AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Beast: ‘ಕೆಜಿಎಫ್​​ 2’ಗೆ ಒಂದು ದಿನ ಮೊದಲೇ ‘ಬೀಸ್ಟ್’ ಎಂಟ್ರಿ; ಗೆಲ್ಲೋದು ಯಶ್ ಎಂದ ಫ್ಯಾನ್ಸ್

Beast Release Date | KGF 2: ಯಶ್ ನಟನೆಯ ‘ಕೆಜಿಎಫ್ 2’ ದೀರ್ಘಕಾಲದ ಹಿಂದೆಯೇ ಏಪ್ರಿಲ್ 14ರಂದು ತೆರೆಕಾಣುವುದಾಗಿ ಘೋಷಿಸಿತ್ತು. ವಿಜಯ್ ನಟನೆಯ ‘ಬೀಸ್ಟ್’ ಕೂಡ ಅಂದೇ ತೆರೆಕಾಣಲಿದೆ ಎಂದು ಹೇಳಲಾಗಿತ್ತು. ಇದೀಗ ಚಿತ್ರತಂಡ ಕೆಜಿಎಫ್ 2ಗೆ ಒಂದು ದಿನ ಮೊದಲೇ ಚಿತ್ರ ರಿಲೀಸ್ ಮಾಡಲು ನಿರ್ಧರಿಸಿದೆ.

Beast: ‘ಕೆಜಿಎಫ್​​ 2’ಗೆ ಒಂದು ದಿನ ಮೊದಲೇ ‘ಬೀಸ್ಟ್’ ಎಂಟ್ರಿ; ಗೆಲ್ಲೋದು ಯಶ್ ಎಂದ ಫ್ಯಾನ್ಸ್
‘ಕೆಜಿಎಫ್ 2’ ಚಿತ್ರದಲ್ಲಿ ಯಶ್, ‘ಬೀಸ್ಟ್’ ಚಿತ್ರದಲ್ಲಿ ವಿಜಯ್
TV9 Web
| Edited By: |

Updated on:Mar 22, 2022 | 2:07 PM

Share

ದಕ್ಷಿಣ ಭಾರತದಲ್ಲಿ ಈಗ ಸ್ಟಾರ್ ಚಿತ್ರಗಳು ಸಾಲುಸಾಲಾಗಿ ರಿಲೀಸ್ ಆಗುತ್ತಿವೆ. ಮಾರ್ಚ್ 25ರಂದು ರಾಜಮೌಳಿ ನಿರ್ದೇಶನದ ‘ಆರ್​ಆರ್​ಆರ್​’ ರಿಲೀಸ್ ಆಗಲಿದ್ದು, ಯಶ್ ನಟನೆಯ ‘ಕೆಜಿಎಫ್ 2’ (KGF 2) ಏಪ್ರಿಲ್ 14ರಂದು ರಿಲೀಸ್ ಆಗಲಿದೆ. ಈ ನಡುವೆ ವಿಜಯ್ ನಟನೆಯ ‘ಬೀಸ್ಟ್’ (Beast) ಕೂಡ ಏಪ್ರಿಲ್ 14ರಂದೇ ತೆರೆಕಾಣಲಿದೆ ಎಂದು ಈ ಹಿಂದೆ ಸುದ್ದಿಯಾಗಿತ್ತು. ದಕ್ಷಿಣದ ಎರಡು ಚಿತ್ರಗಳು ಒಂದೇ ದಿನ ರಿಲೀಸ್ ಆದರೆ ಬಾಕ್ಸಾಫೀಸ್ ಕ್ಲ್ಯಾಶ್ ಏರ್ಪಡಲಿದೆಯೇ ಎಂಬ ಅನುಮಾನ ಹುಟ್ಟುಹಾಕಿತ್ತು. ಇದೀಗ ‘ಬೀಸ್ಟ್’ ಚಿತ್ರತಂಡ ರಿಲೀಸ್ ಡೇಟ್​ಅನ್ನು (Beast Release Date) ಅಧಿಕೃತವಾಗಿ ಘೋಷಿಸಿದೆ. ಅಚ್ಚರಿಯೆಂಬಂತೆ ‘ಕೆಜಿಎಫ್​ 2’ಗೆ ಒಂದು ದಿನ ಮೊದಲೇ ‘ಬೀಸ್ಟ್’ ತೆರೆಕಾಣಲಿದೆ. ಅರ್ಥಾತ್ ಏಪ್ರಿಲ್ 13ರಂದು ವಿಜಯ್ ನಟನೆಯ ಚಿತ್ರ ಎಲ್ಲೆಡೆ ರಿಲೀಸ್ ಆಗಲಿದೆ. ಚಿತ್ರದ ರಿಲೀಸ್ ಕುರಿತು ನಿರ್ಮಾಣ ಸಂಸ್ಥೆ ‘ಸನ್ ಪಿಕ್ಚರ್ಸ್’ ಟ್ವೀಟ್ ಮಾಡಿದ್ದು, ಹೊಸ ಪೋಸ್ಟರ್ ಮೂಲಕ ರಿಲೀಸ್ ದಿನಾಂಕವನ್ನು ಘೋಷಿಸಿದೆ. ಹೊಸ ಪೋಸ್ಟರ್​ನಲ್ಲಿ ವಿಜಯ್ ಗನ್ ಹಿಡಿದು ಮಾಸ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.

