AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

viral news: ವಿಶ್ವದ ಅಗ್ಗದ ಆಮ್ಲೆಟ್ ಮ್ಯಾಗಿಗಿಂತ ಕಡಿಮೆ ಸಮಯದಲ್ಲಿ ತಯಾರಾಗುತ್ತೆ! ಬೆಲೆ ತಿಳಿದರೆ ಶಾಕ್ ಆಗೋದು ಗ್ಯಾರಂಟಿ

ಭಾರತದ ಆಮ್ಲೆಟ್​ ಮನುಷ್ಯ ಎಂದು ಕೂಡ ಇವರನ್ನು ಕರೆಯುತ್ತಾರೆ. ರುಚಿಕರವಾದ ಆಮ್ಲೆಟ್‌ಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿರುವ ಉದ್ಯಮಿ ಅರ್ಜುನ್. ಅರ್ಜುನ್ ಭಾರತದ ಅಪ್ಪಟ ರುಚಿಯ ಆಮ್ಲೆಟ್​ನ್ನು ಅತ್ಯಂತ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ.

viral news: ವಿಶ್ವದ ಅಗ್ಗದ ಆಮ್ಲೆಟ್ ಮ್ಯಾಗಿಗಿಂತ ಕಡಿಮೆ ಸಮಯದಲ್ಲಿ ತಯಾರಾಗುತ್ತೆ! ಬೆಲೆ ತಿಳಿದರೆ ಶಾಕ್ ಆಗೋದು ಗ್ಯಾರಂಟಿ
ಪ್ರಾತಿನಿಧಿಕ ಚಿತ್ರ
TV9 Web
| Updated By: ಗಂಗಾಧರ​ ಬ. ಸಾಬೋಜಿ|

Updated on: Mar 10, 2022 | 10:10 AM

Share

ಒಂದೆಡೆ ಹಣದುಬ್ಬರದಿಂದಾಗಿ ಚಿನ್ನ ಬೆಳ್ಳಿ ಹೆಚ್ಚುತ್ತಿದೆ. ಇನ್ನೊಂದೆಡೆ ಆಹಾರ ಪದಾರ್ಥಗಳ ಬೆಲೆಯೂ ಗಗನ ಮುಟ್ಟುತ್ತಿದೆ. ಆದರೆ ಈ ಹಣದುಬ್ಬರ ಕಾಲದಲ್ಲೂ ಐದು ರೂಪಾಯಿ ಆಮ್ಲೆಟ್ ಸಿಕ್ಕರೆ ಹೇಗಿರುತ್ತೆ? ಇದು ನಿಮಗೆ ಸ್ವಲ್ಪ ವಿಚಿತ್ರವೆನಿಸಬಹುದು, ಆದರೆ ಇದು ಸಂಪೂರ್ಣವಾಗಿಯೂ ನಿಜ. ಏಕೆಂದರೆ ಕರೇಲ್‌ನಲ್ಲಿ ವಾಸಿಸುವ ಅರ್ಜುನ್ ನಾಯರ್ ಅವರು ವಿಶ್ವದ ಅತ್ಯಂತ ಅಗ್ಗದ ಆಮ್ಲೆಟ್​ನ್ನು ಮಾರಾಟ ಮಾಡುತ್ತಿದ್ದಾರೆ. ಇಷ್ಟೇ ಅಲ್ಲ, ಅರ್ಜುನ್ ತಮ್ಮ ಉತ್ಪನ್ನವನ್ನು ತಮ್ಮ ಗ್ರಾಹಕರಿಗೆ ಅತ್ಯಂತ ಸೃಜನಶೀಲ ರೀತಿಯಲ್ಲಿ ಮಾರಾಟ ಮಾಡುತ್ತಿದ್ದಾರೆ. ಭಾರತದ ಆಮ್ಲೆಟ್​ ಮನುಷ್ಯ (omelette man of india) ಎಂದು ಕೂಡ ಇವರನ್ನು ಕರೆಯುತ್ತಾರೆ. ರುಚಿಕರವಾದ ಆಮ್ಲೆಟ್‌ಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿರುವ ಉದ್ಯಮಿ ಅರ್ಜುನ್. ಅರ್ಜುನ್ ಭಾರತದ ಅಪ್ಪಟ ರುಚಿಯ ಆಮ್ಲೆಟ್​ನ್ನು ಅತ್ಯಂತ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಅದನ್ನು ಅವರ ಗ್ರಾಹಕರು ತುಂಬಾ ಇಷ್ಟಪಟ್ಟಿದ್ದಾರೆ. ಕ್ವೀನ್ಸ್ ಇನ್‌ಸ್ಟಾ ಎಂಬ ತನ್ನ ಸ್ವಂತ ಬ್ರಾಂಡ್​ನ್ನು ಪ್ರಾರಂಭಿಸಿ ಕೇರಳದ ಕ್ಯಾಲಿಕಟ್‌ನಲ್ಲಿ ಮಾರಾಟ ಮಾಡಲು ಪ್ರಾರಂಭಿಸಿದರು.

