AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಕಲರ್​ಫುಲ್​ ವೃತ್ತಗಳ ಚಲನೆಯನ್ನು ನೋಡಿ ಗೊಂದಲಕ್ಕೊಳಗಾದ ನೆಟ್ಟಿಗರು

2 ಕಲರ್​ಫುಲ್​ ವೃತ್ತಗಳು ತಿರುಗುತ್ತಿರುವ ವಿಡಿಯೋ ವೈರಲ್​ ಆಗಿದೆ. ಈ ವೃತ್ತಗಳು ಯಾವ ಮುಖದಲ್ಲಿ ತಿರುಗುತ್ತಿವೆ ಎನ್ನುವುದನ್ನು ತಿಳಿಯಲು ನೆಟ್ಟಿಗರು ತಲೆಕೆಡಿಸಿಕೊಂಡಿದ್ದಾರೆ.

Viral Video: ಕಲರ್​ಫುಲ್​ ವೃತ್ತಗಳ ಚಲನೆಯನ್ನು ನೋಡಿ ಗೊಂದಲಕ್ಕೊಳಗಾದ ನೆಟ್ಟಿಗರು
ಆಪ್ಟಿಕಲ್​ ಇಲ್ಯೂಶನ್​ ವೃತ್ತ
TV9 Web
| Edited By: |

Updated on:Mar 11, 2022 | 9:44 AM

Share

ಸಾಮಾಜಿಕ ಜಾಲತಾಣದಲ್ಲಿ ಭ್ರಮೆ ಮೂಡಿಸುವ ಸಾಕಷ್ಟು ವಿಡಿಯೋ, ಚಿತ್ರಗಳು ಈ ಹಿಂದೆ ವೈರಲ್​ ಆಗಿವೆ. ಮನರಂಜನೆ ಮತ್ತು ಬುದ್ದಿಗೆ ಗುದ್ದು ನೀಡುವ ಆಪ್ಟಿಕಲ್​ ಇಲ್ಯೂಶನ್​ಗಳು ಸದಾ ನೆಟ್ಟಿಗರನ್ನು ಆಕರ್ಷಿಸುತ್ತವೆ. ಇದೀಗ ಬಣ್ಣದ ವೃತ್ತಗಳ ವಿಡಿಯೋ ಸಿಕ್ಕಾಪಟ್ಟೆ ವೈರಲ್​ ಆಗಿದೆ. 2 ಕಲರ್​ಫುಲ್​ ವೃತ್ತಗಳು ತಿರುಗುತ್ತಿರುವ ವಿಡಿಯೋ ವೈರಲ್​ ಆಗಿದೆ. ಈ ವೃತ್ತಗಳು ಯಾವ ಮುಖದಲ್ಲಿ ತಿರುಗುತ್ತಿವೆ ಎನ್ನುವುದನ್ನು ತಿಳಿಯಲು ನೆಟ್ಟಿಗರು ತಲೆಕೆಡಿಸಿಕೊಂಡಿದ್ದಾರೆ.

ಟ್ವಿಟರ್​ ಮತ್ತು ರೆಡ್ಡಿಟ್​ನಲ್ಲಿ ಇದರ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ.  ಜಪಾನ್​ನ ಜಾಗರಿಕಿನ್ ಎನ್ನುವವರು ಇದನ್ನು ತಯಾರಿಸಿ ಹಂಚಿಕೊಂಡಿದ್ದಾರೆ. ಆಪ್ಟಿಕಲ್​ ಇಲ್ಯುಶನ್​ನ ವಿಡಿಯೋ ನೋಡಿ ನೆಟ್ಟಿಗರು ದಂಗಾಗಿದ್ದಾರೆ. ಬಳಕೆದಾರರೊಬ್ಬರು ಸಮ್ಮೋಹನಕ್ಕೋಳಗಾಗುವಂತಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಕೆಲವರು ವಿಡಿಯೋದಲ್ಲಿ ಏನಾಗುತ್ತಿದೆ ಎನ್ನುವುದುನ್ನು ತಿಳಿಯಲು ಯತ್ನಿಸಿದ್ದು, ಅರ್ಥವಾಗದೆ ಗೊಂದಲಕ್ಕೊಳಗಾಗಿದ್ದಾರೆ.

ವೃತ್ತದ ಒಳಗೆ ಮಾರ್ಕ್​ಗಳನ್ನು ಮಾಡಲಾಗಿದ್ದು, ಅದೇ ರೀತಿ ವೃತ್ತ ಸುತ್ತುವಂತೆ ಕಾಣುತ್ತದೆ. ಅದರೆ ಅದು ಹಾಗೆಯೇ ಇದೆಯೇ ಎನ್ನುವುದನ್ನು ನೀವು ವಿಡಿಯೋ ನೋಡಿಯೇ ಕಂಡುಹಿಡಿಯಬೇಕು. ಸದ್ಯ ವೈರಲ್​ ಆದ ವಿಡಿಯೋ ಒಂದೂವರೆ ಲಕ್ಷಕ್ಕೂ ಹೆಚ್ಚು ಲೈಕ್ಸ್​ ಗಳಿಸಿದ್ದು, 57 ಸಾವಿರಕ್ಕೂ ಅಧಿಕ ರಿಟ್ವೀಟ್​ಗಳನ್ನು ಗಳಿಸಿದೆ.  ನೀವೂ ವಿಡಿಯೋ ನೋಡಿ ವೃತ್ತ ಯಾವ ಕಡೆ ಚಲಿಸುತ್ತಿದೆ ಎನ್ನುವುದನ್ನು ಪತ್ತೆಮಾಡಿ.

ಇದನ್ನೂ ಓದಿ:

Viral Video: ಅಭಯಾರಣ್ಯದಲ್ಲಿ ಕರಡಿಗೆ ಮುಖಾಮುಖಿಯಾದ ಹುಲಿ: ಮುಂದೇನಾಯ್ತು?

Published On - 9:43 am, Fri, 11 March 22

ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