AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಮಾನ ನಿಲ್ದಾಣದಲ್ಲಿ ಕಾರ್ತಿಕ್​ ಆರ್ಯನ್​ಗೆ​ ದುಂಬಾಲುಬಿದ್ದ ಲೇಡಿ ಫ್ಯಾನ್ಸ್​; ವೈರಲ್​ ಆಯ್ತು ವಿಡಿಯೋ

ಯುವತಿಯೊಬ್ಬಳು ಒಂದು ದೊಡ್ಡ ಹೂಗುಚ್ಚ ಹಿಡಿದು ಕಾರ್ತಿಕ್​ಗೆ ನೀಡೋಕೆ ಬಂದಿದ್ದಾಳೆ. ಆದರೆ, ಕಾರ್ತಿಕ್​ ಇದನ್ನು ಸ್ವೀಕರಿಸಿಲ್ಲ. ಬದಲಿಗೆ ಧನ್ಯವಾದ ಹೇಳಿದ್ದಾರೆ.

ವಿಮಾನ ನಿಲ್ದಾಣದಲ್ಲಿ ಕಾರ್ತಿಕ್​ ಆರ್ಯನ್​ಗೆ​ ದುಂಬಾಲುಬಿದ್ದ ಲೇಡಿ ಫ್ಯಾನ್ಸ್​; ವೈರಲ್​ ಆಯ್ತು ವಿಡಿಯೋ
ಕಾರ್ತಿಕ್​ ಆರ್ಯನ್
TV9 Web
| Updated By: ರಾಜೇಶ್ ದುಗ್ಗುಮನೆ|

Updated on:Mar 22, 2022 | 2:37 PM

Share

ಸೆಲೆಬ್ರಿಟಿಗಳು ಸಾರ್ವಜನಿಕವಾಗಿ ಕಾಣಿಸಿಕೊಂಡರೆ ಸಾಕು, ಅವರನ್ನು ನೋಡೋಕೆ ಅಭಿಮಾನಿಗಳು ಮುತ್ತಿಕೊಳ್ಳುತ್ತಾರೆ. ಇದು ಎಲ್ಲ ಸೆಲೆಬ್ರಿಟಿಗಳಿಗೂ ಇಷ್ಟ ಆಗುವುದಿಲ್ಲ. ಕೆಲವರು ಫ್ಯಾನ್ಸ್ ಕಣ್ಣಿಗೆ ಬೀಳದೆ ತೆರಳೋಕೆ ಪ್ರಯತ್ನ ಮಾಡುತ್ತಾರೆ. ಇನ್ನೂ ಕೆಲವರು ಫ್ಯಾನ್ಸ್​ ಕಂಡು ಖುಷಿಪಡುತ್ತಾರೆ. ಈಗ ಬಾಲಿವುಡ್​ ನಟ ಕಾರ್ತಿಕ್​ ಆರ್ಯನ್​ಗೆ (Karthik Aryan) ವಿಮಾನ ನಿಲ್ದಾಣದಲ್ಲಿ (Airport) ಲೇಡಿ ಫ್ಯಾನ್ಸ್​ ಬೆಂಬಿಡದೆ ಕಾಡಿದ್ದಾರೆ. ರೋಸ್​ ನೀಡಿ ತಮ್ಮ ಎಗ್ಸೈಟ್​ಮೆಂಟ್​ ಹೊರಹಾಕಿದ್ದಾರೆ. ಅವರಿಂದ ಎಷ್ಟೇ ತಪ್ಪಿಸಿಕೊಂಡರೂ ಸಾಧ್ಯವಾಗಿಲ್ಲ. ಈ ವಿಡಿಯೋ ಸಖತ್​ ವೈರಲ್​ ಆಗುತ್ತಿದೆ.

ಕಾರ್ತಿಕ್​ ಆರ್ಯನ್​ ಅವರು ಮಂಗಳವಾರ (ಮಾರ್ಚ್​ 22) ಮುಂಬೈ ಏರ್​ಪೋರ್ಟ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ವೇಳೆ ಅವರು ಪಿಂಕ್​ ಕಲರ್ ಸ್ವೆಟರ್​ ಹಾಕಿಕೊಂಡಿದ್ದರು. ಮುಖಕ್ಕೆ ಮಾಸ್ಕ್​ ಧರಿಸಿದ್ದರು. ಗುರುತು ಕಾಣಿಸಿದ ರೀತಿಯಲ್ಲಿ ಕಾರ್ತಿಕ್ ರೆಡಿ ಆಗಿದ್ದರು. ಆದಾಗ್ಯೂ ಕೆಲ ಫ್ಯಾನ್ಸ್ ಅವರನ್ನು ಪತ್ತೆ ಹಚ್ಚಿದ್ದಾರೆ. ಏರ್​ಪೋರ್ಟ್​ನಿಂದ ಕಾರ್ತಿಕ್​ ಅವರನ್ನು ಹಿಂಬಾಲಿಸಿಕೊಂಡು ಬಂದಿದ್ದಾರೆ. ಕಾರ್ತಿಕ್​ಗೆ ಗುಲಾಬಿ ಹೂವು ನೀಡಿದ್ದಾರೆ. ಈ ವೇಳೆ ಅಲ್ಲಿಯೇ ಇದ್ದ ಪಾಪರಾಜಿಗಳು ಗುಲಾಬಿ ಹೂವು ಕೊಟ್ಟ ಲೇಡಿ ಫ್ಯಾನ್ಸ್​ಗೆ ಪ್ರಪೋಸ್​ ಮಾಡುವಂತೆ ಕೋರಿದ್ದಾರೆ.

