ರಾಕಿ ಭಾಯ್​ಗೆ ‘ದುನಿಯಾ’ ಗೆಲ್ಲಲು ನೀವೂ ಸಾಥ್ ನೀಡಬಹುದು! ‘ಕೆಜಿಎಫ್ 2’ ಚಿತ್ರತಂಡ ನೀಡಿರುವ ಭರ್ಜರಿ ಆಫರ್ ಏನು ಗೊತ್ತಾ?

Yash | Hombale Films: ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಹೊಸ ಪ್ರಯತ್ನಕ್ಕೆ ‘ಕೆಜಿಎಫ್ 2’ ಚಿತ್ರತಂಡ ಮುಂದಾಗಿದ್ದು, ಅಭಿಮಾನಿಗಳಿಗೆ ಭರ್ಜರಿ ಆಫರ್ ನೀಡಿದೆ. ಏನದು? ಇಲ್ಲಿದೆ ಮಾಹಿತಿ.

ರಾಕಿ ಭಾಯ್​ಗೆ ‘ದುನಿಯಾ’ ಗೆಲ್ಲಲು ನೀವೂ ಸಾಥ್ ನೀಡಬಹುದು! ‘ಕೆಜಿಎಫ್ 2’ ಚಿತ್ರತಂಡ ನೀಡಿರುವ ಭರ್ಜರಿ ಆಫರ್ ಏನು ಗೊತ್ತಾ?
ಕಲಾವಿದರ ಕಣ್ಣಲ್ಲಿ ‘ಕೆಜಿಎಫ್ 2’ (Credits: Hombale Films/ Twitter)
Follow us
TV9 Web
| Updated By: shivaprasad.hs

Updated on: Mar 22, 2022 | 8:03 PM

ದೇಶದೆಲ್ಲೆಡೆ ‘ಕೆಜಿಎಫ್ 2’ (KGF 2) ಹವಾ ಜೋರಾಗಿದೆ. ಚಿತ್ರತಂಡ ಕೂಡ ಭರ್ಜರಿ ಪ್ರಚಾರದಲ್ಲಿ ತೊಡಗಿಸಿಕೊಳ್ಳುತ್ತಿದೆ. ಇದೀಗ ಅಭಿಮಾನಿಗಳನ್ನು ಚಿತ್ರಕ್ಕೆ ಮತ್ತಷ್ಟು ಹತ್ತಿರವಾಗಿಸಲು ಚಿತ್ರತಂಡ ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಇದುವರೆಗೆ ಯಾರೂ ಮಾಡಿರದ ಸಾಹಸಕ್ಕೆ ಮುಂದಾಗಿದೆ ನಿರ್ಮಾಣ ಸಂಸ್ಥೆ ‘ಹೊಂಬಾಳೆ ಫಿಲ್ಮ್ಸ್’! ಹೌದು. ಯಶ್ ನಾಯಕನಾಗಿ ನಟಿಸುತ್ತಿರುವ ‘ಕೆಜಿಎಫ್ 2’ ಏಪ್ರಿಲ್ 14ರಂದು ವಿಶ್ವಾದ್ಯಂತ ರಿಲೀಸ್ ಆಗುತ್ತಿದೆ. ಪ್ರಶಾಂತ್ ನೀಲ್ ನಿರ್ದೇಶನದ ಈ ಚಿತ್ರ ಈಗಾಗಲೇ ದೊಡ್ಡ ಮಟ್ಟದಲ್ಲಿ ಹವಾ ಎಬ್ಬಿಸಿದೆ. ಇದೀಗ ಚಿತ್ರತಂಡ ಕೊನೆಯ ಹಂತದ ಪ್ರಚಾರ ಕಾರ್ಯಗಳಲ್ಲಿ ಬ್ಯುಸಿಯಾಗಿದ್ದು, ಹಲವು ನೂತನ ಆಫರ್​ಗಳನ್ನು ಅಭಿಮಾನಿಗಳಿಗೆ ನೀಡಿದೆ. ಈ ಕುರಿತು ಹೊಂಬಾಳೆ ಫಿಲ್ಮ್ಸ್ ಟ್ವಿಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಸಂಪೂರ್ಣ ವಿವರ ನೀಡಿದೆ. ಕಲಾವಿದರು, ಗ್ರಾಫಿಕ್ಸ್ ಡಿಸೈನ್​ಗಳಲ್ಲಿ ಆಸಕ್ತಿಯುಳ್ಳವರು ತಾವು ರಚಿಸಿದ ‘ರಾಕಿ ಭಾಯ್’ ಕಲಾಕೃತಿಗಳನ್ನು ಹೊಂಬಾಳೆ ಫಿಲ್ಮ್ಸ್ ಜತೆ ಹಂಚಿಕೊಳ್ಳಬಹುದು. ಅದು ಚಿತ್ರತಂಡ ವಿಶ್ವಾದ್ಯಂತ ನಡೆಸಲಿರುವ ಪ್ರಚಾರದ ಭಾಗವಾಗಲಿದೆ. ಈ ಕುರಿತು ಪೂರ್ಣ ವಿವರ ನೀಡಿದೆ ಚಿತ್ರತಂಡ.

