‘ದಿ ಕಾಶ್ಮೀರ್​ ಫೈಲ್ಸ್​’ಗಿಂತಲೂ ಹೆಚ್ಚು IMDb ರೇಟಿಂಗ್​ ಪಡೆದ ‘ಜೇಮ್ಸ್​’; 10ಕ್ಕೆ 9.9 ನೀಡಿದ ಪ್ರೇಕ್ಷಕರು

James Movie IMDb Rating: ಜಾಗತಿಕವಾಗಿ ಐಎಂಡಿಬಿ ರೇಟಿಂಗ್​ ಅನ್ನು ಸಿನಿಮಾ ವಲಯದವರು ಗಂಭೀರವಾಗಿ ಪರಿಗಣಿಸುತ್ತಾರೆ. ‘ಜೇಮ್ಸ್’ ಸಿನಿಮಾಗೆ 9.9 /10 ರೇಟಿಂಗ್​ ಸಿಕ್ಕಿದೆ.

‘ದಿ ಕಾಶ್ಮೀರ್​ ಫೈಲ್ಸ್​’ಗಿಂತಲೂ ಹೆಚ್ಚು IMDb ರೇಟಿಂಗ್​ ಪಡೆದ ‘ಜೇಮ್ಸ್​’; 10ಕ್ಕೆ 9.9 ನೀಡಿದ ಪ್ರೇಕ್ಷಕರು
ಜೇಮ್ಸ್​, ದಿ ಕಾಶ್ಮೀರ್​ ಫೈಲ್ಸ್ ಐಎಂಡಿಬಿ ರೇಟಿಂಗ್
Follow us
TV9 Web
| Updated By: ಮದನ್​ ಕುಮಾರ್​

Updated on: Mar 20, 2022 | 2:19 PM

ಸದ್ಯಕ್ಕೆ ದೇಶಾದ್ಯಂತ ಸದ್ದು ಮಾಡುತ್ತಿರುವ ಸಿನಿಮಾಗಳಲ್ಲಿ ಹಿಂದಿಯ ‘ದಿ ಕಾಶ್ಮೀರ್​ ಫೈಲ್ಸ್​’ ಮತ್ತು ಕನ್ನಡದ ಜೇಮ್ಸ್​ ಚಿತ್ರಗಳ ಹೆಸರು ಮುಂಚೂಣಿಯಲ್ಲಿದೆ. ಕಾಶ್ಮೀರಿ ಪಂಡಿತರ ಹತ್ಯೆ ಮತ್ತು ವಲಸೆ ಆಧರಿಸಿ ತಯಾರಾದ ‘ದಿ ಕಾಶ್ಮೀರ್​ ಫೈಲ್ಸ್​’ (The Kashmir Files) ಸಿನಿಮಾವನ್ನು ಜನರು ಮುಗಿಬಿದ್ದು ನೋಡುತ್ತಿದ್ದಾರೆ. ಅದೇ ರೀತಿ, ಪುನೀತ್​ ರಾಜ್​ಕುಮಾರ್​ ಹೀರೋ ಆಗಿ ನಟಿಸಿದ ಕೊನೇ ಸಿನಿಮಾ ಎಂಬ ಕಾರಣಕ್ಕೆ ‘ಜೇಮ್ಸ್​’ ಚಿತ್ರ(James Movie) ಕೂಡ ಜನಮನ ಗೆದ್ದಿದೆ. ಮೊದಲ ದಿನವೇ ಈ ಚಿತ್ರಕ್ಕೆ 30 ಕೋಟಿಗೂ ಅಧಿಕ ಕಲೆಕ್ಷನ್​ ಆಗಿದೆ. ಅತ್ತ ‘ದಿ ಕಾಶ್ಮೀರ್​ ಫೈಲ್ಸ್​’ ಕೂಡ ಭರ್ಜರಿ ಕಲೆಕ್ಷನ್​ ಮಾಡುತ್ತಿದೆ. ವಿಶೇಷ ಏನೆಂದರೆ ಐಎಂಡಿಬಿ ರೇಟಿಂಗ್​ನಲ್ಲಿ (IMDb Rating) ಈ ಸಿನಿಮಾಗಳ ನಡುವೆ ಪೈಪೋಟಿ ಇದೆ. ಇದರಲ್ಲಿ ‘ಜೇಮ್ಸ್​’ ಸಿನಿಮಾ 10ಕ್ಕೆ 9.9 ರೇಟಿಂಗ್​ ಪಡೆದುಕೊಂಡಿದೆ. ‘ದಿ ಕಾಶ್ಮೀರ್​ ಫೈಲ್ಸ್​’ ಸಿನಿಮಾಗೆ 8.3 ರೇಟಿಂಗ್​ ನೀಡಲಾಗಿದೆ. ಆ ಮೂಲಕ ಹಿಂದಿ ಸಿನಿಮಾವನ್ನೂ ಮೀರಿಸಿ, ರೇಟಿಂಗ್ ವಿಚಾರದಲ್ಲಿ ‘ಜೇಮ್ಸ್​’ ಗಮನ ಸೆಳೆಯುತ್ತಿದೆ. ಇದು ಪುನೀತ್​ ರಾಜ್​ಕುಮಾರ್​ ಅಭಿಮಾನಿಗಳಿಗೆ ಖುಷಿ ನೀಡಿದೆ.

