KGF 2 Trailer: ‘ಕೆಜಿಎಫ್​: ಚಾಪ್ಟರ್​ 2’ ಟ್ರೇಲರ್​ ಬಗ್ಗೆ ಮತ್ತೊಂದು ಬಿಗ್​ ನ್ಯೂಸ್​; ಈ ಬಾರಿ ಎಂಟ್ರಿ ಕೊಡ್ತಿರೋದು ಶಿವಣ್ಣ

KGF 2 Trailer: ‘ಕೆಜಿಎಫ್​: ಚಾಪ್ಟರ್​ 2’ ಟ್ರೇಲರ್​ ಬಗ್ಗೆ ಮತ್ತೊಂದು ಬಿಗ್​ ನ್ಯೂಸ್​; ಈ ಬಾರಿ ಎಂಟ್ರಿ ಕೊಡ್ತಿರೋದು ಶಿವಣ್ಣ
ಶಿವರಾಜ್​ಕುಮಾರ್​, ಯಶ್

KGF Chapter 2 Trailer | Shivarajkumar: ಯಶ್​ ನಟನೆಯ ‘ಕೆಜಿಎಫ್​: ಚಾಪ್ಟರ್​ 2’ ಚಿತ್ರದ ಟ್ರೇಲರ್​ ಬಿಡುಗಡೆ ಕಾರ್ಯಕ್ರಮವನ್ನು ಬೆಂಗಳೂರಿನಲ್ಲೇ ಹಮ್ಮಿಕೊಳ್ಳಲಾಗುತ್ತಿದೆ. ಅದಕ್ಕಾಗಿ ಸಕಲ ತಯಾರಿ ನಡೆದಿದೆ.

TV9kannada Web Team

| Edited By: Madan Kumar

Mar 25, 2022 | 11:44 AM

ಇಡೀ ಭಾರತೀಯ ಚಿತ್ರರಂಗದಲ್ಲಿ ಮತ್ತೆ ಹಳೇ ಚಾರ್ಮ್​ ಮರುಕಳಿಸಿದೆ. ಕೊರೊನಾ ಹಾವಳಿ ಕಡಿಮೆ ಆಗಿರುವುದರಿಂದ ಜನರು ಚಿತ್ರಮಂದಿರಕ್ಕೆ ಬಂದು ಎಂದಿನಂತೆ ಎಂಜಾಯ್​ ಮಾಡುತ್ತಿದ್ದಾರೆ. ಕೊವಿಡ್​ ಕಾರಣದಿಂದ ಬಿಡುಗಡೆ ದಿನಾಂಕವನ್ನು ಮುಂದೂಡಿಕೊಂಡಿದ್ದ ಅನೇಕ ಬಿಗ್​ ಬಜೆಟ್​ ಸಿನಿಮಾಗಳು ಒಂದೊಂದಾಗಿಯೇ ರಿಲೀಸ್​ ಆಗುತ್ತಿವೆ. ಇತ್ತೀಚೆಗೆ ‘ಜೇಮ್ಸ್​’ ಸಿನಿಮಾ ಬಂದು ಧೂಳೆಬ್ಬಿಸಿತು. ಈಗ ‘ಆರ್​ಆರ್​ಆರ್​’ ಚಿತ್ರ ಕೂಡ ಸಖತ್​ ಸೌಂಡು ಮಾಡಿದೆ. ಇನ್ನೇನಿದ್ದರೂ ‘ಕೆಜಿಎಫ್​: ಚಾಪ್ಟರ್​ 2’ (KGF Chapter 2) ಸಿನಿಮಾ ಅಬ್ಬರಿಸುವುದು ಮಾತ್ರ ಬಾಕಿ. ಈ ಸಿನಿಮಾ ಕೂಡ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ರಿಲೀಸ್​ ಆಗಲಿದೆ. ಏ.14ರಂದು ವಿಶ್ವಾದ್ಯಂತ ‘ಕೆಜಿಎಫ್​ 2’ ಬಿಡುಗಡೆ ಆಗಲಿದ್ದು, ಅದಕ್ಕಾಗಿ ಯಶ್​ ಅಭಿಮಾನಿಗಳು ಕಾದು ಕುಳಿತಿದ್ದಾರೆ. ಈಗ ಟ್ರೇಲರ್​ ಬಗ್ಗೆ ಕಾತರ ಹೆಚ್ಚಿದೆ. ಹೌದು, ‘ಕೆಜಿಎಫ್​: ಚಾಪ್ಟರ್​ 2’ ಟ್ರೇಲರ್​ (KGF Chapter 2 Trailer) ಮಾ.27ರಂದು ಬಿಡುಗಡೆ ಆಗಲಿದೆ. ಅದನ್ನು ರಿಲೀಸ್​ ಮಾಡುವುದು ಯಾರು ಎಂಬ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ. ‘ಹ್ಯಾಟ್ರಿಕ್​ ಹೀರೋ’ ಶಿವರಾಜ್​ಕುಮಾರ್​ (Shivarajkumar) ಅವರು ‘ಕೆಜಿಎಫ್​ 2’ ಟ್ರೇಲರ್​ ಬಿಡುಗಡೆ ಮಾಡಲಿದ್ದಾರೆ. ಈ ಬಗ್ಗೆ ಚಿತ್ರತಂಡದಿಂದ ಅಧಿಕೃತವಾಗಿ ಮಾಹಿತಿ ಹೊರಬಿದ್ದಿದೆ.

