AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Samantha: ‘ಪುಷ್ಪ: ದಿ ರೂಲ್’ನಲ್ಲಿಲ್ಲ ಸಮಂತಾ ಮೋಡಿ? ಹೆಜ್ಜೆಹಾಕಲಿದ್ದಾರಂತೆ ಈ ಬಾಲಿವುಡ್ ಬ್ಯೂಟಿ

Disha Patani: ‘ಪುಷ್ಪ: ದಿ ರೈಸ್’ ಚಿತ್ರದ ‘ಊ ಅಂಟಾವಾ’ ಹಾಡು ಸೆನ್ಸೇಶನ್ ಸೃಷ್ಟಿಸಿತ್ತು. ಸಮಂತಾ ಹೆಜ್ಜೆಹಾಕಿದ್ದ ಹಾಡಿನಿಂದ ಚಿತ್ರಕ್ಕೆ ದೊಡ್ಡ ಮೈಲೇಜ್ ಸಿಕ್ಕಿತ್ತು. ಇದರಿಂದ ‘ಪುಷ್ಪ: ದಿ ರೂಲ್’ನಲ್ಲಿ ಯಾರು ಹೆಜ್ಜೆಹಾಕಬಹುದು ಎಂಬುದರ ಬಗ್ಗೆ ಕುತೂಹಲ ಮೂಡಿತ್ತು. ಈ ಬಗ್ಗೆ ಟಾಲಿವುಡ್ ಅಂಗಳದಿಂದ ಹೊಸ ಸಮಾಚಾರ ಬಂದಿದೆ.

Samantha: ‘ಪುಷ್ಪ: ದಿ ರೂಲ್’ನಲ್ಲಿಲ್ಲ ಸಮಂತಾ ಮೋಡಿ? ಹೆಜ್ಜೆಹಾಕಲಿದ್ದಾರಂತೆ ಈ ಬಾಲಿವುಡ್ ಬ್ಯೂಟಿ
ಸಮಂತಾ, ದಿಶಾ ಪಟಾನಿ
TV9 Web
| Edited By: |

Updated on: Mar 22, 2022 | 4:43 PM

Share

ಬಹುಭಾಷಾ ನಟಿ ಸಮಂತಾ (Samantha) ಈಗ ದೇಶದೆಲ್ಲೆಡೆ ‘ಊ ಅಂಟಾವಾ’ (Oo Antava) ಹಾಡಿನಿಂದಲೇ ಫೇಮಸ್ಸು. ಅಲ್ಲು ಅರ್ಜುನ್ (Allu Arjun) ಹಾಗೂ ರಶ್ಮಿಕಾ ಮಂದಣ್ಣ ನಟನೆಯ ‘ಪುಷ್ಪ: ದಿ ರೈಸ್’ ಚಿತ್ರದ ಈ ಹಾಡು ಸೂಪರ್ ಹಿಟ್ ಆಗಿದ್ದಲ್ಲದೇ, ಚಿತ್ರಕ್ಕೆ ದೊಡ್ಡ ಮೈಲೇಜ್ ನೀಡಿತ್ತು. ‘‘ಆ ಹಾಡಿಗೆ ಅಷ್ಟೊಂದು ದೊಡ್ಡ ಜನಪ್ರಿಯತೆ ಸಿಗುತ್ತದೆ ಎಂದು ನಾನು ಯೋಚಿಸಿರಲಿಲ್ಲ’’ ಎಂದಿದ್ದರು ಸಮಂತಾ. ಅಲ್ಲದೇ ಹಾಡಿಗೆ ಸಿಕ್ಕಿದ್ದ ಜನಪ್ರಿಯತೆಯ ಬಗ್ಗೆ ಮಾತನಾಡಿದ್ದ ನಟಿ, ‘‘ಈ ಹಾಡಿನಿಂದ ತೆಲುಗು ಮಾತ್ರವಲ್ಲ, ಇತರ ಭಾಷೆಗಳ ಅಭಿಮಾನಿಗಳು ಕೂಡ ನನ್ನ ಹಳೆಯ ಚಿತ್ರಗಳನ್ನು ಮರೆತೇ ಬಿಟ್ಟಿದ್ದಾರೆ’’ ಎಂದಿದ್ದರು. ಇದೀಗ ‘ಪುಷ್ಪ’ ಚಿತ್ರತಂಡ ಎರಡನೇ ಭಾಗದ ಸಿದ್ಧತೆಯಲ್ಲಿದೆ. ‘ಪುಷ್ಪ: ದಿ ರೂಲ್’ನಲ್ಲಿ ಬಣ್ಣಹಚ್ಚಲು ಅಲ್ಲು ಅರ್ಜುನ್ ಸನ್ನದ್ಧರಾಗಿದ್ದಾರೆ. ಈ ನಡುವೆ ಚಿತ್ರದ ವಿಶೇಷ ಹಾಡಿನಲ್ಲಿ ಯಾರು ಕಾಣಿಸಿಕೊಳ್ಳಲಿದ್ದಾರೆ ಎಂಬ ಚರ್ಚೆಗಳು ಕೂಡ ಜೋರಾಗಿವೆ. ಕೆಲವು ವರದಿಗಳ ಪ್ರಕಾರ ಈ ಬಾರಿ ಚಿತ್ರದಲ್ಲಿ ಸಮಂತಾ ಮೋಡಿ ಇರುವುದಿಲ್ಲ. ಇದು ಸಮಂತಾ ಅಭಿಮಾನಿಗಳಿಗೆ ಖಂಡಿತವಾಗಿಯೂ ಬೇಸರ ತರಿಸಬಹುದಾದರೂ ಇದು ನಿರ್ದೇಶಕರ ನಿರ್ಧಾರ ಎನ್ನುತ್ತವೆ ವರದಿಗಳು.

