AR Rahman: ಬರೋಬ್ಬರಿ ₹ 6.75 ಲಕ್ಷಕ್ಕೆ ಹರಾಜಾದ ಎಆರ್​ ರೆಹಮಾನ್ ದಿರಿಸು; ಹಣ ಯಾವುದಕ್ಕೆ ಬಳಕೆಯಾಗಲಿದೆ ಗೊತ್ತಾ?

ಅಂತಾರಾಷ್ಟ್ರೀಯ ಖ್ಯಾತಿಯ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ ಧರಿಸಿದ್ದ ದಿರಿಸೊಂದು ಬರೋಬ್ಬರಿ 6.75 ಲಕ್ಷ ರೂಗೆ ಮಾರಾಟವಾಗಿದೆ. ಹರಾಜಿನ ಉದ್ದೇಶವೇನು? ಮಾರಾಟದಿಂದ ಬಂದ ಹಣದಿಂದ ಏನು ಮಾಡಲಾಗುತ್ತದೆ? ಕುತೂಹಲಕರ ಮಾಹಿತಿ ಇಲ್ಲಿದೆ.

AR Rahman: ಬರೋಬ್ಬರಿ ₹ 6.75 ಲಕ್ಷಕ್ಕೆ ಹರಾಜಾದ ಎಆರ್​ ರೆಹಮಾನ್ ದಿರಿಸು; ಹಣ ಯಾವುದಕ್ಕೆ ಬಳಕೆಯಾಗಲಿದೆ ಗೊತ್ತಾ?
ಎ.ಆರ್.ರೆಹಮಾನ್ (ಸಂಗ್ರಹ ಚಿತ್ರ)
Follow us
TV9 Web
| Updated By: shivaprasad.hs

Updated on:Mar 22, 2022 | 5:51 PM

ಖ್ಯಾತ ಸಂಗೀತ ನಿರ್ದೇಶಕ, ಗಾಯಕ ಎ.ಆರ್.ರೆಹಮಾನ್ (AR Rahman) ಭಾರತೀಯ ಚಿತ್ರ ಸಂಗೀತವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಗೊಳಿಸಿದವರು. 2009ರಲ್ಲಿ ‘ಸ್ಲಂಡಾಗ್ ಮಿಲಿಯನೇರ್’ ಚಿತ್ರಕ್ಕೆ ಎರಡೆರಡು ಆಸ್ಕರ್ ಪ್ರಶಸ್ತಿ ಪಡೆದ ಪ್ರತಿಭಾವಂತ ಸಂಗೀತ ಸಂಯೋಜಕ ಅವರು. ಭಾರತೀಯ ಜಾನಪದ ಸಂಗೀತ, ವಿವಿಧ ಬಗೆಯ ವಾದ್ಯಗಳನ್ನು ಪಾಶ್ಚಾತ್ಯ ಸಂಗೀತದೊಂದಿಗೆ ಅವರು ಮಿಳಿತಗೊಳಿಸುವ ಪರಿ ಎಂಥವರಿಗೂ ಬೆರಗು ಹುಟ್ಟಿಸುತ್ತದೆ. ಹಿಂದಿ, ಇಂಗ್ಲೀಷ್ ಹಾಗೂ ತಮಿಳು ಚಿತ್ರರಂಗದಲ್ಲಿ ಮುಖ್ಯವಾಗಿ ಸಕ್ರಿಯರಾಗಿರುವ ಅವರು, ದೇಶ- ವಿದೇಶದಲ್ಲಿ ಅಪಾರ ಅಭಿಮಾನಿ ಬಳಗ ಸಂಪಾದಿಸಿದ್ದಾರೆ. 1992ರಲ್ಲಿ ‘ರೋಜಾ’ ಚಿತ್ರದ ಮೂಲಕ ಸಂಗೀತ ನಿರ್ದೇಶಕರಾಗಿ ಅವರು ಪದಾರ್ಪಣೆ ಮಾಡಿದ ಅವರು ಪ್ರಸ್ತುತ ಭಾರತೀಯ ಚಿತ್ರರಂಗದ ಬಹುಬೇಡಿಕೆಯ ಸಂಗೀತ ಸಂಯೋಜಕರಲ್ಲಿ ಒಬ್ಬರು. ಅವರ ಮೇಲೆ ಜನರಿಗೆ ಎಷ್ಟು ಅಭಿಮಾನವಿದೆ ಎನ್ನುವುದಕ್ಕೆ ಇತ್ತೀಚಿನ ಘಟನೆಯೊಂದು ಸಾಕ್ಷಿಯಾಗಿದೆ. ಹೌದು. ಎ.ಆರ್.ರೆಹಮಾನ್ ಧರಿಸಿದ್ದ ದಿರಿಸೊಂದು ಹರಾಜಿನಲ್ಲಿ ಬರೋಬ್ಬರಿ ₹ 6.75 ಲಕ್ಷಕ್ಕೆ ಮಾರಾಟವಾಗಿದೆ.

ಎ.ಆರ್.ರೆಹಮಾನ್ ದಿರಿಸು ಹರಾಜಾಗಿದ್ದು ಯಾವ ಉದ್ದೇಶಕ್ಕೆ?