‘ಕೆಜಿಎಫ್​: ಚಾಪ್ಟರ್​ 2’ ಬಿಡುಗಡೆಗೆ ಇನ್ನು ಕೆಲವೇ ದಿನಗಳ ಬಾಕಿ ಉಳಿದುಕೊಂಡಿದೆ. ಈಗಾಗಲೇ ಪ್ರಚಾರ ಕಾರ್ಯಕ್ಕೆ ಚಿತ್ರತಂಡ ಚಾಲನೆ ನೀಡಿದೆ. ಕೆಲವೇ ದಿನಗಳ ಹಿಂದೆ ಈ ಸಿನಿಮಾದಿಂದ ‘ತೂಫಾನ್​..’ ಲಿರಿಕಲ್​ ವಿಡಿಯೋ ಬಿಡುಗಡೆ ಮಾಡಲಾಗಿತ್ತು. ಅದಕ್ಕೆ ಜನರಿಂದ ಭರ್ಜರಿ ಸ್ಪಂದನೆ ಸಿಕ್ಕಿದೆ. ಅದರ ಬೆನ್ನಲ್ಲೇ ಅದ್ದೂರಿಯಾಗಿ ಟ್ರೇಲರ್​ ರಿಲೀಸ್​ ಮಾಡಲು ಚಿತ್ರತಂಡ ಪ್ಲ್ಯಾನ್​ ಮಾಡಿಕೊಂಡಿದೆ. ‘ಕೆಜಿಎಫ್​: ಚಾಪ್ಟರ್​ 2’ ಒಂದು ಪ್ಯಾನ್​ ಇಂಡಿಯಾ ಸಿನಿಮಾ. ಕನ್ನಡದಲ್ಲಿ ನಿರ್ಮಾಣವಾದ ಈ ಚಿತ್ರ ತೆಲುಗು, ಹಿಂದಿ, ಮಲಯಾಳಂ ಮತ್ತು ತಮಿಳು ಭಾಷೆಗಳಿಗೆ ಡಬ್​ ಆಗಿ ಬಿಡುಗಡೆ ಆಗುತ್ತಿದೆ. ಈ ಚಿತ್ರದ ಟ್ರೇಲರ್​ ಬಿಡುಗಡೆ ಕಾರ್ಯಕ್ರಮವನ್ನು ಬೆಂಗಳೂರಿನಲ್ಲೇ ಹಮ್ಮಿಕೊಳ್ಳಲಾಗುತ್ತಿದೆ. ವಿವಿಧ ರಾಜ್ಯಗಳಿಂದ ಮಾಧ್ಯಮದವರನ್ನು ಆಹ್ವಾನಿಸಲಾಗಿದೆ. ಎಲ್ಲರ ಸಮ್ಮುಖದಲ್ಲಿ ಶಿವರಾಜ್​ಕುಮಾರ್​ ಅವರು ಈ ಸಿನಿಮಾದ ಟ್ರೇಲರ್​ ಅನಾವರಣ ಮಾಡಲಿದ್ದಾರೆ. ಈ ವಿಚಾರವನ್ನು ‘ಹೊಂಬಾಳೆ ಫಿಲ್ಮ್ಸ್​’ ಸಂಸ್ಥೆಯು ತನ್ನ ಸೋಶಿಯಲ್​ ಮೀಡಿಯಾ ಖಾತೆಗಳ ಮೂಲಕ ತಿಳಿಸಿದೆ. ಈ ಸುದ್ದಿ ಕೇಳಿ ಶಿವಣ್ಣನ ಫ್ಯಾನ್ಸ್​ ಖುಷಿ ಆಗಿದ್ದಾರೆ.