ತೆಲುಗಿನ ಮಾಧ್ಯಮವೊಂದರ ವರದಿಯ ಪ್ರಕಾರ, ಬಾಲಿವುಡ್​ ಬ್ಯೂಟಿ ದಿಶಾ ಪಟಾನಿ ‘ಪುಷ್ಪ’ ಚಿತ್ರದ ಎರಡನೇ ಭಾಗದಲ್ಲಿ ಧೂಳೆಬ್ಬಿಸಲಿದ್ದಾರಂತೆ. ಸಮಂತಾ ಹೆಜ್ಜೆಹಾಕಿದ್ದ ‘ಊ ಅಂಟಾವಾ’ ಆಫರ್ ಕೂಡ ಮೊದಲು ದಿಶಾಗೆ ಒಲಿದಿತ್ತು; ಅದನ್ನು ಅವರು ತಿರಸ್ಕರಿಸಿದ್ದರು ಎಂದೂ ವರದಿಗಳು ಹೇಳಿವೆ. ಇದೀಗ ‘ಪುಷ್ಪ: ದಿ ರೂಲ್’ನಲ್ಲಿ ಹೆಜ್ಜೆಹಾಕಲು ಅವರು ಒಪ್ಪಿಗೆ ಸೂಚಿಸಿದ್ದಾರೆ. ನಿರ್ದೇಶಕ ಸುಕುಮಾರ್ ಈ ಕುರಿತು ತೀರ್ಮಾನಿಸಿದ್ದಾರೆ ಎಂದು ಹೇಳಲಾಗಿದೆ.

ಈ ಹಿಂದೆ ಕ್ರಿಟಿಕ್ಸ್ ಚಾಯ್ಸ್ ಅವಾರ್ಡ್​ನಲ್ಲಿ ಭಾಗವಹಿಸಿದ್ದ ಸಮಂತಾ, ‘ಪುಷ್ಪ’ದ ಹಾಡಿಗೆ ಬಂದ ಪ್ರತಿಕ್ರಿಯೆಗಳಿಗೆ ಬಹಳ ಸಂತಸಗೊಂಡಿದ್ದಾಗಿ ತಿಳಿಸಿದ್ದರು. ಮೊದಲಿಗೆ ಸಮಂತಾ ಐಟಂ ಸಾಂಗ್​ಗೆ ಹೆಜ್ಜೆಹಾಕುವ ಆಫರ್ ಬಂದಾಗ ಸ್ವಲ್ಪ ಯೋಚಿಸಿದ್ದರಂತೆ. ಆದರೆ ಅಲ್ಲು ಅರ್ಜುನ್ ಹಾಗೂ ಸುಕುಮಾರ್ ಈ ಹಾಡು ಸೆನ್ಸೇಶನ್ ಮೂಡಿಸಲಿದೆ ಎಂದು ಊಹಿಸಿದ್ದರಂತೆ. ನಂತರ ಹಾಡಿಗೆ ಬಂದಿರುವ ಪ್ರತಿಕ್ರಿಯೆ ಗಮನಿಸಿ ಅದರ ಎಲ್ಲಾ ಕ್ರೆಡಿಟ್​ಗಳನ್ನೂ ನಿರ್ದೇಶಕರಿಗೆ ಹಾಗೂ ನಾಯಕ ಅಲ್ಲು ಅರ್ಜುನ್​ರಿಗೆ ನೀಡಿದ್ದರು ಸಮಂತಾ.

