3 ದಿನ ಸಾರಿ ಕೇಳಿದ್ರು ಪುನೀತ್​; ಅದಕ್ಕೆ ಕಾರಣ ಆಗಿದ್ದ ಆ ಘಟನೆ ಬಗ್ಗೆ ವಿವರಿಸಿದ ‘ಜೇಮ್ಸ್​’ ವಿಲನ್​

Puneeth Rajkumar: ‘ಜೇಮ್ಸ್​’ ಸಿನಿಮಾದಲ್ಲಿ ಪುನೀತ್​ ರಾಜ್​ಕುಮಾರ್​ ಜೊತೆ ಅಭಿನಯಿಸುವ ಅವಕಾಶ ನಟ ಪ್ರಸನ್ನ ಅವರಿಗೆ ಸಿಕ್ಕಿತು. ಶೂಟಿಂಗ್​ ಅನುಭವದ ಬಗ್ಗೆ ಅವರು ಈಗ ಮಾತನಾಡಿದ್ದಾರೆ.

TV9kannada Web Team

| Edited By: Madan Kumar

Mar 23, 2022 | 4:15 PM

ನಟ ಪುನೀತ್​ ರಾಜ್​ಕುಮಾರ್ (Puneeth Rajkumar)​ ಗುಣದ ಬಗ್ಗೆ ಎಲ್ಲರೂ ಕೊಂಡಾಡುತ್ತಾರೆ. ಎಲ್ಲ ಕಲಾವಿದರನ್ನೂ ಸಮಾನಭಾವದಿಂದ ನೋಡುವ ಅವರ ವ್ಯಕ್ತಿತ್ವಕ್ಕೆ ಇಡೀ ಚಿತ್ರರಂಗವೇ ಸಲಾಂ ಎನ್ನುತ್ತದೆ. ಅಪ್ಪು ಹೀರೋ ಆಗಿ ನಟಿಸಿದ ಕೊನೆ ಸಿನಿಮಾ ‘ಜೇಮ್ಸ್​’ (James Movie) ಮಾ.17ರಂದು ತೆರೆಕಂಡಿತು. ಅಭಿಮಾನಿಗಳಿಗೆ ಈ ಸಿನಿಮಾ ತುಂಬ ಇಷ್ಟ ಆಗಿದೆ. ಈ ಚಿತ್ರದಲ್ಲಿ ಹಲವಾರು ಕಲಾವಿದರು ನಟಿಸಿದ್ದಾರೆ. ನಟ ಪ್ರಸನ್ನ ಅವರು ಪುನೀತ್​ ಜೊತೆ ಕಳೆದ ಕ್ಷಣಗಳನ್ನು ಈಗ ನೆನಪು ಮಾಡಿಕೊಂಡಿದ್ದಾರೆ. ‘ಅವರು ದೊಡ್ಡ ಸ್ಟಾರ್​. ಅವರ ಜೊತೆ ಹೇಗೆ ನಟಿಸೋದು ಎಂಬ ಭಯ ನನಗೂ ಇತ್ತು. ಆದರೆ ಮೊದಲ ದಿನವೇ ಅವರ ಮಾತು ಕೇಳಿ ಖುಷಿ ಆಯ್ತು. ಶೂಟಿಂಗ್​ ವೇಳೆ ನಡೆದ ಒಂದು ಘಟನೆ ಬಗ್ಗೆ ಹೇಳಬೇಕು. 3ರಿಂದ 4 ದಿನ ಒಂದು ಫೈಟ್​ ಸೀನ್​ ಶೂಟ್​ ಮಾಡಿದ್ವಿ. ಅಪ್ಪು ಸರ್​ ವೇಗಕ್ಕೆ ನಾವು ಮ್ಯಾಚ್​ ಮಾಡೋಕೆ ಆಗಲ್ಲ. ಆದ್ದರಿಂದ ಆಕಸ್ಮಿಕವಾಗಿ ಅವರಿಂದ ನನಗೆ ಒಂದು ಏಳು ಬಿತ್ತು. ನನಗೆ ನೋವು ಆಗಲಿಲ್ಲ. ಆದರೂ ಅವರು ನೊಂದುಕೊಂಡರು. ನೋವಾಗಿದೆಯಾ ಅಂತ 2ರಿಂದ 3 ದಿನ ಅದನ್ನೇ ಕೇಳಿದರು. ಸಣ್ಣ ಮಗು ಥರ ಮತ್ತೆ ಮತ್ತೆ ಬಂದು ಸಾರಿ ಕೇಳಿದ್ರು. ಅವರ ಮನಸ್ಸು ಎಷ್ಟು ಸೌಮ್ಯವಾಗಿತ್ತು ಎಂಬುದು ಇದರಿಂದ ಗೊತ್ತಾಗುತ್ತದೆ. ಅಂಥವರ ಜೊತೆ ನಟಿಸುವ ಚಾನ್ಸ್​ ಸಿಕ್ಕಿದ್ದಕ್ಕೆ ತುಂಬ ಖುಷಿ ಇದೆ’ ಎಂದಿದ್ದಾರೆ ನಟ ಪ್ರಸನ್ನ. ಈ ಚಿತ್ರಕ್ಕೆ ಚೇತನ್​ ಕುಮಾರ್​ (Director Chethan Kumar) ನಿರ್ದೇಶನ ಮಾಡಿದ್ದು, ಕಿಶೋರ್​ ಪತ್ತಿಕೊಂಡ ನಿರ್ಮಾಣ ಮಾಡಿದ್ದಾರೆ.​

ಇದನ್ನೂ ಓದಿ:

ಈಗ ಜನರು ಯಾರಲ್ಲಿ ಪುನೀತ್​ ಅವರನ್ನು ಕಾಣ್ತಾರೆ? ಉತ್ತರ ನೀಡಿದ ಯುವ ರಾಜ್​ಕುಮಾರ್​

ಪುನೀತ್​ ನಾಮಫಲಕ, ಕನ್ನಡ ಭಾವುಟಕ್ಕೆ ಅವಮಾನ; ಕಿಡಿಗೇಡಿಗಳ ಕೃತ್ಯಕ್ಕೆ ಸಿಸಿಟಿವಿ ದೃಶ್ಯವೇ ಸಾಕ್ಷಿ

Follow us on

Click on your DTH Provider to Add TV9 Kannada