- Kannada News Photo gallery Puneeth Rajkumar Soldier getup in James movie: Here is the exclusive stills
ಸೈನಿಕನ ಗೆಟಪ್ನಲ್ಲಿ ಆಹಾ ಎಷ್ಟು ಚಂದ ಪುನೀತ್; ಇಲ್ಲಿವೆ ‘ಜೇಮ್ಸ್’ ಸಿನಿಮಾದ ಫೋಟೋಗಳು
Puneeth Rajkumar James Movie Photos: ‘ಜೇಮ್ಸ್’ ಸಿನಿಮಾದಲ್ಲಿ ಪುನೀತ್ ರಾಜ್ಕುಮಾರ್ ಅವರಿಗೆ ಸೈನಿಕನ ಪಾತ್ರ ಇದೆ. ದೊಡ್ಡ ಪರದೆ ಮೇಲೆ ಅವರನ್ನು ಆ ಗೆಟಪ್ನಲ್ಲಿ ನೋಡಲು ಅಭಿಮಾನಿಗಳು ಕಾದಿದ್ದಾರೆ.
Updated on: Mar 11, 2022 | 4:39 PM

Puneeth Rajkumar Soldier getup in James movie: Here is the exclusive stills

Puneeth Rajkumar Soldier getup in James movie: Here is the exclusive stills

ಸೈನಿಕನ ಪಾತ್ರ ಎಂದರೆ ಅದಕ್ಕೆ ತೂಕ ಹೆಚ್ಚು. ಅಪ್ಪು ಈ ಪಾತ್ರ ಮಾಡಿದ್ದಾರೆ ಎಂದರೆ ಸಿನಿಮಾದಲ್ಲಿ ದೇಶಭಕ್ತಿಯ ಕಥಾಹಂದರ ಇರಲಿದೆ ಎಂದು ಫ್ಯಾನ್ಸ್ ಊಹಿಸುತ್ತಿದ್ದಾರೆ. ಅಭಿಮಾನಿಗಳ ಕೌತುಕಕ್ಕೆ ಮಾ.17ರಂದು ತೆರೆ ಬೀಳಲಿದೆ. ಅಂದು ‘ಜೇಮ್ಸ್’ ಚಿತ್ರ ರಿಲೀಸ್.

ದೇಶದ ಸೈನಿಕರಿಗೆ ಗೌರವ ಸೂಚಿಸಲು ಮಾ.11ರಂದು ‘ಜೇಮ್ಸ್’ ಚಿತ್ರತಂಡದಿಂದ ‘ಸಲಾಂ ಸೋಲ್ಜರ್..’ ಹಾಡು ಬಿಡುಗಡೆ ಆಗಿದೆ. ದೇಶಕ್ಕೆ ಕೊಡುಗೆ ನೀಡುವ ಪ್ರತಿಯೊಬ್ಬ ಸೈನಿಕರಿಗೂ ಈ ಹಾಡನ್ನು ಅರ್ಪಿಸಲಾಗಿದೆ. ಪುನೀತ್ ಅಭಿಮಾನಿಗಳಿಗೆ ಈ ಹಾಡು ಸಖತ್ ಇಷ್ಟ ಆಗಿದೆ.

ಪುನೀತ್ ರಾಜ್ಕುಮಾರ್ ಅವರನ್ನು ಕಳೆದುಕೊಂಡ ನೋವು ಎಲ್ಲರನ್ನೂ ಕಾಡುತ್ತಿದೆ. ಇಂಥ ಸಿನಿಮಾಗಳ ಮೂಲಕ ಅವರು ಎಂದಿಗೂ ಜೀವಂತವಾಗಿ ಇರುತ್ತಾರೆ. ಅವರು ಹೀರೋ ಆಗಿ ನಟಿಸಿದ ಕೊನೇ ಸಿನಿಮಾ ‘ಜೇಮ್ಸ್’. ಗಲ್ಲಾಪೆಟ್ಟಿಗೆಯಲ್ಲಿ ಈ ಚಿತ್ರ ಇತಿಹಾಸ ಬರೆಯಲಿದೆ.

ಚೇತನ್ ಕುಮಾರ್ ನಿರ್ದೇಶನದ ‘ಜೇಮ್ಸ್’ ಚಿತ್ರಕ್ಕೆ ಒಂದು ವಾರ ಮುನ್ನವೇ ಟಿಕೆಟ್ ಬುಕಿಂಗ್ ಓಪನ್ ಮಾಡಲಾಗಿದೆ. ಮೊದಲ ದಿನದ ಎಲ್ಲ ಟಿಕೆಟ್ಗಳು ಸೋಲ್ಡ್ ಔಟ್ ಆಗುತ್ತಿವೆ. ಅದ್ದೂರಿಯಾಗಿ ಸಿನಿಮಾವನ್ನು ಬರಮಾಡಿಕೊಳ್ಳಲು ಫ್ಯಾನ್ಸ್ ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ.



