ಜಾಗತಿಕವಾಗಿ ಐಎಂಡಿಬಿ ರೇಟಿಂಗ್​ ಅನ್ನು ಸಿನಿಮಾ ವಲಯದವರು ಗಂಭೀರವಾಗಿ ಪರಿಗಣಿಸುತ್ತಾರೆ. ಇಲ್ಲಿ ಹೆಚ್ಚು ರೇಟಿಂಗ್​ ಪಡೆಯುವ ಸಿನಿಮಾಗಳ ಬಗ್ಗೆ ಪ್ರೇಕ್ಷಕರು ಕೂಡ ಆಸಕ್ತಿ ತೋರಿಸುತ್ತಾರೆ. ಜಗತ್ತಿನ ಅನೇಕ ಸಿನಿಮಾಗಳು ಐಎಂಡಿಬಿ ರೇಟಿಂಗ್​ ಸಲುವಾಗಿ ಪೈಪೋಟಿ ನಡೆಸಿದ್ದುಂಟು. ಜನರು ನೀಡುವ ವೋಟಿಂಗ್​ ಆಧಾರದ ಮೇಲೆ ರೇಟಿಂಗ್​ ನಿರ್ಧಾರ ಆಗುತ್ತದೆ. ಒಂದು ವೇಳೆ ಜನರ ವೋಟಿಂಗ್​ನಲ್ಲಿ ಅನುಮಾನ ಕಂಡುಬಂದರೆ ಬೇರೆ ಮಾನದಂಡವನ್ನು ಬಳಸಿ ರೇಟಿಂಗ್​ ನೀಡಲಾಗುತ್ತದೆ.

‘ದಿ ಕಾಶ್ಮೀರ್​ ಫೈಲ್ಸ್​’ ಸಿನಿಮಾ ಮಾ.11ರಂದು ತೆರೆಕಂಡಿತು. ಆರಂಭದಲ್ಲಿ ಈ ಚಿತ್ರಕ್ಕೆ ಹೆಚ್ಚು ರೇಟಿಂಗ್​ ನೀಡಲಾಗಿತ್ತು. ಆದರೆ ವೋಟಿಂಗ್​ ಪ್ರತಿಕ್ರಿಯೆಯಲ್ಲಿ ಅನುಮಾನ ವ್ಯಕ್ತವಾಗಿದ್ದರಿಂದ ಬೇರೆ ವ್ಯವಸ್ಥೆಯ ಮೂಲಕ ಈ ಚಿತ್ರಕ್ಕೆ ರೇಟಿಂಗ್​ ನೀಡಲಾಯಿತು. ಆಗ ಸಿಕ್ಕಿದ್ದೇ 8.3 ರೇಟಿಂಗ್​. ಈ ಚಿತ್ರಕ್ಕೆ 5 ಲಕ್ಷಕ್ಕೂ ಅಧಿಕ ಜನರು ವೋಟ್​ ಮಾಡಿದ್ದಾರೆ. ‘ಜೇಮ್ಸ್​’ ಸಿನಿಮಾಗೆ ಸದ್ಯಕ್ಕೆ ಮೂರೂವರೆ ಸಾವಿರ ಜನರು ವೋಟ್​ ಮಾಡಿದ್ದಾರೆ. ವೋಟಿಂಗ್​ ಆಧಾರದ ಮೇಲೆ ಮುಂದಿನ ದಿನಗಳಲ್ಲಿ ರೇಟಿಂಗ್​ನಲ್ಲಿ ವ್ಯತ್ಯಾಸ ಆಗಬಹುದು.