ಪ್ರಶಾಂತ್​ ನೀಲ್​ ನಿರ್ದೇಶನದ ‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾದಲ್ಲಿ ಬಾಲಿವುಡ್​ ಕಲಾವಿದರಾದ ಸಂಜಯ್​ ದತ್​, ರವೀನಾ ಟಂಡನ್​ ನಟಿಸಿರುವುದರಿಂದ ಹಿಂದಿ ಪ್ರೇಕ್ಷಕರ ವಲಯದಲ್ಲೂ ಈ ಚಿತ್ರದ ಬಗ್ಗೆ ದೊಡ್ಡ ಮಟ್ಟದ ಹೈಪ್​ ಸೃಷ್ಟಿ ಆಗಿದೆ. ಅಧೀರ ಎಂಬ ಪಾತ್ರಕ್ಕೆ ಸಂಜಯ್​ ದತ್​ ಬಣ್ಣ ಹಚ್ಚಿದ್ದರೆ, ರಮಿಕಾ ಸೇನ್​ ಎಂಬ ಪವರ್​ಫುಲ್​ ಮಹಿಳೆಯ ಪಾತ್ರದಲ್ಲಿ ರವೀನಾ ಟಂಡನ್​ ಅಭಿನಯಿಸಿದ್ದಾರೆ. ‘ಕೆಜಿಎಫ್​: ಚಾಪ್ಟರ್​ 1’ ಸಿನಿಮಾ ಭಾರಿ ಯಶಸ್ಸು ಕಂಡಿದ್ದರಿಂದ ಸಹಜವಾಗಿಯೇ ಈಗ ಅದರ ಸೀಕ್ವೆಲ್​ ಮೇಲೆ ನಿರೀಕ್ಷೆ ಮೂಡಿದೆ.

‘ತೂಫಾನ್​..’ ಲಿರಿಕಲ್ ಹಾಡು ಸೂಪರ್​ ಹಿಟ್​:

‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾಗೆ ರವಿ ಬಸ್ರೂರು ಸಂಗೀತ ನೀಡಿದ್ದಾರೆ. ಅವರ ಬತ್ತಳಿಕೆಯಿಂದ ಬಂದ ‘ತೂಫಾನ್​..’ ಹಾಡು ಸೂಪರ್​ ಹಿಟ್​ ಆಗಿದೆ. ಕನ್ನಡ, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಈ ಗೀತೆಯನ್ನು ಬಿಡುಗಡೆ ಮಾಡಲಾಗಿದೆ. ಮಾ.21ರಂದು ರಿಲೀಸ್​ ಆದ ಈ ಸಾಂಗ್​ 4 ದಿನ ಕಳೆಯುವುದರೊಳಗೆ ಕನ್ನಡದಲ್ಲಿ 6.8 ಮಿಲಿಯನ್​, ತಮಿಳಿನಲ್ಲಿ 2.4 ಮಿಲಿಯನ್​, ಹಿಂದಿಯಲ್ಲಿ 12 ಮಿಲಿಯನ್​ ವೀಕ್ಷಣೆ ಕಾಣುವ ಮೂಲಕ ಧೂಳೆಬ್ಬಿಸಿದೆ.

ಇದನ್ನೂ ಓದಿ:

10 ಗಂಟೆಗಳಲ್ಲಿ 93 ಲಕ್ಷ ವೀಕ್ಷಣೆ ಕಂಡ ‘ತೂಫಾನ್​’ ಸಾಂಗ್​; ಟ್ರೆಂಡಿಂಗ್​ನಲ್ಲಿ 1ನೇ ಸ್ಥಾನ

ಮುಂಬೈನ ಆರಂತಸ್ತಿನ ಮಾಲ್​ ಮೇಲೆ ರಾರಾಜಿಸಿದ ಯಶ್​ ಪೋಸ್ಟರ್​​; ಇದು ‘ಕೆಜಿಎಫ್​ 2’ ಕ್ರೇಜ್​

Follow us on

Related Stories

Most Read Stories

Click on your DTH Provider to Add TV9 Kannada