ಕೇವಲ ಒಂದೇ ನಿಮಿಷದಲ್ಲಿ ರುಚಿಕರವಾದ ಆಮ್ಮೆಟ್​​ ರೆಡಿ:

ಅರ್ಜುನ್ ತನ್ನ ಬೆಲೆಗೆ ಮಾತ್ರವಲ್ಲದೆ ತನ್ನ ಗ್ರಾಹಕರಲ್ಲಿ ವಿವಿಧ ರೀತಿಯ ವೈವಿಧ್ಯತೆಗಳಿಗೆ ಹೆಸರುವಾಸಿಯಾಗಿದ್ದಾರೆ. ಉದಾಹರಣೆಗೆ, ಅವರು ಮಕ್ಕಳಿಗೆ ಮಾಡುವ ಆಮ್ಲೆಟ್‌ಗೆ ಈರುಳ್ಳಿ, ಮೆಣಸಿನಕಾಯಿ ಮತ್ತು ಮೊಟ್ಟೆಯನ್ನು ಬಳಸುವುದಿಲ್ಲವಂತೆ. ಸಾಮಾನ್ಯವಾಗಿ ಜನರಿಗಾಗಿ ಮಾಡುವ ಆಮ್ಲೆಟ್‌ಗಳಲ್ಲಿ ಈರುಳ್ಳಿ, ಮೆಣಸಿನಕಾಯಿ ಮತ್ತು ಅಗತ್ಯ ಪದಾರ್ಥಗಳಿರುತ್ತವೆ.

ನಮಗೆ ಹಸಿವಾದಾಗ ಸಾಮಾನ್ಯವಾಗಿ ಮ್ಯಾಗಿಯನ್ನು 2 ನಿಮಿಷಗಳಲ್ಲಿ ಬೇಯಿಸಲು ಅಥವಾ ತಯಾರಿಸಲು ಇಷ್ಟಪಡುತ್ತೇವೆ. ಆದರೆ ಅರ್ಜುನ್ ನಾಯರ್ ಅವರು ಆಮ್ಲೆಟ್ ತಯಾರಿಸಲು ಕೇವಲ 1 ನಿಮಿಷ ತೆಗೆದುಕೊಳ್ಳುತ್ತಾರೆ. ಅಗತ್ಯಕ್ಕೆ ತಕ್ಕಂತೆ ಬಿಳಿ ಆಮ್ಲೆಟ್ ಮತ್ತು ಹಳದಿ ಆಮ್ಲೆಟ್ ಮಾಡುತ್ತಾರೆ. ಅರ್ಜುನ್ ಅವರ ಆಮ್ಲೆಟ್ ಕೂಡ ವಿಶೇಷವಾಗಿದೆ. ಅದರಲ್ಲಿ ಅವರು ಯಾವುದೇ ರೀತಿಯ ಬಣ್ಣ ಅಥವಾ ಯಾವುದೇ ಸಂರಕ್ಷಕವನ್ನು ಬಳಸುವುದಿಲ್ಲ. ಇಷ್ಟೆಲ್ಲಾ ವೆರೈಟಿ ಇದ್ದರೂ ಅರ್ಜುನ್ ಮಾರುವ ಆಮ್ಲೆಟ್​ ಬೆಲೆ ಕೇವಲ 5 ರೂ.

ಔಟ್‌ಲುಕ್ ಅರ್ಜುನ್ ನಾಯರ್ ಅವರ ಕಥೆಯನ್ನು ಪ್ರಪಂಚದ ಮುಂದೆ ತೆರೆದಿಟ್ಟಾಗ, ಅವರ ಅತ್ಯಂತ ಅಗ್ಗದ ಆಮ್ಲೆಟ್‌ನ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆ ಶುರುವಾಗಿದೆ. ಅರ್ಜನ್ ತನ್ನ ಕೌಶಲ್ಯದಿಂದ ಛಾಪು ಮೂಡಿಸುತ್ತಿದ್ದಾರೆ. ಹೊಸ ವಿಚಾರದೊಂದಿಗೆ ಯಶಸ್ಸನ್ನು ಸಾಧಿಸುವ ಯುವ ಉದ್ಯಮಿಗಳಲ್ಲಿ ಅರ್ಜುನ್ ಕೂಡ  ಒಬ್ಬರು.

ಇದನ್ನೂ ಓದಿ:

ಜಮ್ಮು-ಕಾಶ್ಮೀರದಲ್ಲಿ ಉಗ್ರರ ಕ್ರೌರ್ಯ; ಸರಪಂಚರೊಬ್ಬರನ್ನು ಗುಂಡಿಕ್ಕಿ ಕೊಂದ ಭಯೋತ್ಪಾದಕರು

ಪ್ರಧಾನಿಯಾಗಿ ಇಂದಿರಾ ಗಾಂಧಿಯ ದಾಖಲೆ ಮುರಿದ ಮೋದಿಗೆ ಮುಯಿಝು ಅಭಿನಂದನೆ
ಪ್ರಧಾನಿಯಾಗಿ ಇಂದಿರಾ ಗಾಂಧಿಯ ದಾಖಲೆ ಮುರಿದ ಮೋದಿಗೆ ಮುಯಿಝು ಅಭಿನಂದನೆ
‘ಕೊತ್ತಲವಾಡಿ’ ಸಿನಿಮಾದಲ್ಲಿದೆ ಯಶ್ ಬಳಸಿದ ವಿಶೇಷ ಬೈಕ್
‘ಕೊತ್ತಲವಾಡಿ’ ಸಿನಿಮಾದಲ್ಲಿದೆ ಯಶ್ ಬಳಸಿದ ವಿಶೇಷ ಬೈಕ್
ಕೃಷ್ಣರಾಜ ಒಡೆಯರ್-ಸಿದ್ದರಾಮಯ್ಯ ಇಬ್ಬರೂ ಸಾಮಾಜಿಕ ಹರಿಕಾರರು: ಸಚಿವ
ಕೃಷ್ಣರಾಜ ಒಡೆಯರ್-ಸಿದ್ದರಾಮಯ್ಯ ಇಬ್ಬರೂ ಸಾಮಾಜಿಕ ಹರಿಕಾರರು: ಸಚಿವ
ಕರ್ನಾಟಕವೇ ದೇಶದಲ್ಲಿ ಪ್ರಥಮ ಬಾರಿಗೆ ಜಾತಿಗಣತಿ ಮಾಡಿಸಿದ್ದು: ಸಿದ್ದರಾಮಯ್ಯ
ಕರ್ನಾಟಕವೇ ದೇಶದಲ್ಲಿ ಪ್ರಥಮ ಬಾರಿಗೆ ಜಾತಿಗಣತಿ ಮಾಡಿಸಿದ್ದು: ಸಿದ್ದರಾಮಯ್ಯ
ಜಪಾನಿಗೆ ಬನ್ನೇರುಘಟ್ಟ ಸಾಕಾನೆಗಳ ಏರ್​ ಲಿಫ್ಟ್​ ಯಶಸ್ವಿ
ಜಪಾನಿಗೆ ಬನ್ನೇರುಘಟ್ಟ ಸಾಕಾನೆಗಳ ಏರ್​ ಲಿಫ್ಟ್​ ಯಶಸ್ವಿ
ಸುರ್ಜೇವಾಲಾ ಮಾಡಿದ್ದು ಸರಿಯಲ್ಲ ಅಂತ ರಾಜಣ್ಣನೇ ಹೇಳಿದ್ದಾರೆ: ರವಿಕುಮಾರ್
ಸುರ್ಜೇವಾಲಾ ಮಾಡಿದ್ದು ಸರಿಯಲ್ಲ ಅಂತ ರಾಜಣ್ಣನೇ ಹೇಳಿದ್ದಾರೆ: ರವಿಕುಮಾರ್
ಮಾಲ್ಡೀವ್ಸ್‌ನಲ್ಲಿ ಪ್ರಧಾನಿ ಮೋದಿಗೆ ಗೌರವದ ಸ್ವಾಗತ, ಭಾರತೀಯರಿಂದ ನೃತ್ಯ
ಮಾಲ್ಡೀವ್ಸ್‌ನಲ್ಲಿ ಪ್ರಧಾನಿ ಮೋದಿಗೆ ಗೌರವದ ಸ್ವಾಗತ, ಭಾರತೀಯರಿಂದ ನೃತ್ಯ
ಮಂತ್ರಿ ಮತ್ತು ಶಾಸಕರ ಜೊತೆ ಮಾತ್ರ ಸುರ್ಜೇವಾಲಾ ಮಾತುಕತೆ ನಡೆಸಿದರು: ಸಚಿವ
ಮಂತ್ರಿ ಮತ್ತು ಶಾಸಕರ ಜೊತೆ ಮಾತ್ರ ಸುರ್ಜೇವಾಲಾ ಮಾತುಕತೆ ನಡೆಸಿದರು: ಸಚಿವ
2023ರ ಕರ್ನಾಟಕ ಚುನಾವಣೆಯಲ್ಲಿ ಎಲ್ಲ ಸರಿಯಾಗಿತ್ತಾ? ಪ್ರಲ್ಹಾದ್ ಜೋಶಿ ಲೇವಡಿ
2023ರ ಕರ್ನಾಟಕ ಚುನಾವಣೆಯಲ್ಲಿ ಎಲ್ಲ ಸರಿಯಾಗಿತ್ತಾ? ಪ್ರಲ್ಹಾದ್ ಜೋಶಿ ಲೇವಡಿ
ಮಲ್ಲೇಶ್ವರಂ 11ನೇ ಮುಖ್ಯರಸ್ತೆಗೆ ಸರೋಜಾ ದೇವಿ ಹೆಸರು: ಶಾಸಕ ಅಶ್ವತ್ಥನಾರಾಯಣ
ಮಲ್ಲೇಶ್ವರಂ 11ನೇ ಮುಖ್ಯರಸ್ತೆಗೆ ಸರೋಜಾ ದೇವಿ ಹೆಸರು: ಶಾಸಕ ಅಶ್ವತ್ಥನಾರಾಯಣ