‘ಬೀಸ್ಟ್’ ಚಿತ್ರವನ್ನು ನೆಲ್ಸನ್​ ದಿಲೀಪ್​ಕುಮಾರ್ ನಿರ್ದೇಶಿಸಿದ್ದು, ಪೂಜಾ ಹೆಗ್ಡೆ ನಾಯಕಿಯಾಗಿ ನಟಿಸಿದ್ದಾರೆ. ಅನಿರುದ್ಧ್ ಸಂಗೀತ ನೀಡುತ್ತಿರುವ ಈ ಚಿತ್ರದ ಎರಡು ಹಾಡುಗಳು ಈಗಾಗಲೇ ರಿಲೀಸ್ ಆಗಿದ್ದು, ಹಿಟ್ ಆಗಿವೆ.

‘ಸನ್ ಪಿಕ್ಚರ್ಸ್’ ರಿಲೀಸ್ ಕುರಿತು ಹಂಚಿಕೊಂಡ ಟ್ವೀಟ್ ಇಲ್ಲಿದೆ:

ಗೆಲ್ಲೋದು ಯಶ್ ಎಂದ ಫ್ಯಾನ್ಸ್:

‘ಬೀಸ್ಟ್’ ರಿಲೀಸ್ ದಿನಾಂಕ ಘೋಷಣೆಯಾದಂತೆಯೇ ಸಾಮಾಜಿಕ ಜಾಲತಾಣಗಳಲ್ಲಿ ‘ಕೆಜಿಎಫ್ 2’ ಹಾಗೂ ‘ಬೀಸ್ಟ್’ ಬಾಕ್ಸಾಫೀಸ್ ಪೈಪೋಟಿಯ ಬಗ್ಗೆ ದೊಡ್ಡ ಮಟ್ಟದಲ್ಲಿ ಚರ್ಚೆ ಪ್ರಾರಂಭವಾಗಿದೆ. ‘ಕೆಜಿಎಫ್’ ಚಿತ್ರ ಈಗಾಗಲೇ ತೆರೆಕಂಡು ವಿಶ್ವಾದ್ಯಂತ ಮೆಚ್ಚುಗೆ ಪಡೆದಿದೆ. ಅದರ ಎರಡನೇ ಭಾಗಕ್ಕೆ ಫ್ಯಾನ್ಸ್ ದೀರ್ಘಕಾಲದಿಂದ ಕಾದಿದ್ದಾರೆ. ಉತ್ತರದಲ್ಲೂ ಕೆಜಿಎಫ್ ಹವಾ ಜೋರಾಗಿದೆ. ಈ ಹಿನ್ನೆಲೆಯಲ್ಲಿ ‘ಬೀಸ್ಟ್’ ಎದುರಿನ ಬಾಕ್ಸಾಫೀಸ್ ಸ್ಪರ್ಧೆಯಲ್ಲಿ ‘ಕೆಜಿಎಫ್ 2’ ಜಯಭೇರಿ ಬಾರಿಸಲಿದೆ ಎಂದು ಫ್ಯಾನ್ಸ್ ಅನಿಸಿಕೆ ಹಂಚಿಕೊಳ್ಳುತ್ತಿದ್ದಾರೆ.

