ತಮಿಳಿನ ‘ಹಲಮಿತಿ ಹಬೀಬೋ’ ಹಾಡಿಗೆ ತಾಯಿ ಮಗನ ಸಖತ್​ ಸ್ಟೆಪ್​: ವಿಡಿಯೋ ವೈರಲ್​

ಇನ್ಸ್ಟಾಗ್ರಾಮ್​ನಲ್ಲಿ ತಾಯಿ ಮಗನ ಜೋಡಿ ತಮಿಳಿನ ಹಲಮಿತಿ ಹಬೀಬೋ ಹಾಡಿಗೆ ಬಿಂದಾಸ್​ ಸ್ಟೆಪ್​ ಹಾಕಿದ್ದಾರೆ, ಸದ್ಯ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್​ ಆಗಿದೆ.

ತಮಿಳಿನ 'ಹಲಮಿತಿ ಹಬೀಬೋ' ಹಾಡಿಗೆ ತಾಯಿ ಮಗನ ಸಖತ್​ ಸ್ಟೆಪ್​: ವಿಡಿಯೋ ವೈರಲ್​
ಡ್ಯಾನ್ಸ್​ ಮಾಡಿದ ತಾಯಿ ಮಗ
Follow us
TV9 Web
| Updated By: Pavitra Bhat Jigalemane

Updated on: Mar 10, 2022 | 11:17 AM

ಇನ್ಸ್ಟಾಗ್ರಾಮ್​ ರೀಲ್ಸ್ ​(Instagram Reels) ದಿನದಿಂದ ದಿನಕ್ಕೆ ಟಿಕ್​ಟಾಕ್​ಗಿಂತ ಹೆಚ್ಚು ಜನಪ್ರಿಯವಾಗುತ್ತಿದೆ. ಯಾವುದೇ ಹೊಸ ಹಾಡು ಬಿಡುಗಡೆಯಾದರೂ ಡ್ಯಾನ್ಸ್​ ಮೂಲಕ ರೀಲ್ಸ್​ ಮಾಡಿ ಹೊಸ ಟ್ರೆಂಡ್​ ಸೃಷ್ಟಿ ಮಾಡುತ್ತಾರೆ ರೀಲ್ಸ್​ ಪ್ರಿಯರು. ನೀವೇನಾದ್ರೂ ಇನ್ಸ್ಟಾಗ್ರಾಮ್​ನಲ್ಲಿ ರೀಲ್ಸ್​​ ನೊಡವವರಾಗಿದ್ದರೆ ಹಲಮಿತಿ ಎನ್ನುವ ಹಾಡು ಸದ್ದು ಮಾಡುತ್ತಿರುವುದು ತಿಳಿಯುತ್ತದೆ. ತಮಿಳು ನಟ ವಿಜಯ್​ ನಟನೆಯ ಬೀಸ್ಟ್ (Beast)​ ಚಿತ್ರದ ಈ ಹಾಡು ಈಗ ರೀಲ್ಸ್​ ಪ್ರಿಯರ ಹಾಡಾಗಿದೆ. ಸದ್ಯ ಇನ್ಸ್ಟಾಗ್ರಾಮ್​ನಲ್ಲಿ ತಾಯಿ ಮಗನ ಜೋಡಿ ಇದೇ ಹಲಮಿತಿ ಹಬೀಬೋ (Halamithi Habibo) ಹಾಡಿಗೆ ಬಿಂದಾಸ್​ ಸ್ಟೆಪ್​ ಹಾಕಿದ್ದಾರೆ, ಸದ್ಯ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್​ ಆಗಿದೆ.

ಕಪ್ಪು ಬಣ್ಣದ ಡ್ರೆಸ್​ ತೊಟ್ಟಿರುವ ಅಮ್ಮ ಮಗ ಸಿನಿಮಾನದಲ್ಲಿ ನಟ ವಿಜಯ್​ ಹಾಕಿದ ಸ್ಟೆಪ್​ಗಳನ್ನು ಹಾಕಿದ್ದಾರೆ. ಹ್ಯಾಷ್​ಟ್ಯಾಗ್​ನಲ್ಲಿ ವಿಜಯ್​ ಹಾಗೂ ಹಾಡಿನ ಹೆಸರನ್ನು ಸೇರಿಸಲಾಗಿದೆ. ಫೆ.22ರಂದು ಹಂಚಿಕೊಳ್ಳಲಾದ ವಿಡಿಯೋ 18 ಸಾವಿರಕ್ಕೂ ಹೆಚ್ಚು ಲೈಕ್ಸ್​ ಗಳಿಸಿದೆ. ಅಮ್ಮ ಮಗನ ಮಸ್ತ್​ ಡ್ಯಾನ್ಸ್​ ನೆಟ್ಟಿಗರ ಮನ ಗೆದ್ದಿದೆ. ವಿಡಿಯೋ ನೋಡಿ ಸೂಪರ್​ ಎಂದು ಇನ್ಸ್ಟಾಗ್ರಾಮ್​ ಬಳಕೆದಾರರರು ಕಾಮೆಂಟ್​ ಮಾಡಿದ್ದಾರೆ.

ಬೀಸ್ಟ್​ ಚಿತ್ರದ ಈ ಹಾಡನ್ನು ಅನಿರುದ್ಧ ರವಿಚಂದರ್ ಮತ್ತು ಜೋನಿತಾ ಗಾಂಧಿ ಹಾಡಿದ್ದಾರೆ. ವಿಡಿಯೋದಲ್ಲಿ ಲೋಹಿತಾ ರವಿಕಿರಣ್ ಮತ್ತು ಅವರ ಮಗ ಕಿಶನ್ ಅವರ ಡ್ಯಾನ್ಸ್​ ಸದ್ಯ ಸಖತ್​ ವೈರಲ್​ ಆಗಿದೆ.

ಇದನ್ನೂ ಓದಿ:

ಬಟ್ಟೆಯೊಳಗೆ 52 ಹಲ್ಲಿ ಮತ್ತು ಹಾವುಗಳನ್ನು ಅಡಗಿಸಿಟ್ಟುಕೊಂಡು ಗಡಿ ದಾಟುತ್ತಿದ್ದ ವ್ಯಕ್ತಿಯ ಬಂಧನ