‘ಊ ಅಂಟಾವಾ’ ಹಾಡಿಗೆ ಸಮಂತಾ ಬರೋಬ್ಬರಿ 5 ಕೋಟಿ ರೂ ಸಂಭಾವನೆ ಪಡೆದಿದ್ದಾಗಿ ಸುದ್ದಿಯಾಗಿತ್ತು. ಇದು ಹಲವರಿಗೆ ಅಚ್ಚರಿ ತಂದಿದ್ದರೂ ಕೂಡ, ಸಮಂತಾಗೆ ನೀಡಿದ ಹಣಕ್ಕೆ ಮೋಸವಿಲ್ಲ. ಕಾರಣ ಚಿತ್ರಕ್ಕೆ ಅದರಿಂದ ದೊಡ್ಡ ಪ್ಲಸ್ ಆಗಿದೆ ಎಂದು ಅಭಿಮಾನಿಗಳು ವಾದಿಸಿದ್ದರು. ಇದೀಗ ‘ಪುಷ್ಪ: ದಿ ರೂಲ್’ನಲ್ಲಿ ಸಮಂತಾ ಮೋಡಿ ಇರುವುದಿಲ್ಲ. ಬದಲಾಗಿ ದಿಶಾ ಪಟಾನಿ ಇರಲಿದ್ದಾರೆ ಎಂದು ವರದಿಗಳು ಹೇಳುತ್ತಿರುವುದರಿಂದ ಅಭಿಮಾನಿಗಳು ನಿರಾಶರಾಗಿರುವುದಂತೂ ಹೌದು.

ದಿಶಾ ಪಟಾನಿ ಬಿಕಿನಿ ಕ್ವೀನ್ ಎಂದೇ ಫ್ಯಾನ್ಸ್​ಗಳಿಂದ ಗುರುತಿಸಲ್ಪಡುತ್ತಾರೆ. ಸದಾ ಸಮುದ್ರ ದಂಡೆಯಲ್ಲಿ ವಿಹರಿಸುತ್ತಾ, ಬಿಕಿನಿ ಧರಿಸಿರುವ ಫೋಟೋಗಳನ್ನು ದಿಶಾ ಹಂಚಿಕೊಳ್ಳುತ್ತಿರುತ್ತಾರೆ. ಐಟಂ ಸಾಂಗ್​ನಲ್ಲಿ ಅವರು ಹೆಜ್ಜೆಹಾಕಲಿದ್ದಾರೆ ಎಂಬ ಗಾಸಿಪ್ ಕೇಳಿ ದಿಶಾ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಒಟ್ಟಿನಲ್ಲಿ ‘ಪುಷ್ಪ: ದಿ ರೂಲ್’ ಈಗಲೇ ಹಲವು ಕಾರಣಗಳಿಗೆ ಸಖತ್ ಸದ್ದು ಮಾಡುತ್ತಿದ್ದು, ಕುತೂಹಲ ಮೂಡಿಸಿದೆ.

ದಿಶಾ ಪಟಾನಿ ಫೋಟೋಗಳು ಇಲ್ಲಿವೆ:

ಸಮಂತಾ ನಟಿಸುತ್ತಿರುವ ಚಿತ್ರಗಳ ವಿಷಯಕ್ಕೆ ಬಂದರೆ ಅವರ ಬತ್ತಳಿಕೆಯಲ್ಲಿ ಹಲವು ಚಿತ್ರಗಳಿವೆ. ವಿಭಿನ್ನ ಕಥಾವಸ್ತುಗಳಿರುವ ಚಿತ್ರಗಳಿಗೆ ಸಮಂತಾ ಒಲವು ತೋರುತ್ತಿದ್ದಾರೆ. ‘ಕಾಥುವಾಕುಲ ರೆಂಡು ಕಾದಲ್’, ‘ಶಾಕುಂತಲಮ್’, ‘ಅರೇಂಜ್​ಮೆಂಟ್ಸ್ ಆಫ್ ಲವ್’ ಮೊದಲಾದ ಚಿತ್ರಗಳಲ್ಲಿ ಸಮಂತಾ ತೊಡಗಿಸಿಕೊಂಡಿದ್ದಾರೆ.

ಇದನ್ನೂ ಓದಿ:

ಪಾರ್ವತಮ್ಮ, ಪುನೀತ್ ಹೆಸರಲ್ಲಿ 2 ಬಂಗಾರದ ಪದಕ ಘೋಷಿಸಿದ ಅಶ್ವಿನಿ; ‘ದೊಡ್ಮನೆ ಯಾವತ್ತಿಗೂ ದೊಡ್ಮನೆ’ ಎಂದ ಅಭಿಮಾನಿಗಳು

ಸುಪ್ರೀಂಕೋರ್ಟ್​ ಮೆಟ್ಟಿಲೇರಿದ್ದ ನಟ ಜಗ್ಗೇಶ್​-ಪರಿಮಳಾ ಮದುವೆಗೆ ಈಗ 38 ವರ್ಷ; ಇಲ್ಲಿದೆ ಅಚ್ಚರಿಯ ಸ್ಟೋರಿ

ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?