Kichcha Sudeep: ‘ವಿಕ್ರಾಂತ್​ ರೋಣ’ ನೃತ್ಯ ನಿರ್ದೇಶಕನಿ​ಗೆ ಥಾರ್​ ಗಿಫ್ಟ್ ನೀಡಿದ ‘ಕಿಚ್ಚ’ ಸುದೀಪ್​

Kichcha Sudeep: ‘ವಿಕ್ರಾಂತ್​ ರೋಣ’ ನೃತ್ಯ ನಿರ್ದೇಶಕನಿ​ಗೆ ಥಾರ್​ ಗಿಫ್ಟ್ ನೀಡಿದ ‘ಕಿಚ್ಚ’ ಸುದೀಪ್​
ಸುದೀಪ್

ಜಾನಿ ಮಾಸ್ಟರ್​ಗೆ ಕನ್ನಡ ಚಿತ್ರರಂಗದ ಜತೆ ಒಳ್ಳೆಯ ನಂಟಿದೆ. ಪುನೀತ್​ ನಟನೆಯ ‘ರಾಜಕುಮಾರ’, ‘ನಟಸಾರ್ವಭೌಮ’, ‘ಯುವರತ್ನ’ ಸಿನಿಮಾದ ಕೆಲ ಹಾಡುಗಳಿಗೆ ಜಾನಿ ಅವರು ಕೊರಿಯೋಗ್ರಫಿ ಮಾಡಿದ್ದಾರೆ. ಟಾಲಿವುಡ್​ನ ಅನೇಕ ಹಿಟ್​ ಹಾಡುಗಳಿಗೆ ಇವರದ್ದೇ ನೃತ್ಯ ನಿರ್ದೇಶನವಿದೆ. ‘

TV9kannada Web Team

| Edited By: Rajesh Duggumane

Mar 25, 2022 | 5:34 PM

‘ವಿಕ್ರಾಂತ್​ ರೋಣ’ ನೃತ್ಯ ನಿರ್ದೇಶಕನಿ​ಗೆ ಥಾರ್​ ಗಿಫ್ಟ್ ನೀಡಿದ ‘ಕಿಚ್ಚ’ ಸುದೀಪ್​

ಕಿಚ್ಚ ಸುದೀಪ್ (Kichcha Sudeep)​ ಅನೇಕರ ಜತೆ ಉತ್ತಮ ಗೆಳೆತನ ಹೊಂದಿದ್ದಾರೆ. ಅವರು ಒಮ್ಮೆ ಫ್ರೆಂಡ್​ಶಿಪ್​ ಮಾಡಿದರೆ ಅವರ ಜತೆ ತುಂಬಾನೇ ಆಪ್ತವಾಗಿ ನಡೆದುಕೊಳ್ಳುತ್ತಾರೆ. ಅವರಿಗೋಸ್ಕರ ಏನೂ ಮಾಡೋಕು ರೆಡಿ ಇರುತ್ತಾರೆ. ಈ ಮೊದಲು ಕೂಡ ಇದು ಸಾಬೀತಾಗಿದೆ. ಈಗ ಇದಕ್ಕೆ ಹೊಸ ಉದಾಹರಣೆ ಸಿಕ್ಕಿದೆ. ‘ವಿಕ್ರಾಂತ್​ ರೋಣ’ ಚಿತ್ರದ (Vikrant Rona Movie) ನೃತ್ಯ ನಿರ್ದೇಶಕ ಜಾನಿ ಮಾಸ್ಟರ್​ಗೆ ಸುದೀಪ್​ ಮಹಿಂದ್ರಾ ಥಾರ್ (Mahindra Thar) ಗಿಫ್ಟ್​ ನೀಡಿದ್ದಾರೆ. ಈ ಫೋಟೋ ಹಂಚಿಕೊಂಡಿರುವ ಜಾನಿ ಅವರು ಕಿಚ್ಚನಿಗೆ ಧನ್ಯವಾದ ಹೇಳಿದ್ದಾರೆ. ಈ ಪೋಸ್ಟ್​ ನೋಡಿದ ಅಭಿಮಾನಿಗಳು ಕಿಚ್ಚ ಅವರನ್ನು ಬಾಯ್ತುಂಬ ಹೊಗಳಿದ್ದಾರೆ.

ಜಾನಿ ಮಾಸ್ಟರ್​ಗೆ ಕನ್ನಡ ಚಿತ್ರರಂಗದ ಜತೆ ಒಳ್ಳೆಯ ನಂಟಿದೆ. ಪುನೀತ್​ ನಟನೆಯ ‘ರಾಜಕುಮಾರ’, ‘ನಟಸಾರ್ವಭೌಮ’, ‘ಯುವರತ್ನ’ ಸಿನಿಮಾದ ಕೆಲ ಹಾಡುಗಳಿಗೆ ಜಾನಿ ಅವರು ಕೊರಿಯೋಗ್ರಫಿ ಮಾಡಿದ್ದಾರೆ. ಟಾಲಿವುಡ್​ನ ಅನೇಕ ಹಿಟ್​ ಹಾಡುಗಳಿಗೆ ಇವರದ್ದೇ ನೃತ್ಯ ನಿರ್ದೇಶನವಿದೆ. ‘ವಿಕ್ರಾಂತ್ ರೋಣ’ ಸಿನಿಮಾದಲ್ಲಿನ ಹಾಡಿಗೆ ಜಾನಿ ಅವರು ಡ್ಯಾನ್ಸ್​ ಕೋರಿಯೋಗ್ರಫಿ ಮಾಡಿದ್ದಾರೆ. ವಿಶೇಷ ಎಂದರೆ, ಸುದೀಪ್​ ಅವರು ಜಾನಿಗೆ ಪ್ರೀತಿಯಿಂದ ಕಾರು ಗಿಫ್ಟ್ ಮಾಡಿದ್ದಾರೆ.