‘ಜೇಮ್ಸ್​’ ಸಿನಿಮಾಗೆ ಚೇತನ್​ ಕುಮಾರ್​ ನಿರ್ದೇಶನ ಮಾಡಿದ್ದಾರೆ. ಕಿಶೋರ್​ ಪತ್ತಿಕೊಂಡು ನಿರ್ಮಾಣ ಮಾಡಿದ್ದಾರೆ. ಪುನೀತ್​ ರಾಜ್​ಕುಮಾರ್​ಗೆ ಜೋಡಿಯಾಗಿ ಪ್ರಿಯಾ ಆನಂದ್​ ನಟಿಸಿದ್ದಾರೆ. ಪುನೀತ್​ ಅಭಿಮಾನಿಗಳು ಈ ಚಿತ್ರವನ್ನು ಒಂದು ಎಮೋಷನ್​ ರೀತಿ ಸ್ವೀಕರಿಸಿದ್ದಾರೆ. ಸಿನಿಮಾದ ಆ್ಯಕ್ಷನ್​ ದೃಶ್ಯಗಳನ್ನು ಜನರು ಇಷ್ಟಪಟ್ಟಿದ್ದಾರೆ. ರಾಘವೇಂದ್ರ ರಾಜ್​, ಶಿವರಾಜ್​ಕುಮಾರ್​, ವಿನಯ್​ ರಾಜ್​ಕುಮಾರ್​ ಸೇರಿದಂತೆ ಡಾ. ರಾಜ್​ಕುಮಾರ್​ ಕುಟುಂಬದ ಅನೇಕರು ಮೊದಲ ದಿನವೇ ಚಿತ್ರವನ್ನು ಕಣ್ತುಂಬಿಕೊಂಡರು.

ಐಎಂಡಿಬಿ ರೇಟಿಂಗ್​ನಲ್ಲಿ ‘ದಿ ಕಾಶ್ಮೀರ್​ ಫೈಲ್ಸ್​’ ಚಿತ್ರಕ್ಕೆ ಹಿನ್ನಡೆ ಆಗಿದ್ದರಿಂದ ನಿರ್ದೇಶಕ ವಿವೇಕ್​ ಅಗ್ನಿಹೋತ್ರಿ ಅವರು ಇತ್ತೀಚೆಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಪರ್ಯಾಯ ಮಾರ್ಗದ ಮೂಲಕ ತಮ್ಮ ಸಿನಿಮಾಗೆ 8.3 ರೇಟಿಂಗ್​ ನೀಡಿರುವುದು ಸಹಜವಲ್ಲ ಮತ್ತು ನೈತಿಕವಾಗಿಲ್ಲ ಎಂದು ಅವರು ಹೇಳಿದ್ದರು. ‘ದಿ ಕಾಶ್ಮೀರ್​ ಫೈಲ್ಸ್​’ ಸಿನಿಮಾಗೆ ರೇಟಿಂಗ್​ ನೀಡಲು ಐಎಂಡಿಬಿ ಬಳಸಿದ ಪರ್ಯಾಯ ಮಾರ್ಗ ಯಾವುದು ಎಂಬುದನ್ನು ಬಹಿರಂಗ ಪಡಿಸಿಲ್ಲ. ಈ ವಿಚಾರದ ಬಗ್ಗೆ ಪರ-ವಿರೋಧದ ಬಗ್ಗೆ ಚರ್ಚೆ ನಡೆಯುತ್ತಿದೆ. ರೇಟಿಂಗ್​ ವಿಷಯ ಏನೇ ಇರಲಿ, ಗಲ್ಲಾಪೆಟ್ಟಿಗೆ ವಿಚಾರದಲ್ಲಿ ‘ದಿ ಕಾಶ್ಮೀರ್​ ಫೈಲ್ಸ್​’ ಸಿನಿಮಾ ದೊಡ್ಡ ಸಾಧನೆ ಮಾಡಿದೆ. ಚಿತ್ರ ಬಿಡುಗಡೆಯಾಗಿ 9 ದಿನ ಕಳೆದಿದ್ದು, 141 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿದೆ. ಶೀಘ್ರದಲ್ಲೇ ಈ ಸಿನಿಮಾ 200 ಕೋಟಿ ರೂಪಾಯಿ ಗಳಿಸುವ ಸಾಧ್ಯತೆ ದಟ್ಟವಾಗಿದೆ.

ಇದನ್ನೂ ಓದಿ:

The Kashmir Files Review: ಕಾಶ್ಮೀರದ ಭಯಾನಕ ಇತಿಹಾಸ ಮರೆಯಬಾರದು; ಮರುಕಳಿಸಲೂಬಾರದು

‘ದಿ ಕಾಶ್ಮೀರ್​ ಫೈಲ್ಸ್​’ 200 ಕೋಟಿ ರೂ. ಗಳಿಸೋದು ಖಚಿತ; ಬಾಕ್ಸ್​ ಆಫೀಸ್​ನಲ್ಲಿ ಈ ಚಿತ್ರದ್ದೇ ಆರ್ಭಟ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