ಹಿಂದೂ ಜಾತ್ರೆಗಳು ಇನ್ನು ಹಿಂದೂಗಳಿಂದ, ಹಿಂದೂಗಳಿಗೋಸ್ಕರ ಮತ್ತು ಹಿಂದೂಗಳಿಗೆ ಮಾತ್ರ: ಹಿಂದೂ ಕಾರ್ಯಕರ್ತರು
ಮುಸ್ಲಿಂ ಸಮುದಾಯದವರು ಜಾತ್ರೆಗಳಿಗೆ ಬಾರದೆ ಹೋದರೆ, ಹಿಂದೂ ವ್ಯಾಪಾರಸ್ಥರಿಗೆ ನಷ್ಟವೇನೂ ಆಗುವುದಿಲ್ಲ. ವ್ಯಾಪಾರಿಗಳಲ್ಲಿ ಯಾವುದೇ ಅಸಮಾಧಾನವಿಲ್ಲ, ಅವರೆಲ್ಲ ಸಂತೋಷವಾಗಿದ್ದಾರೆ ಅಂತ ಕಾರ್ಯಕರ್ತರು ಹೇಳುತ್ತಾರೆ.
ಶಿವಮೊಗ್ಗ: ಹಿಂದೂಗಳಿಂದ, ಹಿಂದೂಗಳಿಗೋಸ್ಕರ ಮತ್ತು ಹಿಂದೂಗಳಿಗೋಸ್ಕರ ಎಂಬ ಹೊಸ ಉಕ್ತಿ ಹುಟ್ಟಿಕೊಂಡಿದೆ ಮಾರಾಯ್ರೇ. ಹೌದು, ಶಿವಮೊಗ್ಗಾನಲ್ಲಿ (Shivamogga) ಬುಧವಾರದಿಂದ ಆರಂಭಗೊಂಡ ಮಾರಿಕಾಂಬಾ ದೇವಿ ಜಾತ್ರಾ ಮಹೋತ್ಸವದಲ್ಲಿ (Marikamba Devi carnival) ಮೊಳಗುತ್ತಿರುವ ದ್ಯೇಯವಾಕ್ಯವಿದು. ಈ ಜಾತ್ರೆ ಅಕ್ಷರಶಃ ಕೇಸರಿಮಯವಾಗಿದೆ (saffronised). ಜಾತ್ರೆಯಲ್ಲಿ ಬೇರೆ ಬೇರೆ ಬಗೆಯ ಸುಮಾರು 250 ಅಂಗಡಿಗಳು ತಲೆಯೆತ್ತಿವೆ ಮತ್ತು ಅವೆಲ್ಲವುಗಳ ಮೇಲೆ ಕೇಸರಿ ಬಾವುಟ ಮತ್ತು ವ್ಯಾಪಾರಸ್ಥರ ಹೆಗಲ ಮೇಲೆ ಕೇಸರಿ ಶಾಲುಗಳು. ಹೀಗೆ ಮಾಡುವ ಮೂಲಕ ಒಗ್ಗಟ್ಟನ್ನು ಪ್ರದರ್ಶಿಸಬೇಕೆಂಬ ಸಂಕಲ್ಪವನ್ನು ಹಿಂದೂ ಸಂಘಟನೆಯವರು ಮಾಡಿಕೊಂಡಿದ್ದರಂತೆ. ಟೆಂಡರ್ ಹಂಚುವಿಕೆಯೂ ಇದೇ ಆಧಾರದಲ್ಲಿ ನಡೆದಿದೆ ಎಂದು ಶಿವಮೊಗ್ಗ ಟಿವಿ9 ವರದಿಗಾರರೊಂದಿಗೆ ಮಾತಾಡಿದ ಹಿಂದೂ ಸಂಘಟನೆಗಳ ಇಬ್ಬರು ಪ್ರತಿನಿಧಿಗಳು ಹೇಳುತ್ತಾರೆ.