‘ರಾಜಸ್ಥಾನ ಕಾಸ್ಮೋ ಕ್ಲಬ್ ಫೌಂಡೇಶನ್‌’ನ 28 ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮವು ಇತ್ತೀಚೆಗೆ ಆಳ್ವಾರ್‌ಪೇಟೆ ಮ್ಯೂಸಿಕ್ ಅಕಾಡೆಮಿಯಲ್ಲಿ ನಡೆದಿತ್ತು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ತಮಿಳುನಾಡು ಕೈಮಗ್ಗ ಸಚಿವ ಆರ್.ಗಾಂಧಿ ಒಂದು ಲಕ್ಷ ರೂಪಾಯಿ ದೇಣಿಗೆಯನ್ನು ನೀಡುವುದಾಗಿ ಘೋಷಿಸಿದ್ದರು. ಕಾರ್ಯಕ್ರಮದ ಅಂಗವಾಗಿ, ಬಟ್ಟೆಯನ್ನು ಖರೀದಿಸಲು ಅಶಕ್ತರಾದವರಿಗೆ ಸಹಾಯ ಮಾಡುವ ಯೋಜನೆಯಡಿ ಎ.ಆರ್.ರೆಹಮಾನ್ ಧರಿಸಿದ್ದ ದಿರಿಸನ್ನು ಹರಾಜು ಹಾಕಲಾಯಿತು.

ಆರ್ಥಿಕವಾಗಿ ಅಶಕ್ತರಾದವರಿಗೆ ಸಹಾಯ ಮಾಡುವ ಉದ್ದೇಶದಿಂದ ಹರಾಜಿಗೆ ಇಡಲಾಗಿದ್ದ ಎ.ಆರ್.ರೆಹಮಾನ್ ಧರಿಸಿದ್ದ ದಿರಿಸು ಬರೋಬ್ಬರಿ 6.75 ಲಕ್ಷ ರೂಗೆ ಮಾರಾಟವಾಯಿತು. ಪ್ರಮೋದ್ ಸುರಾಡಿಯಾ ಎನ್ನುವವರು ಹರಾಜಿನಲ್ಲಿ ಉಡುಪನ್ನು ಖರೀದಿಸಿದರು. ಹರಾಜಿನ ಉದ್ದೇಶಕ್ಕೆ ಇದೀಗ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಚಿತ್ರಗಳ ವಿಷಯಕ್ಕೆ ಬಂದರೆ ಎ.ಆರ್.ರೆಹಮಾನ್ ಪ್ರಸ್ತುತ ಹಲವು ಚಿತ್ರಗಳಿಗೆ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ.  ಪಾರ್ತಿಬನ್ ನಿರ್ದೇಶನದ ಮುಂದಿನ ಚಿತ್ರ ‘ಇರವಿನ್ ನಿಜಲ್’ಗೆ ಅವರು ಸಂಗೀತ ನೀಡುತ್ತಿದ್ದು ಇತ್ತೀಚೆಗೆ ಚಿತ್ರದ ಮೋಷನ್ ಪೋಸ್ಟರ್ ರಿಲೀಸ್ ಆಗಿತ್ತು. ಖ್ಯಾತ ನಿರ್ದೇಶಕ ಮಣಿರತ್ನಂ ಇದನ್ನು ರಿಲೀಸ್ ಮಾಡಿದ್ದರು.

ಪ್ರಸ್ತುತ ‘ಮೈದಾನ್’, ‘ಪೊನ್ನಿಯಿನ್ ಸೆಲ್ವನ್’ ಮೊದಲಾದ ಖ್ಯಾತ ಚಿತ್ರಗಳಿಗೆ ರೆಹಮಾನ್ ಸಂಗೀತ ನೀಡುತ್ತಿದ್ದಾರೆ. ವರ್ಚುವಲ್ ರಿಯಾಲಿಟಿ ಚಿತ್ರವಾದ ‘ಲೆ ಮಸ್ಕ್’ ಚಿತ್ರಕ್ಕೆ ಎ.ಆರ್.ರೆಹಮಾನ್ ನಿರ್ದೇಶಕ ಹಾಗೂ ನಿರ್ಮಾಪಕರೂ ಆಗಿದ್ದಾರೆ. ಇದರ ಕೆಲಸಗಳು ನಡೆಯುತ್ತಿವೆ.

ಇದನ್ನೂ ಓದಿ:

Samantha: ‘ಪುಷ್ಪ: ದಿ ರೂಲ್’ನಲ್ಲಿಲ್ಲ ಸಮಂತಾ ಮೋಡಿ? ಹೆಜ್ಜೆಹಾಕಲಿದ್ದಾರಂತೆ ಈ ಬಾಲಿವುಡ್ ಬ್ಯೂಟಿ

ಪಾರ್ವತಮ್ಮ, ಪುನೀತ್ ಹೆಸರಲ್ಲಿ 2 ಬಂಗಾರದ ಪದಕ ಘೋಷಿಸಿದ ಅಶ್ವಿನಿ; ‘ದೊಡ್ಮನೆ ಯಾವತ್ತಿಗೂ ದೊಡ್ಮನೆ’ ಎಂದ ಅಭಿಮಾನಿಗಳು

Published On - 5:45 pm, Tue, 22 March 22

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್