ಇಷ್ಟಕ್ಕೆ ಮುಗಿದಿಲ್ಲ. ಯುವತಿಯೊಬ್ಬಳು ಒಂದು ದೊಡ್ಡ ಹೂಗುಚ್ಚ ಹಿಡಿದು ಕಾರ್ತಿಕ್​ಗೆ ನೀಡೋಕೆ ಬಂದಿದ್ದಾಳೆ. ಆದರೆ, ಕಾರ್ತಿಕ್​ ಇದನ್ನು ಸ್ವೀಕರಿಸಿಲ್ಲ. ಬದಲಿಗೆ ಧನ್ಯವಾದ ಹೇಳಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್​ ವೈರಲ್​ ಆಗುತ್ತಿದೆ.

‘ನನ್ನ ಹೆಸರಿಗೆ ಹಲವು ಬಿರುದು ನೀಡಿರುವುದು ಖುಷಿಯ ವಿಚಾರ. ಕೆಲವೊಮ್ಮೆ ನಾನು ನೀಡಿದ ಪೋಸ್ ಕೂಡ ಟ್ರೆಂಡಿಂಗ್ ಆಗುತ್ತವೆ. ಜನರಿಂದ ತುಂಬಾ ಪ್ರೀತಿ ಸಿಗುತ್ತಿದೆ. ಇದಕ್ಕೆ ಖುಷಿ ಇದೆ. ನಾನು ತುಂಬಾನೇ ಲಕ್ಕಿ. ನನ್ನ ಹೆಸರಿಗೆ ಇನ್ನಷ್ಟು ಬಿರುದುಗಳು ಸಿಗಲಿ ಎಂದು ಆಶಿಸುತ್ತೇನೆ. ನಾನು ಅಭಿಮಾನಿಗಳ ನಿರೀಕ್ಷೆಗಳಿಗೆ ತಕ್ಕಂತೆ ಬದುಕುತ್ತೇನೆ’ ಎಂದು ಇತ್ತೀಚೆಗೆ ಕಾರ್ತಿಕ್​ ಆರ್ಯನ್ ಹೇಳಿದ್ದರು.

‘ಶೆಹಜಾದ’ ಸಿನಿಮಾದಲ್ಲಿ ಕಾರ್ತಿಕ್​ ನಟಿಸುತ್ತಿದ್ದಾರೆ. ಈ ಚಿತ್ರದ ಕೆಲಸಗಳು ಪೂರ್ಣಗೊಂಡಿವೆ. ಅಲ್ಲು ಅರ್ಜುನ್ ಹಾಗೂ ಪೂಜಾ ಹೆಗ್ಡೆ ನಟಿಸಿದ್ದ ‘ಅಲಾ ವೈಕುಂಟಪುರಮುಲೋ’ ಚಿತ್ರದ ರಿಮೇಕ್ ಇದಾಗಿದೆ. . ಈ ಚಿತ್ರ ನವೆಂಬರ್ 4ರಂದು ತೆರೆಗೆ ಬರುತ್ತಿದೆ. ಇದಲ್ಲದೆ, ‘ಭೂಲ್​ ಭುಲಯ್ಯ 2’, ‘ಫ್ರೆಡ್ಡಿ’ ಚಿತ್ರದಲ್ಲೂ ಅವರು ನಟಿಸುತ್ತಿದ್ದಾರೆ.

ಇದನ್ನೂ ಓದಿ: ಕಾರ್ತಿಕ್​ ಆರ್ಯನ್​ಗೆ ಬರುತ್ತಿಲ್ಲ ಸಿನಿಮಾ ಆಫರ್​; ಕರಣ್​ ಜೋಹರ್​ ಜತೆಗಿನ ವೈಷಮ್ಯವೇ ಮುಳುವಾಯ್ತಾ?

Kartik Aaryan: ಲ್ಯಾಂಬೋರ್ಗಿನಿಯಲ್ಲಿ ತೆರಳಿ ರಸ್ತೆ ಬದಿ ತಿಂಡಿ ಸವಿದ ಕಾರ್ತಿಕ್ ಆರ್ಯನ್

Published On - 2:37 pm, Tue, 22 March 22

ಬಿಗ್​​ಬಾಸ್ 12: ರಕ್ಷಿತಾ ಶೆಟ್ಟಿಗೆ ಯೋಗ್ಯತೆ ಇಲ್ಲ, ರಿಯಾಕ್ಷನ್ ಹೇಗಿತ್ತು?
ಬಿಗ್​​ಬಾಸ್ 12: ರಕ್ಷಿತಾ ಶೆಟ್ಟಿಗೆ ಯೋಗ್ಯತೆ ಇಲ್ಲ, ರಿಯಾಕ್ಷನ್ ಹೇಗಿತ್ತು?
ಸುಳ್ಳು ಹೇಳಿದ್ರೆ ರಿಸೈನ್: ಡಿಕೆಶಿ ರಾಜೀನಾಮೆ ಸವಾಲ್ ಹಾಕಿದ್ಯಾರಿಗೆ?
ಸುಳ್ಳು ಹೇಳಿದ್ರೆ ರಿಸೈನ್: ಡಿಕೆಶಿ ರಾಜೀನಾಮೆ ಸವಾಲ್ ಹಾಕಿದ್ಯಾರಿಗೆ?
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