರಮಗಳು. ಈ ಬಾರಿ ಅವರು ಕನ್ನಡ ಸಿನಿಮಾದ ಈ ಕಾರ್ಯಕ್ರಮವನ್ನು ಹೇಗೆ ನಿರೂಪಿಸಬಹುದು ಎಂಬ ಕೌತುಕ ಮನೆ ಮಾಡಿದೆ.

ಪ್ರಶಾಂತ್​ ನೀಲ್​ ನಿರ್ದೇಶನದ ಈ ಸಿನಿಮಾ ಕನ್ನಡ ಮಾತ್ರವಲ್ಲದೇ ಹಿಂದಿ, ತಮಿಳು, ಮಲಯಾಳಂ ಹಾಗೂ ತೆಲುಗು ಭಾಷೆಗಳಿಗೂ ಡಬ್​ ಆಗಿ ಏ.14ರಂದು ಅದ್ದೂರಿಯಾಗಿ ಬಿಡುಗಡೆ ಆಗಲಿದೆ. ಈಗಾಗಲೇ ರಿಲೀಸ್​ ಆಗಿರುವ ‘ತೂಫಾನ್​..’ ಹಾಡು ಧೂಳೆಬ್ಬಿಸುತ್ತಿದೆ.

ಇದನ್ನೂ ಓದಿ:

KGF 2 Trailer: ‘ಕೆಜಿಎಫ್​: ಚಾಪ್ಟರ್​ 2’ ಟ್ರೇಲರ್​ ಬಗ್ಗೆ ಮತ್ತೊಂದು ಬಿಗ್​ ನ್ಯೂಸ್​; ಈ ಬಾರಿ ಎಂಟ್ರಿ ಕೊಡ್ತಿರೋದು ಶಿವಣ್ಣ

ಮುಂಬೈನ ಆರಂತಸ್ತಿನ ಮಾಲ್​ ಮೇಲೆ ರಾರಾಜಿಸಿದ ಯಶ್​ ಪೋಸ್ಟರ್​​; ಇದು ‘ಕೆಜಿಎಫ್​ 2’ ಕ್ರೇಜ್​

Published On - 12:10 pm, Fri, 25 March 22

Follow Us
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