ಹೊಂಬಾಳೆ ಫಿಲ್ಮ್ಸ್ ಹಂಚಿಕೊಂಡ ಮಾಹಿತಿಯಲ್ಲೇನಿದೆ?

ಹೊಂಬಾಳೆ ಫಿಲ್ಮ್ಸ್ ಟ್ವೀಟ್​ನಲ್ಲಿ ಸಂಕ್ಷಿಪ್ತ ಬರಹವನ್ನು ಹಂಚಿಕೊಂಡಿದೆ. ಅದರಲ್ಲಿ ಅಭಿಮಾನಿಗಳಿಗೆ ನೀಡಿರುವ ಭರ್ಜರಿ ಆಫರ್​ನ ವಿವರಣೆಯಿದೆ. ‘‘ಕೆಜಿಎಫ್ 1 ರಿಲೀಸ್ ಆಗಿ ಮೂರು ವರ್ಷವಾಗಿದ್ದು, ನಮಗೆ ಸಿಕ್ಕ ಪ್ರೀತಿಗೆ ವಂದನೆಗಳು. ಇದು ಕೆಜಿಎಫ್​ 2ರ ಪ್ರಯಾಣವನ್ನು ಮತ್ತಷ್ಟು ವಿಶೇಷವಾಗಿಸಿದೆ’’ ಎಂದು ಬರಹವನ್ನು ಆರಂಭಿಸಿದೆ ಹೊಂಬಾಳೆ ಫಿಲ್ಮ್ಸ್.

‘‘ಈ ಚಿತ್ರವು ನಿಮ್ಮೆಲ್ಲರದ್ದು. ಕೆಜಿಎಫ್ 2 ಪ್ರಚಾರಕ್ಕೆ ನೀವೂ ಸಾಥ್ ನೀಡಿದರೆ ಚೆನ್ನಾಗಿರುತ್ತದೆ. ಭಾರತೀಯ ಸಿನಿಮಾ ಇತಿಹಾಸದಲ್ಲೇ ಮೊದಲ ಬಾರಿಗೆ ಅಭಿಮಾನಿ ಕಲಾವಿದರು ರಚಿಸಿದ ಕಲಾಕೃತಿಗಳನ್ನು ಇಟ್ಟುಕೊಂಡು ನಾವು ಪ್ರಚಾರ ನಡೆಸಲಿದ್ದೇವೆ. ಇಂದಿನಿಂದ ಆರಂಭಿಸಿ.. ನೀವು ರಚಿಸಿದ ರಾಕಿ ಭಾಯ್ ಕಲಾಕೃತಿಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ. ಅದು ಚಿತ್ರತಂಡದ ಮುಖ್ಯ ಪ್ರಚಾರದಲ್ಲಿ ಜತೆಯಾಗಲಿದೆ’’

