AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉದ್ಯಮಿ ರಾಜು ದೊಡ್ಡಬೊಮ್ಮನವರ್ ಮೊದಲ ಮದುವೆ ವಿಷಯ ತನ್ನಿಂದ ಮುಚ್ಚಿಟ್ಟಿದ್ದಕ್ಕೆ ಪತ್ನಿ ಕಿರಣ ಸುಪಾರಿ ನೀಡಿ ಕೊಲೆ ಮಾಡಿಸಿದರೆ?

ಉದ್ಯಮಿ ರಾಜು ದೊಡ್ಡಬೊಮ್ಮನವರ್ ಮೊದಲ ಮದುವೆ ವಿಷಯ ತನ್ನಿಂದ ಮುಚ್ಚಿಟ್ಟಿದ್ದಕ್ಕೆ ಪತ್ನಿ ಕಿರಣ ಸುಪಾರಿ ನೀಡಿ ಕೊಲೆ ಮಾಡಿಸಿದರೆ?

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ|

Updated on: Mar 23, 2022 | 8:55 PM

Share

ಬೆಳಗಾವಿ ಗ್ರಾಮೀಣ ಠಾಣೆಯ ಪೊಲೀಸರು ನೀಡಿರುವ ಮಾಹಿತಿ ಪ್ರಕಾರ ಕಿರಣ ಅವರಿಗೆ ಮೊದಲ ಮದುವೆಯ ವಿಷಯವನ್ನು ಬಚ್ಟಿಟ್ಟಿದ್ದಕ್ಕೆ ಪತಿಯ ಮೇಲೆ ಕೋಪವಿತ್ತಂತೆ.

ಬೆಳಗಾವಿ: ಕ್ರೈಮ್ ಪೆಟ್ರೋಲ್ ಹೊಸ ಸೀಸನ್ ಸೋನಿ ಟಿವಿಯಲ್ಲಿ ಆರಂಭವಾಗಿದೆ. ಕಾರ್ಯಕ್ರಮದ ನಿರ್ಮಾಪಕರಿಗೆ ಒಂದು ರೋಚಕ ಎಪಿಸೋಡ್ ನಮ್ಮ ಬೆಳಗಾವಿಯಿಂದ ಲಭ್ಯವಾಗಲಿದೆ. ಮಾರ್ಚ್ 15 ರಂದು ನಗರದ ಉದ್ಯಮಿ 41 ವರ್ಷ ವಯಸ್ಸಿನ ರಾಜು ದೊಡ್ಡಬೊಮ್ಮನವರ್ ಅವರ ಕೊಲೆ ಮಂಡೋಳಿ ರಸ್ತೆಯಲ್ಲಿ ನಡೆದ ಸುದ್ದಿ ಮಾಧ್ಯಮಗಳಲ್ಲಿ ಬಿತ್ತರವಾದಾಗ ಬೆಳಗಾವಿ ಬೆಚ್ಚಿಬಿದ್ದಿತ್ತು ಮಾರಾಯ್ರೇ. ಅಲ್ಲಿನ ದಕ್ಷ ಪೊಲೀಸರು ಪ್ರಕರಣವನ್ನು ಕೇವಲ ಒಂದು ವಾರದಲ್ಲಿ ಬೇಧಿಸಿದ್ದಾರೆ. ಅಂದಹಾಗೆ, ರಾಜು ಅವರ ಎರಡನೇ ಪತ್ನಿ ಕಿರಣ ದೊಡ್ಡಬೊಮ್ಮನವರ್ (26) ಮತ್ತು ಅವರ ಬಿಸಿನೆಸ್ ಪಾಲುದಾರರಾಗಿರುವ ಶಶಿಕಾಂತ್ ಮತ್ತು ಶಂಕರಗೌಡ ಅವರನ್ನು ಕೊಲೆಗೆ ಸುಪಾರಿ ನೀಡಿದ ಆರೋಪದಲ್ಲಿ ಪೊಲೀಸರು ಬಂಧಿಸಿದ್ದಾರೆ.

ಬೆಳಗಾವಿ ಗ್ರಾಮೀಣ ಠಾಣೆಯ ಪೊಲೀಸರು ನೀಡಿರುವ ಮಾಹಿತಿ ಪ್ರಕಾರ ಕಿರಣ ಅವರಿಗೆ ಮೊದಲ ಮದುವೆಯ ವಿಷಯವನ್ನು ಬಚ್ಟಿಟ್ಟಿದ್ದಕ್ಕೆ ಪತಿಯ ಮೇಲೆ ಕೋಪವಿತ್ತಂತೆ. ಹಾಗಾದರೆ, ಶಶಿಕಾಂತ್ ಮತ್ತು ಶಂಕರಗೌಡ ಅವರಿಗೆ ಯಾವ ಅಸಮಾಧಾನವಿತ್ತು ಅನ್ನುವ ಪ್ರಶ್ನೆ ಉದ್ಭವಿಸುತ್ತದೆ. ಇದೆ, ಮಾರಾಯ್ರೇ ಅವರಿಬ್ಬರಿಗೆ ರಾಜು ಮೇಲೆ ಸಿಟ್ಟಿರುವುದಕ್ಕೆ ಕಾರಣವಿದೆ.

ಪೊಲೀಸರು ನಡೆಸಿರುವ ತನಿಖೆಯ ಪ್ರಕಾರ ರಾಜು ಅವರು ವ್ಯಾಪಾರದಲ್ಲಿ ಆದ ಲಾಭವನ್ನು ತಮ್ಮ ಪಾಲುದಾರರಾದ ಶಶಿಕಾಂತ್ ಮತ್ತು ಶಂಕರಗೌಡ ಅವರೊಂದಿಗೆ ಹಂಚಿಕೊಳ್ಳುತ್ತಿರಲಿಲ್ಲವಂತೆ. ಇದು ಕಿರಣ ಅವರಿಗೂ ಗೊತ್ತಿತ್ತು. ಹಾಗಾಗೇ, ಮೂವರು ಸಮಾನ ದುಃಖಿಗಳು ಸೇರಿ ರಾಜು ಅವರನ್ನು ಮುಗಿಸಲು ಹಂತಕರಿಗೆ ರೂ. 10 ಲಕ್ಷ ಮೊತ್ತದ ಸುಪಾರಿ ನೀಡಿದ್ದಾರೆ ಅಂತ ಪೊಲೀಸರು ಮಾಹಿತಿ ನೀಡಿದ್ದಾರೆ. ಸುಪಾರಿ ಪಡೆದು ಕೊಲೆ ಮಾಡಿದವರು ಇನ್ನೂ ಪೊಲೀಸರ ಕೈಗೆ ಸಿಕ್ಕಿಲ್ಲ.

ಅವರ ಪತ್ತೆಯಾದ ಮೇಲೆ ಪ್ರಕರಣದ ಪೂರ್ತಿ ವಿವರ ನಮಗೆ ಸಿಗುತ್ತದೆ.

ಇದನ್ನೂ ಓದಿ:  Crime News: ವಿಚಾರಣಾಧೀನ ಖೈದಿ ಜೈಲಿನ ಮುಖ್ಯ ದ್ವಾರದಿಂದಲೇ ಎಸ್ಕೇಪ್! ಬೆಳಗಾವಿಯಲ್ಲಿ ಘಟನೆ