‘ಚುಟು ಚುಟು’ ಜೋಡಿಯ ‘ಅವತಾರ ಪುರುಷ’; ಸುನಿ-ಪುಷ್ಕರ್​ ಕಟ್ಟಿಕೊಟ್ಟ ಚಿತ್ರದಲ್ಲಿ ಏನೆಲ್ಲ ಇರಲಿದೆ?

Avatar Purusha Movie: ಶರಣ್​ ಎಂದರೆ ಕಾಮಿಡಿಗೆ ಫೇಮಸ್. ನಿರ್ದೇಶಕ ಸಿಂಪಲ್​ ಸುನಿ ಅವರು ತಮ್ಮದೇ ಶೈಲಿಯ ಸಿನಿಮಾಗಳಿಂದ ಗುರುತಿಸಿಕೊಂಡವರು. ಅವರಿಬ್ಬರ ಕಾಂಬಿನೇಷನ್​ನಲ್ಲಿ ‘ಅವತಾರ ಪುರುಷ’ ಮೂಡಿಬಂದಿದ್ದು, ಪುಷ್ಕರ್​ ಮಲ್ಲಿಕಾರ್ಜುನಯ್ಯ ಬಂಡವಾಳ ಹೂಡಿದ್ದಾರೆ.

‘ಚುಟು ಚುಟು’ ಜೋಡಿಯ ‘ಅವತಾರ ಪುರುಷ’; ಸುನಿ-ಪುಷ್ಕರ್​ ಕಟ್ಟಿಕೊಟ್ಟ ಚಿತ್ರದಲ್ಲಿ ಏನೆಲ್ಲ ಇರಲಿದೆ?
ಶರಣ್​, ಆಶಿಕಾ, ಪುಷ್ಕರ್​, ಸುನಿ


ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ‘ಅವತಾರ ಪುರುಷ’ (Avatar Purusha Movie) ಸಹ ಹೈಪ್​ ಸೃಷ್ಟಿ ಮಾಡಿದೆ. ಸಿಂಪಲ್​ ಸುನಿ (Simple Suni) ನಿರ್ದೇಶನ ಮಾಡಿರುವ ಈ ಚಿತ್ರವನ್ನು ಖ್ಯಾತ ನಿರ್ಮಾಪಕ ಪುಷ್ಕರ್​ ಮಲ್ಲಿಕಾರ್ಜುನಯ್ಯ (Pushkar Mallikarjunaiah) ನಿರ್ಮಿಸಿದ್ದಾರೆ. ಆಶಿಕಾ ರಂಗನಾಥ್​ (Ashika Ranganath) ಮತ್ತು ಶರಣ್​ (Sharan) ಜೋಡಿಯಾಗಿ ನಟಿಸಿದ್ದಾರೆ. ಅರ್ಜುನ್ ಜನ್ಯ ಸಂಗೀತ ನೀಡಿದ್ದು, ವಿಲಿಯಮ್​ ಡೇವಿಡ್​ ಛಾಯಾಗ್ರಹಣ ಮಾಡಿದ್ದಾರೆ. ತಾಂತ್ರಿಕವಾಗಿ ತುಂಬ ಶ್ರೀಮಂತವಾಗಿ ಮೂಡಿಬಂದಿರುವ ‘ಅವತಾರ ಪುರುಷ’ ಚಿತ್ರ ಡಿ.10ರಂದು ದೇಶಾದ್ಯಂತ ಬಿಡುಗಡೆ ಆಗಲಿದೆ. ಈ ಸಿನಿಮಾದಲ್ಲಿ ಹತ್ತು ಹಲವು ವಿಶೇಷಗಳಿವೆ. ಇತ್ತೀಚೆಗೆ ಸುದ್ದಿಗೋಷ್ಠಿ ನಡೆಸಿರುವ ಚಿತ್ರತಂಡ ಆ ಎಲ್ಲ ವಿಶೇಷತೆಗಳ ಬಗ್ಗೆ ಮಾಹಿತಿ ಹಂಚಿಕೊಂಡಿದೆ.

‘ಅವತಾರ ಪುರುಷ’ ಸಿನಿಮಾದಲ್ಲಿ ನಟ ಶರಣ್​ ಅವರು ಜ್ಯೂನಿಯರ್​ ಆರ್ಟಿಸ್ಟ್​ ಪಾತ್ರ ಮಾಡಿದ್ದಾರೆ. ಹಾಗಾಗಿ ಅವರು ಹಲವು ಗೆಟಪ್​ಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಶೂಟಿಂಗ್​ ನಡೆಯುವಾಗ ರಿಯಲ್​ ಲೈಫ್​ನಲ್ಲಿ ಆಶಿಕಾಗೆ ಶರಣ್​ ಅವರು ನಟನೆ ಹೇಳಿಕೊಟ್ಟಿದ್ದಾರೆ. ಆದರೆ ತೆರೆಮೇಲೆ ಶರಣ್​ಗೆ ನಟನೆ ಹೇಳಿಕೊಡುವ ಹುಡುಗಿಯ ಪಾತ್ರದಲ್ಲಿ ಆಶಿಕಾ ಅಭಿನಯಿಸಿದ್ದಾರೆ. ಈ ಹಿಂದೆ ‘ರ‍್ಯಾಂಬೊ 2’ ಸಿನಿಮಾದಲ್ಲಿ ‘ಚುಟುಚುಟು ಅಂತೈತಿ’ ಎಂದು ಮೋಡಿ ಮಾಡಿದ್ದ ಈ ಜೋಡಿ ಈಗ ‘ಅವತಾರ ಪುರುಷ’ ಸಿನಿಮಾ ಮೂಲಕ ಪ್ರೇಕ್ಷಕರ ಎದುರು ಬರುತ್ತಿದೆ.

