Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೈತ ಮಹಿಳೆಯ ನೋವು, ಅನುಭವಿಸುತ್ತಿರುವ ಯಾತನೆ ಕೇಳಿಸಿಕೊಂಡಾಗ ಯಡಿಯೂರಪ್ಪ ಸದನದಲ್ಲಿ ಆಡಿದ ಮಾತು ನೆನಪಾಗುತ್ತದೆ

ರೈತ ಮಹಿಳೆಯ ನೋವು, ಅನುಭವಿಸುತ್ತಿರುವ ಯಾತನೆ ಕೇಳಿಸಿಕೊಂಡಾಗ ಯಡಿಯೂರಪ್ಪ ಸದನದಲ್ಲಿ ಆಡಿದ ಮಾತು ನೆನಪಾಗುತ್ತದೆ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Mar 23, 2022 | 11:25 PM

ಮಹಿಳೆಯ ಸಾಲ ಸೋಲ ಮಾಡಿ ಜಮೀನಲ್ಲಿ ಬೆವರು ಸುರಿಸಿದ್ದರು. ಅವರ ಶ್ರಮಕ್ಕೆ ಪ್ರತಿಫಲ ಸಿಗುವುದರಲ್ಲಿತ್ತು. ಅದರೆ ಚೆಸ್ಕಾಂ ಅವರ ಶ್ರಮವನ್ನು ವ್ಯರ್ಥ ಹೋಗುವಂತೆ ಮಾಡಿದೆ.

ನಿಮಗೆ ನೆನಪಿರಬಹುದು. ಮೊನ್ನೆ ಸದನದಲ್ಲಿ ಜೆಡಿಎಸ್ ಶಾಸಕರೊಬ್ಬರು ರೈತರ ಸಮಸ್ಯೆಗಳು ಮತ್ತು ಅವರ ಪಂಪ್ ಸೆಟ್ ಗಳಿಗೆ ಸಮರ್ಪಕವಾಗಿ ವಿದ್ಯುತ್ ಪೂರೈಕೆಯಾಗದ ಬಗ್ಗೆ ಪ್ರಶ್ನೆ ಮಾಡಿದಾಗ ಸರ್ಕಾರದ ಪರವಾಗಿ ಎದ್ದುನಿಂತು ಮಾತಾಡಿದ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು (BS Yediyurappa), ಜೆಡಿಎಸ್ ನಾಯಕ ವಿಷಯವನ್ನು ಸರಿಯಾಗಿ ಅರ್ಥಮಾಕೊಳ್ಳದೆ ಮಾತಾಡುತ್ತಿದ್ದಾರೆ; 2,3, 4, 5 ಮತ್ತು 8 ಹೆಚ್ ಪಿ ಸಾಮರ್ಥ್ಯದ ಪಂಪ್ ಸೆಟ್ ಗಳನ್ನು ಹೊಂದಿರುವ ಎಲ್ಲ ರೈತರಿಗೆ ಉಚಿತವಾಗಿ ವಿದ್ಯುತ್ ಪೂರಸಲಾಗುತ್ತಿದೆ ಎಂದು ಹೇಳಿ ಶಾಸಕರ ಬಾಯಿ ಮುಚ್ಚಿಸಿದ್ದರು. ಆದರೆ ವಾಸ್ತವಾಂಶ ನಿಮಗೆ ಈ ವಿಡಿಯೋನಲ್ಲಿ ಕಾಣುತ್ತದೆ. ಈ ಹಿರಿಯ ರೈತ ಮಹಿಳೆಯ ಮಾತು ಕೇಳಿ. ನಾವು ಮಾತ್ರ ಅಲ್ಲ ಸರ್ಕಾರ ಮತ್ತು ಯಡಿಯೂರಪ್ಪನವರೂ ಕೇಳಬೇಕು.

ಮಹಿಳೆಯ ಜಮೀನಲ್ಲಿ ಬೋರಿದೆ, ನೀರಿದೆ ಪಂಪ್ ಸೆಟ್ ಕೂಡ ಇದೆ. ಆದರೆ ಚೆಸ್ಕಾಂ ಸಮಯಕ್ಕೆ ಸರಿಯಾಗಿ ವಿದ್ಯುತ್ ಪೂರೈಸದ ಕಾರಣ ಕೈಗೆ ಬಂದಿದ್ದ ಬೆಳೆ ಒಣಗಿ ಹಾಳಾಗಿದೆ. ಮಹಿಳೆಯ ಸಾಲ ಸೋಲ ಮಾಡಿ ಜಮೀನಲ್ಲಿ ಬೆವರು ಸುರಿಸಿದ್ದರು. ಅವರ ಶ್ರಮಕ್ಕೆ ಪ್ರತಿಫಲ ಸಿಗುವುದರಲ್ಲಿತ್ತು. ಅದರೆ ಚೆಸ್ಕಾಂ ಅವರ ಶ್ರಮವನ್ನು ವ್ಯರ್ಥ ಹೋಗುವಂತೆ ಮಾಡಿದೆ.

ರೈತ ಮಹಿಳೆಯ ಹೆಸರು ನಮಗೆ ಗೊತ್ತಿಲ್ಲ ಮಾರಾಯ್ರೇ. ಅದರೆ ಅವರ ಕಷ್ಟ, ನೋವು, ಬೇಸರ ಮತ್ತು ಹತಾಷೆ ನಮಗೆ ಅರ್ಥವಾಗುತ್ತದೆ. ಅವರ ನೋವು ಸದನದಲ್ಲಿ ಕೂತು ಮಾತಾಡುವವರು ಸಹ ಅರ್ಥಮಾಡಿಕೊಳ್ಳಬೇಕು. ಜೆಡಿಎಸ್ ಶಾಸಕನ ಗ್ರೌಂಡ್ ವರ್ಕ್ ಸರಿಯಾಗಿತ್ತು. ಅವರು ಬಹಳ ಮಹತ್ವದ ಪ್ರಶ್ನೆ ಕೇಳಿದ್ದರು. ಆದರೆ, ಯಡಿಯೂರಪ್ಪನವರ ಎದುರು ಅವರು ತಮ್ಮ ಪ್ರಶ್ನೆಯನ್ನು ಸರಿಯಾಗಿ ಪ್ರಸೆಂಟ್ ಮಾಡಲು ಸಾಧ್ಯವಾಗಲಿಲ್ಲ.

ಅದರೆ ವಸ್ತುಸ್ಥಿತಿ ನಿಮಗೆ ವಿಡಿಯೋನಲ್ಲಿ ಕಾಣುತ್ತಿದೆ.

ಇದನ್ನೂ ಓದಿ:  ಸ್ವಾಮಿನಾಥನ್ ಆಯೋಗದ ಶೇಕಡ 90ರಷ್ಟು ಶಿಫಾರಸ್ಸುಗಳನ್ನು ನಮ್ಮ ಸರ್ಕಾರ ಜಾರಿಗೆ ತಂದಿದೆ: ಬಿ ಎಸ್ ಯಡಿಯೂರಪ್ಪ