‘ಕೆಜಿಎಫ್ 2’ ಚಿತ್ರವನ್ನು ಪ್ರಶಾಂತ್ ನೀಲ್ ನಿರ್ದೇಶನ ಮಾಡಿದ್ದು, ಹೊಂಬಾಳೆ ಫಿಲ್ಮ್ಸ್ ಬ್ಯಾನರ್​ನಲ್ಲಿ ವಿಜಯ್ ಕಿರಗಂದೂರು ನಿರ್ಮಾಣ ಮಾಡಿದ್ದಾರೆ. ಯಶ್, ಶ್ರೀನಿಧಿ ಶೆಟ್ಟಿ, ಸಂಜಯ್ ದತ್, ರವೀನಾ ಟಂಡನ್, ಪ್ರಕಾಶ್ ರಾಜ್ ಹೀಗೆ ವಿವಿಧ ಭಾಷೆಗಳ ದೊಡ್ಡ ತಾರಾ ಬಳಗವೇ ‘ಕೆಜಿಎಫ್ 2’ನಲ್ಲಿದೆ.

ಸೋಮವಾರ ರಿಲೀಸ್ ಆಗಿದ್ದ ಚಿತ್ರದ ಮೊದಲ ಲಿರಿಕಲ್ ಹಾಡು ‘ತೂಫಾನ್’ ಎಲ್ಲಾ ಭಾಷೆಗಳಲ್ಲೂ ಧೂಳೆಬ್ಬಿಸಿದೆ. ಚಿತ್ರದ ಬಗ್ಗೆ ನಿರೀಕ್ಷೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದೀಗ ‘ಕೆಜಿಎಫ್​ 2’ ರಿಲೀಸ್​ಗೂ ಹಿಂದಿನ ದಿನ ‘ಬೀಸ್ಟ್’ ರಿಲೀಸ್ ಆಗುತ್ತಿದ್ದು, ತಮಿಳುನಾಡಿನಲ್ಲಿ ಬಾಕ್ಸಾಫೀಸ್ ಕ್ಲ್ಯಾಶ್ ಏರ್ಪಡಬಹುದು ಎಂದು ಗಲ್ಲಾಪೆಟ್ಟಿಗೆ ವಿಶ್ಲೇಷಕರು ಅಂದಾಜಿಸಿದ್ದಾರೆ. ಆದರೆ ‘ಕೆಜಿಎಫ್ 2’ ವಿಶ್ವಾದ್ಯಂತ ರಿಲೀಸ್ ಆಗುತ್ತಿರುವುದರಿಂದ ಎಲ್ಲೆಡೆ ಯಶ್ ನಟನೆಯ ಚಿತ್ರವೇ ಹೆಚ್ಚು ಸದ್ದು ಮಾಡಲಿದೆ ಎನ್ನುವುದು ಅಭಿಮಾನಿಗಳ ಅನಿಸಿಕೆ.

ಇದನ್ನೂ ಓದಿ:

10 ಗಂಟೆಗಳಲ್ಲಿ 93 ಲಕ್ಷ ವೀಕ್ಷಣೆ ಕಂಡ ‘ತೂಫಾನ್​’ ಸಾಂಗ್​; ಟ್ರೆಂಡಿಂಗ್​ನಲ್ಲಿ 1ನೇ ಸ್ಥಾನ

‘ತೂಫಾನ್’ ಅವತಾರದಲ್ಲಿ ಬಂದ ಯಶ್​; ‘ಕೆಜಿಎಫ್​ 2’ ಮೇಲಿನ ಕಾತರಕ್ಕೆ ಕಿಚ್ಚು ಹೊತ್ತಿಸಿವೆ ಈ ಲುಕ್​ಗಳು

Published On - 1:57 pm, Tue, 22 March 22