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಬಹಳ ಹಿಂದೆಯೇ ‘ಅವತಾರ ಪುರುಷ’ ಸಿನಿಮಾ ತೆರೆಕಾಣಬೇಕಿತ್ತು. ಆದರೆ ಕೊವಿಡ್​ ಕಾರಣದಿಂದ ತಡವಾಗಿದೆ. ಅಂತಿಮವಾಗಿ ಈ ವರ್ಷವೇ ಚಿತ್ರ ರಿಲೀಸ್​ ಆಗುತ್ತಿರುವುದು ಶರಣ್​ ಅವರಿಗೆ ಖುಷಿ ನೀಡಿದೆ. ಕಷ್ಟದ ಸಂದರ್ಭದಲ್ಲಿಯೂ ಈ ಸಿನಿಮಾಗೆ ಯಾವುದೇ ಕೊರತೆ ಆಗದಂತೆ ನೋಡಿಕೊಂಡಿರುವ ನಿರ್ಮಾಪಕರಿಗೆ ಅವರು ಧನ್ಯವಾದ ಅರ್ಪಿಸಿದ್ದಾರೆ.

ಶರಣ್​ ಎಂದರೆ ಕಾಮಿಡಿಗೆ ಫೇಮಸ್. ಇನ್ನು, ಸುನಿ ಅವರು ತಮ್ಮದೇ ಶೈಲಿಯ ಸಿನಿಮಾಗಳಿಂದ ಗುರುತಿಸಿಕೊಂಡವರು. ಈಗ ಅವರಿಬ್ಬರ ಕಾಂಬಿನೇಷನ್​ನಲ್ಲಿ ‘ಅವತಾರ ಪುರುಷ’ ಮೂಡಿಬಂದಿದ್ದು ಪ್ರೇಕ್ಷಕರಿಗೆ ಹೊಸ ಬಗೆಯ ಮನರಂಜನೆ ಸಿಗಲಿದೆ ಎಂಬ ಭರವಸೆ ನೀಡಿದೆ ಚಿತ್ರತಂಡ. ವಿಶೇಷ ಏನೆಂದರೆ, ಈ ಸಿನಿಮಾದಲ್ಲಿ ಸಾಕಷ್ಟು ಜನ ಅನುಭವಿ ಕಲಾವಿದರು ನಟಿಸಿದ್ದಾರೆ. ಶ್ರೀನಗರ ಕಿಟ್ಟಿ ಒಂದು ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಸಾಯಿ ಕುಮಾರ್​, ಆಶುತೋಷ್​ ರಾಣಾ, ಸುಧಾರಾಣಿ ಮುಂತಾದ ಕಲಾವಿದರ ಬಳಗ ಈ ಚಿತ್ರದಲ್ಲಿದೆ. ಎಲ್ಲರನ್ನೂ ಒಂದೇ ಸಿನಿಮಾದಲ್ಲಿ ಸೇರಿಸಿದ ಖ್ಯಾತ ಪುಷ್ಕರ್​ ಮಲ್ಲಿಕಾರ್ಜುನಯ್ಯ ಅವರಿಗೆ ಸಲ್ಲುತ್ತದೆ. 2 ಪಾರ್ಟ್​ಗಳಲ್ಲಿ ‘ಅವತಾರ ಪುರುಷ’ ಮೂಡಿಬಂದಿದೆ. ಮೊದಲ ಪಾರ್ಟ್ ಬಿಡುಗಡೆಯಾಗಿ 101ನೇ ದಿನಕ್ಕೆ ಎರಡನೇ ಪಾರ್ಟ್​ ಬಿಡುಗಡೆ ಮಾಡುವುದಾಗಿ ಪುಷ್ಕರ್​ ಮಲ್ಲಿಕಾರ್ಜುನಯ್ಯ ಹೇಳಿದ್ದಾರೆ.

ಇದನ್ನೂ ಓದಿ:

‘ಅವತಾರ ಪುರುಷ’ದಲ್ಲಿ ಶರಣ್​ಗೆ ಎಷ್ಟು ಅವತಾರ? ಅವರು ಹೇಳಿದ್ದು ಇಷ್ಟು

Puneeth Rajkumar: ಪುನೀತ್ ಸರ್ ಜೊತೆ ನಟಿಸೋ ಕನಸು ಕನಸಾಗೇ ಉಳಿಯಿತು; ಭಾವುಕರಾದ ನಟಿ ಆಶಿಕಾ ರಂಗನಾಥ್

Click on your DTH Provider to Add TV9 Kannada