ಹಿಂದೆ, ಮಂಗಳೂರಿನಲ್ಲಿ ಮುಸ್ಲಿಂ ಸಮುದಾಯದವರು ಮೀನುಗಾರರು ತಮ್ಮ ವಿರುದ್ಧ ಮಾತಾಡಿದ್ದರು ಎಂಬ ಕಾರಣಕ್ಕೆ ಅವರಲ್ಲಿ ಮೀನು ಖರೀದಿಸುವದನ್ನು ನಿಲ್ಲಿಸಿದ್ದರು. ಹಾಗಾಗಿ, ಹಿಂದೂಗಳ ಜಾತ್ರಾ ಮಹೋತ್ಸವಗಳು ಕೇವಲ ಹಿಂದೂಗಳಿಗೆ ಸೀಮಿತಗೊಂಡಿರಬೇಕು, ಅವರ ಉತ್ಸವಗಳನ್ನು ಅವರು ಮಾಡಿಕೊಳ್ಳಲಿ, ನಮ್ಮ ಉತ್ಸವಗಳನ್ನು ನಾವು ಮಾಡಿಕೊಳ್ಳುತ್ತೇವೆ, ಅವರಿಗೆ ಪ್ರವೇಶವಿಲ್ಲ ಎಂದು ಅವರು ಹೇಳುತ್ತಾರೆ.
ಮುಸ್ಲಿಂ ಸಮುದಾಯದವರು ಜಾತ್ರೆಗಳಿಗೆ ಬಾರದೆ ಹೋದರೆ, ಹಿಂದೂ ವ್ಯಾಪಾರಸ್ಥರಿಗೆ ನಷ್ಟವೇನೂ ಆಗುವುದಿಲ್ಲ. ವ್ಯಾಪಾರಿಗಳಲ್ಲಿ ಯಾವುದೇ ಅಸಮಾಧಾನವಿಲ್ಲ, ಅವರೆಲ್ಲ ಸಂತೋಷವಾಗಿದ್ದಾರೆ. ಫ್ಯಾನ್ಸಿ ಅಂಗಡಿ, ಆಟಿಕೆಗಳು, ಕ್ಯಾಂಟೀನ್ ಗಳು, ಜ್ಯೂಸ್ ಅಂಗಡಿಗಳು, ಹಣ್ಣು ಹಂಪಲು, ಸಿಹಿತಿಂಡಿ ಅಂಗಡಿ-ಹೀಗೆ ಹಲವಾರು ಬಗೆಯ ಅಂಗಡಿಗಳು ಜಾತ್ರೆಯಲ್ಲಿ ತೆರೆದುಕೊಂಡಿವೆ ಎಂದು ಅವರು ಹೇಳುತ್ತಾರೆ.
ಪಾಕಿಸ್ತಾನ ಮತ್ತು ಅಫಘಾನಿಸ್ತಾನದಲ್ಲಿ ಮುಸ್ಲಿಂಮರು ಮಾತ್ರ ಪ್ರಾಧಾನ್ಯತೆ ಪಡೆಯುವಂತೆ, ಮತ್ತು ಆ ದೇಶಗಳಲ್ಲಿ ಇಸ್ಲಾಂ ಪ್ರತಿಪಾದಿಸಲ್ಪಡುವ ಹಾಗೆ ಹಿಂದುಸ್ತಾನದಲ್ಲಿ ಹಿಂದೂಗಳಿಗೆ ಪ್ರಾಧಾನ್ಯತೆ ಸಿಗಬೇಕು ಮತ್ತು ಹಿಂದುತ್ವ ಪ್ರತಿಪಾದಿಸಲ್ಪಡಬೇಕು ಎಂದು ಹಿಂದೂ ಸಂಘಟನೆಗಳ ಕಾರ್ಯಕರ್ತರು ಹೇಳುತ್ತಾರೆ.
ಇದನ್ನೂ ಓದಿ: Viral Video: ಕರೆಂಟ್ ಇಲ್ಲದೆ ಚಲಿಸುವ ಈ ಮರದ ಟ್ರೆಡ್ಮಿಲ್ ವಿಡಿಯೋ ನೋಡಿ ಫಿಟ್ನೆಸ್ ಉತ್ಸಾಹಿಗಳು ಫಿದಾ