‘ಕಿಚ್ಚ ಸುದೀಪ್ ನಿಮ್ಮ ಉಡುಗೊರೆಗಾಗಿ ಧನ್ಯವಾದಗಳು. ನೀವು ನನ್ನನ್ನು ನೋಡಿಕೊಳ್ಳುವ ರೀತಿ ನಿಜಕ್ಕೂ ಖುಷಿ ನೀಡಿದೆ. ನಿಮ್ಮನ್ನು ಯಾವಾಗಲೂ ಪ್ರೀತಿಸುತ್ತೇನೆ. ನನ್ನ ಜೀವನದಲ್ಲಿ ನೀವು ಇರುವುದಕ್ಕೆ ಖುಷಿ ಇದೆ’ ಎಂದು ಬರೆದುಕೊಂಡಿದ್ದಾರೆ ಜಾನಿ. ಮಹಿಂದ್ರಾ ಥಾರ್​​ಅನ್ನು ಸುದೀಪ್​ ಗಿಫ್ಟ್​ ಆಗಿ ನೀಡಿದ್ದಾರೆ.

‘ವಿಕ್ರಾಂತ್​ ರೋಣ’ ಸಿನಿಮಾ ಬಗ್ಗೆ ದೊಡ್ಡ ನಿರೀಕ್ಷೆ ಇದೆ. ‘ರಂಗಿತರಂಗ’ ಖ್ಯಾತಿಯ ಅನೂಪ್​ ಭಂಡಾರಿ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಶಾಲಿನಿ ಮಂಜುನಾಥ್​ ಮತ್ತು ಅಲಂಕಾರ್​ ಪಾಂಡಿಯನ್​ ಬಂಡವಾಳ ಹೂಡಿದ್ದಾರೆ. ಮುಖ್ಯಪಾತ್ರದಲ್ಲಿ ಕಿಚ್ಚ ಸುದೀಪ್​, ನೀತಾ ಅಶೋಕ್​, ನಿರೂಪ್​ ಭಂಡಾರಿ, ಜಾಕ್ವೆಲಿನ್​ ಫರ್ನಾಂಡಿಸ್​ ಮುಂತಾದವರು ನಟಿಸಿದ್ದಾರೆ.  ಈ ಮೊದಲಿನ ಪ್ಲ್ಯಾನ್​ ಪ್ರಕಾರವೇ ನಡೆದಿದ್ದರೆ ಫೆ.24ರಂದು ‘ವಿಕ್ರಾಂತ್​ ರೋಣ’ ಚಿತ್ರ ಅದ್ದೂರಿಯಾಗಿ ಬಿಡುಗಡೆ ಆಗಬೇಕಿತ್ತು. ಆದರೆ, ಕೊರೊನಾ ಕಾರಣದಿಂದ ಸಿನಿಮಾ ರಿಲೀಸ್ ಆಗಿಲ್ಲ. ಶೀಘ್ರವೇ ರಿಲೀಸ್ ದಿನಾಂಕ ಘೋಷಣೆ ಮಾಡುವುದಾಗಿ ಚಿತ್ರತಂಡ ಹೇಳಿದೆ. ಬೃಹತ್​ ಸೆಟ್​ಗಳನ್ನು ನಿರ್ಮಿಸಿ ‘ವಿಕ್ರಾಂತ್​ ರೋಣ’ ಚಿತ್ರೀಕರಣ ಮಾಡಲಾಗಿದೆ. ಸುದೀಪ್​ ಕೂಡ ಈ ಸಿನಿಮಾ ಬಗ್ಗೆ ವಿಶೇಷ ಆಸಕ್ತಿ ವಹಿಸುತ್ತಿದ್ದಾರೆ. ಈಗಾಗಲೇ ಪೋಸ್ಟರ್​ಗಳು ಗಮನ ಸೆಳೆದಿವೆ. ಬುರ್ಜ್​ ಖಲೀಫಾ ಕಟ್ಟಡದ ಮೇಲೆ ಟೈಟಲ್​ ಲಾಂಚ್​ ಮಾಡಿದ್ದು ವಿಶೇಷವಾಗಿತ್ತು.

ಇದನ್ನೂ ಓದಿ: ಪುನೀತ್​ ರಾಜ್​ಕುಮಾರ್ ಬಯೋಗ್ರಫಿ ಬಿಡುಗಡೆ ಮಾಡಿ, ಭಾವುಕರಾದ ಕಿಚ್ಚ ಸುದೀಪ್​

ಪುನೀತ್​​ ಬಯೋಗ್ರಫಿ ‘ನೀನೆ ರಾಜಕುಮಾರ’ ರಿಲೀಸ್ ಮಾಡಿದ ಕಿಚ್ಚ ಸುದೀಪ್​ ಹೇಳಿದ್ದೇನು?

Follow us on

Related Stories

Most Read Stories

Click on your DTH Provider to Add TV9 Kannada