AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಿಸರ್ಚ್​ ಮಾಡಿ ಫೀಲ್ಡ್​ಗೆ ಇಳಿದ ಸುನಿ; ‘ಅವತಾರ ಪುರುಷ’ ಟೀಸರ್​ನಲ್ಲಿ ಮತ್ತೊಂದು ಮುಖ ಅನಾವರಣ

ಶರಣ್ ಹೀರೋ ಆಗಿ ನಟಿಸಿದ ಎಲ್ಲಾ ಸಿನಿಮಾಗಳಲ್ಲಿ ಕಾಮಿಡಿಯೇ ಹೈಲೈಟ್​. ಸುನಿ ಸಿನಿಮಾದಲ್ಲೂ ಭರಪೂರ ಮನರಂಜನೆ ಇರುತ್ತದೆ. ಈಗ ಇಬ್ಬರೂ ಮೊದಲ ಬಾರಿಗೆ ಒಂದಾಗಿದ್ದಾರೆ. ಈ ಕಾರಣಕ್ಕೆ ಸಾಕಷ್ಟು ಮನರಂಜನೆ ಸಿಗಲಿದೆ ಎಂಬುದು ಸಿನಿಪ್ರಿಯರ ನಂಬಿಕೆ.

ರಿಸರ್ಚ್​ ಮಾಡಿ ಫೀಲ್ಡ್​ಗೆ ಇಳಿದ ಸುನಿ; ‘ಅವತಾರ ಪುರುಷ’ ಟೀಸರ್​ನಲ್ಲಿ ಮತ್ತೊಂದು ಮುಖ ಅನಾವರಣ
ಶರಣ್
TV9 Web
| Edited By: |

Updated on: Mar 22, 2022 | 1:02 PM

Share

ಸಿಂಪಲ್​ ಸುನಿ (Simple Suni) ಸಿನಿಮಾ ಎಂದಾಕ್ಷಣ ನೆನಪಿಗೆ ಬರೋದು ಪಂಚಿಂಗ್​ ಡೈಲಾಗ್​ಗಳು. ಸುನಿ ಸಿನಿಮಾದಲ್ಲಿ ಮನರಂಜನೆಗೆ ಯಾವುದೇ ಕೊರತೆ ಇರುವುದಿಲ್ಲ. ಅವರು ಈವರೆಗೆ ಲವ್​ ಸ್ಟೋರಿ, ಫ್ಯಾಮಿಲಿ ಡ್ರಾಮಾ ಮೇಲೆ ಕಥೆ ಹೇಳಿದ್ದಾರೆ. ಕಳೆದ ವರ್ಷ ತೆರೆಗೆ ಬಂದ ಗಣೇಶ್ ನಟನೆಯ ‘ಸಖತ್​’ ಸಿನಿಮಾ ಮೆಚ್ಚುಗೆ ಪಡೆದುಕೊಂಡಿತ್ತು. ಈಗ ಅವರು ‘ಅವತಾರ ಪುರುಷ’ ಚಿತ್ರವನ್ನು (Avatara Purusha Movie) ಪ್ರೇಕ್ಷಕರ ಎದುರು ಇಡುತ್ತಿದ್ದಾರೆ. ಸ್ಯಾಂಡಲ್​ವುಡ್​ನ ಖ್ಯಾತ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ (Pushkara Mallikarjunaiah) ಅವರು ಬಂಡವಾಳ ಹೂಡಿರುವ ಈ ಚಿತ್ರದ ಟೀಸರ್ ರಿಲೀಸ್ ಆಗಿದ್ದು, ಸಾಕಷ್ಟು ಕುತೂಹಲ ಹುಟ್ಟುಹಾಕಿದೆ. ಸುನಿ ಅವರು ಸಾಕಷ್ಟು ರಿಸರ್ಚ್​ ಮಾಡಿ ಫೀಲ್ಡ್​ಗೆ ಇಳಿದಿರೋದು ಪಕ್ಕಾ ಆಗಿದೆ.

ಶರಣ್ ಹೀರೋ ಆಗಿ ನಟಿಸಿದ ಎಲ್ಲಾ ಸಿನಿಮಾಗಳಲ್ಲಿ ಕಾಮಿಡಿಯೇ ಹೈಲೈಟ್​. ಸುನಿ ಸಿನಿಮಾದಲ್ಲೂ ಭರಪೂರ ಮನರಂಜನೆ ಇರುತ್ತದೆ. ಈಗ ಇಬ್ಬರೂ ಮೊದಲ ಬಾರಿಗೆ ಒಂದಾಗಿದ್ದಾರೆ. ಈ ಕಾರಣಕ್ಕೆ ಸಾಕಷ್ಟು ಮನರಂಜನೆ ಸಿಗಲಿದೆ ಎಂಬುದು ಸಿನಿಪ್ರಿಯರ ನಂಬಿಕೆ. ಈಗ ರಿಲೀಸ್ ಆಗಿರುವ ಸಿನಿಮಾದ ಟೀಸರ್ ಚಿತ್ರದ ಮೇಲಿರುವ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ.

