AR Rahman Birthday: ಆಸ್ಕರ್ ಟ್ರೋಫಿ ಕಳೆದು ಹಾಕಿದ್ದ ರೆಹಮಾನ್; ಇಲ್ಲಿವೆ ಖ್ಯಾತ ಸಂಗೀತ ನಿರ್ದೇಶಕನ ಬಗ್ಗೆ ಗೊತ್ತಿಲ್ಲದ 8 ವಿಚಾರಗಳು
AR Rahman Birthday: ಖ್ಯಾತ ಸಂಗೀತ ಸಂಯೋಜಕ ಎ.ಆರ್. ರೆಹಮಾನ್ ಅವರು ಇಂದು (ಜನವರಿ 6) 54ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಸಂಗೀತ ಕ್ಷೇತ್ರದಲ್ಲಿ ಮಿಂಚಬೇಕು ಎಂದು ಕನಸು ಕಾಣುತ್ತಿರುವ ಹೊಸ ತಲೆಮಾರಿನ ಹಲವರಿಗೆ ಅವರು ಮಾದರಿ. ಅವರ ಬಗ್ಗೆ ಗೊತ್ತಿರದೆ ಇರುವ 8 ವಿಚಾರಗಳು ಇಲ್ಲಿವೆ.
Updated on: Jan 06, 2022 | 1:51 PM

ಖ್ಯಾತ ಸಂಗೀತ ಸಂಯೋಜಕ ಎ.ಆರ್. ರೆಹಮಾನ್ ಅವರು ಇಂದು (ಜನವರಿ 6) 54ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಸಂಗೀತ ಕ್ಷೇತ್ರದಲ್ಲಿ ಮಿಂಚಬೇಕು ಎಂದು ಕನಸು ಕಾಣುತ್ತಿರುವ ಹೊಸ ತಲೆಮಾರಿನ ಹಲವರಿಗೆ ಅವರು ಮಾದರಿ. ಅವರ ಬಗ್ಗೆ ಗೊತ್ತಿರದೆ ಇರುವ 8 ವಿಚಾರಗಳು ಇಲ್ಲಿವೆ.

ರೆಹಮಾನ್ ಅವರು ಬಹಳ ಸಣ್ಣ ವಯಸ್ಸಿಗೆ ಸಂಗೀತದ ಬಗ್ಗೆ ಆಸಕ್ತಿ ಬೆಳೆಸಿಕೊಂಡರು. ಝಾಕಿರ್ ಹುಸೇನ್, ಇಳಯರಾಜ, ವೈದ್ಯನಾಥನ್, ಜತೆ ರೆಹಮಾನ್ ಒಳ್ಳೆಯ ಒಡನಾಟ ಹೊಂದಿದ್ದರು. ಇವರಿಂದ ರೆಹಮಾನ್ ಸಾಕಷ್ಟು ವಿಚಾರಗಳನ್ನು ಕಲಿತುಕೊಂಡರು.

‘ಅವೆಂಜರ್ಸ್; ಎಂಡ್ಗೇಮ್’ನ ಭಾರತದ ರಿಲೀಸ್ಗೆ ಎ.ಆರ್. ರೆಹಮಾನ್ ವಿಶೇಷ ಹಾಡನ್ನು ಕಂಪೋಸ್ ಮಾಡಿದ್ದರು. ಒಂದೇ ವರ್ಷದಲ್ಲಿ ಎರಡು ಆಸ್ಕರ್ ಅವಾರ್ಡ್ ಪಡೆದ ಏಷ್ಯಾದ ಮೊದಲ ಪ್ರಜೆ ಎನ್ನುವ ಖ್ಯಾತಿ ಇವರದ್ದು.

2009ರಲ್ಲಿ ತೆರೆಗೆ ಬಂದ ‘ಸ್ಲಮ್ಡಾಗ್ ಮಿಲಿಯನೇರ್’ ಸಿನಿಮಾಗಾಗಿ 2 ಗ್ರ್ಯಾಮಿ ಅವಾರ್ಡ್, ಒಂದು ಬಿಎಎಫ್ಟಿಎ ಮತ್ತು ಒಂದು ಗೋಲ್ಡನ್ ಗ್ಲೋಬ್ ಅವಾರ್ಡ್ ಸಿಕ್ಕಿದೆ.

ಎ.ಆರ್. ರೆಹಮಾನ್ ಮೊದಲ ಹೆಸರು ಎ.ಎಸ್. ದಿಲೀಪ್ ಕುಮಾರ್. ಹಿಂದೂ ಕುಟುಂಬದಲ್ಲಿ ಜನಿಸಿದ ಅವರು 23 ವರ್ಷಕ್ಕೆ ಇಸ್ಲಾಂ ಧರ್ಮವನ್ನು ಸ್ವೀಕರಿಸಿದರು.

ಚಿಕ್ಕವರಿದ್ದಾಗ ರೆಹಮಾನ್ ‘ವಂಡರ್ ಬಲೂನ್’ ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದರು. ಇದು ದೂರದರ್ಶನದಲ್ಲಿ ಪ್ರಸಾರ ಆಗುತ್ತಿತ್ತು.

ಆಸ್ಕರ್ ಅವಾರ್ಡ್ಅನ್ನು ರೆಹಮಾನ್ ಮನೆಯಲ್ಲಿ ಕಳೆದುಕೊಂಡಿದ್ದರು. ಅದನ್ನು ಎಲ್ಲಿಟ್ಟಿದ್ದೆ ಎಂಬುದು ಅವರಿಗೆ ನೆನಪಿರಲಿಲ್ಲ. ಹಲವು ದಿನಗಳ ಬಳಿಕ ಈ ಅವಾರ್ಡ್ ಪತ್ತೆ ಆಗಿತ್ತು.

ರೆಹಮಾನ್ ತಂದೆ ಆರ್.ಕೆ. ಶೇಖರ್ ಅವರು ತಮಿಳು ಮತ್ತು ಮಲಯಾಳಂ ಚಿತ್ರರಂಗದಲ್ಲಿ ಸಂಗೀತ ಸಂಯೋಜನೆ ಮಾಡಿದ್ದಾರೆ.

2013ರಲ್ಲಿ ಕೆನಡಾದ ರಸ್ತೆ ಒಂದಕ್ಕೆ ರೆಹಮಾನ್ ಹೆಸರನ್ನು ಇಡಲಾಗಿದೆ.