‘‘ಚಿತ್ರವು ಅಭಿಮಾನಿಗಳ ಹೊರತಾಗಿ ಏನೂ ಅಲ್ಲ ಮತ್ತು ಇದರಿಂದ ರಾಕಿ ಭಾಯ್​ಅನ್ನು ಜಗತ್ತಿನ ನಕಾಶೆಯಲ್ಲಿ ಗುರುತಿಸಲು ಸಹಾಯಕವಾಗುತ್ತದೆ. ಕಾರಣ, ರಾಕಿ ಭಾಯ್​ಗೆ ಬೇಕಿರುವುದು ‘ದುನಿಯಾ’’’ ಎಂದು ಬರೆದಿದೆ ಹೊಂಬಾಳೆ ಫಿಲ್ಮ್ಸ್. ಇದಕ್ಕೆ ಸಂಬಂಧಪಟ್ಟಂತೆ ಹೊಂಬಾಳೆ ಫಿಲ್ಮ್ಸ್​​ ಹಂಚಿಕೊಂಡ ಟ್ವೀಟ್ ಇಲ್ಲಿದೆ.

ಪ್ರಶಾಂತ್ ನೀಲ್ ನಿರ್ದೇಶನದ ‘ಕೆಜಿಎಫ್ 2’ ಏಪ್ರಿಲ್ 14ರಂದು ವಿಶ್ವಾದ್ಯಂತ ರಿಲೀಸ್ ಆಗುತ್ತಿದೆ. ಸಂಜಯ್ ದತ್, ರವೀನಾ ಟಂಡನ್, ಪ್ರಕಾಶ್ ರಾಜ್, ಶ್ರೀನಿಧಿ ಶೆಟ್ಟಿ ಮೊದಲಾದ ಖ್ಯಾತ ಕಲಾವಿದರ ದಂಡೇ ಚಿತ್ರದಲ್ಲಿದೆ. ಚಿತ್ರದ ಹೊಸ ಹಾಡು ‘ತೂಫಾನ್’ ಈಗಾಗಲೇ ದೊಡ್ಡ ಮಟ್ಟದಲ್ಲಿ ಹಿಟ್ ಆಗಿದೆ.

ಇದನ್ನೂ ಓದಿ:

ಸಿನಿಮಾ ಒಪ್ಪಿಕೊಳ್ಳುವ ಮುನ್ನ ತಾರೆಯರು ವಿಧಿಸೋ ಷರತ್ತುಗಳಿವು!

Anupama Parameswaran: ಸಾಂಪ್ರದಾಯಿಕ ಗೆಟಪ್​ನಲ್ಲಿ ಮಿಂಚಿದ ‘ನಟಸಾರ್ವಭೌಮ’ ಬೆಡಗಿ; ಅನುಪಮಾ ಪರಮೇಶ್ವರನ್ ಕ್ಯೂಟ್ ಫೋಟೋ ಗ್ಯಾಲರಿ

