ಕರ್ನಾಟಕದಲ್ಲಿ ‘ಕೆಜಿಎಫ್​ 2’ಗೆ ಫೈಟ್​ ನೀಡಲು ‘ಬೀಸ್ಟ್’ ಮಾಡಿದ ಪ್ಲ್ಯಾನ್​ ಏನು? ಇಲ್ಲಿದೆ ವಿವರ

ಕರ್ನಾಟಕದಲ್ಲಿ ‘ಕೆಜಿಎಫ್​ 2’ಗೆ ಫೈಟ್​ ನೀಡಲು ‘ಬೀಸ್ಟ್’ ಮಾಡಿದ ಪ್ಲ್ಯಾನ್​ ಏನು? ಇಲ್ಲಿದೆ ವಿವರ
ಬೀಸ್ಟ್​-ಕೆಜಿಎಫ್​ 2

ಸ್ಟಾರ್​ ನಟರ ಸಿನಿಮಾ ರಿಲೀಸ್ ಆಗುತ್ತಿದೆ ಎಂದರೆ ಅದರ ಎದುರು ಒಂದಷ್ಟು ಚಿತ್ರಗಳು ರಿಲೀಸ್​ಗೆ ಸಿದ್ಧವಾಗುತ್ತದೆ. ಅದೇ ರೀತಿ ‘ಕೆಜಿಎಫ್​ 2’ ಎದುರು ‘ಬೀಸ್ಟ್’ ಸ್ಪರ್ಧೆಗೆ ಇಳಿಯುತ್ತಿದೆ.

TV9kannada Web Team

| Edited By: Madan Kumar

Mar 26, 2022 | 9:09 AM

ಯಶ್ (Yash) ನಟನೆಯ ‘ಕೆಜಿಎಫ್​ 2’ ಹಾಗೂ ದಳಪತಿ ವಿಜಯ್ (Thalapathy Vijay )​ ಅಭಿನಯದ ‘ಬೀಸ್ಟ್​’ ಸಿನಿಮಾ ಒಟ್ಟೊಟ್ಟಿಗೆ ತೆರೆಗೆ ಬರೋಕೆ ರೆಡಿ ಆಗಿವೆ. ‘ಕೆಜಿಎಫ್​ 2’ (Kgf Chapter 2) ಏಪ್ರಿಲ್​ 14ರಂದು ರಿಲೀಸ್ ಆಗುತ್ತಿದೆ. ಅದೇ ರೀತಿ, ‘ಬೀಸ್ಟ್’​ ಸಿನಿಮಾ ಏಪ್ರಿಲ್​ 13ರಂದು ತೆರೆಗೆ ಬರುತ್ತಿದೆ. ಈ ಎರಡೂ ಚಿತ್ರಗಳು ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿರುವುದರಿಂದ ಬಾಕ್ಸ್ ಆಫೀಸ್​ನಲ್ಲಿ ಕ್ಲ್ಯಾಶ್​ ಏರ್ಪಡಲಿದೆ. ಕರ್ನಾಟಕದಲ್ಲಿ ‘ಕೆಜಿಎಫ್​ 2’ ಚಿತ್ರದ ಬಗ್ಗೆ ದೊಡ್ಡ ನಿರೀಕ್ಷೆ ಇದೆ. ಅದೇ ರೀತಿ, ತಮಿಳುನಾಡಿನಲ್ಲಿ ‘ಬೀಸ್ಟ್​’ ಸಿನಿಮಾ ಹವಾ ಜೋರಿದೆ. ಅಂತಿಮವಾಗಿ ಈ ಚಿತ್ರದಲ್ಲಿ ಗೆಲ್ಲೋದು ಯಾರು ಎಂಬುದನ್ನು ಪ್ರೇಕ್ಷಕರು ನಿರ್ಧಾರ ಮಾಡುತ್ತಾರೆ. ಈ ಮಧ್ಯೆ, ‘ಕೆಜಿಎಫ್​ 2’ ವಿರುದ್ಧ ಸ್ಪರ್ಧೆ ಮಾಡಲು ‘ಬೀಸ್ಟ್​’ ತಂಡ ಪ್ಲ್ಯಾನ್ ಒಂದನ್ನು ರೂಪಿಸಿದೆ.

ಸ್ಟಾರ್​ ನಟರ ಸಿನಿಮಾ ರಿಲೀಸ್ ಆಗುತ್ತಿದೆ ಎಂದರೆ ಅದರ ಎದುರು ಒಂದಷ್ಟು ಚಿತ್ರಗಳು ರಿಲೀಸ್​ಗೆ ಸಿದ್ಧವಾಗುತ್ತದೆ. ಅದೇ ರೀತಿ ‘ಕೆಜಿಎಫ್​ 2’ ಎದುರು ‘ಬೀಸ್ಟ್’ ಸ್ಪರ್ಧೆಗೆ ಇಳಿಯುತ್ತಿದೆ. ಇತ್ತೀಚೆಗೆ ಸಿನಿಮಾ ರಿಲೀಸ್​ ದಿನಾಂಕವನ್ನು ಅಧಿಕೃತಮಾಡಿದ್ದ ‘ಬೀಸ್ಟ್​’ ತಂಡ, ಏಪ್ರಿಲ್​ 13ರಂದು ಚಿತ್ರವನ್ನು ರಿಲೀಸ್ ಮಾಡುತ್ತಿರುವ ಬಗ್ಗೆ ಹೇಳಿಕೊಂಡಿತ್ತು. ‘ಕೆಜಿಎಫ್​ 2’ ತಮಿಳಿಗೂ ಡಬ್​ ಆಗಿ ತೆರೆಕಾಣುತ್ತಿದೆ. ಒಂದೊಮ್ಮೆ ಯಾವುದೇ ದೊಡ್ಡ ಸಿನಿಮಾಗಳು ರಿಲೀಸ್​ ಆಗದೇ ಇದ್ದರೆ ಈ ಚಿತ್ರದ ಕಮಾಯಿ ಹೆಚ್ಚಲಿದೆ. ಇದಕ್ಕೆ ತಡೆ ನೀಡಬೇಕು ಎಂದು ಪರಭಾಷಿಗರು ಪ್ಲ್ಯಾನ್​ ರೂಪಿಸಿದಂತಿದೆ. ಈ ಕಾರಣಕ್ಕೆ ಕಾಲಿವುಡ್​ನಿಂದ ‘ಬೀಸ್ಟ್​’ ಚಿತ್ರವನ್ನು ಸ್ಪರ್ಧೆಗೆ ಇಳಿಸಲಾಗಿದೆ ಎನ್ನುವ ಮಾತು ಕೇಳಿ ಬಂದಿದೆ.

