ಪರಭಾಷೆ ಸಿನಿಮಾಗಳಿಂದ ‘ಜೇಮ್ಸ್’ ಚಿತ್ರಕ್ಕೆ ತೊಂದರೆ; ಆಕ್ರೋಶ ಹೊರಹಾಕಿದ ಅಪ್ಪು ಅಭಿಮಾನಿಗಳು
ದಿನದಿಂದ ದಿನಕ್ಕೆ ‘ಜೇಮ್ಸ್’ ಸಿನಿಮಾಗೆ ಚಿತ್ರಮಂದಿರಗಳ ಸಂಖ್ಯೆ ಕಡಿಮೆ ಮಾಡಲಾಗುತ್ತಿದೆ. ಇದಕ್ಕೆ ಪುನೀತ್ ರಾಜ್ಕುಮಾರ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪುನೀತ್ ರಾಜ್ಕುಮಾರ್ (Puneeth Rajkumar) ಅಭಿಮಾನಿಗಳಿಗೆ ‘ಜೇಮ್ಸ್’ ಸಿನಿಮಾ ಬಗ್ಗೆ ವಿಶೇಷವಾದ ಭಾವನೆ ಇದೆ. ಇದು ಅಪ್ಪು ಹೀರೋ ಆಗಿ ನಟಿಸಿದ ಕೊನೇ ಸಿನಿಮಾ ಎಂಬ ಕಾರಣಕ್ಕೆ ಜನರು ಎಮೋಷನಲ್ ಆಗಿ ಕನೆಕ್ಟ್ ಆಗಿದ್ದಾರೆ. ಅನೇಕ ಕಡೆಗಳಲ್ಲಿ ಈ ಸಿನಿಮಾದ ಪ್ರದರ್ಶನ ಆಗುತ್ತಿದೆ. ಆದರೆ ಕೆಲವು ಚಿತ್ರಮಂದಿರಗಳಿಂದ ‘ಜೇಮ್ಸ್’ (James Movie) ಸಿನಿಮಾವನ್ನು ತೆಗೆಯಲಾಗುತ್ತಿದೆ. ಇದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣ ಆಗಿದೆ. ‘ಜೇಮ್ಸ್’ಗೆ ಮೀಸಲಾಗಿದ್ದ ಚಿತ್ರಮಂದಿರಗಳನ್ನು ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ (The Kashmir Files) ಆಕ್ರಮಿಸಿಕೊಳ್ಳುತ್ತಿದೆ. ‘ಈ ರೀತಿ ಆಗುತ್ತಿರುವುದು ಸರಿಯಲ್ಲ. ಇದು ಕನ್ನಡ ಚಿತ್ರಕ್ಕೆ ಮಾಡಿದ ಅವಮಾನ’ ಎಂದು ಅಪ್ಪು ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಮೈಸೂರಿನ ರಾಮಸ್ವಾಮಿ ವೃತ್ತದಲ್ಲಿ ಅಭಿಮಾನಿಗಳಿಂದ ಪ್ರತಿಭಟನೆ ಮಾಡಲಾಗಿದೆ. ಪುನೀತ್ ಅವರ ಭಾವಚಿತ್ರವನ್ನು ಹಿಡಿದು ಘೋಷಣೆ ಕೂಗಲಾಗಿದೆ. ಅದೇ ರೀತಿ ಬೆಂಗಳೂರಿನಲ್ಲೂ ಅಪ್ಪು ಅಭಿಮಾನಿಗಳಿಂದ ಅಸಮಾಧಾನ ವ್ಯಕ್ತವಾಗಿದೆ. ತೆಲುಗಿನ ‘ಆರ್ಆರ್ಆರ್’ ಸಿನಿಮಾ ಮಾ.25ರಂದು ತೆರೆಕಾಣಲಿರುವ ಹಿನ್ನೆಲೆಯಲ್ಲಿ ‘ಜೇಮ್ಸ್’ ಚಿತ್ರಕ್ಕೆ ಚಿತ್ರಮಂದಿರಗಳ ಸಂಖ್ಯೆ ಕಡಿಮೆ ಆಗಲಿದೆ. ಆ ಕುರಿತು ಫ್ಯಾನ್ಸ್ ಬೇಸರ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:
‘ಜೇಮ್ಸ್’ ಸಿನಿಮಾ ನೋಡಲು ಬಂದ ಅಭಿಮಾನಿಗಳಿಗೆ ಭರ್ಜರಿ ಬಾಡೂಟ; ಇಲ್ಲಿದೆ ವಿಡಿಯೋ
‘ದಿ ಕಾಶ್ಮೀರ್ ಫೈಲ್ಸ್’ಗಿಂತಲೂ ಹೆಚ್ಚು IMDb ರೇಟಿಂಗ್ ಪಡೆದ ‘ಜೇಮ್ಸ್’; 10ಕ್ಕೆ 9.9 ನೀಡಿದ ಪ್ರೇಕ್ಷಕರು