ನನ್ನನ್ನು ಹುದ್ದೆಯಿಂದ ಸರಿಸಬೇಕೆನ್ನುವವರಿಗೆ ಒಳ್ಳೆಯದಾಗಲಿ: ವಿಜಯೇಂದ್ರ
ನನ್ನನ್ನು ಹುದ್ದೆಯಿಂದ ಸರಿಸಬೇಕೆನ್ನುವವರಿಗೆ ಒಳ್ಳೆಯದಾಗಲಿ: ವಿಜಯೇಂದ್ರ
ಜೈಪುರ ಸಾಹಿತ್ಯ ಉತ್ಸವ; ಕಲ್ ಪೆನ್ ಜೊತೆ ಟಿವಿ9 ಸಿಇಒ ಬರುಣ್ ದಾಸ್ ಸಂವಾದ
ಜೈಪುರ ಸಾಹಿತ್ಯ ಉತ್ಸವ; ಕಲ್ ಪೆನ್ ಜೊತೆ ಟಿವಿ9 ಸಿಇಒ ಬರುಣ್ ದಾಸ್ ಸಂವಾದ
ಪಕ್ಷದ ವಿದ್ಯಮಾನಗಳು ಶಿವಕುಮಾರ್​ರನ್ನು ದೆಹಲಿಗೆ ಹೋಗುವಂತೆ ಮಾಡಿದವೇ?
ಪಕ್ಷದ ವಿದ್ಯಮಾನಗಳು ಶಿವಕುಮಾರ್​ರನ್ನು ದೆಹಲಿಗೆ ಹೋಗುವಂತೆ ಮಾಡಿದವೇ?
ಸಂಪಾದನೆ ಎಷ್ಟೇ ಇರಲಿ ಉಳಿತಾಯ ಮಾಡಲೇಬೇಕು: ಭವ್ಯಾ ಗೌಡ
ಸಂಪಾದನೆ ಎಷ್ಟೇ ಇರಲಿ ಉಳಿತಾಯ ಮಾಡಲೇಬೇಕು: ಭವ್ಯಾ ಗೌಡ
ತ್ರಿವಿಕ್ರಮ ಜೊತೆ ಗೆಳೆತನ ಅಷ್ಟೇ, ಪೊಸ್ಸೆಸ್ಸಿವ್​ನೆಸ್ ಇರಲಿಲ್ಲ: ಭವ್ಯಾ
ತ್ರಿವಿಕ್ರಮ ಜೊತೆ ಗೆಳೆತನ ಅಷ್ಟೇ, ಪೊಸ್ಸೆಸ್ಸಿವ್​ನೆಸ್ ಇರಲಿಲ್ಲ: ಭವ್ಯಾ
‘ನನ್ನ, ತ್ರಿವಿಕ್ರಮ್ ನಡುವೆ ಏನೂ ಇಲ್ಲ, ಪದೇ ಪದೇ ಇದೇ ಹೇಳೋಕಾಗಲ್ಲ’: ಭವ್ಯಾ
‘ನನ್ನ, ತ್ರಿವಿಕ್ರಮ್ ನಡುವೆ ಏನೂ ಇಲ್ಲ, ಪದೇ ಪದೇ ಇದೇ ಹೇಳೋಕಾಗಲ್ಲ’: ಭವ್ಯಾ
ವಿಜಯೇಂದ್ರ ವಿರುದ್ಧ ನಡ್ಡಾ ಜೀಗೆ ಪತ್ರ ಬರೆದಿರುವುದು ನಿಜ: ಯತ್ನಾಳ್
ವಿಜಯೇಂದ್ರ ವಿರುದ್ಧ ನಡ್ಡಾ ಜೀಗೆ ಪತ್ರ ಬರೆದಿರುವುದು ನಿಜ: ಯತ್ನಾಳ್
ಹೊಸ ಗೆಟಪ್ ನಲ್ಲಿ ಸಭೆಗೆ ಆಗಮಿಸಿದ ಬಸನಗೌಡ ಪಾಟೀಲ್ ಯತ್ನಾಳ್!
ಹೊಸ ಗೆಟಪ್ ನಲ್ಲಿ ಸಭೆಗೆ ಆಗಮಿಸಿದ ಬಸನಗೌಡ ಪಾಟೀಲ್ ಯತ್ನಾಳ್!
ರೈಲ್ವೆ ಟಿಕೆಟ್ ಕಲೆಕ್ಟರ್ ವೇಗಕ್ಕೆ ಶರಣಾದ ಕ್ರಿಕೆಟ್ ಸಾಮ್ರಾಟ..!
ರೈಲ್ವೆ ಟಿಕೆಟ್ ಕಲೆಕ್ಟರ್ ವೇಗಕ್ಕೆ ಶರಣಾದ ಕ್ರಿಕೆಟ್ ಸಾಮ್ರಾಟ..!
ಪಕ್ಷದ ನಾಯಕರು ಒಂದೆಡೆ ಸೇರಿ ಊಟ ಮಾಡುವುದು ತಪ್ಪಲ್ಲ: ಸಿದ್ದರಾಮಯ್ಯ
ಪಕ್ಷದ ನಾಯಕರು ಒಂದೆಡೆ ಸೇರಿ ಊಟ ಮಾಡುವುದು ತಪ್ಪಲ್ಲ: ಸಿದ್ದರಾಮಯ್ಯ