ಈ ಮೊದಲು ‘ಅವತಾರ ಪುರುಷ’ ಸಿನಿಮಾ ತಂಡ ಟೀಸರ್​ ಒಂದನ್ನು ಬಿಡುಗಡೆ ಮಾಡಿತ್ತು. ಅದರಲ್ಲಿ ಕಾಮಿಡಿ ದೃಶ್ಯಗಳು ಹೈಲೈಟ್ ಆಗಿತ್ತು. ಈ ಬಾರಿ ರಿಲೀಸ್ ಆಗಿರೋ ಟೀಸರ್​ನಲ್ಲಿ ಮಾಟ-ಮಂತ್ರದ ವಿಚಾರಗಳು ಗಮನ ಸೆಳೆದಿವೆ. ‘ಮಾಟ ಬೇರೆ, ವಾಮಾಚಾರ ಬೇರೆ. ಮಾಟ ಎಂಬುದು ವಾಮಾಚಾರದ ಒಂದು ಭಾಗ ಮಾತ್ರ’ ಎಂಬಿತ್ಯಾದಿ ಡೈಲಾಗ್​ಗಳು ಟೀಸರ್​ನಲ್ಲಿ ಹೈಲೈಟ್​ ಆಗಿದೆ. ಅಲ್ಲಲ್ಲಿ, ಕಾಮಿಡಿ ಡೈಲಾಗ್​ ಕೂಡ ಇದ್ದು, ನೋಡುಗರಿಗೆ ನಗು ತರಿಸುತ್ತದೆ. ಸುನಿ ವಾಮಾಚಾರ ಮತ್ತಿತ್ಯಾದಿ ವಿಚಾರಗಳ ಬಗ್ಗೆ ರಿಸರ್ಚ್​ ನಡೆಸಿ ಈ ಸಿನಿಮಾ ಮಾಡಿದಂತಿದೆ. ಆಶಿಕಾ ಅವರ ಗ್ಲಾಮರ್ ಲುಕ್ ಕೂಡ ಎಲ್ಲರ ಕಣ್ಣು ಕುಕ್ಕಿದೆ.

ಮೇ 6ರಂದು ‘ಅವತಾರ ಪುರುಷ’ ಸಿನಿಮಾ ತೆರೆಗೆ ಬರುತ್ತಿದೆ. ಪುಷ್ಕರ್ ಫಿಲ್ಮ್ಸ್​ ಅಡಿಯಲ್ಲಿ ಪುಷ್ಕರ್ ಮಲ್ಲಿಕಾರ್ಜುನಯ್ಯ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಸುನಿ ನಿರ್ದೇಶನದ ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ವಿಲಿಯಂ ಡೇವಿಡ್​ ಚಿತ್ರದ ಛಾಯಾಗ್ರಹಣ ಜವಾಬ್ದಾರಿ ಹೊತ್ತಿದ್ದಾರೆ. ಶರಣ್​ಗೆ ಜತೆಯಾಗಿ ಆಶಿಕಾ ರಂಗನಾಥ್​ ಕಾಣಿಸಿಕೊಂಡಿದ್ದಾರೆ. ಡಿಸೆಂಬರ್ ತಿಂಗಳಲ್ಲೇ ಸಿನಿಮಾ ತೆರೆಗೆ ಬರಬೇಕಿತ್ತು. ಕೊವಿಡ್ ಕಾರಣದಿಂದ ಸಿನಿಮಾ ರಿಲೀಸ್ ದಿನಾಂಕ ಮುಂದೂಡಲ್ಪಟ್ಟಿತ್ತು.

ಇದನ್ನೂ ಓದಿ: ‘ಚುಟು ಚುಟು’ ಜೋಡಿಯ ‘ಅವತಾರ ಪುರುಷ’; ಸುನಿ-ಪುಷ್ಕರ್​ ಕಟ್ಟಿಕೊಟ್ಟ ಚಿತ್ರದಲ್ಲಿ ಏನೆಲ್ಲ ಇರಲಿದೆ?