‘ಬೀಸ್ಟ್​’ ತಂಡ ಐದು ಭಾಷೆಗಳಲ್ಲಿ ಡಬ್​ ಆಗಿ ತೆರೆಕಾಣುತ್ತಿದೆ. ಕರ್ನಾಟಕದಲ್ಲಿ ಈ ಸಿನಿಮಾ ಹಂಚಿಕೆ ಹಕ್ಕನ್ನು ಧೀರಜ್​ ಎಂಟರ್​ಪ್ರೈಸಸ್​ ತೆಗೆದುಕೊಂಡಿದೆ. ‘ಗಂಧದ ಗುಡಿ’, ‘ನಟಸಾರ್ವಭೌಮ’, ‘ಕವಲುದಾರಿ’ ಮೊದಲಾದ ಸಿನಿಮಾಗಳನ್ನು ಹಂಚಿಕೆ ಮಾಡಿದ ಅನುಭವ ಈ ಸಂಸ್ಥೆಗೆ ಇದೆ. ಈಗ ‘ಬೀಸ್ಟ್​​’ ಚಿತ್ರದ ಕರ್ನಾಟಕದ ಹಂಚಿಕೆಯನ್ನು ಇವರು ಪಡೆದುಕೊಂಡಿದ್ದಾರೆ. ಈ ಚಿತ್ರವನ್ನು ಕರ್ನಾಟಕದಲ್ಲಿ ಐದೂ ಭಾಷೆಗಳಲ್ಲಿ ರಿಲೀಸ್ ಮಾಡುವುದಾಗಿ ಘೋಷಣೆ ಮಾಡಿದೆ.

ಕರ್ನಾಟಕದಲ್ಲಿ, ಅದರಲ್ಲೂ ಬೆಂಗಳೂರಲ್ಲಿ ಎಲ್ಲಾ ಭಾಷೆಯ ಜನರೂ ಇದ್ದಾರೆ. ಈ ಕಾರಣಕ್ಕೆ ‘ಬೀಸ್ಟ್​’ ಚಿತ್ರವನ್ನು ಐದೂ ಭಾಷೆಗಳಲ್ಲಿ ಬೆಂಗಳೂರು ಹಾಗೂ ಕರ್ನಾಟಕದಾದ್ಯಂತ ದೊಡ್ಡ ಮಟ್ಟದಲ್ಲಿ ರಿಲೀಸ್ ಮಾಡಲು ಧೀರಜ್​ ಎಂಟರ್​ಪ್ರೈಸಸ್ ನಿರ್ಧರಿಸಿದೆ. ಈ ಮೂಲಕ ‘ಕೆಜಿಎಫ್​ 2’ಗೆ ಫೈಟ್​ ನೀಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

ಈ ಮೊದಲು ಶಾರುಖ್​ ಖಾನ್​ ನಟನೆಯ ‘ಜೀರೋ’ ಚಿತ್ರ ‘ಕೆಜಿಎಫ್​’ ಎದುರು ಬಿಡುಗಡೆ ಆಗಿತ್ತು. ಯಶ್​ ಸಿನಿಮಾ ಅಬ್ಬರದ ಎದುರು ಶಾರುಖ್​ ಚಿತ್ರ ಮಕಾಡೆ ಮಲಗಿತ್ತು. ಈಗ ‘ಕೆಜಿಎಫ್​ 2’ ಜತೆ ಸ್ಪರ್ಧಿಸೋ ಸಿನಿಮಾಗಳಿಗೂ ಹೀಗೆಯೇ ಆಗಲಿದೆ ಎನ್ನುವ ಮಾತು ಅಭಿಮಾನಿಗಳ ವಲಯದಲ್ಲಿ ಕೇಳಿ ಬಂದಿದೆ.

ಇದನ್ನೂ ಓದಿ: KGF 2 Trailer: ‘ಕೆಜಿಎಫ್​: ಚಾಪ್ಟರ್​ 2’ ಟ್ರೇಲರ್​ ಬಗ್ಗೆ ಮತ್ತೊಂದು ಬಿಗ್​ ನ್ಯೂಸ್​; ಈ ಬಾರಿ ಎಂಟ್ರಿ ಕೊಡ್ತಿರೋದು ಶಿವಣ್ಣ 

Karan Johar: ‘ಕೆಜಿಎಫ್​ 2’ ಟ್ರೇಲರ್​ ರಿಲೀಸ್​ಗೆ ಬರ್ತಿದ್ದಾರೆ ಸ್ಟಾರ್​ ನಿರೂಪಕ ಕರಣ್​ ಜೋಹರ್​; ಏನು ಇವರ ವಿಶೇಷ?

Follow us on

Related Stories

Most Read Stories

Click on your DTH Provider to Add TV9 Kannada