Sachin Tendulkar: ಆಲ್ ಟೈಮ್ ಬೆಸ್ಟ್ 11 ಹೆಸರಿಸಿದ ಸಚಿನ್: ಪ್ರಮುಖ ಆಟಗಾರರಿಗಿಲ್ಲ ಸ್ಥಾನ
Sachin Tendulkar`s all-time best XI: ವಿರಾಟ್ ಕೊಹ್ಲಿ, ಯುವರಾಜ್ ಸಿಂಗ್, ಕಪಿಲ್ ದೇವ್, ರಾಹುಲ್ ದ್ರಾವಿಡ್, ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ ಅವರಂತಹ ಆಟಗಾರರು ಕೂಡ ಈ ಪಟ್ಟಿಯಲ್ಲಿ ಸ್ಥಾನ ಪಡೆದಿಲ್ಲ.
ಕ್ರಿಕೆಟ್ ದೇವರು, ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ತಮ್ಮ ನೆಚ್ಚಿನ 11 ಆಟಗಾರರನ್ನು ಪ್ರಕಟಿಸಿದರೆ ಹೇಗಿರಬಹುದು? ಇಂತಹದೊಂದು ಕುತೂಹಲಕ್ಕೆ ಕೊನೆಗೂ ಸಚಿನ್ ತೆರೆ ಎಳೆದಿದ್ದಾರೆ. ಹೌದು, ಮಾಸ್ಟರ್ ಬ್ಲಾಸ್ಟರ್ ತಮ್ಮ ಆಲ್ ಟೈಮ್ ಬೆಸ್ಟ್ ಇಲೆವೆನ್ ಅನ್ನು ಪ್ರಕಟಿಸಿದ್ದಾರೆ.
1 / 15
ಆದರೆ ಈ ತಂಡದಲ್ಲಿ ಟೀಮ್ ಇಂಡಿಯಾ ಪರ ಆಡಿದ ನಾಲ್ವರು ಆಟಗಾರರಿಗೆ ಸ್ಥಾನ ನೀಡಿದ್ದಾರೆ. ಇದಾಗ್ಯೂ ಭಾರತದ ಖ್ಯಾತನಾಮ ಕ್ರಿಕೆಟಿಗರು ಎನಿಸಿಕೊಂಡಿರುವ ಅನೇಕ ಆಟಗಾರರನ್ನು ಕೈಬಿಟ್ಟಿದ್ದಾರೆ. ಅದರಲ್ಲೂ ಭಾರತ ತಂಡ ಕಂಡಂತಹ ಶ್ರೇಷ್ಠ ನಾಯಕ ಎಂದೆನಿಸಿಕೊಂಡಿರುವ ಮಹೇಂದ್ರ ಸಿಂಗ್ ಧೋನಿಗೂ ಸಚಿನ್ ತಮ್ಮ ಆಲ್ ಟೈಮ್ ಬೆಸ್ಟ್ ಇಲೆವೆನ್ನಲ್ಲಿ ಸ್ಥಾನ ನೀಡಿಲ್ಲ ಎಂಬುದು ವಿಶೇಷ.
2 / 15
ಇನ್ನು ವಿರಾಟ್ ಕೊಹ್ಲಿ, ಯುವರಾಜ್ ಸಿಂಗ್, ಕಪಿಲ್ ದೇವ್, ರಾಹುಲ್ ದ್ರಾವಿಡ್, ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ ಅವರಂತಹ ಆಟಗಾರರು ಕೂಡ ಈ ಪಟ್ಟಿಯಲ್ಲಿ ಸ್ಥಾನ ಪಡೆದಿಲ್ಲ. ಹಾಗಿದ್ರೆ ಸಚಿನ್ ತೆಂಡೂಲ್ಕರ್ ಹೆಸರಿಸಿದ ಆಲ್ ಟೈಮ್ ಬೆಸ್ಟ್ ಇಲೆವೆನ್ನಲ್ಲಿ ಯಾರೆಲ್ಲಾ ಇದ್ದಾರೆ ನೋಡೋಣ...