Sharan: ‘ಅವತಾರ ಪುರುಷ’ ರಿಲೀಸ್​ಗೆ ಮುಹೂರ್ತ ಫಿಕ್ಸ್; ಸಾವು- ಬದುಕು ನಡುವಿನ ಕೊನೆಯ ಆಸರೆ ಈ ಸಿನಿಮಾ ಎಂದ ಪುಷ್ಕರ್

ಬೆಂಗಳೂರು: ರಾಪಿಡೋ ಚಾಲಕನಿಂದ ಯುವತಿಗೆ ಲೈಂಗಿಕ ಕಿರುಕುಳ
ಬೆಂಗಳೂರು: ರಾಪಿಡೋ ಚಾಲಕನಿಂದ ಯುವತಿಗೆ ಲೈಂಗಿಕ ಕಿರುಕುಳ
ಕಡಲೆ ಕಳ್ಳನಿಗೆ ಕಂಬಕ್ಕೆ ಕಟ್ಟಿ ಹಾಕಿ ಹಿಗ್ಗಾಮುಗ್ಗಾ ಥಳಿತ!
ಕಡಲೆ ಕಳ್ಳನಿಗೆ ಕಂಬಕ್ಕೆ ಕಟ್ಟಿ ಹಾಕಿ ಹಿಗ್ಗಾಮುಗ್ಗಾ ಥಳಿತ!
ಪ್ಯಾರಾ-ಅಥ್ಲೀಟ್ ಪ್ರಸಾದ್​​​ಗೆ 5 ವರ್ಷಗಳ ನಂತರ ಸಿಕ್ತು ಸೂರು ಭಾಗ್ಯ!
ಪ್ಯಾರಾ-ಅಥ್ಲೀಟ್ ಪ್ರಸಾದ್​​​ಗೆ 5 ವರ್ಷಗಳ ನಂತರ ಸಿಕ್ತು ಸೂರು ಭಾಗ್ಯ!
ಯುವಕನ ಬಳಿ ನನ್ನ ಕರ್ಕೊಂಡೋಗಿ ಮದುವೆಯಾಗು ಎಂದಿದ್ದ ಅಪ್ರಾಪ್ತೆ ನಿಗೂಢ ಸಾವು
ಯುವಕನ ಬಳಿ ನನ್ನ ಕರ್ಕೊಂಡೋಗಿ ಮದುವೆಯಾಗು ಎಂದಿದ್ದ ಅಪ್ರಾಪ್ತೆ ನಿಗೂಢ ಸಾವು
ಕಾಂಪೌಂಡ್ ಒಳಗಿದ್ದ ನಾಯಿಯನ್ನು ಬೇಟೆಯಾಡಲು ಬಂದ ಚಿರತೆ!
ಕಾಂಪೌಂಡ್ ಒಳಗಿದ್ದ ನಾಯಿಯನ್ನು ಬೇಟೆಯಾಡಲು ಬಂದ ಚಿರತೆ!
ಸಂಬಂಧಗಳನ್ನು ಇಟ್ಟುಕೊಂಡು ಮನೆಯನ್ನು ನರಕ ಮಾಡ್ತಾ ಇದೀರಾ; ರಕ್ಷಿತಾಗೆ ಪಾಠ
ಸಂಬಂಧಗಳನ್ನು ಇಟ್ಟುಕೊಂಡು ಮನೆಯನ್ನು ನರಕ ಮಾಡ್ತಾ ಇದೀರಾ; ರಕ್ಷಿತಾಗೆ ಪಾಠ
WPL 2026: 6 ಎಸೆತಗಳಲ್ಲಿ 3 ತಪ್ಪು ಮಾಡಿ ಸೋತ ಮುಂಬೈ ಇಂಡಿಯನ್ಸ್
WPL 2026: 6 ಎಸೆತಗಳಲ್ಲಿ 3 ತಪ್ಪು ಮಾಡಿ ಸೋತ ಮುಂಬೈ ಇಂಡಿಯನ್ಸ್
ಬೆಂಗಳೂರಿಗರಿಗೆ ಮೆಟ್ರೋ ದಿಂದ ಮತ್ತೊಂದು ಗುಡ್ ನ್ಯೂಸ್!
ಬೆಂಗಳೂರಿಗರಿಗೆ ಮೆಟ್ರೋ ದಿಂದ ಮತ್ತೊಂದು ಗುಡ್ ನ್ಯೂಸ್!
ಅರಣ್ಯ ಇಲಾಖೆ ವಾಹನವ ಅಟ್ಟಾಡಿಸಿಕೊಂಡು ಬೆನ್ನಟ್ಟಿದ ಕಾಡಾನೆ, ವಿಡಿಯೋ ವೈರಲ್
ಅರಣ್ಯ ಇಲಾಖೆ ವಾಹನವ ಅಟ್ಟಾಡಿಸಿಕೊಂಡು ಬೆನ್ನಟ್ಟಿದ ಕಾಡಾನೆ, ವಿಡಿಯೋ ವೈರಲ್
ಚಾಮರಾಜನಗರ: ನೇನೆಕಟ್ಟೆ ಗ್ರಾಮದಲ್ಲಿ ರಾಜಾರೋಷವಾಗಿ ಸಂಚರಿಸಿದ ಚಿರತೆ
ಚಾಮರಾಜನಗರ: ನೇನೆಕಟ್ಟೆ ಗ್ರಾಮದಲ್ಲಿ ರಾಜಾರೋಷವಾಗಿ ಸಂಚರಿಸಿದ ಚಿರತೆ