Viral Video: ಅಭಯಾರಣ್ಯದಲ್ಲಿ ಕರಡಿಗೆ ಮುಖಾಮುಖಿಯಾದ ಹುಲಿ: ಮುಂದೇನಾಯ್ತು?

ವಿಡಿಯೋದಲ್ಲಿ ಕರಡಿ ಮತ್ತು ಹುಲಿ ಮುಖಾಮುಖಿಯಾಗಿದ್ದಾರೆ. ದಾರಿಯಲ್ಲಿ ಮಲಗಿದ್ದ ಹುಲಿಯನ್ನು ಕಂಡು ಕರಡಿ ಕುಣಿದಾಡಿ ನಂತರ ಸುಮ್ಮನೆ ಸಾಗಿದೆ. ಇದರ ವಿಡಿಯೋ ಇದೀಗ ಸಖತ್​ ವೈರಲ್​ ಆಗಿದೆ.

Viral Video: ಅಭಯಾರಣ್ಯದಲ್ಲಿ ಕರಡಿಗೆ ಮುಖಾಮುಖಿಯಾದ ಹುಲಿ: ಮುಂದೇನಾಯ್ತು?
ಕರಡಿ ಮತ್ತು ಹುಲಿ
Follow us
TV9 Web
| Updated By: Pavitra Bhat Jigalemane

Updated on:Mar 10, 2022 | 3:38 PM

ನೀವು ಜಂಗಲ್​ ಬುಕ್​ ಸಿನಿಮಾ ನೋಡಿದ್ದರೆ ಈ ವಿಡಿಯೋ ಅದೇ ರೀತಿ ಇದೆ ಎನಿಸುವುದಂತೂ ಸುಳ್ಳಲ್ಲ. ಅರೇ ಏನಪ್ಪಾ ಅಂತಿರಾ. ಸಿನಿಮಾದಲ್ಲಿ ಹುಲಿಯಿಂದ ಕರಡಿ ತನ್ನ ಗೆಳೆಯನನ್ನು ರಕ್ಷಿಸುವುದನ್ನು ಕಾಣಬಹುದು. ಅದೇ ರೀತಿಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ವಿಡಿಯೋದಲ್ಲಿ ಕರಡಿ ಮತ್ತು ಹುಲಿ ಮುಖಾಮುಖಿಯಾಗಿದ್ದಾರೆ. ದಾರಿಯಲ್ಲಿ ಮಲಗಿದ್ದ ಹುಲಿಯನ್ನು ಕಂಡು ಕರಡಿ ಕುಣಿದಾಡಿ ನಂತರ ಸುಮ್ಮನೆ ಸಾಗಿದೆ. ಇದರ ವಿಡಿಯೋ ಇದೀಗ ಸಖತ್​ ವೈರಲ್​ ಆಗಿದೆ.

ವಿಡಿಯೋವನ್ನು ಸಾಕೇತ್​ ಎನ್ನುವ ಐಎಫ್​ಎಸ್​ ಅಧಿಕಾರಿಯೊಬ್ಬರು ಹಂಚಿಕೊಂಡಿದ್ದಾರೆ. ಮಹಾರಾಷ್ಟ್ರದ ತಡೋಬಾ ಹುಲಿ ಸಂರಕ್ಷಿತ ವಲಯದಲ್ಲಿ ಈ ಘಟನೆ ನಡೆದಿದೆ. ನಮನ್​ ಅಗರ್ವಾಲ್​ ಎನ್ನುವವರು ಈ ವಿಡಿಯೋವನ್ನು ಚಿತ್ರೀಕರಣ ಮಾಡಿದ್ದಾರೆ.  ವಿಡಿಯೋದಲ್ಲಿ ಕರಡಿ ನಡೆದುಕೊಂಡು ಹೋಗುವ ದಾರಿಯಲ್ಲಿ ಹುಲಿ ಮಲಗಿರುತ್ತದೆ. ಅದನ್ನು ನೋಡಿದ ಕರಡಿ ಗಾಬರಿಗೊಂಡು ನಂತರ ತಲೆತಗ್ಗಿಸುತ್ತದೆ. ಈ ಸಣ್ಣ ತುಣುಕಿನ ವಿಡಿಯೋವನ್ನು ಟ್ವಿಟರ್​ನಲ್ಲಿ ಹಂಚಿಕೊಳ್ಳಲಾಗಿದೆ. 31 ಸಾವಿರಕ್ಕೂ ಹೆಚ್ಚು ವೀಕ್ಷಣೆ ಪಡೆದ ವಿಡಿಯೋ ಪ್ರಾಣಿ ಪ್ರಿಯರ ಮನಗೆದ್ದಿದೆ.

ಇದನ್ನೂ ಓದಿ:

ತಮಿಳಿನ ‘ಹಲಮಿತಿ ಹಬೀಬೋ’ ಹಾಡಿಗೆ ತಾಯಿ ಮಗನ ಸಖತ್​ ಸ್ಟೆಪ್​: ವಿಡಿಯೋ ವೈರಲ್​

viral news: ವಿಶ್ವದ ಅಗ್ಗದ ಆಮ್ಲೆಟ್ ಮ್ಯಾಗಿಗಿಂತ ಕಡಿಮೆ ಸಮಯದಲ್ಲಿ ತಯಾರಾಗುತ್ತೆ! ಬೆಲೆ ತಿಳಿದರೆ ಶಾಕ್ ಆಗೋದು ಗ್ಯಾರಂಟಿ

Published On - 3:35 pm, Thu, 10 March 22